Lakshana: ಮೌರ್ಯ ಆಯ್ತು, ಈಗ ಶೌರ್ಯನ ಕಾಟ; ನಕ್ಷತ್ರಾ ಕಿಡ್ನ್ಯಾಪ್

ಶೌರ್ಯ ಭೂಪತಿ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೊರಟಿದ್ದಾನೆ. ಕೋಪದಿಂದ ಹೊರಟ ಶೌರ್ಯನನ್ನು ತಡೆಯಲು ನಕ್ಷತ್ರ ಹೊರಟಿದ್ದಾಳೆ. ಅವನ ಕಾರಿಗೆ ಅಡ್ಡ ನಿಲ್ಲುತ್ತಾಳೆ. ನೀನೇ ಇದಕ್ಕೆ ಕಾರಣ. ನಿನಗೆ ಒಂದು ಗತಿ ಕಾಣಿಸ್ತೀನಿ ಅಂತ, ಆಕೆಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಾನೆ.

ನಕ್ಷತ್ರಾ

ನಕ್ಷತ್ರಾ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಾಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ (Bhupathi) ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್ ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು (Nakshatra) ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಇಷ್ಟು ದಿನ ಮೌರ್ಯ ನಕ್ಷತ್ರಾಗೆ ಕಾಟ ಕೊಡ್ತಿದ್ದ. ಈಗ ಶೌರ್ಯ ಕಾಟ ಕೊಡಿದ್ದಾನೆ.

    ಕ್ಷಮೆ ಕೇಳಲು ಬಂದ ಶೌರ್ಯ ಜಗಳ
    ನಕ್ಷತ್ರಾಗೆ ಮೌರ್ಯ ತೊಂದರೆ ಕೊಡುತ್ತಿದ್ದಾಗ, ಮನೆಯಲ್ಲಿದ್ದು, ಅಣ್ಣ ಶೌರ್ಯ ಸಹಾಯ ಮಾಡ್ತಿದ್ದ. ತನ್ನ ತಪ್ಪನ್ನು ಶೌರ್ಯನೇ ಮನೆಯವರ ಮುಂದೆ ಒಪ್ಪಿಕೊಂಡಿದ್ದಾನೆ. ಭೂಪತಿ ಬಳಿ ಕ್ಷಮೆ ಕೇಳಲು ಹೋದವನು ಜಗಳ ಆಡುತ್ತಿದ್ದಾನೆ. ಭೂಪತಿಯೂ ಕೋಪ ಮಾಡಿಕೊಂಡು, ಶೌರ್ಯನಿಗೆ ತಲೆ ಕೆಟ್ಟಿದೆ. ಸುಮ್ಮನೇ ಹುಚ್ಚು, ಹುಚ್ಚಾಗಿ ಆಡ್ತಾ ಇದ್ದಾನೆ. ಸುಮ್ಮನೇ ಹೋಗು, ದೊಡ್ಡವನು ಎಂದು ಮರ್ಯಾದೆ ಕೊಡ್ತಾ ಇದೀನಿ. ಮೌರ್ಯನಿಗೆ ಏನ್ ಮಾಡಬೇಕೋ ಅದನ್ನು ಮಾಡೇ ಮಾಡ್ತೀನಿ ಎಂದು ಭೂಪತಿ ಹೇಳ್ತಾ ಇದ್ದಾನೆ.

    ಮೌರ್ಯ ಪರ ನಿಂತ ಶೌರ್ಯ
    ಮೌರ್ಯನಿಗೆ ಭೂಪತಿ ಶಿಕ್ಷೆ ಕೊಡಿಸ್ತೀನಿ ಎಂದಿದ್ದಕ್ಕೆ. ಕೋಪಗೊಂಡ ಶೌರ್ಯ, ಯಾರಾದ್ರೂ ಮೌರ್ಯನಿಗೆ ತೊಂದ್ರೆ ಕೊಟ್ರೆ ನಾನು ಸುಮ್ಮನಿರಲ್ಲ. ಅವನಿಗೆ ಯಾವ್ ಲೆವೆಲ್ ಭದ್ರತೆ ಬೇಕಾದ್ರೂ ಕೊಡ್ತಿನಿ. ಅದಕ್ಕೆ ಶಕುಂತಲಾ ದೇವಿ ಸಹ ಬೈಯ್ತಾಳೆ. ತಪ್ಪು ಮಾಡಿದ್ದೀರಿ ಶಿಕ್ಷೆ ಅನುಭವಿಸಿ ಎಂದು ಹೇಳ್ತಾಳೆ. ಆದರೂ ಅಮ್ಮನ ಮಾತು ಕೇಳದೇ, ನನಗೆ ಮೌರ್ಯ ಮುಖ್ಯ. ಅವನ ಸೇಪ್ಟಿ ಮುಖ್ಯ. ಯಾವುದೇ ಕಾರಣಕ್ಕೂ ನಾನು ಅವನನ್ನು ಬಿಟ್ಟು ಕೊಡಲ್ಲ ಎಂದು ಶೌರ್ಯ ಹೇಳ್ತಾನೆ.

    ಇದನ್ನೂ ಓದಿ: Puttakkana Makkalu: ಸ್ನೇಹಾಳನ್ನು ಪ್ರೀತಿಸ್ತಿರೋ ಶ್ರೀಗೆ ಪೂರ್ವಿ ಕೊಟ್ಲು ಶಾಕ್! ಕಂಠಿಗೆ ಬಿಸಿ ತುಪ್ಪವಾದ ಮದುವೆ ಮಾತುಕಥೆ

    ನಿನ್ನನ್ನು ಜೈಲಿಗೆ ಕಳಿಸ್ತೀನಿ ಎಂದ

    ಮೌರ್ಯನ ಬೆಂಬಲಕ್ಕೆ ನಿಂತ ಶೌರ್ಯನಿಗೆ ಭೂಪತಿ ವಾರ್ನ್ ಮಾಡುತ್ತಿದ್ದಾನೆ. ಅವನ ಬೆಂಬಲಕ್ಕೆ ಬಂದ್ರೆ ನಿನ್ನನ್ನು ಜೈಲಿಗೆ ಹಾಕ ಬೇಕಾಗುತ್ತೆ ಎನ್ನುತ್ತಾನೆ. ಅದಕ್ಕೆ ಶೌರ್ಯ ಭೂಪತಿ ಕೆನ್ನೆಗೆ ಹೊಡೆಯುತ್ತಾನೆ. ಜೈಲಿಗೆ ಕಳಿಸ್ತೀಯಾ? ಅದು ಈ ನಕ್ಷತ್ರಾ ಗೋಸ್ಕರ ಎನ್ನುತ್ತಾನೆ.

    Colors Kannada serial, Kannada serial, Lakshana Serial, serial today episode, Kidnap episode in serial, ಲಕ್ಷಣ ಧಾರಾವಾಹಿ, ಮೌರ್ಯ ಆಯ್ತು, ಈಗ ಶೌರ್ಯನ ಕಾಟ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭೂಪತಿ


    ಸಿಎಸ್ ಮಗಳಿಗಾಗಿ ಅಣ್ಣ-ತಮ್ಮಂದಿರನ್ನು ಜೈಲಿಗೆ ಕಳುಹಿಸುತ್ತೀಯಾ?. ನಿನಗೆ ಒಡಹುಟ್ಟಿದವರು ಅನ್ನೋ ಪ್ರೀತಿ ಇಲ್ಲದೇ ಇರಬಹುದು. ಆದ್ರೆ ನನಗೆ ಇದೆ. ಮೌರ್ಯನನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಚೆನ್ನಾಗಿ ಗೊತ್ತು, ಎಂದು ಮನೆ ಬಿಟ್ಟು ಹೊರಟಿದ್ದಾನೆ.

    Colors Kannada serial, Kannada serial, Lakshana Serial, serial today episode, Kidnap episode in serial, ಲಕ್ಷಣ ಧಾರಾವಾಹಿ, ಮೌರ್ಯ ಆಯ್ತು, ಈಗ ಶೌರ್ಯನ ಕಾಟ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶೌರ್ಯ


    ನಕ್ಷತ್ರಾ ಕಿಡ್ನ್ಯಾಪ್ ಮಾಡಿದ ಶೌರ್ಯ
    ಶೌರ್ಯ ಭೂಪತಿ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೊರಟಿದ್ದಾನೆ. ಕೋಪದಿಂದ ಹೊರಟ ಶೌರ್ಯನನ್ನು ತಡೆಯಲು ನಕ್ಷತ್ರ ಹೊರಟಿದ್ದಾಳೆ. ಅವನ ಕಾರಿಗೆ ಅಡ್ಡ ನಿಲ್ಲುತ್ತಾಳೆ. ಅದಕ್ಕೆ ಕೋಪಗೊಂಡ ಶೌರ್ಯ, ನಿನ್ನಿಂದಾನೇ ಇಷ್ಟೆಲ್ಲಾ ಆಗಿದ್ದು. ನೀನೇ ಇದಕ್ಕೆ ಕಾರಣ . ನಿನಗೆ ಒಂದು ಗತಿ ಕಾಣಿಸ್ತೀನಿ ಅಂತ, ಆಕೆಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಾನೆ. ಸೆಕ್ಯೂರಿಟಿ ಎಷ್ಟೇ ತಡೆದ್ರೂ ಅವನನ್ನು ತಳ್ಳಿ, ನಕ್ಷತ್ರಾಳನ್ನು ಕರೆದುಕೊಂಡು ಹೋಗಿದ್ದಾನೆ.

    ಇದನ್ನೂ ಓದಿ: Kannadathi: ಸಾಯುವ ಡ್ರಾಮಾ ಮಾಡಿ ಭುವಿಯನ್ನ ದಾಳವಾಗಿಸಿಕೊಳ್ತಾಳಾ ಸಾನಿಯಾ? ಹರ್ಷನ ಮುಂದೆ ಠುಸ್ ಪಟಾಕಿಯಾದ ಆದಿ ಮಡದಿ

    ಭೂಪತಿಗೆ ತನ್ನ ಅಣ್ಣಂದಿರಿಂದ, ನಕ್ಷತ್ರಾಗೆ ತೊಂದರೆ ಆಗುತ್ತಿರುವದನ್ನು ಸಹಿಸಲು ಆಗುತ್ತಿಲ್ಲ. ಈಗ ನಕ್ಷತ್ರಾಳನ್ನು ಹೇಗೆ ಕಾಪಾಡ್ತಾನೆ? ಮೌರ್ಯ, ಶೌರ್ಯನನ್ನು ಪೊಲೀಸರಿಗೆ ಒಪ್ಪಿಸುತ್ತಾನಾ? ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.
    Published by:Savitha Savitha
    First published: