• Home
  • »
  • News
  • »
  • entertainment
  • »
  • Lakshana Serial: ಗೊಂಬೆಗಳ ಮೂಲಕ ಭೂಪತಿ ನಕ್ಷತ್ರಾಳನ್ನು ಅರ್ಥ ಮಾಡಿಕೊಳ್ತಾನಾ! ಶಕುಂತಲಾ ದೇವಿ ಹೇಳಿದ್ದೇನು?

Lakshana Serial: ಗೊಂಬೆಗಳ ಮೂಲಕ ಭೂಪತಿ ನಕ್ಷತ್ರಾಳನ್ನು ಅರ್ಥ ಮಾಡಿಕೊಳ್ತಾನಾ! ಶಕುಂತಲಾ ದೇವಿ ಹೇಳಿದ್ದೇನು?

ಲಕ್ಷಣ ಧಾರಾವಾಹಿ

ಲಕ್ಷಣ ಧಾರಾವಾಹಿ

ದಸರಾ ಹಬ್ಬ ಆದ ಕಾರಣ ಭೂಪತಿ ಅತ್ತಿಗೆ ಮಯೂರಿ ಬೊಂಬೆ ಆಟ ಏರ್ಪಡಿಸಿದ್ದಾರೆ. ಅದರಲ್ಲಿ ನಕ್ಷತ್ರ ಜೀವನದ ಬಗ್ಗೆ ಹೇಳಿದ್ದಾರೆ. ನಕ್ಷತ್ರಾ ಹುಟ್ಟಿದ್ದು, ಅವಳ ಬಾಲ್ಯ, ಅಪ್ಪ, ಅಜ್ಜಿಯ ಕಾಟ ಎಲ್ಲದರ ಬಗ್ಗೆ ಹೇಳ್ತಾರೆ.

  • Share this:

    ಲಕ್ಷಣ (Lakshana) ಧಾರಾವಾಹಿ (Serial) ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತೆ. ಈ ಕಥೆಯ ನಾಯಕಿ ನಕ್ಷತ್ರಾ (Nakshatra). ನಾಯಕ ಭೂಪತಿ. ಇಬ್ಬರಿಗೆ ಮದುವೆ ಆಗಲು ಇಷ್ಟ ಇರಲಿಲ್ಲ. ಆದ್ರೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ಮಗಳಿಗಾಗಿ ಈ ಮದುವೆಯನ್ನು ಬಲವಂತವಾಗಿ ಮಾಡಿಸಿರುತ್ತಾನೆ. ಅದಕ್ಕೆ ಚಂದ್ರಶೇಖರ್ ಕಂಡ್ರೆ ಶಕುಂತಲಾ ದೇವಿ ಅಂದ್ರೆ ಭೂಪತಿ ಅಮ್ಮನ ಮನೆಯವರಿಗೆ ಅವರನ್ನು ಕಂಡ್ರೆ ಆಗಲ್ಲ. ಮಗನ ಜೀವನ (Life) ಹಾಳು ಮಾಡಿಬಿಟ್ಟ ಅಂತ ಕೋಪ. ಇದಕ್ಕೆಲ್ಲಾ ನಕ್ಷತ್ರಾಳೇ ಕಾರಣ ಎಂದು ಶಕುಂತಲಾ ದೇವಿ ಕೋಪಗೊಂಡಿದ್ದಾಳೆ. ನೀನು ನನ್ನ ಮಗನನ್ನು ಮದುವೆ (Marriage) ಆಗದಿದ್ರೆ, ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ.


    ಶಕುಂತಲಾ ಬಳಿ ಕ್ಷಮೆ ಕೇಳಿದ ಚಂದ್ರಶೇಖರ್
    ಚಂದ್ರಶೇಖರ್ ಭೂಪತಿ ಮದುವೆ ಟೈಂನಲ್ಲಿ ಶಕುಂತಲಾ ದೇವಿಗೆ ಹೆದರಿಸಿ ನಕ್ಷತ್ರಾಳನ್ನು ಮದುವೆ ಮಾಡಿಸಿರುತ್ತಾನೆ. ಅದರಿಂದ ಹಲವು ತೊಂದರೆಗಳಾಗಿವೆ. ಆದ ಕಾರಣ ತನ್ನ ತಪ್ಪಿನ ಅರಿವಾಗಿದೆ. ಮಗಳ ಜೀವನ ಸರಿ ಮಾಡಬೇಕೆಂದು ಶಕುಂತಲಾ ದೇವಿ ಬಳಿ ಕ್ಷಮೆ ಕೇಳಿದ್ದಾನೆ. ಆದ್ರೆ ಶಕುಂತಲಾ ದೇವಿ ಅದು ಎಂದಿಗೂ ಸಾಧ್ಯ ಇಲ್ಲ. ನಿಮ್ಮನ್ನು ಈ ಜನ್ಮದಲ್ಲಿ ಕ್ಷಮಿಸಲ್ಲ ಎಂದು ಹೇಳಿದ್ದಾಳೆ.


    ನವರಾತ್ರಿ ಹಬ್ಬ ಜೋರು
    ಶಕುಂತಲಾ ದೇವಿ ಮನೆಯಲ್ಲಿ ಈ ಬಾರಿ ಹಬ್ಬ ಸಿಂಪಲ್ ಅಂದುಕೊಂಡಿದ್ರು. ಮೌರ್ಯ ಇಲ್ಲದ ಕಾರಣ ದೇವರ ಮನೆಯಲ್ಲಿ ಪೂಜೆ ಸಾಕು ಎಂದುಕೊಂಡಿದ್ರು. ಆದ್ರೆ ಶಕುಂತಲಾ ದೇವಿ ದೇವಿಗೆ ಮಾಡೋ ಪೂಜೆ ಸಲ್ಲಲೇ ಬೇಕು. ಯಾರು ಇಲ್ಲ ಅಂದ್ರು ಅಷ್ಟೆ. ಕಳೆದ ವರ್ಷದಂತೆ ಹಬ್ಬ ಗ್ರಾಂಡ್ ಆಗಿ ಇರಲಿ ಎನ್ನುತ್ತಾಳೆ. ಹಬ್ಬದ ವಾತಾವರಣ ಜೋರಾಗಿದೆ. ನಕ್ಷತ್ರ ಅಪ್ಪ-ಅಮ್ಮ ಸಹ ಬಂದಿದ್ದಾರೆ.


    ಇದನ್ನೂ ಓದಿ: Kannadathi: ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ, ಸಾನಿಯಾ ಮಾಡಿದ್ದ ಕುತಂತ್ರನಾ ಇದು?


    ಕತ್ತಲು-ಬೆಳಕಿನ ಬೊಂಬೆ ಆಟದಲ್ಲಿ ನಕ್ಷತ್ರಾ ಜೀವನ
    ದಸರಾ ಹಬ್ಬ ಆದ ಕಾರಣ ಭೂಪತಿ ಅತ್ತಿಗೆ ಮಯೂರಿ ಬೊಂಬೆ ಆಟ ಏರ್ಪಡಿಸಿದ್ದಾರೆ. ಅದರಲ್ಲಿ ನಕ್ಷತ್ರ ಜೀವನದ ಬಗ್ಗೆ ಹೇಳಿದ್ದಾರೆ. ನಕ್ಷತ್ರಾ ಹುಟ್ಟಿದ್ದು, ಅವಳ ಬಾಲ್ಯ, ಅಪ್ಪ, ಅಜ್ಜಿಯ ಕಾಟ ಎಲ್ಲದರ ಬಗ್ಗೆ ಹೇಳ್ತಾರೆ. ಭೂಪತಿ ಗೆಳೆತನ, ಭೂಪತಿ ಮೇಲಿನ ಪ್ರೀತಿ. ನಂತರ ನಿಜವಾದ ಅಪ್ಪ ಸಿಕ್ಕಿದ್ದು, ಭೂಪತಿ ಮದುವೆ ಆಗಿದ್ದು. ಭೂಪತಿಗೆ ನಕ್ಷತ್ರಾ ಮೇಲಿರುವ ಕೋಪ ಎಲ್ಲವನ್ನೂ ಬೊಂಬೆ ಆಟದ ಮೂಲಕ ಹೇಳಿದ್ದಾರೆ.


    Colors Kannada serial, Kannada serial, Lakshana Serial, serial today episode, ಲಕ್ಷಣ ಧಾರಾವಾಹಿ, ಬೊಂಬೆಗಳ ಮೂಲಕ ಭೂಪತಿಗೆ ತನ್ನನ್ನು ಅರ್ಥ ಮಾಡಿಸಿದ ನಕ್ಷತ್ರಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಚಂದ್ರಶೇಖರ್


    ಭೂಪತಿಗೆ ತನ್ನ ತಪ್ಪಿನ ಅರಿವಾಗುತ್ತಾ?
    ಭೂಪತಿ ಮದುವೆ ಆಗೋಕು ಮುಂಚೆ ಬಡವನ ರೀತಿ ನಾಟಕ ಮಾಡ್ತಾ ಇದ್ದ. ಆಗ ನಕ್ಷತ್ರಾ ಮನೆಯಲ್ಲೇ ಬಾಡಿಗೆಗೆ ಇದ್ದ. ಆಗಲೇ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಆದ್ರೆ ನಕ್ಷತ್ರಾ ಭೂಪತಿಯನ್ನು ಇಷ್ಟ ಪಡ್ತಿದ್ಲು. ಅವನು ಶ್ರೀಮಂತ ಎಂದು ಗೊತ್ತಾಗುತ್ತೆ. ಅದಕ್ಕೆ ಅವಳ ತನ್ನ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಆದ್ರೆ ಹೇಗೋ ಮದುವೆ ಆಗುತ್ತೆ. ಈ ಕಥೆ ಕೇಳಿದ ಮೇಲೆಯಾದ್ರೂ ನಕ್ಷತ್ರಾಳನ್ನು ಪ್ರೀತಿಸುತ್ತಾನಾ ನೋಡಬೇಕು.


    ಇದನ್ನೂ ಓದಿ: BBK Season 9: ಪ್ರಶಾಂತ್ ಸಂಬರ್ಗಿ ಮೈಂಡ್ ಗೇಮ್ ಸಕ್ಸಸ್! ನಾಮಿನೇಟ್‍ನಿಂದ ಪಾರಾಗಲು ತಂತ್ರ


    ಯಾವುದೇ ಕ್ಷಣಕ್ಕೂ ಕ್ಷಮೆ ಇಲ್ಲ ಎಂದ ಶಕುಂತಲಾ ದೇವಿ


    ಬೊಂಬೆ ಆಟದ ಮೂಲಕ ಶಕುಂತಲಾ ದೇವಿ ಬಳಿ ಕ್ಷಮೆ ಕೇಳಿದ್ರೂ ಪ್ರಯೋಜನ ಆಗಿಲ್ಲ. ಶಕುಂತಲಾ ದೇವಿ ಕೋಪಗೊಂಡು ಇದು ಎಂದಿಗೂ ಸಾಧ್ಯವಿಲ್ಲ. ಈ ಜನ್ಮದಲ್ಲಿ ನಿಮ್ಮನ್ನು ಕ್ಷಮಿಸಲು ಆಗಲ್ಲ ಎಂದು ಹೇಳಿದ್ದಾರೆ. ಅದಕ್ಕೆ ನಕ್ಷತ್ರಾ, ಚಂದ್ರಶೇಖರ್ ಎಲ್ಲ ಬೇಸರ ಮಾಡಿಕೊಂಡಿದ್ದಾರೆ.


    Colors Kannada serial, Kannada serial, Lakshana Serial, serial today episode, ಲಕ್ಷಣ ಧಾರಾವಾಹಿ, ಬೊಂಬೆಗಳ ಮೂಲಕ ಭೂಪತಿಗೆ ತನ್ನನ್ನು ಅರ್ಥ ಮಾಡಿಸಿದ ನಕ್ಷತ್ರಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶಕುಂತಲಾ ದೇವಿ


    ಇನ್ನು ಮುಂದೆ ಆದ್ರೂ ನಕ್ಷತ್ರಾ-ಭೂಪತಿ ಜೀವನ ಸರಿ ಹೋಗುತ್ತಾ? ಶಕುಂತಲಾ ದೇವಿ ಕ್ಷಮಿಸುತ್ತಾಳಾ? ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.

    Published by:Savitha Savitha
    First published: