Lakshana: ಎಲ್ಲರನ್ನೂ ಕಿಡ್ನ್ಯಾಪ್ ಮಾಡ್ತಿದ್ದ ಮೌರ್ಯನೇ ಕಿಡ್ನ್ಯಾಪ್? ಲಕ್ಷಣ ಧಾರಾವಾಹಿಯಲ್ಲಿ ರೋಚಕ ತಿರುವು!

ಎಲ್ಲರಿಗೂ ಕಾಟ ಕೊಟ್ಟು, ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡ್ತಿದ್ದ ಮೌರ್ಯನೇ ಕಿಡ್ನ್ಯಾಪ್ ಆಗಿದ್ದಾನೆ. ಕಿಡ್ನ್ಯಾಪ್ ಮಾಡಿದ್ದು ಯಾರು ಅಂತ ಗೊತ್ತಿಲ್ಲ. ಹೊಸ ವಿಲನ್ ಮುಖ ಇನ್ನೂ ತೋರಿಸಿಲ್ಲ.

ಮೌರ್ಯ ಕಿಡ್ನ್ಯಾಪ್

ಮೌರ್ಯ ಕಿಡ್ನ್ಯಾಪ್

  • Share this:
    ಲಕ್ಷಣ (Lakshana) ಧಾರಾವಾಹಿ (Serial) ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತೆ. ಈ ಕಥೆಯ ನಾಯಕಿ ನಕ್ಷತ್ರಾ (Nakshatra). ನಾಯಕ ಭೂಪತಿ. ಇಬ್ಬರಿಗೆ ಮದುವೆ ಆಗಲು ಇಷ್ಟ ಇರಲಿಲ್ಲ. ಆದ್ರೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ಮಗಳಿಗಾಗಿ ಈ ಮದುವೆಯನ್ನು ಬಲವಂತವಾಗಿ ಮಾಡಿಸಿರುತ್ತಾನೆ. ಅದಕ್ಕೆ ಚಂದ್ರಶೇಖರ್ ಕಂಡ್ರೆ ಶಕುಂತಲಾ ದೇವಿ ಅಂದ್ರೆ ಭೂಪತಿ ಅಮ್ಮನ ಮನೆಯವರಿಗೆ ಅವರನ್ನು ಕಂಡ್ರೆ ಆಗಲ್ಲ. ಮಗನ ಜೀವನ ಹಾಳು ಮಾಡಿಬಿಟ್ಟ ಅಂತ ಕೋಪ. ಅದಕ್ಕೆ ಶಕುಂತಲಾ ದೇವಿ ಚಿಕ್ಕ ಮಗ ಮೌರ್ಯ ಸಿಎಸ್ ಮೇಲಿನ ಕೋಪಕ್ಕೆ ನಕ್ಷತ್ರಾ ಮೇಲೆ ಸೇಡು ತೀರಿಸಿಕೊಳ್ತಿದ್ದಾನೆ. ಆಕೆಯನ್ನು ಸಾಯಿಸಿ ಬಿಟ್ರೆ ಚಂದ್ರಶೇಖರ್ ಗೆ ನೋವಾಗುತ್ತೆ ಅನ್ನೋ ಉದ್ದೇಶ ಅವನದು. ಮೌರ್ಯ ಅಣ್ಣಂದಿರು, ಪೊಲೀಸರಿಂದ (Police) ತಪ್ಪಿಸಿಕೊಂಡು ಹೋಗುವಾಗ ಅಪಘಾತವಾಗಿದೆ. ಮೌರ್ಯನನ್ನೇ ಯಾರೋ ಕಿಡ್ನ್ಯಾಪ್ (Kidnap) ಮಾಡಿದ್ದಾರೆ.

    ಸಿಎಸ್ ಮೇಲೆ ಭೂಪತಿ ಕೋಪ
    ಮೌರ್ಯನನ್ನು ಹಿಡಿಯಲು ನಕ್ಷತ್ರಾ ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ್ರು. ಅದು ಸಿಎಸ್‍ಗೆ ಗೊತ್ತಾಗಾದೇ ಪೊಲೀಸ್‍ರಿಗೆ ದೂರು ಕೊಟ್ಟಿರುತ್ತಾನೆ. ಅದು ಟಿವಿಯಲ್ಲಿ ಸುದ್ದಿ ಆಗಿರುತ್ತೆ. ಅದಕ್ಕೆ ಭೂಪತಿ ಕೋಪಗೊಂಡಿದ್ದಾನೆ. ನಾನ್ ನಿಮಗೆ ಕರೆ ಮಾಡಿದ್ದೆ. ನಿಮ್ಮ ಮಗಳಿಗೆ ಏನೂ ಆಗಲ್ಲ. ಏನೂ ಮಾಡಬೇಡಿ ಅಂತ ಹೇಳಿದ್ದೆ. ಅಷ್ಟರಲ್ಲಿ ನ್ಯೂಸ್ ಚಾನೆಲ್‍ಗೆ ಸುದ್ದಿ ಕೊಟ್ಟಿದ್ದೀರಿ ಎಂದು ಭೂಪತಿ ಹೇಳುತ್ತಾನೆ. ನನಗೆ ಕರೆಕ್ಟ್ ಆಗಿ ವಿಷ್ಯ ಹೇಳಿದ್ರೆ, ನಾನ್ ಯಾಕ್ ಹೀಗೆ ಮಾಡುತ್ತಿದ್ದೆ ಎಂದು ಸಿಎಸ್ ಹೇಳ್ತಾರೆ.

    ಕಿಡಿ ಕಿಡಿ ಅಂತಿದ್ದಾಳೆ ಶಕುಂತಲಾ ದೇವಿ
    ಸಿಎಸ್ ಮೇಲೆ ಶಕುಂತಲಾ ದೇವಿಯೂ ಕೋಪಗೊಂಡಿದ್ದಾಳೆ. ನಿಮ್ಮ ಮಗಳ ರಕ್ಷಣೆಗೆ ನನ್ನ ಮಕ್ಕಳು ಒದ್ದಾಡುತ್ತಿದ್ದಾರೆ. ಆದ್ರೆ ಕೆಟ್ಟ ಹೆಸರು, ಅಪವಾದ ನಮಗೆ. ಶಕುಂತಲಾ ದೇವಿ ಮಗ ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಎಲ್ಲಾ ಚಾನೆಲ್‍ಗೆ ಹೇಳಿದ್ಧೀರಿ. ಅದನ್ನು ಬದಲಾಯಿಸಲು ಆಗುತ್ತಾ? ಎಂದು ಪ್ರಶ್ನಿಸುತ್ತಾಳೆ. ಭೂಪತಿ ಸಹ ನಮ್ಮ ಮರ್ಯಾದೆ ವಾಪಸ್ ತಂದು ಕೊಡ್ತೀರಾ ಎಂದು ಕೇಳುತ್ತಾನೆ.

    Colors Kannada serial, Kannada serial, Lakshana Serial, serial today episode, Kidnap episode in serial, Bhupathi Brother was kidnapped, ಲಕ್ಷಣ ಧಾರಾವಾಹಿ, ಲಕ್ಷಣ ಧಾರಾವಾಹಿಯಲ್ಲಿ ರೋಚಕ ತಿರುವು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶಕುಂತಲಾ ದೇವಿ


    ಮೌರ್ಯ ಕಿಡ್ನ್ಯಾಪ್
    ಎಲ್ಲರಿಗೂ ಕಾಟ ಕೊಟ್ಟು, ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡ್ತಿದ್ದ ಮೌರ್ಯನೇ ಕಿಡ್ನ್ಯಾಪ್ ಆಗಿದ್ದಾನೆ. ಕಿಡ್ನ್ಯಾಪ್ ಮಾಡಿದ್ದು ಯಾರು ಅಂತ ಗೊತ್ತಿಲ್ಲ. ಹೊಸ ವಿಲನ್ ಮುಖ ಇನ್ನೂ ತೋರಿಸಿಲ್ಲ. ಆಕೆ ಮೌರ್ಯನ ಬಳಿ ಮಾತನಾಡುತ್ತಿದ್ದಾಳೆ. ನಾನ್ ಯಾರು ಅಂತ ತಿಳಿದುಕೊಳ್ಳೋ ಪ್ರಯತ್ನ ಮಾಡಬೇಡ. ಆದ್ರೂ ನನಗೆ ನಿನ್ನ ಬುದ್ಧಿವಂತಿಕೆ ತುಂಬಾ ಇಷ್ಟ ಆಯ್ತು.

    ಇದನ್ನೂ ಓದಿ: Bigg Boss Season 9: ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್ ಘೋಷಿಸಿದ ಕಿಚ್ಚ ಸುದೀಪ್‍, ಮತ್ತೆ ಬರ್ತಿದ್ದಾರಾ ಅರವಿಂದ್-ದಿವ್ಯಾ ಉರುಡುಗ?

    ಯಾರಿಗೂ ಗೊತ್ತಿಲ್ಲದೇ, ಅದ್ರಲ್ಲೂ ನನಗೂ ಗೊತ್ತಿಲ್ಲದೇ, ಇಷ್ಟೆಲ್ಲಾ ಮಾಡಿದಿಯಾ ಅಂದ್ರೆ, ಸಾಮಾನ್ಯ ಅಲ್ಲ. ಮೆಚ್ಚಲೇ ಬೇಕು ನಿನ್ನ. ಆದ್ರೆ ಒಂದನ್ನು ತಿಳ್ಕೋ, ನೀನು ನನ್ನ ಮುಂದೆ ಏನೇನೂ ಅಲ್ಲ. ನನಗೆ ಸರಿಸಾಟಿಯೂ ಅಲ್ಲ. ನಾಲ್ಕು ಸಲ ಅಟ್ಯಾಕ್ ಮಡಿ, ಐದನೇ ಬಾರಿಗೆ ಜೈಲು ಸೇರೋ ಸ್ಥಿತಿ ತಲುಪಿದ್ದೀಯಾ ಎಂದು ಹೊಸ ವಿಲನ್ ಹೇಳ್ತಾಳೆ.

    Colors Kannada serial, Kannada serial, Lakshana Serial, serial today episode, Kidnap episode in serial, Bhupathi Brother was kidnapped, ಲಕ್ಷಣ ಧಾರಾವಾಹಿ, ಲಕ್ಷಣ ಧಾರಾವಾಹಿಯಲ್ಲಿ ರೋಚಕ ತಿರುವು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ನಕ್ಷತ್ರಾ


    ಮೌರ್ಯನ ಹುಡುಕಿಕೊಂಡು ಬಂದ ಮನೆಯವರು
    ಮೌರ್ಯನನ್ನು ಕಿಡ್ನ್ಯಾಪ್ ಮಾಡಿದ ಲೇಡಿ ಸಿಎಸ್‍ಗೆ ಕರೆ ಮಾಡಿ, ಮೌರ್ಯ ಬೇಕು ಅಂದ್ರೆ ನಾನು ಹೇಳಿದ ಜಾಗಕ್ಕೆ ಬನ್ನಿ ಅಂತಾಳೆ. ಅಲ್ಲಿಗೆ ಸಿಎಸ್, ನಕ್ಷತ್ರ, ಭೂಪತಿ ಮನೆಯವರು, ಪೊಲೀಸ್ ಹೋಗ್ತಾರೆ. ಹೋಗಿ ನೋಡಿದವರಿಗೆ ಗಾಬರಿ ಆಗುತ್ತೆ. ಯಾಕಂದ್ರೆ ಮೌರ್ಯನನ್ನು ನೇತು ಹಾಕಿ ಇರುತ್ತಾರೆ.

    ಇದನ್ನೂ ಓದಿ: Kendasampige: ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ? ಜನರ ಸೇವೆಗಾಗಿ ಕಾರ್ಪೊರೇಟರ್ ಮಾತಿಗೆ ಎಸ್ ಅಂತಾಳಾ?

    ಲಕ್ಷಣ ಧಾರಾವಾಹಿ ಹೊಸ ವಿಲನ್ ಎಂಟ್ರಿ ಆಗಿದೆ. ಅದು ಲೇಡಿ. ಏಕೆ ಬಂದಿದ್ದಾಳೆ? ಹೊಸ ವಿಲನ್ ಯಾರು? ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.
    Published by:Savitha Savitha
    First published: