Nammane Yuvarani Serial: 1000 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ನಮ್ಮನೆ ಯುವರಾಣಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿ ಯಶಸ್ವಿಯಾಗಿ ಸಾವಿರ ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.  ಅನಿರ ಕೊನೆಗೊಂಡು ಹೊಸ ಮುಖಗಳು ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಕಾಣಿಸುತ್ತಿದೆ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ ತರುವ ಮೂಲಕ ಈ ಧಾರಾವಾಹಿ ಮತ್ತೆ ಪ್ರೇಕ್ಷಕರ ಮನ ಗೆಲ್ಲುತ್ತಿದೆ.

ನಮ್ಮನೆ ಯುವರಾಣಿ

ನಮ್ಮನೆ ಯುವರಾಣಿ

  • Share this:
    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ನಮ್ಮನೆ ಯುವರಾಣಿ (Nammane Yuvarani) ಧಾರಾವಾಹಿ ಯಶಸ್ವಿಯಾಗಿ ಸಾವಿರ ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಅನಿರ (Anira) ಕೊನೆಗೊಂಡು ಹೊಸ ಮುಖಗಳು ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಕಾಣಿಸುತ್ತಿದೆ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ ತರುವ ಮೂಲಕ ಈ ಧಾರಾವಾಹಿ ಮತ್ತೆ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಹಳ್ಳಿಯಿಂದ ಬಂದ ಮುಗ್ಧ ಹುಡುಗಿ ಗಂಗಾಳ ಸುತ್ತ ಕಥೆ ಈಗ ಸುತ್ತುವರಿಯುತ್ತಿದೆ. ರಾಜ್ ಗುರು (Raj Guru) ಮನೆಯನ್ನು ಸರ್ವನಾಶ ಮಾಡಲು ಪಣತೊಟ್ಟಿರುವ ಕಲ್ಪನಾಳ ಮಗಳೇ ಗಂಗಾ (Ganga) ಎನ್ನುವ ವಿಚಾರ ಮನೆಮಂದಿಗೆಲ್ಲ ತಿಳಿದಿದೆ. ತಾಯಿಯಂತೆ ಮಗಳು ಮನೆಯನ್ನು ಒಡೆಯಲು ಪ್ರಯತ್ನ ಪಡುತ್ತಿದ್ದಾರೆ ಎಂಬ ಅಪವಾದವೂ ಈಗ ಗಂಗಾಳ ಮೇಲಿದೆ.

    ರಾಜಗುರು ಮನೆಯನ್ನು ದ್ವೇಷಿಸುತ್ತಿರುವ ಕಲ್ಪನಾ ತನ್ನ ಮಗಳ ಭವಿಷ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾಳೆ. ಕಲ್ಪನಾಳ ಕುತಂತ್ರ ಬುದ್ಧಿ ತಿಳಿದ ಬಳಿಕ ಮಗಳು ಗಂಗಾ ಎಷ್ಟೋ ಸಮಯದ ಬಳಿಕ ಮತ್ತೆ ಒಂದಾದ ತಾಯಿಯನ್ನು ದ್ವೇಷಿಸಲು ಪ್ರಾರಂಭಿಸಿದ್ದಾಳೆ. ತನ್ನ ಗಂಡನ ಮನೆಯವರ ಶ್ರೇಯಸ್ಸಿಗಾಗಿ ಹೆತ್ತ ತಾಯಿಯನ್ನು ಕೂಡ ದೂರ ಮಾಡಿಕೊಂಡ ಗಂಗಾಳನ್ನು ಮನೆಯಲ್ಲಿ ಎಲ್ಲರೂ ದ್ವೇಷಿಸುತ್ತಿದ್ದಾರೆ. ತನ್ನ ಮೇಲೆ ಇಲ್ಲಸಲ್ಲದ ಅಪವಾದಗಳು ಬಂದ ಮೇಲೆ ಗಂಗಾ ಇದೀಗ ಹಳ್ಳಿ ಕಡೆ ಮತ್ತೆ ಹೋಗಿದ್ದಾಳೆ.

    ಇದನ್ನೂ ಓದಿ: Hitler Kalyana Serial: ಕೌಸಲ್ಯಾ ಕುತಂತ್ರದಿಂದ ದೂರವಾಗ್ತಾರಾ ಲೀಲಾ ಮತ್ತು ಎಜೆ?

    ಗಂಗಾಳ ಸಹಾಯಕ್ಕಾಗಿ ನಿಂತ ರಾಜ್ ಗುರು ಮನೆಯ ಹಿರಿಯ ಸೊಸೆ ಅಹಲ್ಯಾ

    ಗಂಗಾಳ ಜೊತೆಗೆ ಸಹಾಯಕ್ಕಾಗಿ ರಾಜ್ ಗುರು ಮನೆಯ ಹಿರಿಯ ಸೊಸೆ ಅಹಲ್ಯಾ ನಿಂತಿದ್ದಾಳೆ. ಇದೇ ವಿಚಾರಕ್ಕಾಗಿ ತನ್ನ ಪತಿ ಸಾಕೇತ್ ಅನ್ನು ಕೂಡ ಇದರ ಹಾಕಿಕೊಂಡಿದ್ದಾಳೆ ಅಹಲ್ಯಾ. ಇತ್ತ ಗಂಗಾಳ ಪತಿ ಪ್ರಣಮ್ ತಾಯಿಯ ಮಮತೆಯನ್ನು ನೀಡುತ್ತಿರುವ ಅತ್ತಿಗೆಯ ಮಾತಿಗೆ ಕಟ್ಟುಬಿದ್ದು ಗಂಗಾಳನ್ನು ಭೇಟಿಯಾಗಲು ಹಳ್ಳಿಗೆ ಹೋಗಿದ್ದಾರೆ. ಅಷ್ಟೇ ಅಲ್ಲ ಗಂಗಾಳೊಂದಿಗೆ ಒಳ್ಳೆಯ ಜೀವನ ನಡೆಸುತ್ತಿದ್ದಾನೆ ಎನ್ನುವಂತೆ ಅತ್ತಿಗೆಗೋಸ್ಕರ ನಾಟಕ ಕೂಡ ಮಾಡುತ್ತಿದ್ದಾನೆ ಪ್ರಣಮ್.

    ರಾಜ್ ಗುರು ಮನೆಯಲ್ಲಿ ಗಂಗಾಗಳ ಸಹಾಯಕ್ಕೆ ಇರುವುದು ತಾತ, ಅಹಲ್ಯಾ ಹಾಗೂ ಶಾಂಭವಿ ಅಮ್ಮ ಮಾತ್ರ. ತಾತ ಪ್ರಣಮ್ ಗೆ ಬುದ್ಧಿ ಹೇಳುವ ಪ್ರಯತ್ನಪಟ್ಟರು ಪ್ರಣಮ್ ಅದನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಹಿಂದೆ ಗಂಗಾ ಮಾಡಿರುವುದೆಲ್ಲಾ ಮನೆ ಸೇರಲು ಮಾಡಿದ ನಾಟಕ ಎಂದು ಪ್ರಣಮ್ ಗಂಗಾಳ ಮೇಲೆ ಅಪವಾದ ಮಾಡುತ್ತಿದ್ದಾನೆ.

    ಮಾತುಮಾತಿಗೂ ಗಂಗಾಳನ್ನು ನೋಯಿಸುತ್ತಿರುವ  ಪ್ರಣಮ್

    ಪ್ರಣಾಮ್ ಮತ್ತು ಗಂಗಾಳ ನಡುವಿನ ಸಂಬಂಧ ಹಾಳಾಗಿದೆ ಎಂದು ಹಳ್ಳಿಯಲ್ಲಿ ಎಲ್ಲರಿಗೂ ತಿಳಿಯುತ್ತಾ ಎನ್ನುವ ಸಂಶಯ ಪ್ರೇಕ್ಷಕರಲ್ಲಿ ಕಾಡುತ್ತಿದೆ. ಮಾತುಮಾತಿಗೂ ಪ್ರಣಮ್ ಗಂಗಾಳನ್ನು ನೋಯಿಸುತ್ತಿದ್ದಾನೆ. ಅಷ್ಟೇ ಅಲ್ಲ ಗಂಗಾಳನ್ನು ದ್ವೇಷಿಸುತ್ತಿದ್ದಾನೆ ಕೂಡ. ಇವರಿಬ್ಬರ ನಡುವಿನ ಸಂಬಂಧ ಹಿಂದಿನಂತೆ ಮಾಡಲು ಅತ್ತಿಗೆ ಅಹಲ್ಯಾಳಿಂದ ಮಾತ್ರ ಸಾಧ್ಯ. ಅತ್ತಿಗೆಯ ಮಾತಿಗೆ ಕಟ್ಟು ಬಿದ್ದು ಪ್ರಣಮ್ ಗಂಗಾಳ ಜೊತೆ ಹಳ್ಳಿಯಲ್ಲಿ ಇರಲು ಒಪ್ಪಿದ್ದಾನೆ.

    ಇದನ್ನೂ ಓದಿ: Kannadathi Serial: ಹೀರೋನನ್ನು ಮದುವೆಯಾಗಲು ಹೊಸ ಪ್ಲಾನ್ ಮಾಡಿದ ವರೂಧಿನಿ! ವರ್ಕೌಟ್ ಆಗುತ್ತಾ ಸೈಕೋ ಪ್ಲಾನ್?

    ಕಲ್ಪನಾಳ ಕುತಂತ್ರಕ್ಕೆ ಮತ್ತೆ ರಾಜ್ ಗುರು ಮನೆ ಒಡೆದು ಹೋಗುತ್ತಾ ?

    ಇತ್ತ ಮನೆಯಲ್ಲಿ ಎಲ್ಲರೂ ನನ್ನನ್ನು ದ್ವೇಷಿಸುತ್ತಿದ್ದಾರೆ ಎಂದು ಗಂಗಾ ವ್ಯಥೆ ಪಡುತ್ತಿದ್ದಾಳೆ. ಗಂಗಾಳ ನೋವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕಲ್ಪನಾಳ ಕುತಂತ್ರಕ್ಕೆ ಮತ್ತೆ ರಾಜ್ ಗುರು ಮನೆ ಒಡೆದು ಹೋಗುತ್ತಾ ಎನ್ನುವುದು ಪ್ರೇಕ್ಷಕರಲ್ಲಿ ಕಾಡುತ್ತಿದೆ. ತನ್ನ ಸ್ವಂತ ಮಗಳು ಗಂಗಾಳಿಗೆ ಇಷ್ಟು ಮೋಸ ಮಾಡಿದ ಕಲ್ಪನಾ ಇನ್ನೂ ಬೇರೇನು ಮಾಡಲು ಹಿಂದುಮುಂದು ನೋಡುವುದಿಲ್ಲ ಎನ್ನುವುದು ಇದರಲ್ಲೇ ತಿಳಿಯುತ್ತಿದೆ. ಸತ್ಯದ ಅರಿವಾಗಿ ಪ್ರಣಮ್ ಮತ್ತೆ ಗಂಗಾಳನ್ನು ಒಪ್ಪಿಕೊಳ್ಳುತ್ತಾನಾ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಷ್ಟೆ.
    Published by:Swathi Nayak
    First published: