Nannarasi Radhe Serial: ಇಂಚರಾ ಸತ್ಯ ಹೇಳಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ! ಅಶ್ವಿನಿ ನಿಜಮುಖ ಬಯಲಾಗೋದೇ ಇಲ್ವಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ ಕೂಡ ಒಂದು. ಅಗಸ್ತ್ಯ ಮತ್ತು ಇಂಚರ ನಡುವಿನ ಮುದ್ದಾದ ಜಗಳ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ.

ಇಂಚರಾ

ಇಂಚರಾ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ (Nannarasi Radhe) ಕೂಡ ಒಂದು. ಅಗಸ್ತ್ಯ (Aghasthya) ಮತ್ತು ಇಂಚರ (Inchara) ನಡುವಿನ ಮುದ್ದಾದ ಜಗಳ ನೋಡಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ. ಇದೀಗ ಧಾರಾವಾಹಿಯಲ್ಲಿ ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಈ ತಂಡವು ಯಶಸ್ವಿಯಾಗುತ್ತಿದೆ. ಅಗಸ್ತ್ಯನ ತಾಯಿ ವೈದೇಹಿ ಮರಳಿ ರಾಥೋಡ್ ಮನೆಗೆ ಸೇರಿದ ಬಳಿಕ ಈ ಧಾರಾವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಕಳೆದುಕೊಂಡ ತಂಗಿ ಮತ್ತು ತಾಯಿಯನ್ನು ಮರಳಿ ಪಡೆದ ಅಗಸ್ತ್ಯನ ಜೀವನದಲ್ಲಿ ಮತ್ತೆ ಹೊಸ ತಿರುವುಗಳು ಎದುರಾಗುತ್ತಿವೆ.

    ಇಂಚರ ಸತ್ಯ ಹೇಳಿದರು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ!

    ಈಗಾಗಲೇ ಹಲವಾರು ಬಾರಿ ಅಶ್ವಿನಿ ಇಂಚರಳ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ಆದರೆ ತನ್ನ ಮುಗ್ಧತೆಯನ್ನು ಬಳಸಿಕೊಂಡು ಪ್ರತಿ ಬಾರಿ ಅಶ್ವಿನಿ ಏನೇ ತಪ್ಪು ಮಾಡಿದರು ಯಾರ ಮುಂದೆ ಕೂಡ ಸಿಕ್ಕಿ ಹಾಕಿಕೊಳ್ಳುತ್ತಿಲ್ಲ. ಈ ಬಾರಿ ಇಂಚರ ಮನೆಯವರ ಮುಂದೆ ಅಶ್ವಿನಿಯ ಬಗ್ಗೆ ನೇರವಾಗಿ ತಿಳಿಸಿದ್ದಾಳೆ ಆದರೆ ರಾಥೋಡ್ ಮನೆಯಲ್ಲಿ ಯಾರು ಕೂಡ ಇಂಚರಳ ಮಾತನ್ನು ನಂಬಲು ತಯಾರಿಲ್ಲ. ಅಷ್ಟೇ ಅಲ್ಲದೆ ಇಂಚರ ಕೇಳುತ್ತಿರುವ ಸತ್ಯ ಲಾವಣ್ಯ‌ನಳಿಂದ ಬಂದಿರುವುದಾಗಿ ವೈದೇಹಿ ಇಂಚರಾ ಹೇಳುತ್ತಿರುವ ಸತ್ಯವನ್ನು ನಂಬಲು ತಯಾರಿಲ್ಲ

    ಇದೇ ವಿಚಾರವಾಗಿ ಮತ್ತೆ ಇಂಚರಳ ಮೇಲೆ ಮನೆಯವರು ನಂಬಿಕೆ ಕಳೆದುಕೊಳ್ಳುತ್ತಾರಾ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ. ಪ್ರತಿಬಾರಿ ತಪ್ಪು ಮಾಡಿದಾಗಲೂ ತನ್ನ ಮುಗ್ಧತೆಯನ್ನು ಮತ್ತು ಮನೆಯ ಮಂದಿ ತನ್ನ ಮೇಲೆ ಇಟ್ಟುಕೊಂಡಿರುವ ನಂಬಿಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಅಶ್ವಿನಿ ತಪ್ಪುಗಳ ಮೇಲೆ ತಪ್ಪನ್ನು ಮಾಡುತ್ತಾ ಬಂದಿದ್ದಾಳೆ. ಅಷ್ಟೇ ಅಲ್ಲದೆ ಬದಲಾಗಿರುವ ಲಾವಣ್ಯಳನ್ನು ಮತ್ತೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತಿದ್ದಾಳೆ ಅಶ್ವಿನಿ.

    ಇದನ್ನೂ ಓದಿ: Nammane Yuvarani Serial: ಪುಟ್ಟ ಕಂದಮ್ಮ ಸಾಕೇತ್-ಅಹಲ್ಯಾಳ ಮಗಳಾ? ರಾಜ್ ಗುರು ಮನೆಗೆ ಹೊಸ ಅತಿಥಿ ಆಗಮನ!

    ಲಾವಣ್ಯಳ ಒಳ್ಳೆತನಕ್ಕೆ ಈಗ ರಾಥೋಡ್ ಮನೆಯಲ್ಲಿ ಸ್ಥಾನವಿಲ್ಲ

    ಅಶ್ವಿನಿಯ ನಿಜಮುಖ ಈಗಾಗಲೇ ಹಲವು ಬಾರಿ ಲಾವಣ್ಯಳ ಮುಂದೆ ಬಯಲಾಗಿದೆ. ಆದರೆ ಮನೆಯವರು ಅಶ್ವಿನಿಯ ಮೇಲೆ ಇಟ್ಟಿರುವ ನಂಬಿಕೆಯು ಆಕೆ ಎಲ್ಲಾ ತಪ್ಪನ್ನು ಹುಚ್ಚಿ ಹಾಕಿಸುವಂತೆ ಮಾಡಿಸುತ್ತಿದೆ. ಈಗಾಗಲೇ ಒಂದು ಬಾರಿ ರಾಥೋಡ್ ಮನೆಯ ಆಸ್ತಿಗೆ ಆಸೆಪಟ್ಟು ಮನೆಯಿಂದ ಹೊರ ಹೋಗಿದ್ದಳು ಲಾವಣ್ಯ. ಆದರೆ ಮನೆಯಿಂದ ಹೊರಹೋದ ಬಳಿಕ ತನ್ನ ಶೋಚನೀಯ ಪರಿಸ್ಥಿತಿ ಬಗ್ಗೆ ಅರಿತು ಲಾವಣ್ಯ ಈಗ ದುಷ್ಟತನವನ್ನು ಮರೆತು ಒಳ್ಳೆಯವಳಾಗಿದ್ದಾಳೆ.

    ಇದೀಗ ಮತ್ತೆ ಇಂಚರಳ ಒಳ್ಳೆಯತನದಿಂದ ರಾಥೋಡ್ ಮನೆಯನ್ನು ಸೇರಿದ ಲಾವಣ್ಯಳಿಗೆ ಕಳೆದುಕೊಂಡ ನಂಬಿಕೆಯನ್ನು ಮತ್ತೆ ಗಳಿಸಿಕೊಳ್ಳುವುದು ಕಷ್ಟವಾಗತೊಡಗಿದೆ. ಅಷ್ಟೇ ಅಲ್ಲದೆ ರಾಥೋಡ್ ಮನೆಗೆ ಒಳ್ಳೆಯದು ಮಾಡು ಉದ್ದೇಶವನ್ನಿಟ್ಟುಕೊಂಡು ಲಾವಣ್ಯ ಏನೇ ಕೆಲಸ ಮಾಡಿದರು ಅದು ಮನೆಯವರಿಗೆ ತಪ್ಪಾಗಿ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಹೆತ್ತ ತಾಯಿ ಕೂಡ ಲಾವಣ್ಯಳನ್ನು ಅತಿಯಾಗಿ ದ್ವೇಷಿಸಲು ಪ್ರಾರಂಭಿಸಿದ್ದಾಳೆ. ಇಡೀ ಮನೆಯಲ್ಲಿ ಇಂಚರಳ ಒಬ್ಬಳನ್ನು ಬಿಟ್ಟರೆ ಬೇರೆ ಯಾರು ಕೂಡ‌ ಲಾವಣ್ಯ ಜೊತೆ ಮಾತನಾಡುತ್ತಾ ಇಲ್ಲ.

    ಇದನ್ನೂ ಓದಿ: Ramachari Serial: ಅಪ್ಪನ ಆರೋಗ್ಯಕ್ಕಾಗಿ ಮದುವೆಗೆ ಒಪ್ಪುತ್ತಾನಾ ರಾಮಾಚಾರಿ?

    ಅಶ್ವಿನಿಯ ಮುಂದಿನ ನಡೆ ಏನು?

    ರಾಥೋಡ್ ಮನೆಯನ್ನು ಸರ್ವನಾಶ ಮಾಡಬೇಕು ಎಂದು ಅಶ್ವಿನಿಯ ತಾಯಿ ಆರಂಭದಿಂದಲೂ ಪ್ರಯತ್ನಿಸುತ್ತಾ ಬಂದಿದ್ದಾಳೆ. ಆದರೆ ತನ್ನಿಂದ ಸಾಧ್ಯವಾಗದ ಕೆಲಸವನ್ನು ಇದೀಗ ಮಗಳು ಅಶ್ವಿನಿ ಮುಖಾಂತರ ಮಾಡುವ ಪ್ರಯತ್ನದಲ್ಲಿ ಇದ್ದಾಳೆ ಇಂದ್ರಾಣಿ. ಇದೇ ಕಾರಣಕ್ಕೆ ಅಗಸ್ತ್ಯನ ತಂಗಿಯೆಂದು ಅಶ್ವಿನಿಯನ್ನು ರಾಥೋಡ್ ಮನೆಗೆ ಕಳುಹಿಸಿದ್ದಾಳೆ ಇಂದ್ರಾಣಿ. ಅಶ್ವಿನಿಯ ಮುಂದಿನ ಪ್ಲಾನ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ
    Published by:Swathi Nayak
    First published: