• Home
 • »
 • News
 • »
 • entertainment
 • »
 • Kendasampige: ಕಾಲೊನಿಯವರು ಕೈ ಬಿಟ್ರೂ, ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಕೈ ಬಿಡಲ್ಲ! ಜನರ ಸಹಾಯಕ್ಕೆ ಬಂದೇ ಬಿಟ್ರು

Kendasampige: ಕಾಲೊನಿಯವರು ಕೈ ಬಿಟ್ರೂ, ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಕೈ ಬಿಡಲ್ಲ! ಜನರ ಸಹಾಯಕ್ಕೆ ಬಂದೇ ಬಿಟ್ರು

 ಜನರ ಸಹಾಯಕ್ಕೆ ಬಂದೇ ಬಿಟ್ರು ಕಾರ್ಪೊರೇಟರ್

ಜನರ ಸಹಾಯಕ್ಕೆ ಬಂದೇ ಬಿಟ್ರು ಕಾರ್ಪೊರೇಟರ್

ಮತ ಹಾಕಿಲ್ಲ ಅಂದ್ರೂ ಪರವಾಗಿಲ್ಲ. ನಾನು ಸದಾ ನಿಮ್ಮ ಸೇವೆಗೆ ಸಿದ್ಧ ಇರುತ್ತೇನೆ ಎಂದು ಕಾರ್ಪೊರೇಟರ್ ತೀರ್ಥಂಕರ್ ಎನ್ನುತ್ತಾರೆ. ಅದಕ್ಕೆ ಕಾಲೋನಿ ಜನ ಖುಷಿ ಆಗ್ತಾರೆ. ತೀರ್ಥಂಕರ್ ಬಂದ ಮೇಲೆ ಕಾಲೋನಿ ಜನರ ಕಷ್ಟ ತೀರಿದಂತೆ.

 • Share this:

  ಕೆಂಡಸಂಪಿಗೆ (Kendasampige) ಅನ್ನೋ ಧಾರಾವಾಹಿ (Serial), ಕಲರ್ಸ್ (Colors Kannada) ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಳು. ಮನೆಯ ಕಷ್ಟಕ್ಕೆ ಹಣ ಬೇಕು ಎಂದು ತಮ್ಮ (Brother) ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಆ ನೋವನ್ನೇ ಸುಮಿಗೆ ಮರೆಯಲು ಆಗುತ್ತಿಲ್ಲ. ಈ ನಡುವೆ ಕಾಲೋನಿ ಜನರಿಗೆ ಕಷ್ಟದ ಮೇಲೆ ಕಷ್ಟ ಬಂದು ಸಹಾಯ (Help) ಮಾಡುವವರು ಇಲ್ಲದಂತಾಗಿದೆ. ಸಹಾಯ ಕೇಳದೇ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಜನರ ಮುಂದೆ ನಿಂತಿದ್ದಾರೆ.


  ಎಲೆಕ್ಷನ್ ಬಹಿಷ್ಕಾರ ಮಾಡಿದ ಕಾಲೋನಿಯವರು


  ಎಲೆಕ್ಷನ್ ಹತ್ತಿರ ಸಮೀಪಿಸುತ್ತಿದ್ದಂತೆ, ಕಾಲೋನಿಯಲ್ಲಿ ಜಗಳಗಳು ಹೆಚ್ಚಾಗುತ್ತಿವೆ. ಚುನಾವಣಿಯಿಂದ ಕಾಲೋನಿ ಒಗ್ಗಟ್ಟು ಒಡೆಯುತ್ತಿದೆ. ಅದಕ್ಕೆ ಜನ ಎಲ್ಲಾ ಸೇರಿ, ಈ ಚುನಾವಣೆಯಿಂದ ನಮ್ಮ ಒಗ್ಗಟ್ಟು ಒಡೆಯಬಾರದು ಎಂದು ಎಲೆಕ್ಷನ್ ಬಹಿಷ್ಕಾರ ಮಾಡಿದ್ದಾರೆ. ಕಾಲೋನಿ ಜನರ ಮತ ತೀರ್ಥಂಕರ್ ಗೆ ತುಂಬಾ ಮುಖ್ಯ. ಇಲ್ಲ ಅಂದ್ರೆ ಅವರು ಗೆಲ್ಲಲು ಆಗಲ್ಲ.


  ಜನರ ಮುಂದೆ ಮನವಿ ಮಾಡಿದ ಕಾರ್ಪೊರೇಟರ್


  ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್‍ಗೆ ಕಾಲೋನಿ ಜನ ಎಲೆಕ್ಷನ್ ಬಹಿಷ್ಕಾರ ಮಾಡಿದ ವಿಚಾರ ತಿಳಿಯುತ್ತೆ. ಅದಕ್ಕೆ ಅವನು ಓಡೋಡಿ ಬಂದು. ಜನರ ಬಳಿ ಮಾತನಾಡುತ್ತಾನೆ. ಆದ್ರೆ ಕಾಲೋನಿ ಜನ ಏನಂದ್ರು ಒಪ್ಪಲ್ಲ. ಸುಮನಾ ನಾನು ಜನರ ತೀರ್ಮಾನಕ್ಕೆ ಜೈ ಅಂದಿದ್ದೀನಿ ಸರ್ ಎನ್ನುತ್ತಾಳೆ.
  ಇದನ್ನೂ ಓದಿ: Anchor Vanshika: ಅಪ್ಪನಂತೆ ಮಗಳಿಗೂ ಟ್ಯಾಲೆಂಟೋ ಟ್ಯಾಲೆಂಟ್! ಮಾಸ್ಟರ್ ಆನಂದ್ ಮಗಳು ವಂಶಿ ಈಗ ನಿರೂಪಕಿ!


  ಕಾಳಿ ದ್ವೇಷಕ್ಕೆ ಕಾಲೋನಿ ವಿಲ ವಿಲ
  ಕಾಳಿಗೆ ಕಾಲೋನಿ ಜನರ ಮೇಲೆ ದ್ವೇಷ ಹುಟ್ಟಿಕೊಂಡಿದೆ. ಅದಕ್ಕೆ ಕಾಲೋನಿವರು ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಕ್ಸ್ ಮಾಡಿದ್ದಾನೆ. ಅದನ್ನು ಕುಡಿದ ಜನ ವಾಂತಿ ಮಾಡಿ ಬಳಲುತ್ತಿದ್ದಾರೆ. ಹಲವರು ಆಸ್ಪತ್ರೆ ಸೇರಿ, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈಗ ಕಾಲೋನಿ ಜನಕ್ಕೆ ಸಹಾಯ ಮಾಡೋರು ಇಲ್ಲ. ಕಾರ್ಪೊರೇಟರ್ ಸಹಾಯ ಕೇಳೋಣ ಎಂದು ಸುಮಿಗೆ ಜನ ಕೇಳ್ತಾರೆ. ಯಾವ ಮುಖ ಇಟ್ಟುಕೊಂಡು ಅವರ ಬಳಿ ಸಹಾಯ ಕೇಳೋದು ಅಂತ ಹೇಳ್ತಾಳೆ.


  ಸುಮಿ


  ಜನರ ಸಹಾಯಕ್ಕೆ ಬಂದೇ ಬಿಟ್ರು ಕಾರ್ಪೊರೇಟರ್ ತೀರ್ಥಂಕರ್
  ಸುಮಿ ಜನರ ಬಳಿ ಅವರ ಬಗ್ಗೆ ಮಾತನಾಡುತ್ತಿರುವಾಗಲೇ, ತೀರ್ಥಂಕರ್ ಅಲ್ಲಿಗೆ ಬರುತ್ತಾರೆ. ಮತ ಹಾಕಿಲ್ಲ ಅಂದ್ರೂ ಪರವಾಗಿಲ್ಲ. ನಾನು ಸದಾ ನಿಮ್ಮ ಸೇವೆಗೆ ಸಿದ್ಧ ಇರುತ್ತೇನೆ ಎಂದು ಕಾರ್ಪೊರೇಟರ್ ತೀರ್ಥಂಕರ್ ಎನ್ನುತ್ತಾರೆ. ಅದಕ್ಕೆ ಕಾಲೋನಿ ಜನ ಖುಷಿ ಆಗ್ತಾರೆ. ತೀರ್ಥಂಕರ್ ಬಂದ ಮೇಲೆ ಕಾಲೋನಿ ಜನರ ಕಷ್ಟ ತೀರಿದಂತೆ.


  Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಕಾಲೋನಿಯವರು ಕೈ ಬಿಟ್ರೂ, ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಕೈ ಬಿಡಲ್ಲ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕಾರ್ಪೊರೇಟರ್ ತೀರ್ಥಂಕರ್


  ಎಲೆಕ್ಷನ್ ಬಹಿಷ್ಕಾರ್ ವಾಪಸ್ ತೆಗೆಯುತ್ತಾರಾ?
  ಕಾರ್ಪೊರೇಟರ್ ತೀರ್ಥಂಕರ್ ಒಳ್ಳೆಯ ಮನಸ್ಸು ನೋಡಿ, ಎಲೆಕ್ಷನ್ ಬಹಿಷ್ಕಾರವನ್ನು ಕಾಲೋನಿ ಜನ ವಾಪಸ್ ಪಡೆಯುತ್ತಾರಾ? ತೀರ್ಥಂಕರ್ ಗೆ ಮತ ಹಾಕ್ತಾರಾ? ಮತ್ತೆ ಅವರನ್ನೇ ಆಯ್ಕೆ ಮಾಡ್ತಾರಾ? ಕಾರ್ಪೊರೇಟರ್ ಆಗಿರುವ ತೀರ್ಥಂಕರ್ ಎಂಎಲ್‍ಎ ಆಗ್ತಾರಾ? ನೋಡಬೇಕು.


  ಇದನ್ನೂ ಓದಿ: DKD Winner: ಸಧ್ವಿನ್-ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ'! ಡಿಕೆಡಿ ಸೀಸನ್ -06ರ ವಿಜೇತ ಜೋಡಿ ಇದು


  ಮುಂದೇನಾಗುತ್ತೆ? ತೀವ್ರ ಕುತೂಹಲ ಮೂಡಿಸುತ್ತಿದೆ ಧಾರಾವಾಹಿ. ಎಲ್ಲದಕ್ಕೂ ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.

  Published by:Savitha Savitha
  First published: