• Home
  • »
  • News
  • »
  • entertainment
  • »
  • Lakshana: ಸಾಕಿದ ಅಪ್ಪನ ಮನೆ ಉಳಿಸಿದ ನಕ್ಷತ್ರಾ, ಶ್ವೇತಾಗೆ ಗ್ರಹಚಾರ ಬಿಡಿಸಿದ್ರು

Lakshana: ಸಾಕಿದ ಅಪ್ಪನ ಮನೆ ಉಳಿಸಿದ ನಕ್ಷತ್ರಾ, ಶ್ವೇತಾಗೆ ಗ್ರಹಚಾರ ಬಿಡಿಸಿದ್ರು

 ನಕ್ಷತ್ರಾ

ನಕ್ಷತ್ರಾ

ನಕ್ಷತ್ರಾ ಬಂದು ಅದನ್ನು ತಡೆಯುತ್ತಾನೆ. ನಾನು 50 ಲಕ್ಷ ವಾಪಸ್ ಕೊಡ್ತೀನಿ ಮನೆ ಬಿಡಿ ಎನ್ನುತ್ತಾಳೆ. ಆಗ ಬಿಲ್ಡರ್, ಇದೇನ್ ಆಟನಾ? ನಿನ್ನ ಅಷ್ಟು ಕುಬೇರನಾ ಮಗಳ ಎನ್ನುತ್ತಾನೆ. ಅದಕ್ಕೆ ನಕ್ಷತ್ರಾ 1 ಕೋಟಿ ಕೊಡ್ತೀನಿ. ನಾನು ಚಂದ್ರಶೇಖರ್ ಅಂದ್ರೆ ಸಿಎಸ್ ಮಗಳು ಎನ್ನುತ್ತಾಳೆ.

  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ (Nakshtra) ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಮೌರ್ಯ ಈಗಾಗಲೇ ಜೈಲು ಸೇರಿದ್ದಾನೆ. ಇನ್ನೊಂದೆಡೆ ನಕ್ಷತ್ರಾಳನ್ನು ಸಾಕಿದ ಅಪ್ಪ ಅಮ್ಮನಿಗೆ ಶ್ವೇತಾಳಿಂದ ತೊಂದ್ರೆ ಬಂದಿದೆ. ದುಡ್ಡಿನ ಆಸೆಗಾಗಿ ಮನೆ (Home) ಮಾರಲು ಹೋಗಿ ಮೋಸ ಹೋಗಿದ್ದಾಳೆ.


    ಹಣ ಡಬಲ್ ಮಾಡಲು ಹೋದ ಶ್ವೇತಾ
    ಶ್ವೇತಾ ಮೊದಲಿನಿಂದಲೂ ಶ್ರೀಮಂತಿಕೆಯಿಂದ ಬೆಳೆದ ಕಾರಣ, ಆಕೆ ತುಕಾರಾಂ ಮನೆಯಲ್ಲಿ ಬಂದು ಹೊಂದಿಕೊಳ್ಳಲು ಆಗುತ್ತಿಲ್ಲ. ಆದ ಕಾರಣ ಹೇಗಾದ್ರೂ ದುಡ್ಡು ಹೊಂದಿಸಬೇಕು ಎಂದು. ಮಿಲ್ಲಿ,  ಆಕೆ ಸೇರಿ ಏನೇನೂ ಪ್ಲ್ಯಾನ್ ಮಾಡಿ ಅಪ್ಪನ ಬಳಿ ಮನೆಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿರುತ್ತಾಳೆ. ಅಂತೆಯೇ ಮಿಲ್ಲಿ, ಶ್ವೇತಾ ಸೇರಿ ಮನೆಯನ್ನು ಮಾರಿ 50 ಲಕ್ಷ ಪಡೆದಿರುತ್ತಾರೆ.


    ಶ್ವೇತಾಗೆ ಗೆಳತಿಯಿಂದಲೇ ವಂಚನೆ
    ಶ್ವೇತಾಗೆ ನಳಿನಿ ಎಂಬ ಗೆಳತಿ ಇರುತ್ತಾಳೆ. ಆಕೆಯೇ ಶ್ವೇತಾಳಿಗೆ ವಂಚನೆ ಮಾಡಿದ್ದಾಳೆ. 50 ಲಕ್ಷ ಕೊಡೋ 1 ವರೆ ಕೋಟಿ ಕೊಡ್ತೀನಿ ಎಂದಿರುತ್ತಾಳೆ. ಅದಕ್ಕೆ ಶ್ವೇತಾ ಮನೆ ಮಾರಿ 50 ಲಕ್ಷ ತಂದುಕೊಡುತ್ತಾಳೆ. ಆದ್ರೆ ನಳಿನಿ ಆ ದುಡ್ಡನ್ನು ಪಡೆದು ಬಿಳಿ ಹಾಳೆಯನ್ನು ಕೊಟ್ಟು ಹೋಗಿರುತ್ತಾಳೆ. ಅದನ್ನು ನೋಡಿದ ಶ್ವೇತಾಗೆ ತನ್ನ ಮೋಸದ ಬಗ್ಗೆ ತಿಳಿಯುತ್ತೆ. ಅದನ್ನು ನೆನಸಿಕೊಂಡು ಬೇಸರ ಮಾಡಿಕೊಂಡಿದ್ದಾಳೆ.


    ಇದನ್ನೂ ಓದಿ: Bhagya Lakshmi: ಮದುವೆಗೆ ಅತ್ತೆ-ಸೊಸೆ ಜಾತಕ ಮ್ಯಾಚ್ ಆಗ್ಬೇಕಂತೆ! ಲಕ್ಷ್ಮೀಗೊಬ್ಬ ಶ್ರೀರಾಮ ಸಿಗ್ತಾನಾ?


    ಮನೆ ಒಡೆಯಲು ಬಂದ ಬಿಲ್ಡರ್
    ಶ್ವೇತಾ ಬಳಿ 50 ಲಕ್ಷಕ್ಕೆ ಮನೆ ಪಡೆದ ಬಿಲ್ಡರ್, ಮನೆಯನ್ನು ಕೆಡವಲು ಜೆಸಿಬಿ ತಂದಿರುತ್ತಾನೆ. ಆಗ ಶ್ವೇತಾಳ ವಂಚನೆ ಗೊತ್ತಾಗುತ್ತೆ. ದಸರಾ ಹಬ್ಬದ ದಿನವೇ ಬೊಂಬೆ ಪೂಜೆ ಮಾಡುವಾಗ್ಲೇ ಎಲ್ಲರನ್ನು ಮನೆಯಿಂದ ಹೊರ ಕರೆಸಿ ಮನೆ ಕೆಡವಲು ಹೊರಟಿರುತ್ತಾನೆ. ಎಷ್ಟೇ ಬೇಡಿಕೊಂಡ್ರೂ ಕೇಳದೇ ಮನೆ ಕೆಡವಲು ಮುಂದಾಗಿರುತ್ತಾರೆ.


    Colors Kannada serial, Kannada serial, Lakshana Serial, serial today episode, Nakshatra saves father house, ಲಕ್ಷಣ ಧಾರಾವಾಹಿ, ಸಾಕಿದ ಅಪ್ಪನ ಮನೆ ಉಳಿಸಿದ ನಕ್ಷತ್ರಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಮನೆ ಒಡೆಯಲು ಬಂದ ಬಿಲ್ಡರ್


    ಮನೆ ಉಳಿಸಿಕೊಟ್ಟ ನಕ್ಷತ್ರಾ
    ಮನೆಯ ಬಗ್ಗೆ ನಕ್ಷತ್ರಾಳಿಗೆ ಕಾಲ್ ಮಾಡಿ ಅವರ ಅಕ್ಕ ಎಲ್ಲಾ ಹೇಳ್ತಾಳೆ. ಆಗ ನಕ್ಷತ್ರಾ ಅಲ್ಲಿಗೆ ಬಂದು ಅದನ್ನು ತಡೆಯುತ್ತಾನೆ. ನಾನು 50 ಲಕ್ಷ ವಾಪಸ್ ಕೊಡ್ತೀನಿ ಮನೆ ಬಿಡಿ ಎನ್ನುತ್ತಾಳೆ. ಆಗ ಬಿಲ್ಡರ್, ಇದೇನ್ ಆಟನಾ? ನಿನ್ನ ಅಷ್ಟು ಕುಬೇರನಾ ಮಗಳ ಎನ್ನುತ್ತಾನೆ. ಅದಕ್ಕೆ ನಕ್ಷತ್ರಾ 1 ಕೋಟಿ ಕೊಡ್ತೀನಿ. ನಾನು ಚಂದ್ರಶೇಖರ್ ಅಂದ್ರೆ ಸಿಎಸ್ ಮಗಳು ಎನ್ನುತ್ತಾಳೆ. ಅದಕ್ಕೆ ಅವನು ಮನೆ ಕೊಟ್ಟು ವಾಪಸ್ ಹೋಗ್ತಾನೆ.


    ಇದನ್ನೂ ಓದಿ: Kannadathi: ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ? ಹಬ್ಬದ ದಿನ ಅಮ್ಮಮ್ಮನ ಮನೆಯಲ್ಲಿ ರಕ್ತದ ಕಲೆ!


    ಶ್ವೇತಾಗೆ ಕ್ಲಾಸ್
    ಮನೆಯವರೆಲ್ಲಾ ಸೇರಿ ಶ್ವೇತಾಗೆ ಬೈಯ್ತಾ ಇದ್ದಾರೆ. ನಿನ್ನನ್ನು ನಂಬಿದ್ದಕ್ಕೆ ನಮಗೆ ಸರಿಯಾಗಿ ಮಾಡಿದೆ. ಮೋಸ ಮಾಡಿದೆ. ಸಕ್ಕರೆ ಗೊಂಬೆ ಅಂತಿದ್ವಿ. ನೀನು ನಮ್ಮ ತಲೆ ಮೇಲೆ ಕಲ್ಲು ಹಾಕಿ ಬಿಟ್ಟೆ ಎಂದು ಹೇಳಿದ್ದಾರೆ.


    Colors Kannada serial, Kannada serial, Lakshana Serial, serial today episode, Nakshatra saves father house, ಲಕ್ಷಣ ಧಾರಾವಾಹಿ, ಸಾಕಿದ ಅಪ್ಪನ ಮನೆ ಉಳಿಸಿದ ನಕ್ಷತ್ರಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶ್ವೇತಾ


    ಇದೆಲ್ಲಾ ಎಂಟ್ರಿ ಆಗಿರುವ ಹೊಸ ವಿಲನ್ ಮಿಲ್ಲಿ ತಾಯಿ ಆಟ. ತುಕಾರಾಂನ ಬೀದಿಗೆ ತರೋ ಪ್ಲ್ಯಾನ್ ಮಾಡಿದ್ಲು. ಆದ್ರೆ ಅದು ಸಕ್ಸಸ್ ಆಗಿಲ್ಲ. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: