Lakshana Serial: ಮೌರ್ಯನ ಭೇಟಿ ಮಾಡಲು ಹೋದ ಚಂದ್ರಶೇಖರ್​ಗೆ ಆಪತ್ತು! ಅಪ್ಪನ ಪ್ರಾಣ ಉಳಿಸಿಕೊಳ್ತಾಳಾ ನಕ್ಷತ್ರಾ?

ಮೌರ್ಯ ಚಂದ್ರಶೇಖರ್ ಮನೆಯಲ್ಲಿ ಏನಾಗುತ್ತೆ ಎನ್ನುವುದನ್ನು ಸದಾ ಗಮನಿಸುತ್ತಿರುತ್ತಾನೆ. ಅಂತೆಯೇ, ಚಂದ್ರಶೇಖರ್ ಮನೆಗೆ ಚಿಕ್ಕ ಹುಡುಗನ ಮೂಲಕ ಪತ್ರವೊಂದನ್ನು ಕಳಿಸಿದ್ದಾನೆ. ನಿನಗೆ ನನ್ನನ್ನು ನೋಡುವ ಆಸೆ ಇದ್ರೆ, ನೀನು ನಿಜವಾಗಲೂ ಧೈರ್ಯವಂತನಾಗಿದ್ರೆ, ನಾನು ಹೇಳಿದ ಜಾಗಕ್ಕೆ ಒಬ್ಬನೇ ಬಾ ಎಂದು ಸವಾಲು ಹಾಕಿದ್ದಾನೆ.

ಲಕ್ಷಣ

ಲಕ್ಷಣ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ. ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ (Bhupathi) ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ (Nakshtra) ಮತ್ತು ಅವರ ತಂದೆ ಚಂದ್ರಶೇಖರ್​ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ.

    ಚಂದ್ರಶೇಖರ್ ಗೆ  ಕರೆ ಮಾಡಿ ಮತ್ತೆ ಬೆದರಿಕೆ
    ಭೂಪತಿ ತಮ್ಮ, ನಕ್ಷತ್ರಾ ತಂದೆ ಚಂದ್ರಶೇಖರ್ ಗೆ ರೆ ಮಾಡಿ ಮತ್ತೆ ಬೆದರಿಸಿದ್ದಾನೆ. ನಿನ್ನ ಮಗಳು ನಕ್ಷತ್ರಾಳನ್ನು ನಾನು ಬಿಡಲ್ಲ. ಅವಳಿಗೆ ತೊಂದರೆ ಕೊಡುತ್ತೇನೆ. ನಿಮಗೆಲ್ಲಾ ನರಕ ತೋರಿಸುತ್ತೇನೆ ಎಂದು ಕಾಲ್ ಮಾಡಿ ಬೆದರಿಕೆ ಹಾಕಿದ್ದಾನೆ. ಚಂದ್ರಶೇಖರ್ ನೀನು ಸಿಗು ನಿನ್ನ ಹುಟ್ಟಿಲ್ಲ ಎನ್ನಿಸುತ್ತೇನೆ ಎನ್ನುತ್ತಾನೆ.

    ಒಂಟಿಯಾಗಿ ಬರುವಂತೆ ಚಂದ್ರಶೇಖರ್ ಗೆ  ಪತ್ರ
    ಮೌರ್ಯ ಚಂದ್ರಶೇಖರ್ ಮನೆಯಲ್ಲಿ ಏನಾಗುತ್ತೆ ಎನ್ನುವುದನ್ನು ಸದಾ ಗಮನಿಸುತ್ತಿರುತ್ತಾನೆ. ಅಂತೆಯೇ, ಚಂದ್ರಶೇಖರ್ ಮನೆಗೆ ಚಿಕ್ಕ ಹುಡುಗನ ಮೂಲಕ ಪತ್ರವೊಂದನ್ನು ಕಳಿಸಿದ್ದಾನೆ. ನಿನಗೆ ನನ್ನನ್ನು ನೋಡುವ ಆಸೆ ಇದ್ರೆ, ನೀನು ನಿಜವಾಗಲೂ ಧೈರ್ಯವಂತನಾಗಿದ್ರೆ, ನಾನು ಹೇಳಿದ ಜಾಗಕ್ಕೆ ಒಬ್ಬನೇ ಬಾ ಎಂದು ಸವಾಲು ಹಾಕಿದ್ದಾನೆ.

    ಇದನ್ನೂ ಓದಿ: Hero Anirudh: ಕೈ ಕುಯ್ದುಕೊಂಡ ಅನಿರುದ್ಧ್ ಅಭಿಮಾನಿ! ಈ ರೀತಿ ಮಾಡಬೇಡಿ ಎಂದು ವಿಷ್ಣುವರ್ಧನ್ ಅಳಿಯ ಮನವಿ

    ಮೌರ್ಯ ಹೇಳಿದ ಸ್ಥಳಕ್ಕೆ ಹೊರಟ ಸಿಎಸ್
    ಚಂದ್ರಶೇಖರ್ ಪತ್ರ ಓದಿದ ನಂತರ, ಮೌರ್ಯ ಮತ್ತೆ ಕಾಲ್ ಮಾಡುತ್ತಾನೆ. ಮೌರ್ಯ ಯಾವುದೋ ಒಂದು ಸ್ಥಳವನ್ನು ಗುಟ್ಟಾಗಿ ಹೇಳುತ್ತಾನೆ. ಚಂದ್ರಶೇಖರ್ ಅವನ್ನು ಮುಗಿಸಿಬಿಡಬೇಕು ಎಂದು ಹೋಗುತ್ತಿದ್ದಾನೆ. ಆದ್ರೆ ಮೌರ್ಯ ಕಿಲಾಡಿ. ಯಾರ ಕೈಗೂ ಸಿಗಲ್ಲ. ಅಲ್ಲದೇ, ಅವನು ಅಂದುಕೊಂಡಿದ್ದನ್ನು ಮಾಡಿಯೇ ಮಾಡ್ತಾನೆ.

    ಅಪಾಯದಲ್ಲಿ ಚಂದ್ರಶೇಖರ್ ಪ್ರಾಣ!
    ತನ್ನ ಮಗಳನ್ನು ಕೊಂಡವರನ್ನು ಸುಮ್ಮನೇ ಬಿಡಲ್ಲ ಎಂದು ಚಂದ್ರಶೇಖರ್ ಹೋಗುತ್ತಿದ್ದಾನೆ. ಆದ್ರೆ ಅವನಿಗೇನು ಗೊತ್ತು ಅವನು ಪ್ರಾಣವೇ ಅಪಾಯದಲ್ಲಿ ಇದೆ ಎಂದು. ಮೌರ್ಯನ ಮುಂದೆ ಹೋಗಿರುವ ಸಿಎಸ್ ಪ್ರಾಣಕ್ಕೆ ತೊಂದರೆ ಇದೆ. ಮೌರ್ಯ ನಿನ್ನ ಮಗಳು ಬೇಕು ಎಂದ್ರೆ ನೀರಿನಲ್ಲಿ ಮುಳುಗಿ ಪ್ರಾಣ ಬಿಡು ಎನ್ನುತ್ತಿದ್ದಾನೆ. ನಕ್ಷತ್ರಾಗಾಗಿ ಪ್ರಾಣ ಬಿಡ್ತಾನಾ ಸಿಎಸ್?

    ಅಪ್ಪನ ಪ್ರಾಣ ಕಾಪಾಡ್ತಾಳಾ ನಕ್ಷತ್ರಾ?
    ನಕ್ಷತ್ರಗೆ ತನ್ನ ಅಪ್ಪ ಎಂದ್ರೆ ಪ್ರಾಣ. ಈಗಾಗಲೇ ಗಂಡನ ಮನೆಯವರಿಗಾಗಿ ಅಪ್ಪನನ್ನು ದೂರ ಮಾಡಿಕೊಂಡಿದ್ದಾಳೆ. ಎಲ್ಲಿಯಾದ್ರೂ ಇದ್ದರಲ್ಲ ಎಂದು ಖುಷಿ ಪಡುತ್ತಿದ್ದಾಳೆ. ಆದ್ರೆ, ಈಗ ಅಪ್ಪನ ಪ್ರಾಣ ಅಪಾಯದಲ್ಲಿದೆ. ಅಪ್ಪನನ್ನು ನಕ್ಷತ್ರಾ ಕಾಪಾಡ್ತಾಳಾ? ಇಲ್ಲ ಚಂದ್ರಶೇಖರ್ ಸಾವನ್ನಪ್ತಾರಾ? ಈಗ ಭೂಪತಿ ಏನ್ ಮಾಡ್ತಾನೆ. ಎಲ್ಲವನ್ನು ನೋಡಲು ಲಕ್ಷಣ ಧಾರಾವಾಹಿ ನೋಡಬೇಕು.

    ಇದನ್ನೂ ಓದಿ: Sathya Serial: ಈ ಬಾರಿ ಗಲ್ಲಿ ಗಣೇಶ ಹಬ್ಬಕ್ಕೆ ಸತ್ಯಾ ಹೋಗಬಾರದಾ? ಬೇಸರದಲ್ಲಿದ್ದಾಳೆ ಲೇಡಿ ರಾಮಾಚಾರಿ!

    ಮೌರ್ಯನಿಗೆ ಸಹಾಯ ಮಾಡ್ತಾ ಇರೋ ಶೌರ್ಯ
    ನಕ್ಷತ್ರಾಗೆ ತೊಂದರೆ ಕೊಟ್ರೆ, ಚಂದ್ರಶೇಖರ್ ಗೆ ನೋವಾಗುತ್ತೆ ಎನ್ನುವುದು ಮೌರ್ಯನ ಪ್ಲ್ಯಾನ್. ಅದಕ್ಕೆ ಅವನು ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿ ಸಾಯಿಸಲು ನೋಡುತ್ತಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಲು ಮನೆಗೆ ಬರಲು, ಭೂಪತಿ ಅಣ್ಣ ಶೌರ್ಯ ಸಹಾಯ ಮಾಡಿದ್ದಾನೆ. ಮನೆಯಲ್ಲಿದ್ದುಕೊಂಡೆ ಯಾರಿಗೂ ಗೊತ್ತಾಗದಂತೆ, ಮೌರ್ಯನಿಗೆ ಸಹಾಯ ಮಾಡುತ್ತಿದ್ದಾನೆ.
    Published by:Savitha Savitha
    First published: