Lakshana Serial: ಮೌರ್ಯನ ಬಂಧಿಸಲು ಚಕ್ರವ್ಯೂಹ ರಚಿಸಿದ ಭೂಪತಿ! ಮುಂದಿದೆ ಬಿಗ್ ಟ್ವಿಸ್ಟ್

ಕಲರ್ಸ್ ಕನ್ನಡ ವಾಹಿನಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಲಕ್ಷಣ ಕೂಡ. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಈ ಧಾರಾವಾಹಿ ಯಶಸ್ವಿಯಾಗಿದೆ. 

 ಭೂಪತಿ

ಭೂಪತಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಲಕ್ಷಣ (Lakshana) ಕೂಡ. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಈ ಧಾರಾವಾಹಿ ಯಶಸ್ವಿಯಾಗಿದೆ. ಇದೀಗ ಶಕುಂತಲಾ ದೇವಿಯ ಸೊಸೆಯಾಗಿ ನಕ್ಷತ್ರ ಕಾಲಿರಿಸಿದ ಬಳಿಕ ಆಕೆ ಅನುಭವಿಸುತ್ತಿರುವ ನೋವುಗಳು ಪ್ರೇಕ್ಷಕರಿಗೆ ಬೇಸರ ತರಿಸಿದೆ. ಒಳ್ಳೆಯ ಸ್ನೇಹಿತರಾಗಿದ್ದ ನಕ್ಷತ್ರ ಮತ್ತು ಭೂಪತಿ ಮಧ್ಯೆ ಮದುವೆಯ ಬಳಿಕ ಪ್ರತಿ ವಿಚಾರಗಳನ್ನು ಭಿನ್ನಾಭಿಪ್ರಾಯಗಳು ಎದುರಾಗುತ್ತಿವೆ. ಚಂದ್ರಶೇಖರ್ (Chandrashekhar) ಮಾಡಿದ ಪ್ಲಾನ್ ನಿಂದಾಗಿ ಶ್ವೇತನನ್ನು ಮದುವೆಯಾಗಬೇಕಿದ್ದ ಭೂಪತಿ ನಕ್ಷತ್ರಾಳನ್ನು ಮದುವೆಯಾಗುತ್ತಾನೆ. ಇದೇ ಕಾರಣಕ್ಕೆ ನಕ್ಷತ್ರಾಳನ್ನು ಭೂಪತಿ (Bhup[athi)  ಮತ್ತು ಆತನ ತಾಯಿ ಶಕುಂತಲದೇವಿ ಅತಿಯಾಗಿ ದ್ವೇಷಿಸುತ್ತಿದ್ದಾರೆ.

    ಮೌರ್ಯನನ್ನು ಬಂಧಿಸಲು ಚಕ್ರವ್ಯೂಹ ರಚಿಸಿದ ಭೂಪತಿ

    ಈಗಾಗಲೇ ಹಲವಾರು ಬಾರಿ ನಕ್ಷತ್ರ ಮತ್ತು ಭೂಪತಿಯನ್ನು ಸಂಕಷ್ಟದಲ್ಲಿ ಸಿಲುಕಿಸಿದ ಮೌರ್ಯ ಯಾರಿಗೂ ತಿಳಿಯದಂತೆ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ತಂದಿದ್ದಾನೆ. ಆದರೆ ಇಲ್ಲಿಯವರೆಗೆ ಈ ರೀತಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ಯಾರು ಎನ್ನುವ ಬಗ್ಗೆ‌ ಭೂಪತಿ ಮತ್ತು ನಕ್ಷತ್ರಾಳಿಗೆ ಗೊತ್ತಿಲ್ಲ. ಮೌರ್ಯನನ್ನು ಬಂಧಿಸಲು ಈಗಾಗಲೇ ಹಲವಾರು ಬಾರಿ ಭೂಪತಿ ಪ್ರಯತ್ನಪಟ್ಟಿದ್ದಾನೆ. ಆದರೆ ಮೌರ್ಯ ಪ್ರತಿ ಬಾರಿ ಭೂಪತಿ ಬೀಸಿದ ಬಲೆಯಲ್ಲಿ ಪಾರಾಗುತ್ತಿದ್ದಾನೆ. ಇದೀಗ ನಕ್ಷತ್ರ ತನ್ನ ಮಲತಾಯಿ ಭೇಟಿಯಾಗಲು ತವರು ಮನೆ ಕಡೆಗೆ ಹೋಗಿದ್ದಾಳೆ, ಡ್ರೈವರ್ ಅನ್ನು ಪಾಪಸ್ ಮನೆಗೆ ಕಳುಹಿಸಿ ಭೂಪತಿ ಮೌರ್ಯನನ್ನು ಟ್ರ್ಯಾಪ್ ಮಾಡುವ ಬಗ್ಗೆ ಪ್ಲಾನ್ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಇದಕ್ಕೆ ಪೋಲಿಸ್ ಸಹಕಾರ ಪಡೆದುಕೊಂಡಿದ್ದಾನೆ. ಈ ಬಾರಿ ಯಾವುದೇ ಕಾರಣಕ್ಕೂ ಮೌರ್ಯ ಭೂಪತಿ ಬೀಸಿದ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

    ಇದನ್ನೂ ಓದಿ: Nammane Yuvarani Serial: ಪುಟ್ಟ ಕಂದಮ್ಮ ಸಾಕೇತ್-ಅಹಲ್ಯಾಳ ಮಗಳಾ? ರಾಜ್ ಗುರು ಮನೆಗೆ ಹೊಸ ಅತಿಥಿ ಆಗಮನ!

    ಶ್ವೇತಾಳನ್ನು ಮುಗ್ದೆ ಮತ್ತು ಅಮಾಯಕಿ ಎಂದು ತಿಳಿದುಕೊಂಡಿರುವ ಶಕುಂತಲಾ ದೇವಿಗೆ ಮತ್ತು ಭೂಪತಿಗೆ ಆಕೆಯ ನಿಜರೂಪದ ಬಗ್ಗೆ ತಿಳಿದಿಲ್ಲ ಅಷ್ಟೇ ಅಲ್ಲ ಶ್ವೇತಾಳ ಕುತಂತ್ರ ಬುದ್ಧಿಯ ಬಗ್ಗೆ ಯಾವುದೇ ರೀತಿಯ ವಿಚಾರಗಳು ತಿಳಿದಿಲ್ಲ ಇದೇ ಕಾರಣಕ್ಕೆ ಶ್ವೇತಾಳ ಮೇಲೆ ಎಲ್ಲಿಲ್ಲದ ನಂಬಿಕೆ ಇಟ್ಟುಕೊಂಡಿದ್ದಾರೆ ಶಕುಂತಲಾ ದೇವಿ. ಅಷ್ಟೇ ಅಲ್ಲ ಶ್ವೇತಳನ್ನು ತನ್ನ ಸೊಸೆ ಮಾಡಿಕೊಳ್ಳಬೇಕು ಎನ್ನುವ ಆಸೆಯನ್ನು ಶಕುಂತಲಾದೇವಿ ಇನ್ನೂ ಬಿಟ್ಟಿಲ್ಲ. ಭೂಪತಿಗೆ ಎರಡನೇ ಮದುವೆ ಮಾಡಿಸಿ ಶ್ವೇತಾಳನ್ನು ಮನೆಯ ಸೊಸೆ ಮಾಡಿಕೊಳ್ಳಬೇಕು ಎನ್ನುವ ಪ್ಲಾನ್ ನಲ್ಲಿ ಇದ್ದಾಳೆ ಶಕುಂತಲಾದೇವಿ.

    ಇದನ್ನೂ ಓದಿ: Ramachari Serial: ಅಪ್ಪನ ಆರೋಗ್ಯಕ್ಕಾಗಿ ಮದುವೆಗೆ ಒಪ್ಪುತ್ತಾನಾ ರಾಮಾಚಾರಿ?

    ಶ್ವೇತಾಳ ಮುಂದಿನ ಕಥೆಯೇನು?

    ಶ್ರೀಮಂತಿಕೆಯಲ್ಲೇ ಜೀವನ ನಡೆಸಿದ ಶ್ವೇತಾ ಇದೀಗ ತುಕಾರಾಮ್ ಮನೆಗೆ ಬಂದಿದ್ದಾಳೆ. ಅಲ್ಲಿ ಇನ್ನೇನು ಅವಾಂತರ ಮಾಡಿ ಮನೆಯ ನೆಮ್ಮದಿ ಕೆಡಿಸುತ್ತಾಳೋ ನೋಡಬೇಕಿದೆ.
    ಉಪಾಯದಿಂದ ಶಕುಂತಲಾ ದೇವಿಯ ಮನಸ್ಸು ಕೆಡಿಸಿ ಭೂಪತಿ ಯನ್ನು ಮದುವೆಯಾಗುವ ಉದ್ದೇಶದಿಂದ ಶಕುಂತಲಾ ದೇವಿಯ ಮನೆಗೆ ಹೋಗುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.‌ ಆರಂಭದಿಂದಲೇ ಶಕುಂತಲಾದೇವಿಗೆ ನಕ್ಷತ್ರಾಳನ್ನು ಕಂಡರೆ ಎಲ್ಲಿಲ್ಲದ ಸಿಟ್ಟು. ಇದೀಗ ಅವಳೇ ಭೂಪತಿಯ ಹೆಂಡತಿಯಾಗಿ ಮನೆ ಸೊಸೆ ಆಗಿದ್ದಾಳೆ. ಭೂಪತಿಗೆ ಶ್ವೇತಾಳ ಜೊತೆ ಎರಡನೇ ಮದುವೆ ಮಾಡಿಸುವ ಉದ್ಧೇಶದಿಂದ ನಕ್ಷತ್ರಾಳಿಂದ ವಿಚ್ಛೇದನಕ್ಕೆ ಕೂಡ ಸಹಿ ಹಾಕಿಸಿಕೊಂಡಿದ್ದಾಳೆ ಶಕುಂತಲಾ ದೇವಿ. ಚಂದ್ರಶೇಖರ್ ಆಸ್ತಿ ಮೇಲೆ ಕಣ್ಣಿಟ್ಟ ಶ್ವೇತಾನಿಗೆ ತಕ್ಕ ಶಾಸ್ತ್ರಿ ಮಾಡಿದ್ದಾಳೆ ಆರತಿ. ಪ್ರತಿದಿನ ಹೊಸ ಹೊಸ ನಾಟಕಗಳೊಂದಿಗೆ ಆಸ್ತಿಯನ್ನು ತನ್ನ ಹೆಸರಿಗೆ ಬರಿಸಿಕೊಳ್ಳುವ ತಂತ್ರವನ್ನು ಮಾಡುವಲ್ಲಿ ಶ್ವೇತಾ ಇನ್ನೇನು ಸಕ್ಸಸ್ ಆಗುತ್ತಿದ್ದಾಳೆ ಎನ್ನುವಷ್ಟರಲ್ಲಿ ಅವಳ ಎಲ್ಲಾ ಪ್ಲಾನ್ ಗಳು ಅವಳಿಗೆ ಉಲ್ಟಾ ಹೊಡೆಯುತ್ತಿದೆ.
    Published by:Swathi Nayak
    First published: