Lakshana Serial: ನಕ್ಷತ್ರಾಗೆ ತನಗೆ ಕಾಟ ಕೊಡ್ತಿರೋನು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಯ್ತಾ?

ನಕ್ಷತ್ರಾಗೆ ತೊಂದರೆ ಕೊಡಲು ಬಂದಿರುವ ಮೌರ್ಯ, ಭೂಪತಿ ಮತ್ತೆ ಅವರ ಅಣ್ಣನ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಭೂಪತಿ ಮೊಬೈಲ್‍ನಲ್ಲಿ ಮೌರ್ಯನ ಫೋಟೋ ನೋಡಿ ನಕ್ಷತ್ರಾ ಗಾಬರಿಯಾಗಿದ್ದಾಳೆ. ಓಡಿ ಹೋಗಿ ಭೂಪತಿ ಬಳಿ ಇವನ್ಯಾರು ಎಂದು ಕೇಳುತ್ತಿದ್ದಾಳೆ. ಅದಕ್ಕೆ ಭೂಪತಿ ಇವನೇ ನಮ್ಮ ತಮ್ಮ ಮೌರ್ಯ ಎಂದು ಹೇಳಿದ್ದಾಳೆ.

ನಕ್ಷತ್ರಾ

ನಕ್ಷತ್ರಾ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ  (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ (Nakshatra). ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು (Bhupathi) ನಕ್ಷತ್ರ ಮದುವೆಯಾಗಿದ್ದಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್ ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ (Marriage) ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ. ನಕ್ಷತ್ರಾಗೆ ತನಗೆ ಕಾಟ ಕೊಡ್ತಿರೋನು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಗಿದೆ.

    ನಕ್ಷತ್ರಾ ಇರೋ ಜಾಗಕ್ಕೆ ಬರ್ತಾನಂತೆ ಮೌರ್ಯ
    ನಕ್ಷತ್ರಾಗೆ ತೊಂದ್ರೆ ಕೊಡ್ತಿರೋ ಮೌರ್ಯ, ಈ ಬಾರಿ ನಿನ್ನ ಹೊತ್ತುಕೊಂಡು ಹೋಗಲ್ಲ. ನೀನು ಎಲ್ಲಿ ಇರ್ತಿಯೋ ಅಲ್ಲಿಗೆ ಬಂದು, ನಿನ್ನ ಕಥೆ ಮುಗಿಸುತ್ತೇನೆ ನೋಡಿಕೋ ಎನ್ನುತ್ತಾನೆ. ನೀನು ಯಾವತ್ತು ತುಂಬಾ ಖುಷಿಯಾಗಿ ಇರ್ತಿಯೋ ಅವತ್ ಬರ್ತಿನಿ. ಅಲ್ಲಿ ಬಂದು ಖುಷಿಯನ್ನೇಲ್ಲಾ ಸಾಯಿಸಿ, ಆ ಜಾಗವನ್ನು ಸ್ಮಶಾನ ಮಾಡ್ತೀನಿ ಅಂತ ಮೌರ್ಯ ನಕ್ಷತ್ರಾಗೆ ವಾರ್ನ್ ಮಾಡಿದ್ದ.

    ಮೌರ್ಯನಿಗೆ ಸಹಾಯ ಮಾಡ್ತಾ ಇರೋ ಶೌರ್ಯ
    ನಕ್ಷತ್ರಾಗೆ ತೊಂದರೆ ಕೊಟ್ರೆ, ಚಂದ್ರಶೇಖರ್ ಗೆ ನೋವಾಗುತ್ತೆ ಎನ್ನುವುದು ಮೌರ್ಯನ ಪ್ಲ್ಯಾನ್. ಅದಕ್ಕೆ ಅವನು ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿ ಸಾಯಿಸಲು ನೋಡುತ್ತಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಲು ಮನೆಗೆ ಬರಲು, ಭೂಪತಿ ಅಣ್ಣ ಶೌರ್ಯ ಸಹಾಯ ಮಾಡಿದ್ದಾನೆ. ಮನೆಯಲ್ಲಿದ್ದುಕೊಂಡೆ ಯಾರಿಗೂ ಗೊತ್ತಾಗದಂತೆ, ಮೌರ್ಯನಿಗೆ ಸಹಾಯ ಮಾಡುತ್ತಿದ್ದಾನೆ.

    ಇದನ್ನೂ ಓದಿ: Hitler Kalyana: ಲೀಲಾ ತವರು ಮನೆಗೆ ಗಣೇಶ ಬರದಂತೆ ತಡೆ ಹಿಡಿದಿದ್ದಾಳೆ ಎ.ಜೆ ಸೊಸೆ ದುರ್ಗಾ, ಕೆಡುಕು ಕಾದಿದ್ಯಾ?

    ನಕ್ಷತ್ರಾ ಖುಷಿಯಾಗಿದ್ದಾಳೆ
    ನೀನು ಯಾವತ್ತು ತುಂಬಾ ಖುಷಿಯಾಗಿ ಇರ್ತಿಯೋ ಅವತ್ ಬರ್ತಿನಿ ನಕ್ಷತ್ರಾ ಎಂದಿರುವ ಮೌರ್ಯ ಅದೇ ಟೈಂಗಾಗಿ ಕಾಯ್ತಾ ಇದ್ದು. ಇವತ್ತು ನಕ್ಷತ್ರಾ ಮತ್ತು ಶ್ವೇತಾಳ ಹುಟ್ಟುಹಬ್ಬ. ಮನೆಯವರೆಲ್ಲಾ ತುಂಬಾ ಖುಷಿಯಲ್ಲಿದ್ದಾರೆ. ಇಬ್ಬರ ಹುಟ್ಟುಹಬ್ಬ ಆಚರಣೆಗೆ ಪಾರ್ಟಿ ಕೊಡುತ್ತಿದ್ದಾರೆ. ಅಂದ್ರೆ ನಕ್ಷತ್ರಾ ತುಂಬಾ ಖುಷಿಯಾಗಿದ್ದಾಳೆ. ಅದಕ್ಕೆ ಮೌರ್ಯ ಅಲ್ಲಿಗೆ ಬಂದಿದ್ದಾನೆ. ಅವಳನ್ನು ಕೊಲ್ಲಲು ಪ್ಲ್ಯಾನ್ ಮಾಡ್ತಾ ಇದ್ದಾನೆ.

    ಮೌರ್ಯ


    ಭೂಪತಿ ಮೊಬೈಲ್‍ನಲ್ಲಿ ಮೌರ್ಯನ ಫೋಟೋ
    ನಕ್ಷತ್ರಾಗೆ ತೊಂದರೆ ಕೊಡಲು ಬಂದಿರುವ ಮೌರ್ಯ, ಭೂಪತಿ ಮತ್ತೆ ಅವರ ಅಣ್ಣನ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಭೂಪತಿ ಮೊಬೈಲ್‍ನಲ್ಲಿ ಮೌರ್ಯನ ಫೋಟೋ ನೋಡಿ ನಕ್ಷತ್ರಾ ಗಾಬರಿಯಾಗಿದ್ದಾಳೆ. ಓಡಿ ಹೋಗಿ ಭೂಪತಿ ಬಳಿ ಇವನ್ಯಾರು ಎಂದು ಕೇಳುತ್ತಿದ್ದಾಳೆ. ಅದಕ್ಕೆ ಭೂಪತಿ ಇವನೇ ನಮ್ಮ ತಮ್ಮ ಮೌರ್ಯ ಎಂದು ಹೇಳಿದ್ದಾಳೆ.

    ಇದನ್ನೂ ಓದಿ: Shwetha Srivastav: ಶ್ವೇತಾ ಶ್ರೀವಾತ್ಸವ್ ಹುಟ್ಟುಹಬ್ಬ, ಜನ್ಮದಿನದಂದು NGO ಶುರು ಮಾಡಿದ ನಟಿ

    ಭೂಪತಿ ಏನ್ ಮಾಡ್ತಾನೆ?
    ನಕ್ಷತ್ರಾಗೆ ತನಗೆ ತೊಂದರೆ ಕೊಡ್ತಿರೋನು ಭೂಪತಿ ತಮ್ಮನೇ ಎಂದು ಗೊತ್ತಾಗಿದೆ. ಅದನ್ನು ಕೇಳಿ ಅವಳು ಶಾಕ್ ಆಗಿದ್ದಾಳೆ. ಇನ್ನೂ ಈ ವಿಷ್ಯವನ್ನು ತನ್ನ ಗಂಡ ಭೂಪತಿಗೆ ಹೇಳ್ತಾಳಾ? ತನ್ನ ತಮ್ಮನೇ, ಹೆಂಡ್ತಿಗೆ ತೊಂದರೆ ಕೊಡುತ್ತಿರುವವನು ಅಂತ ಗೊತ್ತಾದ್ರೆ ಏನ್ ಕಥೆ? ನಕ್ಷತ್ರಾ ಈಗ ಏನ್ ಮಾಡ್ತಾಳೆ. ತನ್ನ ಅಪ್ಪ ಚಂದ್ರಶೇಖರ್ ಗೆ  ಈ ವಿಷಯವನ್ನು ತಿಳಿಸುತ್ತಾಳಾ? ಎಲ್ಲವನ್ನೂ ನೋಡಲು ಲಕ್ಷಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: