Nannarasi Radhe Serial: ಲಾವಣ್ಯಳನ್ನು ಸೋಲಿಸುದರಲ್ಲಿ ಯಶಸ್ವಿಯಾಗಿಯೇ ಬಿಟ್ಲಾ ಅಶ್ವಿನಿ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ ಕೂಡ ಒಂದು. ಅಶ್ವಿನಿ ರಾಥೋಡ್ ಮನೆಗೆ ಸೇರಿದ ಬಳಿಕ ರಾಥೋಡ್ ಮನೆಯ ನೆಮ್ಮದಿಯನ್ನು ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾಳೆ.

ಅಶ್ವಿನಿ

ಅಶ್ವಿನಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ (Nannarasi Radhe) ಕೂಡ ಒಂದು. ತಾಯಿಯ ಪ್ರೀತಿ ಮತ್ತು ತಂದೆಯ ಭಾಂದವ್ಯ ಮಡದಿಯ ಬೆಂಬಲಗಳೊಂದಿಗೆ ಒಬ್ಬ ವ್ಯಕ್ತಿ ಹೇಗೆ ಜೀವನ ನಡೆಸುವುದು ಎಂಬುದರ ಮೇಲೆ ಧಾರಾವಾಹಿಯ ಕಥೆ ಅಡಗಿದೆ. ಅಗಸ್ತ್ಯ (Agasthya) ಮತ್ತು ಇಂಚರಾ (Inchara) ಮುದ್ದಾದ ಲವ್ ಸ್ಟೋರಿ ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಅಗಸ್ತ್ಯನ ತಂಗಿ‌ ಎಂದು ಹೇಳಿಕೊಂಡು ಅಶ್ವಿನಿ (Ashwini) ಇದೀಗ ರಾಥೋಡ್ ಮನೆಯನ್ನು ಸೇರಿದ್ದಾಳೆ. ಅಶ್ವಿನಿ ರಾಥೋಡ್ ಮನೆಗೆ ಸೇರಿದ ಬಳಿಕ ರಾಥೋಡ್ ಮನೆಯ ನೆಮ್ಮದಿಯನ್ನು ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾಳೆ.

    ಅಶ್ವಿನಿ ಆಟಕ್ಕೆ ಲಾವಣ್ಯ ಬಲಿ

    ಈಗಾಗಲೇ ಒಂದು ಬಾರಿ ರಾಥೋಡ್ ಮನೆಯ ಆಸ್ತಿಗೆ ಆಸೆಪಟ್ಟು ಮನೆಯಿಂದ ಹೊರ ಹೋಗಿದ್ದಳು ಲಾವಣ್ಯ. ಆದರೆ ಮನೆಯಿಂದ ಹೊರಹೋದ ಬಳಿಕ ತನ್ನ ಶೋಚನೀಯ ಪರಿಸ್ಥಿತಿ ಬಗ್ಗೆ ಅರಿತು ಲಾವಣ್ಯ ಈಗ ದುಷ್ಟತನವನ್ನು ಮರೆತು ಒಳ್ಳೆಯವಳಾಗಿದ್ದಾಳೆ. ಇದೀಗ ಮತ್ತೆ ಇಂಚರಳ ಒಳ್ಳೆಯತನದಿಂದ ರಾಥೋಡ್ ಮನೆಯನ್ನು ಸೇರಿದ ಲಾವಣ್ಯಳಿಗೆ ಕಳೆದುಕೊಂಡ ನಂಬಿಕೆಯನ್ನು ಮತ್ತೆ ಗಳಿಸಿಕೊಳ್ಳುವುದು ಕಷ್ಟವಾಗತೊಡಗಿದೆ.

    ಅಷ್ಟೇ ಅಲ್ಲದೆ ರಾಥೋಡ್ ಮನೆಗೆ ಒಳ್ಳೆಯದು ಮಾಡು ಉದ್ದೇಶವನ್ನಿಟ್ಟುಕೊಂಡು ಲಾವಣ್ಯ ಏನೇ ಕೆಲಸ ಮಾಡಿದರು ಅದು ಮನೆಯವರಿಗೆ ತಪ್ಪಾಗಿ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಹೆತ್ತ ತಾಯಿ ಕೂಡ ಲಾವಣ್ಯಳನ್ನು ಅತಿಯಾಗಿ ದ್ವೇಷಿಸಲು ಪ್ರಾರಂಭಿಸಿದ್ದಾಳೆ. ಇಡೀ ಮನೆಯಲ್ಲಿ ಇಂಚರಳ ಒಬ್ಬಳನ್ನು ಬಿಟ್ಟರೆ ಬೇರೆ ಯಾರು ಕೂಡ‌ ಲಾವಣ್ಯ ಜೊತೆ ಮಾತನಾಡುತ್ತಾ ಇಲ್ಲ.

    ಅಶ್ವಿನಿಯ ನಿಜಮುಖ ಈಗಾಗಲೇ ಹಲವು ಬಾರಿ ಲಾವಣ್ಯಳ ಮುಂದೆ ಬಯಲಾಗಿದೆ. ಆದರೆ ಮನೆಯವರು ಅಶ್ವಿನಿಯ ಮೇಲೆ ಇಟ್ಟಿರುವ ನಂಬಿಕೆಯು ಆಕೆ ಎಲ್ಲಾ ತಪ್ಪನ್ನು ಹುಚ್ಚಿ ಹಾಕಿಸುವಂತೆ ಮಾಡಿಸುತ್ತಿದೆ.

    ಇದನ್ನೂ ಓದಿ: Nammane Yuvarani Serial: ಉಪಾಯದಿಂದ ಕಲ್ಪನಾಳ ಮನೆ ಸೇರಿದ ಗಂಗಾ! ಮುಂದಿದೆ ಬಿಗ್ ಟ್ವಿಸ್ಟ್

    ಲಾವಣ್ಯಳ ಒಳ್ಳೆತನಕ್ಕೆ ಈಗ ರಾಥೋಡ್ ಮನೆಯಲ್ಲಿ ಸ್ಥಾನವಿಲ್ಲ

    ಅಶ್ವಿನಿಯ ಬಗ್ಗೆ ಆರಂಭದಿಂದಲೂ ಲಾವಣ್ಯಳಿಗೆ ಸಂಶಯವಿತ್ತು ಕಳೆದ ಕೆಲವು ದಿನಗಳ ಹಿಂದೆ ಡಿನ್ನರ್ ಗೆ ಹೋದಾಗ ಅಲ್ಲಿ ವೈಟರ್ ಆಗಿದ್ದ ಹುಡುಗಿ ಅಶ್ವಿನಿಯನ್ನು ಈ ಹಿಂದೆ ನೋಡಿದ್ದೇನೆ ಎಂದು ಬಹಳ ವಿಶ್ವಾಸದಿಂದ ಹೇಳಿದ್ದನ್ನು ಕೇಳಿದ ಬಳಿಕ ಮತ್ತೆ ಲಾವಣ್ಯಳಿಗೆ ಅಶ್ವಿನಿಯವರ ಇನ್ನಷ್ಟು ಹೆಚ್ಚಾಗಿತ್ತು. ಬಳಿಕ ಇದೀಗ ಲಾವಣ್ಯಳಿಗೆ ಆಕೆಯ ಬಗ್ಗೆ ಒಂದು ಮಹತ್ವದ ಸುಳಿವು ಕೂಡ ದೊರಕಿತ್ತು. ಅಶ್ವಿನಿ ಕಲಿತಿರುವ ಯುನಿವರ್ಸಿಟಿಯ ಬಗ್ಗೆ ಲಾವಣ್ಯ ಮಾಹಿತಿಯನ್ನು ಪಡೆದು ಮನೆಯವರ ಮುಂದೆ ಬಯಲು ಮಾಡಬೇಕು ಎನ್ನುವಷ್ಟರಲ್ಲಿ ಅದನ್ನು ಅಶ್ವಿನಿ ಆ ಮಾಹಿತಿಯನ್ನು ಹರಿದು ಹಾಕಿದ್ದಾಳೆ.

    ಇದನ್ನೂ ಓದಿ: Sathya Serial: ಬಾಲನ ಸುಳ್ಳಿನ ಕೋಟೆಯಲ್ಲಿ ಬಂಧಿಯಾಗಿ ಬಿಟ್ಲಾ ದಿವ್ಯಾ? ಮುಂದಿದೆ ಬಿಗ್ ಟ್ವಿಸ್ಟ್!

    ಮನೆಯವರ ಮುಂದೆ ತಪ್ಪಿತಸ್ಥ ಸ್ಥಾನದಲ್ಲಿ ನಿಂತಿರುವ‌ ಲಾವಣ್ಯ

    ಲಾವಣ್ಯ ಅಶ್ವಿನಿಯ ಬಗ್ಗೆ ತಿಳಿದುಕೊಳ್ಳಲು ಈಗಾಗಲೇ ಅಶ್ವಿನಿ ಕಲಿತ ಕಾಲೇಜ್ ಕಡೆಗೆ ಹೋಗಿದ್ದಾಳೆ. ಆದರೆ ಅಲ್ಲೂ ಕೂಡ ಅಶ್ವಿನಿ ತನ್ನೆಲ್ಲಾ ತಪ್ಪುಗಳನ್ನು ಲಾವಣ್ಯಳ ಮೇಲೆ ಬರುವಂತೆ ಮಾಡಲು ಕಾಲೇಜಿನಲ್ಲಿ ತನ್ನ ಯಾವುದೇ ಮಾಹಿತಿಯನ್ನು ದೊರಕದಂತೆ ಮಾಡಿಸಿದ್ದಾಳೆ. ಅಗಸ್ತ್ಯ ಅಶ್ವಿನಿಯ ಮೇಲೆ ಸಂಶಯ ಪಟ್ಟು ಇಂಚರಳ ಜೊತೆ ಕಾಲೇಜ್ ಗೆ ಹೋದಾಗ ಎಲ್ಲಾ ತಪ್ಪುಗಳು ಲಾವಣ್ಯಳೇ ಮಾಡಿದ್ದಾಳೆ ಎಂದು ನಂಬಿಕೊಂಡಿದ್ದಾನೆ.

    ಅಷ್ಟೇ ಅಲ್ಲದೆ ಇದೀಗ ಮತ್ತೆ ಲಾವಣ್ಯ ಮನೆಯವರ ಮುಂದೆ ತಪ್ಪಿತಸ್ಥ ಸ್ಥಾನದಲ್ಲಿ ನಿಂತಿದ್ದಾಳೆ. ಮುಂದೆ ಲಾವಣ್ಯ ಮತ್ತು ಇಂಚರಾ ಸೇರಿ ಅಶ್ವಿನಿಯ ನಿಜ ಮುಖವನ್ನು ಮನೆಯವರ ಮುಂದೆ ಯಾವಾಗ ಬಯಲು ಮಾಡುತ್ತಾರೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.ಮುಂದೆ ಇದೇ ವಿಚಾರವಾಗಿ ಅಶ್ವಿನ್ ಇನ್ನೇನು ಪ್ಲಾನ್ ಮಾಡುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.
    Published by:Swathi Nayak
    First published: