Lakshana Serial: ಅಪಾಯದಲ್ಲಿ ಭೂಪತಿ-ನಕ್ಷತ್ರ! ಕಿಡ್ನಾಪ್ ಹಿಂದೆ ಶ್ವೇತಾ ಕೈವಾಡ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಲಕ್ಷಣ. ಪ್ರತಿದಿನ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಮನ ರಂಜಿಸುತ್ತಿರುವ ಧಾರಾವಾಹಿಯು ಉತ್ತಮ ಕಥೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.

 ಲಕ್ಷಣ

ಲಕ್ಷಣ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಲಕ್ಷಣ (Lakshana). ಪ್ರತಿದಿನ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಮನ ರಂಜಿಸುತ್ತಿರುವ ಧಾರಾವಾಹಿಯು ಉತ್ತಮ ಕಥೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಭೂಪತಿ ಮತ್ತು ನಕ್ಷತ್ರ (Naksthra) ನಡುವಿನ ಕ್ಯೂಟ್ ಜಗಳ ನೋಡಲು ಪ್ರೇಕ್ಷಕರು ಕಾಯುತ್ತಾ ಇರುತ್ತಾರೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಸಮಸ್ಯೆಗಳ ಮಧ್ಯೆ ಭೂಪತಿ (Bhupathi) ಮತ್ತು ನಕ್ಷತ್ರ ನಡುವಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಕೂಡ ಕಾಣಿಸುತ್ತಿದೆ. ಧಾರಾವಾಹಿಯಲ್ಲಿ ಇನ್ನೂ ಹೆಚ್ಚಿನ ಪಾತ್ರದಾರಿಗಳ ಪರಿಚಯವಾಗಲು ತಂಡವು ಮಾಡಲಿಲ್ಲ. ನಕ್ಷತ್ರಾ ಜೀವನದಲ್ಲಿ ಎಲ್ಲವೂ ಸರಿಯಾಯಿತು ಅಂದುಕೊಳ್ಳುವಷ್ಟರಲ್ಲಿ ಇದೀಗ ಹೊಸದೊಂದು ಟ್ವಿಸ್ಟ್​ ಎದುರಾಗಿದೆ.

    ಶ್ವೇತಾಳನ್ನು ಮುಗ್ದೆ ಎಂದು ತಿಳಿದುಕೊಂಡಿರುವ ಶಕುಂತಲಾ ದೇವಿ!

    ಚಂದ್ರಶೇಖರ್ ಮಾಡಿದ ಪ್ಲಾನ್ ನಿಂದಾಗಿ ಶ್ವೇತನನ್ನು ಮದುವೆಯಾಗಬೇಕಿದ್ದ ಭೂಪತಿ ನಕ್ಷತ್ರಾಳನ್ನು ಮದುವೆಯಾಗುತ್ತಾನೆ. ಇದೇ ಕಾರಣಕ್ಕೆ ನಕ್ಷತ್ರಾಳನ್ನು ಭೂಪತಿ ಮತ್ತು ಆತನ ತಾಯಿ ಶಕುಂತಲದೇವಿ ಅತಿಯಾಗಿ ದ್ವೇಷಿಸುತ್ತಿದ್ದಾರೆ. ಶ್ವೇತಾಳನ್ನು ಮುಗ್ದೆ ಮತ್ತು ಅಮಾಯಕಿ ಎಂದು ತಿಳಿದುಕೊಂಡಿರುವ ಶಕುಂತಲಾ ದೇವಿಗೆ ಮತ್ತು ಭೂಪತಿಗೆ ಆಕೆಯ ನಿಜರೂಪದ ಬಗ್ಗೆ ತಿಳಿದಿಲ್ಲ ಅಷ್ಟೇ ಅಲ್ಲ ಶ್ವೇತಾಳ ಕುತಂತ್ರ ಬುದ್ಧಿಯ ಬಗ್ಗೆ ಯಾವುದೇ ರೀತಿಯ ವಿಚಾರಗಳು ತಿಳಿದಿಲ್ಲ ಇದೇ ಕಾರಣಕ್ಕೆ ಶ್ವೇತಾಳ ಮೇಲೆ ಎಲ್ಲಿಲ್ಲದ ನಂಬಿಕೆ ಇಟ್ಟುಕೊಂಡಿದ್ದಾರೆ ಶಕುಂತಲಾ ದೇವಿ.

    ಅಷ್ಟೇ ಅಲ್ಲ ಶ್ವೇತಳನ್ನು ತನ್ನ ಸೊಸೆ ಮಾಡಿಕೊಳ್ಳಬೇಕು ಎನ್ನುವ ಆಸೆಯನ್ನು ಶಕುಂತಲಾದೇವಿ ಇನ್ನೂ ಬಿಟ್ಟಿಲ್ಲ. ಭೂಪತಿಗೆ ಎರಡನೇ ಮದುವೆ ಮಾಡಿಸಿ ಶ್ವೇತಾಳನ್ನು ಮನೆಯ ಸೊಸೆ ಮಾಡಿಕೊಳ್ಳಬೇಕು ಎನ್ನುವ ಪ್ಲಾನ್ ನಲ್ಲಿ ಇದ್ದಾಳೆ ಶಕುಂತಲಾದೇವಿ. ನಕ್ಷತ್ರಾಗೆ ಮೊದಲಿಂದಲೂ ಭೂಪತಿ ಅಂದರೆ ಸ್ನೇಹಿತ ಅಷ್ಟೇ ಅಲ್ಲ. ಅದನ್ನೂ ಮೀರಿದ ಪ್ರೀತಿ  ಅವಳಿಗೆ ಭೂಪತಿ ಮೇಲಿದೆ. ಆದರೆ ಅದನ್ನವಳು ಎಲ್ಲೂ ಹೇಳಿಕೊಂಡಿಲ್ಲ.

    ಇದನ್ನೂ ಓದಿ: Pavitra Lokesh: ರಮ್ಯಾ-ಪವಿತ್ರಾ ಲೋಕೇಶ್ ಬಗ್ಗೆ ಕ್ಲ್ಯಾರಿಟಿ ಕೊಟ್ಟ ನರೇಶ್, ಮುಂದೇನು?

    ಶ್ವೇತಾಳ ಮುಂದಿನ ಕಥೆಯೇನು?

    ಶ್ರೀಮಂತಿಕೆಯಲ್ಲೇ ಜೀವನ ನಡೆಸಿದ ಶ್ವೇತಾ ಇದೀಗ ತುಕಾರಾಮ್ ಮನೆಗೆ ಬಂದಿದ್ದಾಳೆ. ಅಲ್ಲಿ ಇನ್ನೇನು ಅವಾಂತರ ಮಾಡಿ ಮನೆಯ ನೆಮ್ಮದಿ ಕೆಡಿಸುತ್ತಾಳೋ ನೋಡಬೇಕಿದೆ.
    ಉಪಾಯದಿಂದ ಶಕುಂತಲಾ ದೇವಿಯ ಮನಸ್ಸು ಕೆಡಿಸಿ ಭೂಪತಿ ಯನ್ನು ಮದುವೆಯಾಗುವ ಉದ್ದೇಶದಿಂದ ಶಕುಂತಲಾ ದೇವಿಯ ಮನೆಗೆ ಹೋಗುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.‌ ಆರಂಭದಿಂದಲೇ ಶಕುಂತಲಾದೇವಿಗೆ ನಕ್ಷತ್ರಾಳನ್ನು ಕಂಡರೆ ಎಲ್ಲಿಲ್ಲದ ಸಿಟ್ಟು. ಇದೀಗ ಅವಳೇ ಭೂಪತಿಯ ಹೆಂಡತಿಯಾಗಿ ಮನೆ ಸೊಸೆ ಆಗಿದ್ದಾಳೆ. ಭೂಪತಿಗೆ ಶ್ವೇತಾಳ ಜೊತೆ ಎರಡನೇ ಮದುವೆ ಮಾಡಿಸುವ ಉದ್ಧೇಶದಿಂದ ನಕ್ಷತ್ರಾಳಿಂದ ವಿಚ್ಛೇದನಕ್ಕೆ ಕೂಡ ಸಹಿ ಹಾಕಿಸಿಕೊಂಡಿದ್ದಾಳೆ ಶಕುಂತಲಾ ದೇವಿ.

    ಇದನ್ನೂ ಓದಿ: Liger: ಬಾಕ್ಸಿಂಗ್ ಲೆಜೆಂಡ್​ ಜನ್ಮದಿನಕ್ಕೆ ವಿಶೇಷವಾಗಿ ವಿಶ್ ಮಾಡಿದ ‘ಲೈಗರ್‘ ಟೀಂ, 56ನೇ ವಸಂತಕ್ಕೆ ಕಾಲಿಟ್ಟ ಮೈಕ್ ಟೈಸನ್

    ಭೂಪತಿಯೇ ಆತನಿಗೆ ತಿಳಿಯದಂತೆ ಈ ಕೆಲಸವನ್ನು ಮಾಡುತ್ತಿರಬಹುದೇ?

    ಅಲ್ಲದೆ ಇದೀಗ ಇತ್ತೀಚಿನ ದಿನಗಳಿಂದ ಭೂಪತಿ ಮತ್ತು ನಕ್ಷತ್ರ ತನಗೆ ತಿಳಿಯದಂತೆ ಕಿಡ್ನಾಪ್ ಆಗುತ್ತಿದ್ದಾರೆ. ಆದರೆ ಇಲ್ಲಿಯ ತನಕ ಯಾರೂ ಕಿಡ್ನಾಪ್ ಮಾಡಿಸುತ್ತಿದ್ದಾರೆ ಎನ್ನುವ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಅಷ್ಟೇ ಅಲ್ಲ ಕಿಡ್ನಾಪ್ ಮಾಡಿದ ವ್ಯಕ್ತಿಯು ಯಾವುದೇ ರೀತಿಯ ಅಪಾಯ ಮಾಡದೆ ಭೂಪತಿ ಮತ್ತು ನಕ್ಷತ್ರಳನ್ನು ಸುಮ್ಮನೆ ಬಿಡುತ್ತಿದ್ದಾರೆ.

    ಭೂಪತಿ ತನಗೆ ತಿಳಿಯದಂತೆ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಸಂಶಯ ಪ್ರೇಕ್ಷಕರಲ್ಲಿ ಬಲವಾಗಿ ಕಾಡುತ್ತಿದೆ. ಹಾಗೆ ತನ್ನ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಈಗಾಗಲೇ ಭೂಪತಿ ಮನಶಾಸ್ತ್ರ ವೈದ್ಯರ ಬಳಿ ಫೋನ್ ಮುಖಾಂತರ ಕೇಳಿದ್ದಾನೆ ಕೂಡ. ಈ ವೇಳೆ ಮನಶಾಸ್ತ್ರಜ್ಞ ನಿನ್ನ ಮನಸ್ಸಿಗೆ ಆದ ಆಘಾತಗಳಿಂದ ನಿನಗೆ ತಿಳಿಯದಂತೆ ನೀನೇ ಈ ರೀತಿ ಮಾಡುತ್ತಿರಲೂಬಹುದು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಬಳಿಕ ಭೂಪತಿ ಗೊಂದಲಕ್ಕೆ ಸಿಲುಕಿದ್ದಾನೆ.
    Published by:Swathi Nayak
    First published: