• Home
  • »
  • News
  • »
  • entertainment
  • »
  • Lakshana: ಲಕ್ಷಣ ಧಾರಾವಾಹಿಯಲ್ಲಿ ನಡುಕ ಹುಟ್ಟಿಸುತ್ತಿದ್ದಾಳೆ ಡೆವಿಲ್, ಭೂಪತಿ-ನಕ್ಷತ್ರಾ ಕಂಗಾಲು!

Lakshana: ಲಕ್ಷಣ ಧಾರಾವಾಹಿಯಲ್ಲಿ ನಡುಕ ಹುಟ್ಟಿಸುತ್ತಿದ್ದಾಳೆ ಡೆವಿಲ್, ಭೂಪತಿ-ನಕ್ಷತ್ರಾ ಕಂಗಾಲು!

ಭೂಪತಿ

ಭೂಪತಿ

ಲಕ್ಷಣ ಧಾರಾವಾಹಿಯಲ್ಲಿ ಬಂದಿರುವ ವಿಲನ್ ತಾನು ಡೆವಿಲ್ ಯಾರನ್ನೂ ಬಿಡಲ್ಲ ಎಂದುಕೊಂಡು ಓಡಾಡುತ್ತಿದ್ದಾಳೆ. ಭೂಪತಿಗೆ ಕೊರಿಯರ್ ನಲ್ಲೇ ಆಟವಾಡಿಸುತ್ತಿದ್ದಾಳೆ. ಅಮ್ಮ ಶಕುಂತಲಾ ಮಗ ಭೂಪತಿಗೆ ಕಾಲ್ ಮಾಡಿ, ಇದು ಯಾರು ಕೊರಿಯರ್ ಕಳಿಸಿರೋದು? ಎಂದು ಕೇಳುತ್ತಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಮೌರ್ಯ ಈಗಾಗಲೇ ಜೈಲು ಸೇರಿದ್ದಾನೆ. ಇನ್ನು ಧಾರಾವಾಹಿಗೆ ಹೊಸ ವಿಲನ್ ಎಂಟ್ರಿ ಆಗಿದೆ. ಅದು ಲೇಡಿ ಆಕೆ ಚಂದ್ರಶೇಖರ್ ನನ್ನು ಸರ್ವನಾಶ ಮಾಡ್ತಾಳಂತೆ. ಕೊರಿಯರ್ (Courier) ನಲ್ಲೇ ಭೂಪತಿಯನ್ನು (Bhupathi) ಆಟ ಆಡಿಸುತ್ತಿದ್ದಾಳೆ.


    ಭೂಪತಿ ಮನೆಗೆ ಕೊರಿಯರ್ ಕಳಿಸಿದ ಡೆವಿಲ್
    ಲಕ್ಷಣ ಧಾರಾವಾಹಿಯಲ್ಲಿ ಬಂದಿರುವ ವಿಲನ್ ತಾನು ಡೆವಿಲ್ ಯಾರನ್ನೂ ಬಿಡಲ್ಲ ಎಂದುಕೊಂಡು ಓಡಾಡುತ್ತಿದ್ದಾಳೆ. ಭೂಪತಿಗೆ ಕೊರಿಯರ್ ನಲ್ಲೇ ಆಟವಾಡಿಸುತ್ತಿದ್ದಾಳೆ. ಅಮ್ಮ ಶಕುಂತಲಾ ಮಗ ಭೂಪತಿಗೆ ಕಾಲ್ ಮಾಡಿ, ಇದು ಯಾರು ಕೊರಿಯರ್ ಕಳಿಸಿರೋದು? ಏನ್ ಆಗ್ತಿದೆ ಭೂಪತಿ ನೋಡ್ತಾ ಇದ್ರೆ ಭಯ ಆಗುತ್ತೆ. ಸಾವಂತೆ, ಸಾವನ್ನು ಯಾರ ಕೈಯಲ್ಲೂ ತಡೆಯೋಕೆ ಆಗಲ್ವಂತೆ. ಏನಿದೆಲ್ಲಾ ವಾಸ್ ಇಸ್ ದಿಸ್ ಎಂದು ಕೇಳುತ್ತಿದ್ದಾಳೆ.


    ಲೆಟರ್ ಫೋಟೋ ಕಳಿಸಲು ಹೇಳಿದ ಭೂಪತಿ
    ಶಕುಂತಲಾ ದೇವಿ ಮನೆಗೆ ಬಂದ ಕೊರಿಯರ್ ನೋಡಿ ತುಂಬಾ ಭಯ ಬಿದ್ದಿರುತ್ತಾಳೆ. ಆಗ ಭೂಪತಿ ಅದು ನನಗೆ ಬಂದಿರೋ ಲೆಟರ್ ಅಲ್ಲ. ಬೇರೆ ಯಾರಿಗೂ ಬಂದಿರೋದು ಆ ಲೆಟರ್ ಫೋಟೋ ಕಳಿಸಮ್ಮ ಎಂದು ಹೇಳ್ತಾನೆ. ಅದಕ್ಕೆ ಶಕುಂತಲಾ ದೇವಿ, ನೀನು ಹುಷಾರಾಗಿರು ಭೂಪತಿ. ನಿನಗೆ ಏನಾದ್ರೂ ಆದ್ರೆ, ನಾನ್ ಏನ್ ಆಗ್ತೀನೋ ಗೊತ್ತಿಲ್ಲ ಎಂದು ಹೇಳ್ತಾಳೆ. ಅದಕ್ಕೆ ಭೂಪತಿ ನಾನ್ ಸೇಫ್ ಆಗಿದ್ದೀನಿ ಅಮ್ಮ ಎಂದು ಹೇಳ್ತಾನೆ.


    ಇದನ್ನೂ ಓದಿ: Kannadathi: ಅಮ್ಮಮ್ಮ ಕೊಟ್ಟ ಸುಳಿವಿಗೆ ಸಾನಿಯಾ, ಹರ್ಷ ಶಾಕ್, ಇತ್ತ ರತ್ನಮ್ಮನ ಕಿವಿಗೆ ಬಿತ್ತು ಸತ್ಯ; ಮಾಲಾ ಕೆಫೆ ಒಡತಿಯ ಕಣ್ಣೀರು!


    ಪ್ರಖ್ಯಾತ್ ಸಾವಿನ ಅಡ್ರೆಸ್
    ಪ್ರಖ್ಯಾತ್ ಈ ಹಿಂದೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ನನ್ನು ಸಾಯಿಸಲು ಬಂದಿರುತ್ತಾನೆ. ಅವನನ್ನು ಲೇಡಿ ವಿಲನ್ ತಡೆದಿರುತ್ತಾಳೆ. ಪ್ರಖ್ಯಾತ್ ಆಕೆಯನ್ನು ನೋಡಿದ್ದಾನೆ. ಅವನ ಸಹಾಯದಿಂದ ಆಕೆಯನ್ನು ಹಿಡಿಯಬಹುದು ಎಂದು ನಕ್ಷತ್ರ-ಭೂಪತಿ ಅವನನ್ನು ಕೆದುಕೊಂಡು ಬಂದಿರುತ್ತಾರೆ. ಆದ್ರೆ ಪ್ರಖ್ಯಾತ್ ನನ್ನು ಡೆವಿಲ್ ಕಿಡ್ನ್ಯಾಪ್ ಮಾಡಿದ್ದಾಳೆ. ಅಲ್ಲದೇ ಅವನ್ನನು ಸಾಯಿಸುವುದಾಗಿ ಹೇಳಿದ್ದಾಳೆ.


    Colors Kannada serial, Kannada serial, Lakshana Serial, serial today episode, Villain send to courier to Bhupathi, ಲಕ್ಷಣ ಧಾರಾವಾಹಿ, ಲಕ್ಷಣ ಧಾರಾವಾಹಿಯಲ್ಲಿ ನಡುಕ ಹುಟ್ಟಿಸುತ್ತಿದ್ದಾಳೆ ಡೆವಿಲ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶಕುಂತಲಾ ದೇವಿ


    ಪೊಲೀಸ್ ಠಾಣೆಗೂ ಕೊರಿಯರ್
    ಧಾರಾವಾಹಿಗೆ ಬಂದಿರುವ ವಿಲನ್ ಪೊಲೀಸ್ ಠಾಣೆಗೆ ಕೊರಿಯರ್ ಮಾಡಿರ್ತಾಳೆ. ಅದರಲ್ಲಿ ಪ್ರಖ್ಯಾತ್ ಫೋಟೋ ಹಾಕಿ ಶ್ರದ್ಧಾಂಜಲಿ ರಾತ್ರಿ 9.30ಕ್ಕೆ ಎಂದು ಬರೆದಿರುತ್ತಾಳೆ. ಅದನ್ನು ನೋಡಿ ಶಾಕ್ ಆದ ಭೂಪತಿ ಅವನನ್ನು ಉಳಿಸಿಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ. ಅವನಿರುವ ಜಾಗವನ್ನೇ ಡೆವಿಲ್ ಭೂಪತಿ ಮನೆಗೆ ಕೊರಿಯರ್ ಮಾಡಿರುತ್ತಾಳೆ.


    ಇದನ್ನೂ ಓದಿ: Hitler Kalyana: ಎಜೆಯ ಹೊಸ ಅವತಾರ, ಅಭಿಯಾಗಿ ಹೇಗೆ ಕಾಣ್ತಿದ್ದಾರೆ ಸ್ಟ್ರಿಕ್ಟ್ ಮ್ಯಾನ್?


    ಪ್ರಖ್ಯಾತ್ ನನ್ನು ಕಾಪಾಡ್ತಾರಾ ಭೂಪತಿ?
    ಹೊಸ ವಿಲನ್ ಪ್ರಖ್ಯಾತ್ ಎಲ್ಲಿದ್ದಾನೆ ಎಂದು ಸುಳಿವು ನೀಡಿದ್ದಾಳೆ. ಅದೇ ಜಾಗದಲ್ಲೇ ಇವತ್ತು ಅವನನ್ನು ಕೊಲ್ಲುವುದಾಗಿ ಹೇಳಿದ್ದಾಳೆ. ಅದಕ್ಕೆ ನಕ್ಷತ್ರಾ ಮತ್ತು ಭೂಪತಿ ಆ ಜಾಗಕ್ಕೆ ಹೋಗ್ತಾರೆ. ಹಾಗಾದ್ರೆ ಪ್ರಖ್ಯಾತ್ ನನ್ನು ಕಾಪಾಡ್ತಾರಾ ನೋಡಬೇಕು.


    Colors Kannada serial, Kannada serial, Lakshana Serial, serial today episode, Villain send to courier to Bhupathi, ಲಕ್ಷಣ ಧಾರಾವಾಹಿ, ಲಕ್ಷಣ ಧಾರಾವಾಹಿಯಲ್ಲಿ ನಡುಕ ಹುಟ್ಟಿಸುತ್ತಿದ್ದಾಳೆ ಡೆವಿಲ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ನಕ್ಷತ್ರಾ


    ಲಕ್ಷಣ ಧಾರಾವಾಹಿ ದಿನ್ನಕೊಂದು ತಿರುವುಗಳ ಮೂಲಕ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗ್ತಿದೆ. ಇವತ್ತೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: