• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Lakshana Serial: ಭೂಪತಿ-ಶೌರ್ಯನ ಆಪರೇಷನ್ ಖೆಡ್ಡಾ ಸಕ್ಸಸ್, ನಕ್ಷತ್ರಾ ಕೊಲ್ಲಲು ಬಂದ ಮೌರ್ಯ ಲಾಕ್!

Lakshana Serial: ಭೂಪತಿ-ಶೌರ್ಯನ ಆಪರೇಷನ್ ಖೆಡ್ಡಾ ಸಕ್ಸಸ್, ನಕ್ಷತ್ರಾ ಕೊಲ್ಲಲು ಬಂದ ಮೌರ್ಯ ಲಾಕ್!

ಲಕ್ಷಣ

ಲಕ್ಷಣ

ಮೌರ್ಯ ಭೂಪತಿ ಬಲೆಗೆ ಬಿದ್ರೂ ನಕ್ಷತ್ರಾಳ ಮೇಲಿನ ಕೋಪ ಕಮ್ಮಿ ಆಗಿಲ್ಲ. ಹೇಗಿದ್ರೂ ನನ್ನನ್ನು ಜೈಲಿಗೆ ಕಳಿಸ್ತೀರಿ. ಹೋಗುದಕ್ಕೂ ಮುಂಚೆ ನಕ್ಷತ್ರಾಳನ್ನು ಕೊಂದೇ ಹೋಗ್ತೀನಿ ಎಂದು ಕಲ್ಲು ತೆಗೆದುಕೊಂಡು ಆಕೆಯ ಮೇಲೆ ಎತ್ತಿ ಹಾಕಲು ಹೋಗುತ್ತಾನೆ. ಅಷ್ಟರಲ್ಲಿ ಭೂಪತಿ ಅವನ ಕೆನ್ನೆಗೆ ಬಾರಿಸುತ್ತಾನೆ.

ಮುಂದೆ ಓದಿ ...
 • Share this:

  ಲಕ್ಷಣ (Lakshana) ಧಾರಾವಾಹಿ (Serial) ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತೆ. ಈ ಕಥೆಯ ನಾಯಕಿ ನಕ್ಷತ್ರಾ (Nakshatra). ನಾಯಕ ಭೂಪತಿ (Bhupathi). ಇಬ್ಬರಿಗೆ ಮದುವೆ (Marriage) ಆಗಲು ಇಷ್ಟ ಇರಲಿಲ್ಲ. ಆದ್ರೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ಮಗಳಿಗಾಗಿ ಈ ಮದುವೆಯನ್ನು ಬಲವಂತವಾಗಿ ಮಾಡಿಸಿರುತ್ತಾನೆ. ಅದಕ್ಕೆ ಚಂದ್ರಶೇಖರ್ ಕಂಡ್ರೆ ಶಕುಂತಲಾ ದೇವಿ ಅಂದ್ರೆ ಭೂಪತಿ ಅಮ್ಮನ ಮನೆಯವರಿಗೆ ಅವರನ್ನು ಕಂಡ್ರೆ ಆಗಲ್ಲ. ಮಗನ ಜೀವನ ಹಾಳು ಮಾಡಿಬಿಟ್ಟ ಅಂತ ಕೋಪ. ಅದಕ್ಕೆ ಶಕುಂತಲಾ ದೇವಿ ಚಿಕ್ಕ ಮಗ ಮೌರ್ಯ ಸಿಎಸ್ ಮೇಲಿನ ಕೋಪಕ್ಕೆ ನಕ್ಷತ್ರಾ ಮೇಲೆ ಸೇಡು ತೀರಿಸಿಕೊಳ್ತಿದ್ದಾನೆ. ಆಕೆಯನ್ನು ಸಾಯಿಸಿ ಬಿಟ್ರೆ ಚಂದ್ರಶೇಖರ್ ಗೆ ನೋವಾಗುತ್ತೆ ಅನ್ನೋ ಉದ್ದೇಶ ಅವನದು. ತಮ್ಮನನ್ನು ಹಿಡಿಯಲು ಭೂಪತಿ ಮತ್ತು ಶೌರ್ಯ ಪ್ಲ್ಯಾನ್ ಮಾಡಿದ್ರು. ಅದು ವರ್ಕ್ ಆಗಿದೆ.


  ಭೂಪತಿ ಮತ್ತು ಶೌರ್ಯ ಮಾಡಿದ ಪ್ಲ್ಯಾನ್ ಏನು?


  ಮೊದಲು ನಕ್ಷತ್ರಾಗೆ ತೊಂದ್ರೆ ಕೊಡಲು ಮೌರ್ಯನಿಗೆ ಶೌರ್ಯ ಸಹಾಯ ಮಾಡಿ ಇರುತ್ತಾನೆ. ಅದಕ್ಕೆ ಅವನ ತಪ್ಪಿನ ಅರಿವಾಗಿ, ಭೂಪತಿ ಬಳಿ ಕ್ಷಮೆ ಕೇಳಲು ಹೋಗಿರುತ್ತಾನೆ. ಆಗ ಭೂಪತಿ ದಯವಿಟ್ಟು ನೀನು ಹೋಗು. ನಿನ್ನ ಬಳಿ ನನಗೆ ಮಾತನಾಡಲು ಇಷ್ಟ ಇಲ್ಲ ಎಂದು ಹೇಳುತ್ತಾನೆ. ಅದಕ್ಕೆ ಶೌರ್ಯ ಇದೊಂದು ಬಾರಿ ದಯವಿಟ್ಟು ಕ್ಷಮಿಸು. ಮನೆಗೆ ದೊಡ್ಡ ಮಗನಾಗಿ ನಾನು ಈ ರೀತಿ ಮಾಡಬಾರದಿತ್ತು ಎನ್ನುತ್ತಾನೆ.


  ಮೌರ್ಯನ ಹಿಡಿಯಲು ಸಹಾಯ ಮಾಡ್ತೀನಿ ಎಂದ ಶೌರ್ಯ


  ಭೂಪತಿ ಶೌರ್ಯನನ್ನು ಕ್ಷಮಿಸದಿದ್ದಾಗ, ಶೌರ್ಯ ನಾನು ಮೌರ್ಯನನ್ನು ಹಿಡಿಯಲು ಸಹಾಯ ಮಾಡ್ತೀನಿ ಎನ್ನುತ್ತಾನೆ. ಮೌರ್ಯ ಈ ಮನೆಯಲ್ಲಿ ನಂಬುವುದು ನನ್ನನ್ನೇ. ಅದಕ್ಕೆ ನಾನು ಅವನನ್ನು ಹಿಡಿಯುತ್ತೇನೆ. ಆದ್ರೆ ಏನಾದ್ರೂ ಪ್ಲ್ಯಾನ್ ಮಾಡಬೇಕು ಎನ್ನುತ್ತಾನೆ.


  ಇದನ್ನೂ ಓದಿ: Ramachari: ಚಿತ್ರದುರ್ಗದಲ್ಲಿ ಅಮೆಜಾನ್ ಕಾಡು ಎಲ್ಲಿಂದ ಬಂತು? ಬಿದ್ದು ಬಿದ್ದು ನಕ್ಕ ಫ್ಯಾನ್ಸ್


  ಆಗ ಭೂಪತಿ ನಾವಿಬ್ಬರು, ಮನೆಯವರು ನಂಬುವ ರೀತಿ ದೊಡ್ಡದಾಗಿ ಜಗಳ ಮಾಡೋಣ. ನನ್ನ ಕೆನ್ನೆಗೆ ಹೊಡೆದು ನೀನು ಮನೆ ಬಿಟ್ಟು ಹೋಗುವ ನಾಟಕ ಮಾಡು. ಆಗ ನಕ್ಷತ್ರಾಳನ್ನು ಕಳಿಸುತ್ತೇನೆ. ಆಕೆಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗು ಎನ್ನುತ್ತಾನೆ. ಭೂಪತಿ ಹೇಳಿದಂತೆ ಶೌರ್ಯ ಮಾಡ್ತಾನೆ.


  ನಕ್ಷತ್ರಾ


  ಆಪರೇಷನ್ ಖೆಡ್ಡಾಗೆ ಬಿದ್ದ ಮೌರ್ಯ


  ನಕ್ಷತ್ರಾಳನ್ನು ಶೌರ್ಯ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಗೊತ್ತಾದ ತಕ್ಷಣ ಮೌರ್ಯ ಅಲ್ಲಿಗೆ ಬರುತ್ತಾನೆ. ಥ್ಯಾಂಕ್ಸ್ ಅಣ್ಣ ನನಗೋಸ್ಕರ ಈ ರಿಸ್ಕ್ ತೆಗೆದುಕೊಂಡಿದ್ದಕ್ಕೆ ಎನ್ನುತ್ತಾನೆ. ಅಷ್ಟರಲ್ಲೇ ಭೂಪತಿ ಬರುತ್ತಾನೆ. ಆಗ ಭೂಪತಿ ಮೌರ್ಯನನ್ನು ಹಿಡಿಯಲು ಮಾಡಿದ ಪ್ಲ್ಯಾನ್ ಬಗ್ಗೆ ಹೇಳುತ್ತಾನೆ. ಇದು ಮೋಸ ಎಂದು ಮೌರ್ಯ ಹೇಳ್ತಾ ಇರ್ತಾನೆ. ಅಷ್ಟರಲ್ಲೇ ಶಕುಂತಲಾ ದೇವಿ ಬಂದು ಮೌರ್ಯನ ಕೆನ್ನೆಗೆ ಹೊಡೆಯುತ್ತಾಳೆ.


  ಮೌರ್ಯ-ಶೌರ್ಯ


  ಸಿಕ್ಕಿ ಹಾಕಿಕೊಂಡ್ರು ನಕ್ಷತ್ರಾ ಮೇಲೆ ಕೋಪ


  ಮೌರ್ಯ ಭೂಪತಿ ಬಲೆಗೆ ಬಿದ್ರೂ ನಕ್ಷತ್ರಾಳ ಮೇಲಿನ ಕೋಪ ಕಮ್ಮಿ ಆಗಿಲ್ಲ. ಹೇಗಿದ್ರೂ ನನ್ನನ್ನು ಜೈಲಿಗೆ ಕಳಿಸ್ತೀರಿ. ಹೋಗುದಕ್ಕೂ ಮುಂಚೆ ನಕ್ಷತ್ರಾಳನ್ನು ಕೊಂದೇ ಹೋಗ್ತೀನಿ ಎಂದು ಕಲ್ಲು ತೆಗೆದುಕೊಂಡು ಆಕೆಯ ಮೇಲೆ ಎತ್ತಿ ಹಾಕಲು ಹೋಗುತ್ತಾನೆ. ಅಷ್ಟರಲ್ಲಿ ಭೂಪತಿ ಅವನ ಕೆನ್ನೆಗೆ ಬಾರಿಸುತ್ತಾನೆ.


  ಇದನ್ನೂ ಓದಿ: Puttakkana Makkalu: ಮಗನ ವಿರುದ್ಧ ದೂರು ಕೊಟ್ಟವರ ಸುಳಿವು ಸಿಕ್ತು, ಸ್ನೇಹಾಳನ್ನು ಸುಮ್ನೆ ಬಿಡ್ತಾಳಾ ಬಂಗಾರಮ್ಮ?


  ಮೌರ್ಯ ಜೈಲು ಸೇರ್ತಾನಾ? ಇನ್ಮುಂದೆ ನಕ್ಷತ್ರಾಗೆ ಯಾವುದೇ ತೊಂದ್ರೆ ಆಗಲ್ವಾ? ಭೂಪತಿಗೆ ನಕ್ಷತ್ರಾ ಮೇಲೆ ಕೋಪ ಹೋಗಿ ಪ್ರೀತಿ ಹುಟ್ಟುತ್ತಾ ಎಲ್ಲವನ್ನೂ ನೋಡಲು ಲಕ್ಷಣ ಧಾರಾವಾಹಿ ನೋಡಬೇಕು.

  Published by:Savitha Savitha
  First published: