Nammane Yuvarani Serial: ಪುಟ್ಟ ಕಂದಮ್ಮ ಸಾಕೇತ್-ಅಹಲ್ಯಾಳ ಮಗಳಾ? ರಾಜ್ ಗುರು ಮನೆಗೆ ಹೊಸ ಅತಿಥಿ ಆಗಮನ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನಮ್ಮನೆ ಯುವರಾಣಿ ಕೂಡ ಒಂದು. ಅನಿರಾ ಅಧ್ಯಾಯದ ಬಳಿಕ ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಧಾರಾವಾಹಿಯೂ ಪ್ರೇಕ್ಷಕರನ್ನು ಮನರಂಜಿಸುತ್ತಿದೆ.

 ಸಾಕೇತ್-ಅಹಲ್ಯಾ

ಸಾಕೇತ್-ಅಹಲ್ಯಾ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನಮ್ಮನೆ ಯುವರಾಣಿ (Nammane Yuvarani) ಕೂಡ ಒಂದು. ಅನಿರಾ ಅಧ್ಯಾಯದ ಬಳಿಕ ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಧಾರಾವಾಹಿಯೂ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಮೀರಾ ಮತ್ತು ಅನಿಕೇತ್ ಮುದ್ದಾದ ಜಗಳವನ್ನು ನೋಡಲು ಪ್ರೇಕ್ಷಕರು ಹಿಂದೆ ಕಾತುರದಿಂದ ಕಾಯುತ್ತಿದ್ದರು. ಇದೀಗ ಅನಿ (Ani) ಮತ್ತು ಮೀರಾಳನ್ನು (Meera) ಹುಡುಕುವ ಜವಾಬ್ದಾರಿಯನ್ನು ಹೊತ್ತುಕೊಂಡ ಗಂಗಾ ಪಾತ್ರಧಾರಿಯೂ ತನ್ನ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ. ಅನಿರ ಕೊನೆಗೊಂಡು ಹೊಸ ಮುಖಗಳು ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಕಾಣಿಸುತ್ತಿದೆ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ ತರುವ ಮೂಲಕ ಈ ಧಾರಾವಾಹಿ ಮತ್ತೆ ಪ್ರೇಕ್ಷಕರ ಮನ ಗೆಲ್ಲುತ್ತಿದೆ.

    ಪುಟ್ಟ ಕಂದಮ್ಮ ಅಹಲ್ಯ ಮತ್ತು ಸಾಕೆತ್ ಮಗಳೇ?

    ಈಗಾಗಲೇ ಏಳು ವರ್ಷಗಳ ಹಿಂದೆ ಕಲ್ಪನಾಳ ಕುತಂತ್ರದಿಂದ ಅಹಲ್ಯ ತನ್ನ ಮಗುವನ್ನು ಕಳೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಕಳೆದುಕೊಂಡ ಮಗು ನಿಜವಾಗಿಯೂ ಜೀವಂತ ವಾಗಿದೆಯೇ ಇಲ್ಲವೇ ಎನ್ನುವ ಬಗ್ಗೆ ಸಾಕೇತ್ ಹಾಗೂ ಅಹಲ್ಯಾಳಿಗೆ ಇನ್ನೂ ತಿಳಿದಿಲ್ಲ. ಕಳೆದುಕೊಂಡ ಮಗುವನ್ನು ಮರಳಿ ಪಡೆಯುವ ಆಸೆಯಲ್ಲಿ ಅಹಲ್ಯ ಕಳೆದ ಏಳು ವರ್ಷಗಳಿಂದ ಕಾಯುತ್ತಾ ಇದ್ದಾಳೆ. ಅಷ್ಟೇ ಅಲ್ಲ ಈ ವಿಚಾರ ಬಗ್ಗೆ ಹಾಕಿ ಬಹಳ ನೊಂದಿದ್ದಾಳೆ ಕೂಡ. ಇದೀಗ ಕಲ್ಪನಾಳ ಮಗಳು ರಾಜ್ ಗುರು ಮನೆಯ ಸೊಸೆ ಗಂಗಾ ಅನಿ ಮತ್ತು ಮೀರಾಳನ್ನು ಹುಡುಕುವ ಜವಾಬ್ದಾರಿ ಜೊತೆಗೆ ಅಹಲ್ಯಳ ಪುಟ್ಟ ಕಂದಮ್ಮ ಕಣ್ಮಣಿ ಯನ್ನು ಕೂಡ ಹುಡುಕುವ ಪ್ರಯತ್ನ ಮಾಡುತ್ತಿದ್ದಾಳೆ. ಗಂಗಾಳ ಈ ಪ್ರಯತ್ನಕ್ಕೆ ಮನೆಯಲ್ಲಿ ಎಲ್ಲರೂ ಆಕೆಗೆ ಸಹಕಾರ ಕೂಡ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಗಂಗಾ ಕಲ್ಪನಾಳ ಮಗಳು ಎಂದು ಆಕೆಯನ್ನು ದ್ವೇಷಿಸುತ್ತಿದ್ದ ಪ್ರಣಮ್ ಕೂಡ ಅನ್ಯಾಯದ ವಿರುದ್ಧ ಹೋರಾಡಲು ಗಂಗಾಳ ಜೊತೆ ಕೈಜೋಡಿಸಿದ್ದಾನೆ.

    ಇದನ್ನೂ ಓದಿ: Gattimela Serial: ಮಂಜುನಾಥ್ ವಾಚ್ ಮ್ಯಾನ್ ಕೆಲಸ ಎಲ್ಲರ ಮುಂದೆ ಬಯಲಾಯಿತೇ?

    ಕಲ್ಪನಾಳನ್ನು ಜೈಲಿಗೆ ಕಳುಹಿಸಿದ ಅಹಲ್ಯಾ

    ಕಲ್ಪನಾಳ ಪ್ಲಾನ್ ತಿಳಿದುಕೊಳ್ಳಲು ಈಗಾಗಲೇ ಗಂಗಾ ಉಪಾಯದಲ್ಲಿ ತಾಯಿಯ ಮನೆಗೆ ಸೇರಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಕಲ್ಪನಾಳ ಮನೆಯಲ್ಲಿ ಬಂಧಿಯಾಗಿದ್ದಂತಹ ನವ್ಯಾಳ ತಾಯಿಯನ್ನು ಕೂಡ ಹೊರ ಕಳಿಸಿದ್ದಾಳೆ ಗಂಗಾ. ಇದೀಗ ತನ್ನ ಆತುರಕ್ಕೆ ಬಲಿಯಾಗಿ ಅಹಲ್ಯಾ ಕಲ್ಪನಾಳನ್ನು ಜೈಲಿಗೆ ಕಳುಹಿಸಿದ್ದಾಳೆ. ಕಲ್ಪನಾಳ ಮನೆಯಲ್ಲಿ ಸಾಕೇತ್ ಮತ್ತು ಅಹಲ್ಯಾಳಿಗೆ ಒಂದು ಪುಟ್ಟ ಮಗು ಕಾಣಿಸಿದ್ದಾಳೆ. ತಾವು ಕಳೆದುಕೊಂಡ ಮಗಳು ಕಣ್ಮಣಿಯೆ ಆ ಪುಟ್ಟ ಹುಡುಗಿ ಇರಬೇಕು ಎಂದು ಸಾಕೇತ್ ಮತ್ತು ಅಹಲ್ಯಾ ತಿಳಿದುಕೊಂಡಿದ್ದಾರೆ. ಈ ಪುಟ್ಟ ಕಂದಮ್ಮ ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಬಲವಾಗಿ ಕಾಡುತ್ತಿದೆ.

    ಇದನ್ನೂ ಓದಿ: Kannadathi Serial: ಆಫೀಸ್, ಮನೆ ಎರಡನ್ನೂ ನಿಭಾಯಿಸ್ತಾಳಾ ಭುವಿ! ಕನ್ನಡ ಟೀಚರ್​ಗೆ ಸಾಲು ಸಾಲು ಸವಾಲು

    ಮಗಳು ಎನ್ನುವ ಮಮಕಾರ ಇಲ್ಲದ ಕಲ್ಪನಾ ಗಂಗಾಳ ಬದುಕನ್ನೇ ಹಾಳು ಮಾಡಲು ಪ್ರಯತ್ನ ಪಟ್ಟಿದ್ದಳು. ಅಷ್ಟೇ ಅಲ್ಲದೆ ಇದೇ ವಿಚಾರವಾಗಿ ರಾಜ್ ಗುರು ಮನೆಯಿಂದ ಹೊರನಡೆದು ಮತ್ತೆ ಹಳ್ಳಿ ಕಡೆಗೆ ಹೋಗುವ ಕಷ್ಟ ಗಂಗಾಳಿಗೆ ಎದುರಾಗಿತ್ತು. ಆದರೆ ತನ್ನ ಒಳ್ಳೆತನದಿಂದ ಮತ್ತೆ ಗಂಗಾ ರಾಜ್ ಗುರು ಮನೆಗೆ ಸೇರಿಕೊಂಡಿದ್ದಳು.  ಪ್ರಣಮ್ ಮತ್ತು ಗಂಗಾಳ ನಡುವೆ ಭಿನ್ನಾಭಿಪ್ರಾಯಗಳನ್ನು ತಂದು ಇಡುವಲ್ಲಿ ಯಶಸ್ವಿಯಾಗಿದ್ದಳು ಎಂದುಕೊಂಡ ಕಲ್ಪನಾಳ ಪ್ಲಾನ್ ಉಲ್ಟಾ ಹೊಡೆದಿದೆ. ರಾಜ್ ಗುರು ಮನೆಯ ಬಗ್ಗೆ ಮತ್ತು ತಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಮನೆಯವರ ಬಗ್ಗೆ ಗಂಗಾಳಿಗೆ ಎಲ್ಲಿಲ್ಲದ ಗೌರವ. ಅದೇ ಕಾರಣಕ್ಕೆ ತಾಯಿಯನ್ನು ಕೂಡ ಎದುರು ಹಾಕಿಕೊಂಡಿದ್ದಳು ಗಂಗಾ.
    Published by:Swathi Nayak
    First published: