ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ (Lakshana) ಕೂಡ ಒಂದು. ಸೂಪರ್ ಫಾಸ್ಟ್ ಆಗಿ ‘ಲಕ್ಷಣ’ ಧಾರಾವಾಹಿಯ ಕಥೆ ಸಾಗುತ್ತಿದ್ದು, ಇದೀಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಕಪ್ಪು ಹುಡುಗಿ ನಕ್ಷತ್ರಾ (Nakshatra) ಇದರ ನಾಯಕಿ ಬಣ್ಣದ ಕಾರಣಕ್ಕೆ ಚಿಕ್ಕ ವಯಸ್ಸಿಂದ ಮನೆಯವರ, ಸಮಾಜದ ಹೀಗಳಿಕೆಗೆ ತುತ್ತಾಗುತ್ತಾ ಬಂದವಳು, ಆದರೆ ಮಹಾನ್ ಧೈರ್ಯಶಾಲಿ. ಇದ್ಯಾವುದಕ್ಕೂ ತಲೆ ಕೆಡಿಸದೇ ಪ್ರಾಮಾಣಿಕವಾಗಿ ಬದುಕುತ್ತಿರುವ ಹುಡುಗಿ. ಅವಳ ಲೈಫಲ್ಲಿ ಇತ್ತೀಚೆಗೆ ತಿರುವಿನ ಮೇಲೆ ತಿರುವುಗಳಾಗುತ್ತಿವೆ. ಅಂಥಾ ತಿರುವುಗಳಲ್ಲೊಂದು ಅವಳ ಮದುವೆ. ತನ್ನ ಸ್ನೇಹಿತ ಭೂಪತಿ ಜೊತೆಗೆ ಅವಳ ಮದುವೆ (Marriage) ಆಗಿದೆ. ಆದರೆ ಈ ಮದುವೆಗೆ ಅವಳ ತಂದೆ ಬಿಟ್ಟರೆ ಮತ್ಯಾರ ಮನಃಪೂರ್ವಕ ಒಪ್ಪಿಗೆಯೂ ಸಿಕ್ಕಿಲ್ಲ. ಇದೀಗ ‘ಲಕ್ಷಣ’ ಧಾರಾವಾಹಿ ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದೆ.
‘ಲಕ್ಷಣ’ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್
‘ಲಕ್ಷಣ’ ಧಾರಾವಾಹಿಯಲ್ಲಿ ಇತ್ತೀಚೆಗಷ್ಟೇ ‘ಮದುವೆ ಸಂಭ್ರಮ’ ನೆರವೇರಿತ್ತು. ಗೋವಾದಲ್ಲಿ ಭೂಪತಿ ಹಾಗೂ ನಕ್ಷತ್ರ ಮದುವೆ ಜರುಗಿತ್ತು. ಗೋವಾದಲ್ಲಿ ಸುಮಾರು 4 ದಿನಗಳ ಕಾಲ ‘ಮದುವೆ ಸಂಭ್ರಮ’ದ ಸಂಚಿಕೆಗಳನ್ನು ಚಿತ್ರೀಕರಿಸಲಾಗಿತ್ತು. ಅದೇ ಮದುವೆಯ ಸಂಚಿಕೆಗಳು ಧಾರಾವಾಹಿಯ ಕಥೆಯಲ್ಲಿ ದೊಡ್ಡ ತಿರುವಿಗೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ: Lakshana: ಎರಡನೇ ಮದುವೆ ಸಾಧ್ಯವೇ ಇಲ್ಲ ಎಂದ ಭೂಪತಿ; ನಾಗವಲ್ಲಿ ಅವತಾರ ತಾಳಿದ್ದಾಳೆ ಶ್ವೇತಾ..!
ಶ್ವೇತಾ ಹಾಗೂ ನಕ್ಷತ್ರಳ ಜನ್ಮ ರಹಸ್ಯ ಬಯಲಾಯಿತು
ಭೂಪತಿ ಹಾಗೂ ಶ್ವೇತಾ ಮದುವೆ ನಿಗದಿಯಾಗಿತ್ತು. ಇನ್ನೇನು ಭೂಪತಿ ಹಾಗೂ ಶ್ವೇತಾ ಮದುವೆ ನಡೆಯಬೇಕು ಅನ್ನೋಷ್ಟರಲ್ಲಿ ಶ್ವೇತಾ ಹಾಗೂ ನಕ್ಷತ್ರಳ ಜನ್ಮ ರಹಸ್ಯ ಬಯಲಾಯಿತು. ಚಂದ್ರಶೇಖರ್ ಹಾಗೂ ಆರತಿ ದಂಪತಿಯ ಪುತ್ರಿ ನಕ್ಷತ್ರ ಅನ್ನೋದು ಜಗಜ್ಜಾಹೀರಾಯಿತು.
ಭೂಪತಿ ಜೀವನವನ್ನು ಸರಿ ಮಾಡಲು ಹೊರಟಿರುವ ಶಕುಂತಲಾ ದೇವಿ
ಶ್ವೇತಾ ಜೊತೆಗಿನ ಮದುವೆ ಕ್ಯಾನ್ಸಲ್ ಆಗೋದಕ್ಕೆ ನಕ್ಷತ್ರ ಕಾರಣ ಅಂತ ಭೂಪತಿ ತಪ್ಪು ತಿಳಿದುಕೊಂಡಿದ್ದಾರೆ. ಅತ್ತ ಭೂಪತಿ ಜೀವನವನ್ನು ಸರಿ ಮಾಡಲು ಹೊರಟಿರುವ ಶಕುಂತಲಾ ದೇವಿ, ಮತ್ತೆ ಭೂಪತಿ - ಶ್ವೇತಾ ಮದುವೆ ನೆರವೇರಿಸಲು ಸಿದ್ಧತೆ ನಡೆಸಿದ್ದಾರೆ. ಶ್ವೇತಾ ಜೊತೆಗಿನ ಮದುವೆಗೆ ಭೂಪತಿಯನ್ನ ಒಪ್ಪಿಸುವ ಜವಾಬ್ದಾರಿಯನ್ನ ನಕ್ಷತ್ರ ಹೆಗಲಿಗೆ ಶಕುಂತಲಾ ದೇವಿ ಹಾಕಿದ್ದಾರೆ.
ಇದನ್ನೂ ಓದಿ: Actress Gagana: ಗಟ್ಟಿಮೇಳ ಧಾರಾವಾಹಿ ಆರತಿ ನಿಜ ಜೀವನದಲ್ಲಿ ಇರೋದು ಹೀಗಂತೆ
ಹಗಲು ಕನಸು ಕಾಣುತ್ತಿದ್ದಾಳೆ ಶ್ವೇತಾ
ಭೂಪತಿ ಇನ್ನೇನು ನನ್ನನ್ನು ಮತ್ತೆ ಒಪ್ಪಿಕೊಳ್ಳುತ್ತಾನೆ. ಮತ್ತೆ ಕಂಡ ಕನಸುಗಳು ಸಕಾರಗೊಳ್ಳುತ್ತವೆ ಎಂದು ಶ್ವೇತಾ ಹಗಲು ಕನಸು ಕಾಣುತ್ತಿದ್ದಾಳೆ. ಭೂಪತಿಯ ತಾಯಿಯನ್ನು ಮುಂದಿಟ್ಟುಕೊಂಡಯ ಗಾಳ ಉರುಳಿಸುತ್ತಿದ್ದಾಳೆ. ಶ್ವೇತಾಳ ತಾಳಕ್ಕೆ ಕುಣಿಯುತ್ತಿರುವ ಭೂಪತಿ ತಾಯಿ ನೀನೇ ನನ್ನ ಸೊಸೆ ಎಂದಿದ್ದಾಳೆ. ಆದರೆ ಭೂಪತಿ ಎರಡನೇ ಮದುವೆಗೆ ಒಪ್ಪಲಿಲ್ಲ ಎಂಬ ವಿಚಾರ ಶ್ವೇತಾಳ ಕೋಪವನ್ನು ಹೆಚ್ಚು ಮಾಡಿದೆ. ಎಷ್ಟೇ ಕೋಪ ಬಂದರು ತೋರಿಸಿಕೊಳ್ಳದ ಶ್ವೇತಾ ಅತ್ತೆಯ ಫೋನ್ ಕಟ್ ಆದಮೇಲೆ ನಾಗವಲ್ಲಿಯಂತೆ ಡೈಲಾಗ್ ಹೊಡೆದಿದ್ದಾಳೆ. ಭೂಪತಿ ನನ್ನ ನನ್ನ ಮದುವೆಯಾಗಲ್ಲವಾ ಎಂದು ಕಿರುಚಾಡಿದ್ದಾಳೆ.
ಬೇರೆ ಪ್ಲಾನ್ ಮಾಡಿದ್ದಾರೆ ಚಂದ್ರಶೇಖರ್
ಅತ್ತ ಶ್ವೇತಾಗೆ ಬೇರೆ ಮದುವೆ ಮಾಡಲು ಚಂದ್ರಶೇಖರ್ ಹೊಸ ಸಂಬಂಧ ಹುಡುಕಿದ್ದಾರೆ. ಹೊಸ ಸಂಬಂಧಕ್ಕೆ ಶ್ವೇತಾ ಒಪ್ಪಿಗೆ ಸೂಚಿಸುತ್ತಾಳಾ.? ಅಥವಾ ಶಕುಂತಲಾ ದೇವಿ ಇಚ್ಚೆಯಂತೆ ಭೂಪತಿ - ಶ್ವೇತಾ ಮದುವೆ ನಡೆಯುತ್ತಾ.? ಇಲ್ಲಾ, ಭೂಪತಿಗೆ ನಕ್ಷತ್ರ ಬಗ್ಗೆ ಸತ್ಯ ಗೊತ್ತಾಗುತ್ತಾ.? ಎಂಬ ಪ್ರಶ್ನೆ ಇದೀಗ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.
ಅಂದ್ಹಾಗೆ, ‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮಿ, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಶ್ವೇತಾ ಆಗಿ ಸುಕೃತಾ ನಾಗ್, ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ ಅಭಿನಯಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ