Nammane Yuvarani Serial: ಉಪಾಯದಿಂದ ಕಲ್ಪನಾಳ ಮನೆ ಸೇರಿದ ಗಂಗಾ! ಮುಂದಿದೆ ಬಿಗ್ ಟ್ವಿಸ್ಟ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ನಮ್ಮನೆ ಯುವರಾಣಿ ಆರಂಭದಿಂದಲೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಗಂಗಾ

ಗಂಗಾ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ನಮ್ಮನೆ ಯುವರಾಣಿ (Nammane Yuvarani) ಆರಂಭದಿಂದಲೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಧಾರಾವಾಹಿಯು ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸೈ ಎನಿಸಿಕೊಂಡಿದೆ. ಅನಿರ ಕೊನೆಗೊಂಡು ಹೊಸ ಮುಖಗಳು ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಕಾಣಿಸುತ್ತಿದೆ.ಇದೀಗ ಹಳ್ಳಿಯಿಂದ ಮರಳಿ ರಾಜ್ ಗುರು ಮನೆಗೆ ಬಂದ ಗಂಗಾ (Ganga) ಉಪಾಯದಿಂದ ತಾಯಿ ಕಲ್ಪನಾಳ ಮನೆಗೆ ಸೇರಿಕೊಂಡಿದ್ದಾಳೆ. ಕಲ್ಪನಾಳ (Kalpana) ಮುಂದಿನ ಪ್ಲಾನ್ ಗಳ ಬಗ್ಗೆ ತಿಳಿದುಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದಾಳೆ ಗಂಗಾ. ಮುಂದೆ ಅನಿರಾ ಮತ್ತು ಕಣ್ಮಣಿ (Kanmani) ಮತ್ತೆ ಧಾರಾವಾಹಿಗೆ ಬರುತ್ತಾರೆ ಎನ್ನುವ ಬಗ್ಗೆ ಕಾದುನೋಡಬೇಕಿದೆ.

    ಗಂಗಾಳ ಬದುಕನ್ನೇ ಹಾಳು ಮಾಡಲು ಪ್ರಯತ್ನಪಟ್ಟಿದ್ದಳು ಕಲ್ಪನಾ

    ಗಂಗಾ ತನ್ನ ಮಗಳೇ ಎನ್ನುವ ವಿಚಾರ ತಿಳಿದಮೇಲೆ ಕಲ್ಪನಾ ತನ್ನ ಮಗಳನ್ನೇ ಅಸ್ತ್ರವಾಗಿ ಇಟ್ಟುಕೊಂಡು ರಾಜ್ ಗುರು ಮನೆಯ ನೆಮ್ಮದಿಯನ್ನು ಕೆಡಿಸುವ ಪ್ರಯತ್ನ ಪಡುತ್ತಿದ್ದಳು ಕಲ್ಪನಾ. ಅಷ್ಟೇ ಅಲ್ಲದೆ ಗಂಗಾಳನ್ನು ತನ್ನ ದ್ವೇಷದ ಗೂಡಿಗೆ ಸೇರಿಸುವ ಪ್ರಯತ್ನ ಕೂಡ ಮಾಡಿದ್ದಳು ಕಲ್ಪನಾ. ಆದರೆ ರಾಜ್ ಗುರು ಮನೆಯ ಬಗ್ಗೆ ಮತ್ತು ತಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಮನೆಯವರ ಬಗ್ಗೆ ಗಂಗಾಳಿಗೆ ಎಲ್ಲಿಲ್ಲದ ಗೌರವ. ಅದೇ ಕಾರಣಕ್ಕೆ ತಾಯಿಯನ್ನು ಕೂಡ ಎದುರು ಹಾಕಿಕೊಂಡಿದ್ದಳು.

    ಮಗಳು ಎನ್ನುವ ಮಮಕಾರ ಇಲ್ಲದ ಕಲ್ಪನಾ ಗಂಗಾಳ ಬದುಕನ್ನೇ ಹಾಳು ಮಾಡಲು ಪ್ರಯತ್ನಪಟ್ಟಿದ್ದಳು. ಅಷ್ಟೇ ಅಲ್ಲದೆ ಇದೇ ವಿಚಾರವಾಗಿ ರಾಜ್ ಗುರು ಮನೆಯಿಂದ ಹೊರನಡೆದು ಮತ್ತೆ ಹಳ್ಳಿ ಕಡೆಗೆ ಹೋಗುವ ಕಷ್ಟ ಗಂಗಾಳಿಗೆ ಎದುರಾಗಿತ್ತು. ಆದರೆ ತನ್ನ ಒಳ್ಳೆತನದಿಂದ ಮತ್ತೆ ಗಂಗಾ ರಾಜ್ ಗುರು ಮನೆಗೆ ಸೇರಿಕೊಂಡಿದ್ದಳು. ಪ್ರಣಮ್ ಮತ್ತು ಗಂಗಾಳ ನಡುವೆ ಭಿನ್ನಾಭಿಪ್ರಾಯಗಳನ್ನು ತಂದು ಇಡುವಲ್ಲಿ ಯಶಸ್ವಿಯಾಗಿದ್ದಳು ಎಂದುಕೊಂಡ ಕಲ್ಪನಾಳ ಪ್ಲಾನ್ ಉಲ್ಟಾ ಹೊಡೆದಿದೆ.

    ಇದನ್ನೂ ಓದಿ: Gouthami Jadav: ನಯನತಾರಾ ಮದುವೆ ಲುಕ್​ ರೀ ಕ್ರಿಯೇಟ್ ಮಾಡಿದ ಗೌತಮಿ ಜಾದವ್, ಹೇಗಿದೆ ನೀವೂ ನೋಡಿ

    ಉಪಾಯದಿಂದ ಕಲ್ಪನಾಳ ಮನೆಗೆ ಸೇರಿಕೊಂಡ ಗಂಗಾ

    ಇದೀಗ ಪ್ರಣಮ್ ಮತ್ತು ಗಂಗಾಳ ನಡುವೆ ಭಿನ್ನಾಭಿಪ್ರಾಯಗಳನ್ನು ತಂದಿಟ್ಟಿದ್ದೇನೆ ಅಂದುಕೊಂಡಿದ್ದಾಳೆ ಕಲ್ಪನಾ. ಇದನ್ನೇ ಅಸ್ತ್ರವಾಗಿ ಇಟ್ಟುಕೊಂಡು ರಾಜ್ ಗುರು ಮನೆಯವರು ತನ್ನನ್ನು ದ್ವೇಷಿಸುತ್ತಿದ್ದಾರೆ ಎಂದು ಕಲ್ಪನಾಳ ಮನೆಯನ್ನು ಸೇರಿಕೊಂಡಿದ್ದಾಳೆ ಗಂಗಾ. ತನ್ನ ಮುಗ್ಧತೆ ಮತ್ತು ಹಳ್ಳಿ ಹುಡುಗಿಯ ಗುಣವನ್ನು ಅಸ್ತ್ರವಾಗಿ ಇಟ್ಟುಕೊಂಡು ಕಲ್ಪನಾಳನ್ನು ತಾನು ರಾಜ್ ಗುರು ಮನೆಯನ್ನು ದ್ವೇಷಿಸುತ್ತಿದ್ದೇನೆ ಎನ್ನುವಂತೆ ನಂಬಿಸಿದ್ದಾಳೆ ಗಂಗಾ.

    ಅನ್ಯಾಯದ ವಿರುದ್ಧ ಹೋರಾಡಲು ಒಂದಾದ ಗಂಗಾ ಮತ್ತು ಪ್ರಣಮ್

    ಗಂಗಾಳನ್ನು ದ್ವೇಷಿಸುತ್ತಿದ್ದೇನೆ ಎನ್ನುವಂತೆ ನಟಿಸಿದ ಪ್ರಣಮ್ ಈಗ ಗಂಗಾಳ ಈ ಪ್ಲಾನ್ ಕಂಡು ಖುಷಿಯಾಗಿದ್ದಾನೆ. ಅಷ್ಟೇ ಅಲ್ಲದೆ ಪ್ರಣಮ್ ಒಳ್ಳೆ ಪ್ಲಾನ್ ಮಾಡಿ ಕಲ್ಪನಾಳ ಮನೆಗೆ ಗಂಗಾಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅನಿಕೇತ್ ಮತ್ತು ಮೀರಾ ಎಲ್ಲಿದ್ದಾರೆ ಎನ್ನುವ ವಿಚಾರ ಇನ್ನೂ ತಿಳಿಯುತ್ತದೆ ಅಲ್ಲದೆ ಕಣ್ಮಣಿ ಕೂಡ ನಮ್ಮನ್ನು ಸೇರುತ್ತಾರೆ ಎನ್ನುವ ಖುಷಿಯಲ್ಲಿ ಪ್ರಣಮ್ ಇದ್ದಾನೆ.

    ಇದನ್ನೂ ಓದಿ: Hitler Kalyana Serial: ಅಜ್ಜಿಯ ಉಪಾಯದಿಂದ ಪ್ರೀತಿಯಲ್ಲಿ ಬಿದ್ರಾ ಲೀಲಾ ಮತ್ತು ಎಜೆ!

    ಒಳ್ಳೆಯವಳಂತೆ ನಟಿಸುತ್ತಿದ್ದಾಳಾ ಅಹಲ್ಯಾ?

    ಅಹಲ್ಯಾ ರಾಜ್ ಗುರು ಮನೆಗೆ ಸೇರಿರುವ ಮುಖ್ಯ ಉದ್ದೇಶವೇ ದ್ವೇಷವಾಗಿತ್ತು. ತನ್ನ ತಂದೆ ಸಾವಿಗೆ ರಾಜ್ ಗುರು ಮನೆಯವರೆ ಕಾರಣ ಎಂದು ನಂಬಿಕೊಂಡಿದ್ದ ಅಹಲ್ಯಾ ಳಿಗೆ ವಾಸ್ತವ ಅರಿತ ಮೇಲೆ ರಾಜ್ ಗುರು ಮನೆಯ ಮೇಲೆ ನಂಬಿಕೆ ಬಂದಿತ್ತು. ಅಷ್ಟೇ ಅಲ್ಲದೆ ಮನೆಗೆ ಒಳ್ಳೆಯ ಸೊಸೆಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸಿಕೊಂಡು ಬಂದಿದ್ದಾಳೆ ಅಹಲ್ಯ. ಆದರೆ ತನ್ನ ಹಳೆ ದ್ವೇಷವನ್ನು ಅಹಲ್ಯ ಮರೆತಿಲ್ಲ ಎನ್ನುವ ಬಗ್ಗೆ ಈಗ ಪ್ರೇಕ್ಷಕರಿಗೆ ಸಂಶಯ ಮೂಡುತ್ತಿದೆ. ನಿಜವಾಗಿಯೂ ಅಹಲ್ಯಾ ಬದಲಾಗಿದ್ದಾಳೆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಷ್ಟೆ.
    Published by:Swathi Nayak
    First published: