Lakshana: ನಕ್ಷತ್ರಾ ಪಾಲಿಗೆ ಯಮನಾಗಿ ಬಂದ ಮೌರ್ಯ; ಭೂಪತಿ ಹೆಂಡತಿ ಗತಿಯೇನು?

ಮೌರ್ಯ ಅವತ್ತಿನಿಂದ ನಕ್ಷತ್ರಾಳನ್ನು ಕೊಲ್ಲಲು ಸ್ಕೆಚ್ ಹಾಕ್ತಿದ್ದ. ಆಗಿರಲಿಲ್ಲ. ಈಗ ಅದಕ್ಕೆ ಅವಕಾಶ ಸಿಕ್ಕಿದೆ. ಅದಕ್ಕೆ ಮೌರ್ಯ, ನಿನ್ನನ್ನು ದೇವರು ಬಂದ್ರೂ ಕಾಪಾಡೋಕೆ ಆಗಲ್ಲ ನಕ್ಷತ್ರಾ ಚಂದ್ರಶೇಖರ್ ಎಂದು ಹೇಳ್ತಿದ್ದಾನೆ.

ನಕ್ಷತ್ರಾ

ನಕ್ಷತ್ರಾ

  • Share this:
    ಲಕ್ಷಣ (Lakshana) ಕಲರ್ಸ್ ಕನ್ನಡ  (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ. ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಾಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್ ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು (Nakshatra) ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಮೌರ್ಯ (Mourya), ಶೌರ್ಯ ಇಬ್ಬರೂ ಸೇರಿ ನಕ್ಷತ್ರಾ ಕೊಲ್ತಾರಾ?

    ನಕ್ಷತ್ರಾ ಕಿಡ್ನ್ಯಾಪ್ ಮಾಡಿದ ಶೌರ್ಯ
    ಶೌರ್ಯ ಭೂಪತಿ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೊರಟಿರುತ್ತಾನೆ. ಕೋಪದಿಂದ ಹೊರಟ ಶೌರ್ಯನನ್ನು ತಡೆಯಲು ನಕ್ಷತ್ರಾ ಹೋಗಿರುತ್ತಾಳೆ. ಅವನ ಕಾರಿಗೆ ಅಡ್ಡ ನಿಲ್ಲುತ್ತಾಳೆ. ಅದಕ್ಕೆ ಕೋಪಗೊಂಡ ಶೌರ್ಯ, ನಿನ್ನಿಂದಾನೇ ಇಷ್ಟೆಲ್ಲಾ ಆಗಿದ್ದು. ನೀನೇ ಇದಕ್ಕೆ ಕಾರಣ.

    ನಿನಗೆ ಒಂದು ಗತಿ ಕಾಣಿಸ್ತೀನಿ ಅಂತ, ಆಕೆಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಾನೆ. ಸೆಕ್ಯೂರಿಟಿ ಎಷ್ಟೇ ತಡೆದ್ರೂ ಅವನನ್ನು ತಳ್ಳಿ, ನಕ್ಷತ್ರಾಳನ್ನು ಕರೆದುಕೊಂಡು ಹೋಗಿದ್ದಾನೆ.

    ಗೌಪ್ಯ ಸ್ಥಳದಲ್ಲಿ ನಕ್ಷತ್ರಾ?
    ಶೌರ್ಯ ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿ ಗೌಪ್ಯ ಸ್ಥಳದಲ್ಲಿ ಇಟ್ಟಿದ್ದಾನೆ. ನಕ್ಷತ್ರಾ ಎಷ್ಟೇ ಕೇಳಿಕೊಂಡ್ರು ಬಿಡುತ್ತಿಲ್ಲ. ಕೈ ಮುಗಿಯುತ್ತೇನೆ. ಈ ರೀತಿ ತಪ್ಪು ಮಾಡಬೇಡಿ. ದಯವಿಟ್ಟು ಮನೆಗೆ ಹೋಗೋಣ. ಮನೆನಾ? ನಿನಗೆ ಯಾವ ಮನೆಯೂ ಇಲ್ಲ. ಸ್ಮಶಾನನೇ ನಿನ್ನ ಮನೆ. ನಿನ್ನನ್ನು ಮೌರ್ಯನ ಬಳಿ ಕರೆದುಕೊಂಡು ಹೋಗ್ತೀನಿ. ಅವನಿಗೆ ಆಗಿರೊ ಅನ್ಯಾಯಕ್ಕೆ ನಿನ್ನ ಮೇಲೆ ಸೇಡು ತೀರಿಸಿಕೊಳ್ತಾನೆ ಎಂದು ಶೌರ್ಯ, ನಕ್ಷತ್ರಾಳನ್ನು ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾನೆ.

    ಇದನ್ನೂ ಓದಿ: New Serial: ಕಲರ್ಸ್​ನಲ್ಲಿ ಹೊಸ ಧಾರಾವಾಹಿ, ಶೀಘ್ರದಲ್ಲೇ ಬರ್ತಿದ್ದಾಳೆ ಭಾಗ್ಯಲಕ್ಷ್ಮಿ

    ನಕ್ಷತ್ರಾ ಇರೋ ಜಾಗಕ್ಕೆ ಬಂದ ಮೌರ್ಯ
    ಶೌರ್ಯ ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿ. ನಿನ್ನ ಇದೇ ಸ್ಥಳದಲ್ಲಿ ಮಣ್ಣು ಮಾಡ್ತೀವಿ. ಇಲ್ಲೇ ಇರು ಎನ್ನುತ್ತಾನೆ. ಆಗಲೇ ಮೌರ್ಯ ಎಂಟ್ರಿ ಕೊಡ್ತಾನೆ. ಅಣ್ಣ ಅಂದ್ರೆ ನಿನ್ ಕಣೋ. ನಿನ್ನ ತರ ಇರಬೇಕು. ನನಗೋಸ್ಕರ ಇಷ್ಟು ದೊಡ್ಡ ರಿಸ್ಕ್ ತಗೊಂಡ ಅಣ್ಣ, ಥ್ಯಾಂಕ್ಸ್ ಎಂದು ಮೌರ್ಯ ಶೌರ್ಯನಿಗೆ ಹೇಳ್ತಾನೆ.

    Colors Kannada serial, Kannada serial, Lakshana Serial, serial today episode, Kidnap episode in serial, ಲಕ್ಷಣ ಧಾರಾವಾಹಿ, ನಕ್ಷತ್ರಾ ಪಾಲಿಗೆ ಯಮನಾಗಿ ಬಂದಿದ್ದಾನೆ ಮೌರ್ಯ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಮೌರ್ಯ-ಶೌರ್ಯ


    ದೇವರು ಬಂದ್ರೂ ನಕ್ಷತ್ರಾ ಉಳಿಯಲ್ವಂತೆ
    ಮೌರ್ಯ ಅವತ್ತಿನಿಂದ ನಕ್ಷತ್ರಾಳನ್ನು ಕೊಲ್ಲಲು ಸ್ಕೆಚ್ ಹಾಕ್ತಿದ್ದ. ಆಗಿರಲಿಲ್ಲ. ಈಗ ಅದಕ್ಕೆ ಅವಕಾಶ ಸಿಕ್ಕಿದೆ. ಅದಕ್ಕೆ ಮೌರ್ಯ, ನಿನ್ನನ್ನು ದೇವರು ಬಂದ್ರೂ ಕಾಪಾಡೋಕೆ ಆಗಲ್ಲ ನಕ್ಷತ್ರಾ ಚಂದ್ರಶೇಖರ್ ಎಂದು ಹೇಳ್ತಿದ್ದಾನೆ.

    ಇದನ್ನೂ ಓದಿ: Gattimela: ವೇದಾಂತ್, ವಿಕ್ರಾಂತ್​​ಗೆ ಅಮ್ಮ ಸಿಕ್ಕಿದ ಖುಷಿ! ನಿಜವಾದ ಅಮ್ಮ ಯಾರು ಗೊತ್ತಾಯ್ತಾ?

    ಹಾಗಾದ್ರೆ ಸೇಡಿಗಾಗಿ ನಕ್ಷತ್ರಾಳನ್ನು ಕೊಲ್ತಾರಾ? ನೋಡಬೇಕು.

    Colors Kannada serial, Kannada serial, Lakshana Serial, serial today episode, Kidnap episode in serial, ಲಕ್ಷಣ ಧಾರಾವಾಹಿ, ನಕ್ಷತ್ರಾ ಪಾಲಿಗೆ ಯಮನಾಗಿ ಬಂದಿದ್ದಾನೆ ಮೌರ್ಯ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭೂಪತಿ


    ಭೂಪತಿಗೆ ತನ್ನ ಅಣ್ಣ, ತಮ್ಮನಿಂದ ನಕ್ಷತ್ರಾಗೆ ತೊಂದರೆ ಆಗುತ್ತಿರುವದನ್ನು ಸಹಿಸಲು ಆಗುತ್ತಿಲ್ಲ. ಈಗ ನಕ್ಷತ್ರಾಳನ್ನು ಹೇಗೆ ಕಾಪಾಡ್ತಾನೆ? ಮೌರ್ಯ, ಶೌರ್ಯನನ್ನು ಪೊಲೀಸರಿಗೆ ಒಪ್ಪಿಸುತ್ತಾನಾ? ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.
    Published by:Savitha Savitha
    First published: