• Home
  • »
  • News
  • »
  • entertainment
  • »
  • Kendasampige: ತೀರ್ಥನ ಒಳ ಮನಸ್ಸು ಅರಿಯದೇ ಮೋಸ ಹೋಗುತ್ತಿದ್ದಾಳಾ ಸುಮನಾ? ಬೇರೆ ಮದುವೆ ಆಗ್ತಾರಾ ಕಾರ್ಪೊರೇಟರ್!

Kendasampige: ತೀರ್ಥನ ಒಳ ಮನಸ್ಸು ಅರಿಯದೇ ಮೋಸ ಹೋಗುತ್ತಿದ್ದಾಳಾ ಸುಮನಾ? ಬೇರೆ ಮದುವೆ ಆಗ್ತಾರಾ ಕಾರ್ಪೊರೇಟರ್!

ತೀರ್ಥನ ಒಳ ಮನಸ್ಸು ಅರಿಯದೇ ಮೋಸ ಹೋಗುತ್ತಿದ್ದಾಳಾ ಸುಮನಾ?

ತೀರ್ಥನ ಒಳ ಮನಸ್ಸು ಅರಿಯದೇ ಮೋಸ ಹೋಗುತ್ತಿದ್ದಾಳಾ ಸುಮನಾ?

ತೀರ್ಥಂಕರ್ ಗೆ ಸುಮನಾ ಕಂಡ್ರೆ ಇಷ್ಟ ಇಲ್ಲ. ಅನಿವಾರ್ಯವಾಗಿ ಎಲ್ಲರ ಮುಂದೆ ಒಳ್ಳೆವನಾಗಲು ತಾಳಿ ಕಟ್ಟಿದ್ದಾನೆ. ಅದಕ್ಕೆ ಸುಮ್ಮನೇ ಸುಮನಾ ಮುಂದೆ ಮತ್ತೆ ಗೌರವ ಇದೆ ಎನ್ನೋ ತರ ನಾಟಕ ಆಡ್ತಾ ಇದ್ದಾನೆ.

  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮನ ಸಾವಿನ ನೋವನ್ನೇ ಸುಮಿಗೆ ಮರೆಯಲು ಆಗುತ್ತಿಲ್ಲ. ಈ ನಡುವೆ ತನ್ನ ಏರಿಯಾ ಜನರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿದೆ. ಅದಲ್ಲದೇ ವಿಜಯಮ್ಮನ ಮಗ ಕಾಳಿ ಸುಮಿ, ಕಾರ್ಪೊರೇಟರ್  ಗೆ ಸಂಬಂಧ ಇದೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದ. ಸುಮನಾ ಮದುವೆ (Marriage) ಆಗಬೇಕಿದ್ದ ಗಂಡೇ ಪರಾರಿ ಆಗಿದ್ದ ಕಾರಣ, ತೀರ್ಥಂಕರ್  ಸುಮಿಗೆ ತಾಳಿ ಕಟ್ಟುತ್ತಾರೆ. ಅದು ಎಲೆಕ್ಷನ್ (Election) ಗಿಮಿಕ್ ಗಾಗಿ ಮಾತ್ರ.


    ತೀರ್ಥ ಮನೆಯಲ್ಲಿ ಜಗಳ
    ಹೇಳದೇ ಕೇಳದೇ ಸುಮಿಗೆ ತಾಳಿ ಕಟ್ಟಿದ ತೀರ್ಥ ಮನೆಯಲ್ಲಿ ಜಗಳವಾಗಿದೆ. ಅವರ ಅಪ್ಪ ತೀರ್ಥಂಕರ್ ನನ್ನು ಮಾತನಾಡಿಸುವುದು ಬಿಟ್ಟಿದ್ದಾರೆ. ಆಕೆ ಇರೋ ನಾನು ಇರಲ್ಲ ಅಂತಿದ್ದಾರೆ ತೀರ್ಥ ಅತ್ತಿಗೆ. ಸುಮನಾಗೂ ಏನು ಮಾಡಬೇಕು, ಹೇಗೆ ಇರಬೇಕು ಎಂದು ತಿಳಿಯುತ್ತಿಲ್ಲ. ಕಂಗಾಲಾಗಿದ್ದಾಳೆ.


    ಮತ್ತೆ ನಾಟಕ ಆಡ್ತಿರೋ ತೀರ್ಥ
    ತೀರ್ಥಂಕರ್ ಗೆ ಸುಮನಾ ಕಂಡ್ರೆ ಇಷ್ಟ ಇಲ್ಲ. ಅನಿವಾರ್ಯವಾಗಿ ಎಲ್ಲರ ಮುಂದೆ ಒಳ್ಳೆವನಾಗಲು ತಾಳಿ ಕಟ್ಟಿದ್ದಾನೆ. ಅದಕ್ಕೆ ಸುಮ್ಮನೇ ಸುಮನಾ ಮುಂದೆ ಮತ್ತೆ ಗೌರವ ಇದೆ ಎನ್ನೋ ತರ ನಾಟಕ ಆಡ್ತಾ ಇದ್ದಾನೆ. ಸುಮನಾ ತೀರ್ಥಂಕರ್ ನಾಟಕವನ್ನು ನಿಜ ಎಂದುಕೊಂಡಿದ್ದಾಳೆ. ಆತ ಹೇಳಿದಂತೆ ಕೇಳುತ್ತಿದ್ದಾಳೆ.


    ಇದನ್ನೂ ಓದಿ: Kannadathi: ಸಾನಿಯಾ ದೂರು ಕೊಟ್ರೆ ಹರ್ಷ ಜೈಲು ಸೇರ್ತಾನಾ? ಏನಿದು ಬಿಗ್ ಟ್ವಿಸ್ಟ್?


    ಅತ್ತೆಗೆ ಸುಮನಾ ಮೇಲೆ ಕೋಪ
    ಸುಮನಾ ಮನೆಯಲ್ಲಿ ಪಾತ್ರೆ ತೊಳೆಯಲು ಹೋಗಿರುತ್ತಾಳೆ. ಆಗ ಬಂದ ತೀರ್ಥ ಅಮ್ಮ, ಈ ಮನೆಯಲ್ಲಿ ಕೆಲವು ರೂಲ್ಸ್ ಗಳು ಇವೆ. ಅವು ಹಾಗೆ ನಡೆಯುವಂತೆ ಬಿಟ್ಟು ಬಿಡು. ಎಲ್ಲಾ ಹಾಳು ಮಾಡಬೇಡ ಎನ್ನುತ್ತಾಳೆ. ಅದಕ್ಕೆ ಸುಮಿ ಆಯ್ತು ಅತ್ತೆ ಅಂತಾಳೆ. ಅದಕ್ಕೂ ಆಕೆ ಕೋಪ ಮಾಡಿಕೊಳ್ಳುತ್ತಾಳೆ. ಇನ್ಮುಂದೆ ನೀವಾಗಿಯೇ ಸುಮಿ ಎಂದು ಕರೆಯುವ ವರೆಗೂ ಅತ್ತೆ ಅನ್ನಲ್ಲ ಎಂದು ಸುಮನಾ ಹೇಳ್ತಾಳೆ.


    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ತೀರ್ಥನ ಒಳ ಮನಸ್ಸು ಅರಿಯದೇ ಮೋಸ ಹೋಗುತ್ತಿದ್ದಾಳಾ ಸುಮನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್


    ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!
    ಸುಮನಾ ಮದುವೆ ಆಗಿದ್ದನ್ನು ತನ್ನ ಮನೆಯವರ ಬಳಿ ತೀರ್ಥಂಕರ್ ಸಮರ್ಥನೆ ಮಾಡಿಕೊಳ್ತಿದ್ದಾರೆ. ನನ್ನ ಇಷ್ಟು ದಿನದ ಕನಸು ಹಾಳಾಗುತ್ತಿತ್ತು ಎಂದು ಹೇಳ್ತಾನೆ. ಆದ್ರೆ ಮನೆಯವರು ಒಪ್ಪಲು ತಯಾರಿಲ್ಲ. ಕಾರ್ಪೊರೇಟರ್ ಎಲೆಕ್ಷನ್ ಗಾಗಿ ಸುಮನಾಳಿಗೆ ತಾಳಿ ಕಟ್ಟಿದ್ದಾನಂತೆ. ಎಲೆಕ್ಷನ್ ಮುಗಿದ ಮೇಲೆ ಆಕೆಯನ್ನು ಬಿಟ್ಟು, ಮನೆಯವರು ನಿಶ್ಚಯ ಮಾಡಿರೋ ನಿತ್ಯಾಳನ್ನು ಮದುವೆ ಆಗ್ತಾನಂತೆ. ಅದಕ್ಕೆ ನಿತ್ಯ ಸಹ ಒಪ್ಪಿಕೊಂಡಿದ್ದಾಳೆ.


    ಇದನ್ನೂ ಓದಿ: Ramachari: ಮೋಸದಿಂದ ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು ಚಾರು!


    ನಿತ್ಯಾಳಗೆ ಮತ್ತೆ ಸಮರ್ಥನೆ
    ಕಾರ್ಪೊರೇಟರ್ ತೀರ್ಥಂಕರ್ ತಾನು ಮದುವೆ ಆಗ ಬೇಕಿದ್ದ ನಿತ್ಯಾಳಿಗೆ ಮತ್ತೆ ಸಮರ್ಥನೆ ಮಾಡುತ್ತಿದ್ದಾನೆ. ನಿತ್ಯಾ ನಿನ್ನ ಕಂಡ್ರೆ ನನಗೆ ತುಂಬಾ ಪ್ರೀತಿ. ಎಲೆಕ್ಷನ್ ಆಗೋವರೆಗೆ ಕಾಯಿ ನಾನು ನಿನ್ನನ್ನು ಖಂಡಿತವಾಗಿಯೂ ಮದುವೆ ಆಗ್ತೀನಿ ಎಂದು ಹೇಳಿದ್ದಾನೆ. ಅದಕ್ಕೆ ನಿತ್ಯ , ಸರಿ ನೀವೇ ನನ್ನ ಗಂಡ. ನಾನು ಕಾಯ್ತೀನಿ ಎಂದು ಹೇಳಿದ್ದಾಳೆ.

    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ತೀರ್ಥನ ಒಳ ಮನಸ್ಸು ಅರಿಯದೇ ಮೋಸ ಹೋಗುತ್ತಿದ್ದಾಳಾ ಸುಮನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸುಮನಾ


    ಸುಮಿಗೆ ಮದುವೆ ಹೆಸರಲ್ಲಿ ಮೋಸ ಆಯ್ತಾ? ಮತ್ತೆ ತವರು ಮನೆ ಸೇರ್ತಾಳಾ? ಮುಂದೆ ಏನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.

    Published by:Savitha Savitha
    First published: