Lakshana Serial: ಮೌರ್ಯನ ಬಗ್ಗೆ ಹೇಳಲಾಗದೇ ನಕ್ಷತ್ರಾ ಒದ್ದಾಟ, ತಮ್ಮನ ಬಗ್ಗೆ ಸತ್ಯ ತಿಳಿದುಕೊಳ್ತಾನಾ ಭೂಪತಿ?

ನಕ್ಷತ್ರಾಗೆ ತನ್ನನ್ನು, ತನ್ನ ಅಪ್ಪನನ್ನು ಕೊಲ್ಲಲು ಬಂದವನು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಗಿದೆ. ನಮ್ಮ ಅಪ್ಪ ನನ್ನನ್ನು ಬಲವಂತವಾಗಿ ಭೂಪತಿ ಜೊತೆ ಮದುವೆ ಮಾಡಿಸಿದ್ದಾರೆ ಎಂದು ಹೀಗೆಲ್ಲಾ ಮಾಡುತ್ತಿದ್ದಾನೆ.

ನಕ್ಷತ್ರಾ

ನಕ್ಷತ್ರಾ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ (Nakshatra) ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಾಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್ ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ  (Marriage) ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ. 

    ನಕ್ಷತ್ರಾ ಹುಟ್ಟುಹಬ್ಬ ಪಾರ್ಟಿಯಲ್ಲು ಟೈಟ್ ಸೆಕ್ಯೂರಿಟಿ
    ನಕ್ಷತ್ರಾ ಹುಟ್ಟುಹಬ್ಬವನ್ನು ಭೂಪತಿ ಗ್ರಾಂಡ್ ಆಗಿ ಆಚರಣೆ ಮಾಡುತ್ತಿದ್ದಾನೆ. ಬೇಕಾದ ನೆಂಟರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನ ಕೊಟ್ಟಿದ್ದಾನೆ. ಪಾರ್ಟಿಗೆ ತನ್ನ ಪತ್ನಿಗೆ ಕಾಟ ಕೊಡೋನು ಬಂದೇ ಬರಬಹುದು ಎಂದು ಟೈಟ್ ಸೆಕ್ಯೂರಿಟಿ ಅರೆಂಜ್ ಮಾಡಿದ್ದಾನೆ. ಇನ್ನೂ ನಕ್ಷತ್ರಾ ಅಪ್ಪ ಚಂದ್ರಶೇಖರ್ ಪೊಲೀಸ್ ಸರ್ಪಗಾವಲು ಹಾಕಿಸಿದ್ದಾನೆ.

    ಭೂಪತಿ ಮೊಬೈಲ್ ನಲ್ಲಿ ಮೌರ್ಯನ ಫೋಟೋ
    ನಕ್ಷತ್ರಾಗೆ ತೊಂದರೆ ಕೊಡಲು ಬಂದಿರುವ ಮೌರ್ಯ, ಭೂಪತಿ ಮತ್ತೆ ಅವರ ಅಣ್ಣನ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಭೂಪತಿ ಮೊಬೈಲ್‍ನಲ್ಲಿ ಮೌರ್ಯನ ಫೋಟೋ ನೋಡಿ ನಕ್ಷತ್ರಾ ಗಾಬರಿಯಾಗಿದ್ದಾಳೆ. ಓಡಿ ಹೋಗಿ ಭೂಪತಿ ಬಳಿ ಇವನ್ಯಾರು ಎಂದು ಕೇಳುತ್ತಿದ್ದಾಳೆ. ಅದಕ್ಕೆ ಭೂಪತಿ ಇವನೇ ನಮ್ಮ ತಮ್ಮ ಮೌರ್ಯ ಎಂದು ಹೇಳಿದ್ದಾನೆ.

    ಇದನ್ನೂ ಓದಿ: Kendasampige: ಸುಮನಾ ಮರ್ಯಾದೆ ತೆಗೆಯಲು ಮುಂದಾದ ಕಾಳಿ, ಯಾರು ಇಲ್ಲದ ವೇಳೆ ಮನೆಗೆ ಬಂದ!

    ಪ್ರಾಣ ತೆಗೆಯಲು ಬಂದವನು ಭೂಪತಿ ತಮ್ಮ ಮೌರ್ಯ
    ನಕ್ಷತ್ರಾಗೆ ತನ್ನನ್ನು, ತನ್ನ ಅಪ್ಪನನ್ನು ಕೊಲ್ಲಲು ಬಂದವನು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಗಿದೆ. ನಮ್ಮ ಅಪ್ಪ ನನ್ನನ್ನು ಬಲವಂತವಾಗಿ ಭೂಪತಿ ಜೊತೆ ಮದುವೆ ಮಾಡಿಸಿದ್ದಾರೆ ಎಂದು ಹೀಗೆಲ್ಲಾ ಮಾಡುತ್ತಿದ್ದಾನೆ. ಅತ್ತಿಗೆಯೆಂದು ನೋಡದೇ ಕೊಲ್ಲಲ್ಲು ಹಲವು ಬಾರಿ ಪ್ರಯತ್ನ ಮಾಡಿದ್ದಾನೆ ಎಂದು ನಕ್ಷತ್ರಾ ಬೇಸರ ಮಾಡಿಕೊಂಡಿದ್ದಾಳೆ. ಅಲ್ಲದೇ ಈ ವಿಷಯ ಭೂಪತಿಗೆ ಗೊತ್ತಾದ್ರೆ ಅವನು, ತಮ್ಮ ಅನ್ನುವುದನ್ನೂ ನೋಡದೇ ಏನಾದ್ರೂ ಮಾಡಿ ಬಿಡ್ತಾನೆ ಎನ್ನೋ ಭಯ ಶುರುವಾಗಿದೆ.

    Colors Kannada serial, Kannada serial, Lakshana Serial, serial today episode, Nakshatra know about who is Villain, ಲಕ್ಷಣ ಧಾರಾವಾಹಿ, ಮೌರ್ಯನ ಬಗ್ಗೆ ಹೇಳಲಾಗದೇ ನಕ್ಷತ್ರಾ ಒದ್ದಾಟ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಮೌರ್ಯ


    ನಕ್ಷತ್ರ ಬಳಿ ಸತ್ಯ ತಿಳ್ಕೋತಾನಾ ಭೂಪತಿ?
    ಇನ್ನು ಮೌರ್ಯನ ಬಗ್ಗೆ ಸತ್ಯ ಗೊತ್ತಾಗಿ ನಕ್ಷತ್ರಾ ಮಂಕಾಗಿ ಹೋಗಿದ್ದಾಳೆ. ಯಾರ ಬಳಿಯೂ ಮಾತನಾಡುತ್ತಿಲ್ಲ. ಅದಕ್ಕೆ ಭೂಪತಿ ನಕ್ಷತ್ರಾಳನ್ನು ಕೇಳುತ್ತಿದ್ದಾನೆ. ಏನ್ ಆಯ್ತು? ಏಕೆ ಇಷ್ಟೊಂದು ಮೌನವಾಗಿದ್ದಿ ಎನ್ನುತ್ತಾನೆ. ನಕ್ಷತ್ರಾ ಏನೂ ಮಾತನಾಡುತ್ತಿಲ್ಲ. ಅದಕ್ಕೆ ಭೂಪತಿ ಮೌರ್ಯನ ಫೋಟೋ ನೋಡಿದ ಮೇಲೆ ಈ ರೀತಿ ನಡೆದುಕೊಳ್ಳತ್ತಿದ್ದೀಯಾ ಸತ್ಯ ಹೇಳು ಎಂದು, ತನ್ನ ಮೇಲೆ ಆಣೆ ಹಾಕಿಸಿಕೊಳ್ಳುತ್ತಿದ್ದಾನೆ.

    ಇದನ್ನೂ ಓದಿ: Srujan Lokesh Direction: ನಿರ್ದೇಶನಕ್ಕೆ ಇಳಿದ ಟಾಕಿಂಗ್ ಸ್ಟಾರ್ ಸೃಜನ ಲೋಕೇಶ್, ಮೊದಲ ಚಿತ್ರ ಯಾವುದು?

    ನಿಜ ಹೇಳ್ತಾಳಾ ನಕ್ಷತ್ರಾ?
    ಭೂಪತಿ ತನ್ನ ಮೇಲೆ ಆಣೆ ಮಾಡು ಸತ್ಯ ಹೇಳು ಎಂದು ನಕ್ಷತ್ರಾಳನ್ನು ಕೇಳುತ್ತಿದ್ದಾನೆ. ಇನ್ನೂ ನಕ್ಷತ್ರಾಗೆ ಬೇರೆ ದಾರಿ ಇಲ್ಲ. ಎಲ್ಲ ಸತ್ಯವನ್ನೂ ಹೇಳಲೇ ಬೇಕಿದೆ. ಸತ್ಯ ಕೇಳಿದ ಮೇಲೆ ಭೂಪತಿ ತನ್ನ ತಮ್ಮನಿಗೆ ಶಿಕ್ಷೆ ಕೊಡುತ್ತಾನಾ? ಇಲ್ಲ ಕ್ಷಮಿಸಿ ಬಿಡುತ್ತಾನಾ? ಮುಂದೆ ಏನ್ ಆಗುತ್ತೆ ಅಂತ ನೋಡುವುದಕ್ಕೆ ಲಕ್ಷಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: