ಲಕ್ಷಣ (Lakshana) ಧಾರಾವಾಹಿ (Serial) ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತೆ. ಈ ಕಥೆಯ ನಾಯಕಿ ನಕ್ಷತ್ರಾ (Nakshatra). ನಾಯಕ ಭೂಪತಿ. ಇಬ್ಬರಿಗೆ ಮದುವೆ ಆಗಲು ಇಷ್ಟ ಇರಲಿಲ್ಲ. ಆದ್ರೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ಮಗಳಿಗಾಗಿ ಈ ಮದುವೆಯನ್ನು ಬಲವಂತವಾಗಿ ಮಾಡಿಸಿರುತ್ತಾನೆ. ಅದಕ್ಕೆ ಚಂದ್ರಶೇಖರ್ ಕಂಡ್ರೆ ಶಕುಂತಲಾ ದೇವಿ ಅಂದ್ರೆ ಭೂಪತಿ ಅಮ್ಮನ ಮನೆಯವರಿಗೆ ಅವರನ್ನು ಕಂಡ್ರೆ ಆಗಲ್ಲ. ಮಗನ ಜೀವನ ಹಾಳು ಮಾಡಿಬಿಟ್ಟ ಅಂತ ಕೋಪ. ಅದಕ್ಕೆ ಶಕುಂತಲಾ ದೇವಿ ಚಿಕ್ಕ ಮಗ ಮೌರ್ಯ ಸಿಎಸ್ ಮೇಲಿನ ಕೋಪಕ್ಕೆ ನಕ್ಷತ್ರಾ ಮೇಲೆ ಸೇಡು ತೀರಿಸಿಕೊಳ್ತಿದ್ದಾನೆ. ಆಕೆಯನ್ನು ಸಾಯಿಸಿ ಬಿಟ್ರೆ ಚಂದ್ರಶೇಖರ್ ಗೆ ನೋವಾಗುತ್ತೆ ಅನ್ನೋ ಉದ್ದೇಶ ಅವನದು. ತಮ್ಮನನ್ನು ಹಿಡಿಯಲು ಭೂಪತಿ ಮತ್ತು ಶೌರ್ಯ ಪ್ಲ್ಯಾನ್ (Plan) ಮಾಡಿದ್ರು. ಅದು ವರ್ಕ್ ಆಗಿದೆ. ಆದ್ರೆ ಮೌರ್ಯ ಮತ್ತೆ ಎಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ (Escape) ಆಗಿದ್ದಾನೆ.
ಭೂಪತಿ-ಶೌರ್ಯ ಪ್ಲ್ಯಾನ್ ವರ್ಕ್ ಆಗಲಿಲ್ವಾ?
ಮೌರ್ಯನನ್ನು ಹಿಡಿಯಲು ಭೂಪತಿ ಮತ್ತು ಶೌರ್ಯ ಸೇರಿ ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡೋ ರೀತಿ ನಾಟಕ ಮಾಡಿರುತ್ತಾರೆ. ಅವರು ಅಂದುಕೊಂಡಂತೆ ಎಲ್ಲಾ ಆಗಿರುತ್ತೆ. ಮೌರ್ಯ ಸಿಕ್ಕಿಬಿದ್ದಿರುತ್ತಾನೆ. ಪೊಲೀಸರು ಸಹ ಮೌರ್ಯನನ್ನು ಅರೆಸ್ಟ್ ಮಾಡಲು ಬಂದಿರುತ್ತಾರೆ.
ಚಂದ್ರಶೇಖರ್ ಸಹ ತನ್ನ ಮಗಳಿಗೆ ಕಾಟ ಕೊಡುತ್ತಿದ್ದರ ಕ್ರಿಮಿ ಸಿಕ್ಕಿಬಿದ್ದ ಎಂದು ಸಂತೋಷದಲ್ಲಿ ಇರುತ್ತಾರೆ. ಭೂಪತಿ ಮತ್ತು ಶೌರ್ಯ ಸಹ ತನ್ನ ತಮ್ಮ ತಪ್ಪು ಮಾಡಲ್ಲ ಎಂದು ಕೊಂಡಿರುತ್ತಾರೆ. ಆದ್ರೆ ಅವರ ಊಹೆ ಸುಳ್ಳಾಗಿದೆ.
ಇದನ್ನೂ ಓದಿ: Olavina Nildana: ಪಾಲಾಕ್ಷ-ಚಕ್ರವರ್ತಿ ಸಂಚು ಸಫಲ, ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ಧಾಂತ್?
ಶ್ವೇತಾ ಕೊರಳಿಗೆ ಚಾಕು ಹಿಡಿದ ಮೌರ್ಯ
ಪೊಲೀಸರು ಇನ್ನೇನು ಮೌರ್ಯನನ್ನು ಅರೆಸ್ಟ್ ಮಾಡಿಕೊಂಡು ಹೋಗಬೇಕಿತ್ತು. ಅಷ್ಟರಲ್ಲೇ ಮೌರ್ಯ ಶ್ವೇತಾ ಕೊರಳಿಗೆ ಚಾಕು ಹಿಡಿದಿದ್ದಾನೆ. ತಾನು ಹೋಗಲು ಬಿಡಿ. ಇಲ್ಲ ಅಂದ್ರೆ ಇವಳನ್ನು ಕೊಲ್ಲುತ್ತೇನೆ ಎಂದು ಬೆದರಿಸುತ್ತಾನೆ. ಎಲ್ಲರೂ ಸುಮ್ಮನಾಗುತ್ತಾರೆ. ಆಗ ಮೌರ್ಯ ಶ್ವೇತಾಳನ್ನು ಮುಂದಿಟ್ಟುಕೊಂಡು ಗಾಡಿ ಹತ್ತಿ ಎಸ್ಕೇಪ್ ಆಗುತ್ತಾನೆ.
ಮೌರ್ಯನಿಗೆ ಅಪಘಾತ ಮಾಡಿದ ಲೇಡಿ
ಮೌರ್ಯ ತನ್ನ ಅಣ್ಣಂದಿರು, ಮತ್ತು ಪೊಲೀಸರಿಂದ ತಪ್ಪಿಸಿಕೊಂಡು ವ್ಯಾನ್‍ನಲ್ಲಿ ಎಸ್ಕೇಪ್ ಆಗ್ತಾ ಇರುತ್ತಾನೆ. ಆಗ ಮೌರ್ಯನ ಗಾಡಿಯನ್ನು ಒಂದು ಲಾರಿ ಹಿಂಬಾಲಿಸಿಕೊಂಡು ಬರುತ್ತೆ. ಆಶ್ಚರ್ಯ ಅಂದ್ರೆ ಆ ಲಾರಿಯನ್ನು ಲೇಡಿ ಒಬ್ಬಳು ಓಡಿಸುತ್ತಾ ಇರುತ್ತಾಳೆ. ವೇಗವಾಗಿ ಬರುತ್ತಿದ್ದ ಮೌರ್ಯನ ಗಾಡಿಗೆ ಗುದ್ದಿ ಅಪಘಾತ ಮಾಡುತ್ತಾಳೆ. ಮೌರ್ಯ ಕೆಳಗೆ ಬೀಳುತ್ತಾನೆ.
ಇದನ್ನೂ ಓದಿ: Bigg Boss: ಬಿಗ್ಬಾಸ್ ಸೀಸನ್ 9ಕ್ಕೆ ಹೋಗ್ತಾರಾ ಕಮಲಿ ಖ್ಯಾತಿಯ ಅಮೂಲ್ಯ ಗೌಡ?
ಹೊಸ ವಿಲನ್ ಯಾರು?
ಲಕ್ಷಣ ಧಾರಾವಾಹಿ ಹೊಸ ವಿಲನ್ ಎಂಟ್ರಿ ಆಗಿದೆ. ಅದು ಲೇಡಿ. ಏಕೆ ಬಂದಿದ್ದಾಳೆ? ಮೌರ್ಯನಿಗೆ ಅಪಘಾತ ಏಕೆ ಮಾಡಿಸಿದ್ಲು? ಏನೂ ಗೊತ್ತಿಲ್ಲ. ಮಿಲ್ಲಿ ಅಂದ್ರೆ ಶ್ವೇತಾ ಪಿಎ ಆಗಿದ್ದಾಕೆ. ಅವಳು ಅವರ ಜೊತೆಯಲ್ಲೇ ಇದ್ದುಕೊಂಡು, ಆಗಾಗ ತನ್ನ ತಾಯಿಗೆ ಕರೆ ಮಾಡಿ ಅಲ್ಲಿ ನಡೆಯುವ ಪ್ರತಿಯೊಂದು ವಿಷಯ ಹೇಳ್ತಿದ್ಲು. ಈಗ ಬಂದಿರೋಳು ಮಿಲ್ಲಿ ತಾಯಿನೇ ಆಗಿರಬಹುದು. ಸದ್ಯ ಯಾರು ಅಂತ ಮುಖ ತೋರಿಸಿಲ್ಲ.
ಈಗ ಬಂದಿರೋ ಹೊಸ ವಿಲನ್ ಯಾರು? ಮೌರ್ಯನಿಗೆ ಅಪಘಾತದಿಂದ ತುಂಬಾ ತೊಂದ್ರೆ ಆಗಿದ್ಯಾ? ಈ ವಿಲನ್‍ಗೆ ಯಾರ ಮೇಲೆ ಕೋಪ? ಚಂದ್ರಶೇಖರ್ ಮೇಲೆಯಾ? ಅಥವಾ ಶಕುಂತಲಾ ದೇವಿ ಮೇಲಾ? ನಕ್ಷತ್ರಾಗೆ ಮತ್ತೆನದ್ರೂ ತೊಂದರೆ ಆಗುತ್ತಾ? ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ