Lakshana: ಪೊಲೀಸ್ ಚಕ್ರವ್ಯೂಹದಲ್ಲಿ ಭೂಪತಿ ತಮ್ಮ! ಕಲರ್ಸ್ ಕನ್ನಡ ಧಾರಾವಾಹಿಲಿ ರೋಚಕ ತಿರುವು

ನಕ್ಷತ್ರಾ ಬಳಿ ಆಣೆ ಮಾಡಿಸಿಕೊಂಡ ಭೂಪತಿ ಸತ್ಯ ತಿಳಿದುಕೊಂಡಿದ್ದಾನೆ. ತನ್ನ ತಮ್ಮನೇ ಹೆಂಡತಿಯನ್ನು ಕೊಲ್ಲಲು ಬಂದವನು ಎಂದು ತಿಳಿದು ಶಾಕ್ ಆಗಿದ್ದಾನೆ. ಆ ವಿಷ್ಯವನ್ನು ಮನೆಯವರ ಬಳಿ ಹೇಳುತ್ತಿದ್ದಾನೆ. ಆದ್ರೆ ಮನೆಯವರು ಒಪ್ಪುತ್ತಿಲ್ಲ.

ಲಕ್ಷಣ

ಲಕ್ಷಣ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ. ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಾಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್​ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು (Nakshatra) ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಮೌರ್ಯನೇ ಕ್ರಿಮಿನಲ್ (Criminal) ಎಂದು ಮನೆಯವರಿಗೆ ಗೊತ್ತಾಗಿದೆ.

    ಪ್ರಾಣ ತೆಗೆಯಲು ಬಂದವನು ಭೂಪತಿ ತಮ್ಮ ಮೌರ್ಯ
    ನಕ್ಷತ್ರಾಗೆ ತನ್ನನ್ನು, ತನ್ನ ಅಪ್ಪನನ್ನು ಕೊಲ್ಲಲು ಬಂದವನು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಗಿದೆ. ನಮ್ಮ ಅಪ್ಪ ನನ್ನನ್ನು ಬಲವಂತವಾಗಿ ಭೂಪತಿ ಜೊತೆ ಮದುವೆ ಮಾಡಿಸಿದ್ದಾರೆ ಎಂದು ಹೀಗೆಲ್ಲಾ ಮಾಡುತ್ತಿದ್ದಾನೆ. ಅತ್ತಿಗೆಯೆಂದು ನೋಡದೇ ಕೊಲ್ಲಲು ಹಲವು ಬಾರಿ ಪ್ರಯತ್ನ ಮಾಡಿದ್ದಾನೆ ಎಂದು ನಕ್ಷತ್ರಾ ಬೇಸರ ಮಾಡಿಕೊಂಡಿದ್ದಾಳೆ. ಅಲ್ಲದೇ ಈ ವಿಷಯ ಭೂಪತಿಗೆ ಗೊತ್ತಾದ್ರೆ ಅವನು, ತಮ್ಮ ಅನ್ನುವುದನ್ನೂ ನೋಡದೇ ಏನಾದ್ರೂ ಮಾಡಿ ಬಿಡ್ತಾನೆ ಎನ್ನೋ ಭಯ ಶುರುವಾಗಿದೆ.

    ಬರ್ತ್‍ಡೇ ದಿನ ಮತ್ತೆ ಕೊಲ್ಲಲು ಯತ್ನ
    ನಕ್ಷತ್ರಾ ಬರ್ತ್‍ಡೇ ದಿನ ಆಕೆಯನ್ನು ಕೊಲ್ಲಬೇಕು ಎಂದು ಮೌರ್ಯ ಪ್ಲ್ಯಾನ್ ಮಾಡಿದ್ದ. ಅಷ್ಟರಲ್ಲೇ ನಕ್ಷತ್ರಾಗೆ ಮೌರ್ಯ ವಿಷಯ ಗೊತ್ತಾಗಿತ್ತು. ಆದ್ರೂ ಮೌರ್ಯ ಭಯಪಡದೇ ಆಕೆಯನ್ನು ಕೊಲ್ಲಲು ಪ್ರಯತ್ನ ಮಾಡ್ತಾನೆ. ಅಷ್ಟರಲ್ಲೇ ಭೂಪತಿ ಬಂದು ಆಕೆಯನ್ನು ಕಾಪಾಡ್ತಾನೆ.

    ಇದನ್ನೂ ಓದಿ: Kannadathi: ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯಾಗೆ ಡಬಲ್ ಶಾಕ್!

    ಭೂಪತಿಗೆ ಗೊತ್ತಾದ ಸತ್ಯ
    ನಕ್ಷತ್ರಾ ಬಳಿ ಆಣೆ ಮಾಡಿಸಿಕೊಂಡ ಭೂಪತಿ ಸತ್ಯ ತಿಳಿದುಕೊಂಡಿದ್ದಾನೆ. ತನ್ನ ತಮ್ಮನೇ ಹೆಂಡತಿಯನ್ನು ಕೊಲ್ಲಲು ಬಂದವನು ಎಂದು ತಿಳಿದು ಶಾಕ್ ಆಗಿದ್ದಾನೆ. ಆ ವಿಷ್ಯವನ್ನು ಮನೆಯವರ ಬಳಿ ಹೇಳುತ್ತಿದ್ದಾನೆ. ಆದ್ರೆ ಮನೆಯವರು ಒಪ್ಪುತ್ತಿಲ್ಲ.

    ಮೌರ್ಯ


    ಶಕುಂತಲಾ ದೇವಿ ಕೋಪ
    ಭೂಪತಿ, ಮೌರ್ಯನೇ ಕ್ರಿಮಿನಲ್ ಎಂದು ಹೇಳುತ್ತಿದ್ದ ಹಾಗೇ, ಅಮ್ಮ ಶಕುಂತಲಾ ದೇವಿ ಒಪ್ಪುತ್ತಿಲ್ಲ. ನಿನ್ನ ತಮ್ಮನ ಬಗ್ಗೆಯೇ ಈ ರೀತಿ ಮಾತನಾಡುತ್ತಿಯಲ್ಲ. ಅಷ್ಟಕ್ಕೂ ಮೌರ್ಯ ಈ ತರ ಮಾಡಿದ್ದು ಎಂದು ಯಾರು ಹೇಳಿದ್ರು ಅಂದು ಕೇಳುತ್ತಾಳೆ. ನಕ್ಷತ್ರಾ ಎನ್ನುತ್ತಾನೆ. ಅದಕ್ಕೆ ಶಕುಂತಲಾ ದೇವಿ, ಇದು ಅವಳು, ಅವರಪ್ಪ ಮಾಡಿರೋ ಪ್ಲ್ಯಾನ್ ಇದು ಎಂದು ರೇಗುತ್ತಾಳೆ.

    ಮೌರ್ಯ-ಶ್ವೇತಾ


    ಈ ಬಾರಿ ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ
    ಈ ಸುದ್ದಿ ಗೊತ್ತಾಗಿ, ಚಂದ್ರಶೇಖರ್ ಈ ಸಲ ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ. ನನ್ನ ಮಗಳ ಸುದ್ದಿಗೆ ಬಂದವರಿಗೆ ಶಿಕ್ಷೆ ಕೊಟ್ಟೇ ಕೊಡುತ್ತೇನೆ ಎನ್ನುತ್ತಾನೆ. ಭೂಪತಿ ಸಹ ನಕ್ಷತ್ರಾ ಸುಮ್ಮನೇ ಸುಳ್ಳು ಹೇಳಲ್ಲ. ಇದರಲ್ಲಿ ಮೌರ್ಯ ತಪ್ಪು ಇದೆ ಎಂದು ಹೇಳುತ್ತಾನೆ.

    ಇದನ್ನೂ ಓದಿ: Kendasampige: ಮನೆ ಸಾಲಕ್ಕಾಗಿ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರಾಜೇಶ್​ ರೆಡಿ

    ಮೌರ್ಯನನ್ನು ಹಿಡಿಯಲು ಪೊಲೀಸ್ ಚಕ್ರವ್ಯೂಹ
    ಇನ್ನು ಮೌರ್ಯ ಎಲ್ಲಿದ್ದಾನೆ ಎಂದು ಭೂಪತಿಗೆ ಗೊತ್ತಿದೆ. ಹಾಗಾಗಿ ಅವನ್ನು ಹಿಡಿಯಲು ಪೊಲೀಸರ ಜೊತೆ ಹೋಗಿದ್ದಾನೆ. ಮೌರ್ಯ ಇರೋ ಮನೆ ಸುತ್ತ ಪೊಲೀಸರು ನಿಂತಿದ್ದಾರೆ. ಮೌರ್ಯನಿಗೆ ಶರಣಾಗದೇ ಬೇರೆ ದಾರಿ ಇಲ್ಲ. ಹಾಗಾದ್ರೆ ಮೌರ್ಯ ಪೊಲೀಸರಿಗೆ ಶರಣಾಗ್ತಾನಾ? ಮುಂದೇನಾಗುತ್ತೆ? ಎಲ್ಲವನ್ನೂ ನೋಡಲು ಲಕ್ಷಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: