Lakshana: ಮನೆ ಮರ್ಯಾದೆ ತೆಗೆದ ತಮ್ಮ ಮೌರ್ಯನನ್ನು ಸುಮ್ನೆ ಬಿಡಲ್ವಂತೆ ಭೂಪತಿ, ಎಲ್ಲಿ ಅಡಗಿದ್ದಾನೆ ಶಕುಂತಲಾ ದೇವಿ ಮಗ?

ನನ್ನ ಮನೆ ಮರ್ಯಾದೆ ತೆಗೆದಿರೋನು ನನ್ನ ತಮ್ಮನೇ ಆಗಿರಲಿ, ಅವನನ್ನು ನಾನು ಸುಮ್ಮನೇ ಬಿಡಲ್ಲ ಎಂದು ಭೂಪತಿ ಹೇಳುತ್ತಿದ್ದಾನೆ. ಅವನಿಗೆ ಶಿಕ್ಷೆ ಕೊಡದೇ, ಜೈಲಿಗೆ ಹೋಗದೇ, ನಾನು ಅದನ್ನು ಇಲ್ಲಿಗೆ ನಿಲ್ಲಿಸಲ್ಲ. ಜೈಲಿಗೆ ಹೋಗಲೇ ಬೇಕು ಶಿಕ್ಷೆ ಅನುಭವಿಸಲೇ ಬೇಕು ಎಂದು ಹೇಳಿದ್ದಾನೆ.

ಲಕ್ಷಣ

ಲಕ್ಷಣ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ (Nakshatra) ಮದುವೆಯಾಗಿದ್ದಾಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್ ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಪೊಲೀಸರ (Police) ಕೈಯಿಂದ ಮೌರ್ಯ ಎಸ್ಕೇಪ್ (Escape) ಆಗಿದ್ದಾನೆ.

    ಮೌರ್ಯನೇ ಕ್ರಿಮಿನಲ್
    ಭೂಪತಿ ತಮ್ಮನೇ ನಕ್ಷತ್ರಾಳನ್ನು ಕೊಲ್ಲಲು ಬಂದಿದ್ದ ಕ್ರಿಮಿನಲ್ ಎಂದು ಎಲ್ಲರಿಗೂ ಗೊತ್ತಾಗಿದೆ. ಅದಕ್ಕೆ ಅವನ್ನು ಹಿಡಿಯಲು ಪೊಲೀಸ್ ಜೊತೆ ಭೂಪತಿ, ನಕ್ಷತ್ರಾ, ಸಿಎಸ್, ಶಕುಂತಲಾ ದೇವಿ ಹೋಗಿರುತ್ತಾರೆ. ಆದ್ರೂ ಮೌರ್ಯ ಎಲ್ಲರ ಕಣ್ಣು ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಅಲ್ಲದೇ ಹೋಗುವಾಗ ನಕ್ಷತ್ರಾ ಬಳಿ ಬಂದು ನಿನ್ನನ್ನು ಬಿಡೋ ಮಾತೇ ಇಲ್ಲ. ಕೊಂದೇ ಕೊಲ್ಲುತ್ತೇನೆ ಎಂದು ಹೇಳಿ ಹೋಗಿದ್ದಾನೆ. ನಕ್ಷತ್ರಾ ಗಾಬರಿಯಾಗಿದ್ದಾಳೆ.

    ಮೌರ್ಯನನ್ನು ಸುಮ್ನೆ ಬಿಡಲ್ವಂತೆ ಭೂಪತಿ
    ನಕ್ಷತ್ರಾ ಬಳಿ ಭೂಪತಿ ತನ್ನ ಬೇಸರ ವ್ಯಕ್ತಪಡಿಸುತ್ತಿದ್ದಾನೆ. ನಿಮ್ಮ ತಂದೆ ಅವತ್ತು ನಮ್ಮನೆಗೆ ಬಂದಾಗ, ಮೌರ್ಯನ ಬಗ್ಗೆ ಮಾತನಾಡಿದಾಗ, ನನ್ನ ತಾಯಿ, ನನ್ನ ಅಣ್ಣ-ತಮ್ಮ ಹಾಗೇ, ಹೀಗೆ ಸಂಸ್ಕಾರ ಅಂತ ದೊಡ್ಡ ದೊಡ್ಡ ಮಾತು ಆಡಿದೆ. ಆದ್ರೆ ಮೌರ್ಯ ನಾವೆಲ್ಲಾ ನಾಚಿಕೆ ಪಡೋ ರೀತಿ ಮಾಡಿದ್ದಾನೆ. ನಿನ್ನ ತಂದೆಗೂ, ನಿನಗೂ ಸಾರಿ ಕೇಳೋದು ಬಿಟ್ರೆ, ಇನ್ನೇನು ಹೇಳಬೇಕು ಗೊತ್ತಿಲ್ಲ. ಮೌರ್ಯ ಈ ರೀತಿ ಮಾಡಬಾರದಿತ್ತು ಎಂದು ಭೂಪತಿ ಬೇಸರ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿ: Gattimela: 900 ಸಂಚಿಕೆ ಪೂರೈಸಿದ ಗಟ್ಟಿಮೇಳ ಧಾರಾವಾಹಿ, ಕಡಿಮೆಯಾಗಿಲ್ಲ ಕ್ರೇಜ್!

    ನಿನ್ನ ತಂದೆ ರೀತಿ ಮಾಡಿದ ಅವನು
    ನಿನ್ನ ತಂದೆಯಿಂದ ಅವಮಾನ ಆಗಿದ್ದು ನಿಜ. ನಿನ್ನ ತಂದೆಯಿಂದ ಅನ್ಯಾಯ ಆಗಿದ್ದು ನಿಜ. ಆದ್ರೆ ಅವನು ಅವರ ದಾರಿ ಹಿಡಿಯಬಾರದಿತ್ತು. ನಿನ್ನ ತಂದೆಗೂ ಅವಿನಗೂ ಏನ್ ವ್ಯತ್ಯಾಸ ಇದೆ ನಕ್ಷತ್ರಾ ಎಂದು ಬೇಜಾರಿನಿಂದ ಭೂಪತಿ ಕೇಳುತ್ತಿದ್ದಾನೆ. ಅವನಿಂದ ಇವತ್ತು ನಿನ್ನ ತಂದೆ ಮುಂದೆ, ನನ್ನ ತಾಯಿಗೆ ಅವಮಾನ ಆಯ್ತು. ನನಗೆ ಅವಮಾನ ಆಯ್ತು. ತಡೆಯೋಕೆ ಆಗ್ತಾ ಇಲ್ಲ ನನಗೆ ಎಂದು ಭೂಪತಿ ಹೇಳಿದ್ದಾನೆ.

    Colors Kannada serial, Kannada serial, Lakshana Serial, serial today episode, Hero brother escape, ಲಕ್ಷಣ ಧಾರಾವಾಹಿ, ತಮ್ಮ ಮೌರ್ಯನನ್ನು ಸುಮ್ನೆ ಬಿಡಲ್ವಂತೆ ಭೂಪತಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಚಂದ್ರಶೇಖರ್


    ಮೌರ್ಯ ಜೈಲಿಗೆ ಹೋಗಲೇ ಬೇಕು
    ನನ್ನ ಮನೆ ಮರ್ಯಾದೆ ತೆಗೆದಿರೋನು ನನ್ನ ತಮ್ಮನೇ ಆಗಿರಲಿ, ಅವನನ್ನು ನಾನು ಸುಮ್ಮನೇ ಬಿಡಲ್ಲ ಎಂದು ಭೂಪತಿ ಹೇಳುತ್ತಿದ್ದಾನೆ. ಅವನಿಗೆ ಶಿಕ್ಷೆ ಕೊಡದೇ, ಜೈಲಿಗೆ ಹೋಗದೇ, ನಾನು ಅದನ್ನು ಇಲ್ಲಿಗೆ ನಿಲ್ಲಿಸಲ್ಲ. ಜೈಲಿಗೆ ಹೋಗಲೇ ಬೇಕು ಶಿಕ್ಷೆ ಅನುಭವಿಸಲೇ ಬೇಕು ಎಂದು ಹೇಳಿದ್ದಾನೆ.

    ಇದನ್ನೂ ಓದಿ: Kendasampige: ಅಕ್ಕ-ತಮ್ಮ ಒಂದಾಗೋ ಟೈಮ್‍ಗೆ ಆಪತ್ತು? ಸಾವಿನ ಅಂಚಿನಲ್ಲಿ ರಾಜೇಶ!

    ಎಲ್ಲಿ ಅಡಗಿದ್ದಾನೆ ಮೌರ್ಯ?
    ಮೌರ್ಯ ಪೊಲೀಸರ ಕಣ್ಣು ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಎಲ್ಲಿ ಹೋಗಿದ್ದಾನೆ ಎಂದು ಗೊತ್ತಿಲ್ಲ. ಮೌರ್ಯನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    Colors Kannada serial, Kannada serial, Lakshana Serial, serial today episode, Hero brother escape, ಲಕ್ಷಣ ಧಾರಾವಾಹಿ, ತಮ್ಮ ಮೌರ್ಯನನ್ನು ಸುಮ್ನೆ ಬಿಡಲ್ವಂತೆ ಭೂಪತಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಮೌರ್ಯ


    ಆದ್ರೆ ಮೌರ್ಯ ಎಲ್ಲಿ ಅಂತ ಗೊತ್ತಾಗ್ತಿಲ್ಲ. ಮೌರ್ಯ ನಕ್ಷತ್ರಾಗೆ ತೊಂದರೆ ಮಾಡೇ ಮಾಡ್ತಾನೆ ಅಂತ ಗೊತ್ತಿದ್ದು, ಅವನಿಗಾಗಿ ಬಲೆ ಬೀಸಿದ್ದಾರೆ.
    Published by:Savitha Savitha
    First published: