• Home
  • »
  • News
  • »
  • entertainment
  • »
  • Lakshana: ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಇದ್ಯಾ? ಕಣ್ಮುಚಿದ್ರೆ ಎಲ್ಲಾ ಕಡೆ ಕಾಣೋದು ಅವಳೇನಾ? 

Lakshana: ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಇದ್ಯಾ? ಕಣ್ಮುಚಿದ್ರೆ ಎಲ್ಲಾ ಕಡೆ ಕಾಣೋದು ಅವಳೇನಾ? 

ಭೂಪತಿ

ಭೂಪತಿ

Lakshana: ಕಣ್ಮುಚ್ಚಿ ಕೂತ ಭೂಪತಿಗೆ ನಕ್ಷತ್ರಾಳೇ ಕಾಣಿಸಿದ್ದಾಳೆ. ಹಾಗಾದ್ರೆ ಭೂಪತಿಗೆ ನಕ್ಷತ್ರಾ ಮೇಲೆ ಲವ್ ಇದ್ಯಾ? ತನ್ನೊಳಗೆ ಪ್ರೀತಿ ಇದ್ರು ಅದು ಗೊತ್ತಗುತ್ತಿಲ್ವಾ? ಏನ್ ಆಗ್ತಿದೆ ಎಂದು ಒದ್ದಾಡುತ್ತಿದ್ದಾನೆ.

  • Share this:

ಲಕ್ಷಣ (Lakshana) ಧಾರಾವಾಹಿ (Serial) ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತೆ. ಈ ಕಥೆಯ ನಾಯಕಿ ನಕ್ಷತ್ರಾ. ನಾಯಕ ಭೂಪತಿ. ಇಬ್ಬರಿಗೆ ಮದುವೆ ಆಗಲು ಇಷ್ಟ ಇರಲಿಲ್ಲ. ಆದ್ರೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ಮಗಳಿಗಾಗಿ ಈ ಮದುವೆಯನ್ನು ಬಲವಂತವಾಗಿ ಮಾಡಿಸಿರುತ್ತಾನೆ. ಅದಕ್ಕೆ ಚಂದ್ರಶೇಖರ್ ಕಂಡ್ರೆ ಶಕುಂತಲಾ ದೇವಿ ಅಂದ್ರೆ ಭೂಪತಿ ಅಮ್ಮನ ಮನೆಯವರಿಗೆ ಅವರನ್ನು ಕಂಡ್ರೆ ಆಗಲ್ಲ. ಮಗನ ಜೀವನ ಹಾಳು ಮಾಡಿಬಿಟ್ಟ ಅಂತ ಕೋಪ. ಇದಕ್ಕೆಲ್ಲಾ ನಕ್ಷತ್ರಾಳೇ ಕಾರಣ ಎಂದು ಶಕುಂತಲಾ ದೇವಿ ಕೋಪಗೊಂಡಿದ್ದಾಳೆ. ನೀನು ನನ್ನ ಮಗನನ್ನು ಮದುವೆ ಆಗದಿದ್ರೆ, ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಿರಲಿಲ್ಲ ಎಂದು ಹೇಳುತ್ತಿದ್ದಾಳೆ. ಇನ್ನೊಂದೆಡೆ ಭೂಪತಿಗೆ (Bhupathi) ಪ್ರೀತಿ (Love) ಇದೆ ಎಂದು ಅರ್ಥ ಮಾಡಿಸೋದೇ ನಕ್ಷತ್ರಾಳ ಕೆಲಸವಂತೆ.


ಭೂಪತಿಗೆ ಪ್ರೀತಿ ಬಗ್ಗೆ ಅರ್ಥ ಮಾಡಿಸೋ ಯತ್ನ
ಭೂಪತಿ ಅಮ್ಮ ಶಕುಂತಲಾ ದೇವಿ ನಕ್ಷತ್ರಾ ಮತ್ತು ಭೂಪತಿಯನ್ನು ಹೇಗಾದ್ರೂ ದೂರ ಮಾಡಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾಳೆ. ಇಬ್ಬರ ಮಧ್ಯೆ ಭಾವನೆಗಳು ಹುಟ್ಟುವ ಮೊದಲೇ ಅವರನ್ನು ದೂರ ಮಾಡಿಬಿಟ್ರೆ ಒಳ್ಳೆಯದು ಎಂದು ಚಿಂತೆ ಮಾಡುತ್ತಿದ್ದಾಳೆ. ಇನ್ನೊಂದೆಡೆ ನಕ್ಷತ್ರಾ ಭೂಪತಿ ಮನಸ್ಸಲ್ಲಿ ಇರೋ ಪ್ರೀತಿಯನ್ನು ಹೊರ ತರಲು ಪ್ರಯತ್ನ ಮಾಡುತ್ತಿದ್ದಾಳೆ. ಅಲ್ಲದೇ ಭೂಪತಿ ಬಳಿ ಹೋಗಿ ನನ್ನ ಮೇಲೆ ಪ್ರೀತಿ ಇದೆಯಾ ಎಂದು ಕೇಳುತ್ತಾಳೆ. ಅದಕ್ಕೆ ಭೂಪತಿ ನಕ್ಷತ್ರಾಳನ್ನು ಬೈದು ಹೋಗುತ್ತಾನೆ.


ಬೆಡ್ ರೂಮ್‍ನಲ್ಲಿ ದೇವರ ಫೋಟೋ
ಹೇಗಾದ್ರೂ ಭೂಪತಿ ಮನಸ್ಸಿನಲ್ಲಿರೋ ಪ್ರೀತಿಯನ್ನು ಆಚೆ ತರಬೇಕು ಎಂದು ನಕ್ಷತ್ರಾ ಶತ ಪ್ರಯತ್ನ ಮಾಡುತ್ತಿದ್ದಾಳೆ. ಅದಕ್ಕೆ ಮಯೂರಿ ಸಹಾಯ ಪಡೆದಿದ್ದಾಳೆ. ಬೆಡ್ ರೂಮ್ ತುಂಬಾ ಕೃಷ್ಣ-ರಾಧೆ, ಶಿವ-ಪಾರ್ವತಿ ಫೋಟೋ ಹಾಕಿದ್ದಾಳೆ. ಭೂಪತಿ ಯಾಕ್ ಈ ರೀತಿ ಮಾಡ್ತಾ ಇದೀಯಾ ಅಂತ ಕೇಳ್ತಾನೆ. ಅದಕ್ಕೆ ಅವಳು ಇವರ ಪ್ರೀತಿ ಕಥೆಯ ಬಗ್ಗೆ ತಿಳಿದುಕೊಳ್ಳಬೇಕು. ನಾನು ಕಥೆ ಬರೆಯಲು ಸಹಾಯ ಆಗುತ್ತೆ ಅಂತಾಳೆ.


ಇದನ್ನೂ ಓದಿ: Kannadathi: ವರ್ಕ್ ಆಗ್ತಿಲ್ಲ ಸಾನಿಯಾ ಪ್ಲ್ಯಾನ್, ರಾವಣನ ತಲೆ ಹೊತ್ತು ಹರ್ಷನ ಬಳಿ ಗನ್ ಹಿಡಿದು ಬಂದಿದ್ಯಾರು?


ಕಣ್ಮುಚ್ಚಿ ಕೂರುವಂತೆ ಹೇಳಿದ ನಕ್ಷತ್ರಾ
ನಕ್ಷತ್ರಾ, ಭೂಪತಿ ನಾನು ಕಥೆ ಬರೆಯಲು ಸಹಾಯ ಮಾಡು. ಸಿನಿಮಾಗಳ ರೀತಿ ಕಣ್ಮುಚ್ಚಿ ಮನಸ್ಸಿನಿಂದ ಯೋಚನೆ ಮಾಡಿದ್ರೆ, ತಾವು ಪ್ರೀತಿ ಮಾಡೋರು ಕಾಣ್ತಾರಂತೆ. ಅದು ನಿಜನಾ? ನೀನು ಕಣ್ಮುಚ್ಚಿ ಕೂತು ನೋಡು. ನಿಜ ಆದ್ರೆ ನಾನು ಬರೆಯುತ್ತೇನೆ ಎಂದು ಭೂಪತಿ ಬಳಿ ಕೇಳಿಕೊಳ್ಳುತ್ತಾಳೆ. ಅದಕ್ಕೆ ಅವನು ಓಕೆ ಎನ್ನುತ್ತಾನೆ.


Colors Kannada serial, Kannada serial, Lakshana Serial, serial today episode, ಲಕ್ಷಣ ಧಾರಾವಾಹಿ, ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಇದ್ಯಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
ಶಕುಂತಲಾ ದೇವಿ


ತನ್ನ ಜೀವನದ ತುಂಬೆಲ್ಲಾ ನಕ್ಷತ್ರಾ
ನಕ್ಷತ್ರಾ ಹೇಳಿದಂತೆ ಕಣ್ಮುಚ್ಚಿ ಯೋಚನೆ ಮಾಡುತ್ತಿರುವ ಭೂಪತಿಗೆ ಎಲ್ಲೆಡೆ ನಕ್ಷತ್ರಾಳೇ ಕಾಣ್ತಾ ಇದ್ದಾಳೆ. ಅವಳ ಜೊತೆ ಓಡಾಡಿದ್ದು, ಊಟ ಮಾಡಿದ್ದು, ಐಸ್ ಕ್ರೀಂ ತಿಂದಿದ್ದು, ಮದುವೆ ಆಗಿದ್ದು ನೆನಪಿಗೆ ಬರ್ತಾ ಇದೆ. ಇದನ್ನು ಕಂಡು ಭೂಪತಿ ಶಾಕ್ ಆಗಿ ಎದ್ದು ನಿಂದು ನಕ್ಷತ್ರಾಳನ್ನು ನೋಡ್ತಾ ಇದ್ದಾನೆ.


Colors Kannada serial, Kannada serial, Lakshana Serial, serial today episode, ಲಕ್ಷಣ ಧಾರಾವಾಹಿ, ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಇದ್ಯಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
ನಕ್ಷತ್ರಾ


ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಇದ್ಯಾ?
ಕಣ್ಮುಚ್ಚಿ ಕೂತ ಭೂಪತಿಗೆ ನಕ್ಷತ್ರಾಳೇ ಕಾಣಿಸಿದ್ದಾಳೆ. ಹಾಗಾದ್ರೆ ಭೂಪತಿಗೆ ನಕ್ಷತ್ರಾ ಮೇಲೆ ಲವ್ ಇದ್ಯಾ? ತನ್ನೊಳಗೆ ಪ್ರೀತಿ ಇದ್ರು ಅದು ಗೊತ್ತಗುತ್ತಿಲ್ವಾ? ಏನ್ ಆಗ್ತಿದೆ ಎಂದು ಒದ್ದಾಡುತ್ತಿದ್ದಾನೆ. ಮನಸ್ಸಿನಲ್ಲಿನ ಪ್ರೀತಿಯನ್ನು ನಕ್ಷತ್ರಾ ಬಳಿ ಹೇಳ್ತಾನಾ ನೋಡಬೇಕು.


ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಪುಷ್ಪ 2 ಚಿತ್ರದ ಫಸ್ಟ್ ಲುಕ್ ಶೀಘ್ರದಲ್ಲೇ ರಿಲೀಸ್​


ಈಗ ಧಾರಾವಾಹಿಯಲ್ಲಿ ಹೊಸ ವಿಲನ್ ಬಂದಿದ್ದಾಳೆ. ಅವಳು ಶ್ವೇತಾಳ ಪ್ರಾಪರ್ಟಿ ಮಾರಿಸಿ ಬೀದಿಗೆ ತರಲು ಮುಂದಾಗಿದ್ದಾಳೆ. ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಸೀರಿಯಲ್ ನೋಡಬೇಕು.

Published by:Savitha Savitha
First published: