• Home
  • »
  • News
  • »
  • entertainment
  • »
  • Lakshana: ಭಾರ್ಗವಿ ಡೆವಿಲ್ ಅಂತ ಗೊತ್ತಾಗುತ್ತಾ? ಅಣ್ಣನ ಮುಂದೆ ಭಾರ್ಗವಿ ಹೈಡ್ರಾಮಾ!

Lakshana: ಭಾರ್ಗವಿ ಡೆವಿಲ್ ಅಂತ ಗೊತ್ತಾಗುತ್ತಾ? ಅಣ್ಣನ ಮುಂದೆ ಭಾರ್ಗವಿ ಹೈಡ್ರಾಮಾ!

ಅಣ್ಣನ ಮುಂದೆ ಭಾರ್ಗವಿ ಹೈಡ್ರಾಮಾ

ಅಣ್ಣನ ಮುಂದೆ ಭಾರ್ಗವಿ ಹೈಡ್ರಾಮಾ

ಅಣ್ಣನ ಮುಂದೆ ನಾಟಕವಾಡ್ತಾ ಇರೋ ಭಾರ್ಗವಿಯೇ ವಿಲನ್ ಎಂದು ಚಂದ್ರಶೇಖರ್ ಗೆ ಗೊತ್ತಾಗುತ್ತಾ? ಸುಮ್ಮನೇ ಮಾತನಾಡಲು ಹೋಗಿ ಸಿಕ್ಕಿ ಹಾಕಿ ಕೊಳ್ತಾಳಾ? ಭಾರ್ಗವಿಯೇ ವಿಲನ್ ಅಂತ ಗೊತ್ತಾದ್ರೆ ಸಿಎಸ್ ಏನ್ ಮಾಡ್ತಾರೆ? ನಕ್ಷತ್ರಾ ತನ್ನ ಅತ್ತೆಯನ್ನು ಸುಮ್ನೆ ಬಿಡ್ತಾಳಾ?

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಮೌರ್ಯ ಈಗಾಗಲೇ ಜೈಲು ಸೇರಿದ್ದಾನೆ. ಇನ್ನು ಧಾರಾವಾಹಿಗೆ ಹೊಸ ವಿಲನ್ ಎಂಟ್ರಿ ಆಗಿದೆ. ಆ ವಿಲನ್ ಬೇರೆ ಯಾರೂ ಅಲ್ಲ ಚಂದ್ರಶೇಖರ್ ತಂಗಿ (Sister) ಭಾರ್ಗವಿ. ಮನೆಯೊಳಗೆ ಇದ್ದಕೊಂಡೇ ನಾಟಕ (Drama) ಆಡ್ತಾ ಇದ್ದಾಳೆ.


    ಚಂದ್ರಶೇಖರ್ ತಂಗಿ ಭಾರ್ಗವಿಯೇ ಡೆವಿಲ್
    ಚಂದ್ರಶೇಖರ್ ವಿಲನ್ ಯಾರು ಅಂತ ಊರೆಲ್ಲಾ ಹುಡುಕುತ್ತಿದ್ರೆ, ಅವಳು ಅವನ ಮನೆಯಲ್ಲೇ ಇದ್ದಾಳೆ. ಅದು ಬೇರೆ ಯಾರೂ ಅಲ್ಲ. ಚಂದ್ರಶೇಖರ್ ತಂಗಿ ಭಾರ್ಗವಿಯೇ ಈ ಧಾರಾವಾಹಿಗೆ ಎಂಟ್ರಿ ಆಗಿರುವ ವಿಲನ್. ಮನೆಯಲ್ಲೇ ಇದ್ದುಕೊಂಡು ಅಣ್ಣನ ಮೇಲೆ ಕತ್ತಿ ಮಸೆಯುತ್ತಿದ್ದಾಳೆ. ಚಂದ್ರಶೇಖರ್ ಗೆ ತನ್ನ ತಂಗಿಯೇ ವಿಲನ್ ಎಂದು ಗೊತ್ತಾಗುತ್ತಾ? ನಕ್ಷತ್ರಾಗೆ ತನ್ನ ಅತ್ತೆಯ ಕುತಂತ್ರ ತಿಳಿಯುತ್ತಾ ನೋಡಬೇಕು.


    ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್ ಗೆ ಬೆಂಕಿ
    ಡೆವಿಲ್ ಅಂದ್ರೆ ಚಂದ್ರಶೇಖರ್ ತಂಗಿ ಭಾರ್ಗವಿ, ಪ್ರಖ್ಯಾತ್ ನನ್ನು ಕಿಡ್ನ್ಯಾಪ್ ಮಾಡಿ, ನವರಾತ್ರಿಯ ರಾವಣನ ಸಂಹಾರದ ಗೊಂಬೆಯಲ್ಲಿ ಕಟ್ಟಿ ಹಾಕಿರುತ್ತಾಳೆ. ಅಲ್ಲದೇ ಅವನನ್ನು ತಾಕತ್ ಇದ್ರೆ ಕಾಪಾಡಿ ಎಂದು ಭೂಪತಿ ಸವಾಲು ಹಾಕಿರುತ್ತಾಳೆ. ನಿಮ್ಮ ಮುಂದೆಯೇ ಅವನನು ಸಾಯಿಸ್ತೀನಿ ಎಂದು ಸವಾಲ್ ಹಾಕಿರುತ್ತಾಳೆ. ಹೇಳಿದಂತೆ ಪ್ರಖ್ಯಾತ್ ಗೆ ಎಲ್ಲರ ಮುಂದೆ ಬೆಂಕಿ ಹಚ್ಚಿ ಸಾಯಿಸಿದ್ದಾಳೆ.


    ಇದನ್ನೂ ಓದಿ: Kannadathi: ಅಮ್ಮಮ್ಮ ಕೋಮಾದತ್ತ; ಸಾನಿಯಾ ಮುಂದೆ ಸತ್ಯ ಬಾಯ್ಬಿಟ್ಟ ರತ್ನಮಾಲಾ!


    ಗಾಬರಿಯಿಂದ ಮನೆಗೆ ಹೋದ ಸಿಎಸ್
    ಪ್ರಖ್ಯಾತ್ ಕೊಲೆಯಾಗಿದ್ದನ್ನು ಕಣ್ಣಾರೆ ಕಂಡ ಚಂದ್ರಶೇಖರ್, ನಕ್ಷತ್ರಾ ಎಲ್ಲರೂ ಗಾಬರಿ ಆಗಿದ್ದಾರೆ. ಅದನ್ನೇ ಯೋಚನೆ ಮಾಡುತ್ತಾ ಮನೆಗೆ ಬಂದಿದ್ದಾರೆ. ಈ ವಿಷಯ ತನ್ನ ತಂಗಿ ಭಾರ್ಗವಿಗೆ ಗೊತ್ತಾಗಬಾರದು. ಗೊತ್ತಾದ್ರೆ, ಆಕೆ ತುಂಬಾ ಬೇಸರ ಮಾಡಿಕೊಳ್ಳಾಳೆ. ಆ ಡೆವಿಲ್ ಕಣ್ಣ ಮುಂದೆ ಬಂದ್ರೆ ಸುಮ್ಮನೇ ಬಿಡಲ್ಲ ಎನ್ನುತ್ತಾನೆ. ಆಗ ಭಾರ್ಗವಿ ಬಂದು ಬಾಗಿಲು ತೆಗೆಯುತ್ತಾಳೆ.


    Colors Kannada serial, Kannada serial, Lakshana Serial, serial today episode, Nakshatra Mother in law is villain, ಲಕ್ಷಣ ಧಾರಾವಾಹಿ, ಅಣ್ಣನ ಮುಂದೆ ಭಾರ್ಗವಿ ಹೈಡ್ರಾಮಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಚಂದ್ರಶೇಖರ್


    ಅಣ್ಣನ ಮುಂದೆ ಎಲ್ಲಾ ನಾಟಕ
    ಬಾಗಿಲು ತೆರೆದ ಭಾರ್ಗವಿ ಯಾರನ್ನು ಹುಡುಕುತ್ತಿದ್ದೀಯಾ ಅಣ್ಣ ಎಂದು ಕೇಳ್ತಾಳೆ? ಅದಕ್ಕೆ ಚಂದ್ರಶೇಖರ್ ನಡೆದುದ್ದನ್ನು ಹೇಳ್ತಾನೆ. ಅಲ್ಲದೇ ನನ್ನ ಮನಸ್ಸು ಈಗಲೂ ಒದ್ದಾಡುತ್ತಿದೆ ಎಂದು ಹೇಳ್ತಾಳೆ. ಆಗ ಭಾರ್ಗವಿ, ಒದ್ದಾಡಲಿ ಅಂತ ತಾನೇ ಈ ರೀತಿ ಮಾಡಿದ್ದು ಎನ್ನುತ್ತಾಳೆ. ಆಗ ಎಲ್ಲರೂ ಶಾಕ್ ಆಗ್ತಾರೆ.


    ಇದನ್ನೂ ಓದಿ: Chiranjeevi Sarja: ನಾನು ನಗಲು ನೀನೇ ಕಾರಣ, ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಮೇಘನಾ ಭಾವನಾತ್ಮಕ ಪತ್ರ


    ಭಾರ್ಗವಿ ಡೆವಿಲ್ ಅಂತ ಗೊತ್ತಾಗುತ್ತಾ?
    ಅಣ್ಣನ ಮುಂದೆ ನಾಟಕವಾಡ್ತಾ ಇರೋ ಭಾರ್ಗವಿಯೇ ವಿಲನ್ ಎಂದು ಚಂದ್ರಶೇಖರ್ ಗೆ ಗೊತ್ತಾಗುತ್ತಾ? ಸುಮ್ಮನೇ ಮಾತನಾಡಲು ಹೋಗಿ ಸಿಕ್ಕಿ ಹಾಕಿ ಕೊಳ್ತಾಳಾ? ಭಾರ್ಗವಿಯೇ ವಿಲನ್ ಅಂತ ಗೊತ್ತಾದ್ರೆ ಸಿಎಸ್ ಏನ್ ಮಾಡ್ತಾರೆ? ನಕ್ಷತ್ರಾ ತನ್ನ ಅತ್ತೆಯನ್ನು ಸುಮ್ನೆ ಬಿಡ್ತಾಳಾ?


    Colors Kannada serial, Kannada serial, Lakshana Serial, serial today episode, Nakshatra Mother in law is villain, ಲಕ್ಷಣ ಧಾರಾವಾಹಿ, ಅಣ್ಣನ ಮುಂದೆ ಭಾರ್ಗವಿ ಹೈಡ್ರಾಮಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ನಕ್ಷತ್ರಾ


    ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಮುಂದೇನಾಗುತ್ತೆ ಅಂತ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: