Kendasampige: ಸಂಕಷ್ಟದಲ್ಲಿ ಸುಮನಾ; ಅಪ್ಪನ ಜೀವ ಉಳಿಸಲು ಹೋಗಿ ವಿಜಿ ಅಕ್ಕನ ವ್ಯೂಹದಲ್ಲಿ ಬಂಧಿ

ಸುಮನಾಗೆ ಆ ಕ್ಷಣಕ್ಕೆ ಏನು ಹೇಳಬೇಕೋ ಗೊತ್ತಾಗಿಲ್ಲ. ಅಪ್ಪನ ಪ್ರಾಣ ಉಳಿಸಿಕೊಳ್ಳಲು ದುಡ್ಡು ಬೇಕಾಗಿತ್ತು. ಬೇರೆ ಏನೂ ಯೋಚನೆ ಮಾಡದೇ ದುಡ್ಡು ಪಡೆದು ಆಸ್ಪತ್ರೆಗೆ ಕಟ್ಟಿರುತ್ತಾಳೆ. ಅದಕ್ಕೆ ವಿಜಯ ತನ್ನ ಮಗನನ್ನು ಮದುವೆ ಮಾಡಿಕೊಳ್ಳಲು ಸುಮಿಗೆ ಇಷ್ಟ ಇರಬಹುದು ಎಂದುಕೊಂಡಿದ್ದಾಳೆ.

ಕೆಂಡಸಂಪಿಗೆ

ಕೆಂಡಸಂಪಿಗೆ

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (New Serial) ಕಳೆದ ವಾರದಿಂದ, ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ. ಇನ್ನು ಕಥೆಯ ನಾಯಕ ತೀಥರ್ಂಕರ್ ಪ್ರಸಾದ್. ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್ ಪಾತ್ರ. ಅಪ್ಪನ (Father) ಆಪರೇಷನ್‍ಗೆ (Operation) ದುಡ್ಡು ಪಡೆದ ಸುಮಿ ಸಂಕಷ್ಟದಲ್ಲಿ (Problem) ಸಿಲುಕಿಕೊಂಡಿದ್ದಾಳೆ.

    ಸುಮಿ ತಂದೆಯ ಆಪರೇಷನ್ ಸಕ್ಸಸ್
    ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ತಂದೆ ಪಾತ್ರದಲ್ಲಿ ನಾಗರಾಜ್ ಕೋಟೆ ಅವರು ಅಭಿನಯಿಸುತ್ತಿದ್ದಾರೆ. ಅವರ ಹೆಸರು ರಾಮಯ್ಯ. ಮಗಳಿಗೆ ಸಾಲ ಕೊಟ್ಟ ಕಾಲೋನಿ ಮಹಿಳೆ ವಿಜಯ, ಸುಮಿಯನ್ನು ತನ್ನ ಮಗನಿಗೆ ಮದುವೆ ಮಾಡಿಕೊಡುವಂತೆ ಹೇಳುತ್ತಾಳೆ. ಅದಕ್ಕೆ ರಾಮಯ್ಯ ಒಪ್ಪಲ್ಲ. ಅದಕ್ಕೆ ವಿಜಯ ನಿನ್ನ ಮಗಳು ಹೂವು ಕಟ್ಟಿ ಹೇಗೆ ನನ್ನ ಸಾಲ ತೀರಿಸುತ್ತಾಳೆ ನೋಡ್ತೀನಿ. ನಿನ್ನ ಮಗಳಿಗೆ ಅದ್ಯಾವ ಗಂಡು ತರುತ್ತೀಯಾ ನೋಡ್ತಿನಿ ಎಂದು ಹೇಳಿ ಹೋಗುತ್ತಾಳೆ. ಅದಕ್ಕೆ ಸ್ನೇಹಿತರ ಜೊತೆ ಸಂಪ್ ಕ್ಲೀನ್ ಮಾಡಲು ಹೋಗಿ, ವಿಷ ಅನಿಲ ಸೇವಿಸಿ ಆಸ್ಪತ್ರೆಗೆ ಸೇರಿದ್ದರು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ತಕ್ಷಣವೇ ಆಪರೇಷನ್ ಮಾಡಬೇಕು ಎಂದ ಡಾಕ್ಟರ್
    ಸುಮಿ ತಂದೆ, ಸದ್ಯ ಬದುಕುಳಿದಿದ್ದಾರೆ. ಆದ್ರೆ ಕುಡಿದು ಕುಡಿದು ಅವರ ಕಿಡ್ನಿ ಪ್ರಾಬ್ಲಮ್ ಆಗಿದೆ. ಅದಕ್ಕೆ ಡಾಕ್ಟರ್ ಬೇಗ ಆಪರೇಷನ್ ಮಾಡಿಸಿ, ನಿಮ್ಮ ತಂದೆಯನ್ನು ಉಳಿಸಿಕೊಳ್ಳಿ ಎನ್ನುತ್ತಾನೆ. ಅದಕ್ಕೆ ಸುಮನಾ ಸರಿ ಎಂದು ಸರ್ಕಾರಿ ಆಸ್ಪತ್ರೆಯಿಂದ, ಖಾಸಗಿ ಆಸ್ಪತ್ರೆಗೆ ಸೇರಿಸುತ್ತಾಳೆ. ಅಲ್ಲಿ ಡಾಕ್ಟರ್ 4.5 ಲಕ್ಷ ಬೇಕು ಎನ್ನುತ್ತಾರೆ. ಸಾವಿರಕ್ಕೆ ಹೂ ಕಟ್ಟುವ ಸುಮನಾ, ಲಕ್ಷ ಲಕ್ಷ ದುಡ್ಡು ಬೇಕು ಎಂದು ಕೇಳಿ ಕಂಗಾಲಾಗಿದ್ದಾಳೆ.

    ಇದನ್ನೂ ಓದಿ: Vanshika Film: ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಮಾಸ್ಟರ್ ಆನಂದ್ ಪುತ್ರಿ, ವನ್ಷಿಕಾಗೆ ಆಫರ್ ಮೇಲೆ ಆಫರ್!

    ದುಡ್ಡು ಕೊಟ್ಟು ಮಗನನ್ನು ಮದುವೆ ಮಾಡಿಕೋ ಎಂದ ವಿಜಯ
    ಸುಮಿ ಕಷ್ಟದ ಸಮಯವನ್ನೇ ಬಳಸಿಕೊಂಡ ಕಾಲೋನಿ ಮಹಿಳೆ ವಿಜಯ ಆಸ್ಪತ್ರೆಗೆ ಸುಮಿ ಕೈಗೆ 4.5 ಲಕ್ಷ ತಂದು ಕೊಡುತ್ತಾಳೆ. ದುಡ್ಡು ತಗೋ ನಿಮ್ಮ ಅಪ್ಪನ ಪ್ರಾಣ ಉಳಿಸಿಕೋ ಅಂತಾಳೆ. ಅದಕ್ಕೆ ಬದಲಾಗಿ ತನ್ನ ಮಗನನ್ನು ಮದುವೆ ಮಾಡಿಕೋ ಎಂಬ ಪ್ರಸ್ತಾಪವನ್ನು ಮುಂದಿಡುತ್ತಾಳೆ. ಮಗನಿಗೆ ಕಂಡ ಕಂಡ ಹುಡುಗಿಯರ ಸಹವಾಸ. ಬೇರೆ ಯಾರು ಹೆಣ್ಣು ಕೊಡಲ್ಲ ಎಂದು, ಸುಮಿಯನ್ನು ಗಂಟು ಹಾಕಲು ಈ ರೀತಿ ಮಾಡಿದ್ದಾಳೆ.

    Colors Kannada serial, Kannada serial, Kendasampige Serial, Kendasampige serial cast, watch today episode, Suman in problem, ಕೆಂಡಸಂಪಿಗೆ ಧಾರಾವಾಹಿ, ಹೊಸ ಧಾರಾವಾಹಿ, ಸಂಕಷ್ಟದಲ್ಲಿ ಸುಮನಾ ಜೀವನ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕೆಂಡಸಂಪಿಗೆ


    ಅಪ್ಪನ ಪ್ರಾಣಕ್ಕಾಗಿ ದುಡ್ಡು ಪಡೆದ ಸುಮನಾ
    ಸುಮನಾಗೆ ಆ ಕ್ಷಣಕ್ಕೆ ಏನು ಹೇಳಬೇಕೋ ಗೊತ್ತಾಗಿಲ್ಲ. ಅಪ್ಪನ ಪ್ರಾಣ ಉಳಿಸಿಕೊಳ್ಳಲು ದುಡ್ಡು ಬೇಕಾಗಿತ್ತು. ಬೇರೆ ಏನೂ ಯೋಚನೆ ಮಾಡದೇ ದುಡ್ಡು ಪಡೆದು ಆಸ್ಪತ್ರೆಗೆ ಕಟ್ಟಿರುತ್ತಾಳೆ. ಅದಕ್ಕೆ ವಿಜಯ ತನ್ನ ಮಗನನ್ನು ಮದುವೆ ಮಾಡಿಕೊಳ್ಳಲು ಸುಮಿಗೆ ಇಷ್ಟ ಇರಬಹುದು ಎಂದುಕೊಂಡಿದ್ದಾಳೆ.

    ಸುಮಿ ಮೇಲೆ ವಿಜಯ ಮಗನ ಕೆಟ್ಟ ಕಣ್ಣು
    ಇನ್ನು ವಿಜಯ ದುಡ್ಡು ಕೊಟ್ಟಿರುವುದರಿಂದ ಸುಮಿ ಮೇಲೆ ಆಕೆಯ ಮಗನ ಕೆಟ್ಟ ಕಣ್ಣು ಬಿದ್ದಿದೆ. ಸುಮಿ ಹೂವು ಕಟ್ಟುತ್ತಿದ್ರೆ, ಅಲ್ಲಿಗೆ ಬಂದು ಸುಮಿಗೆ ತೊಂದರೆ ಕೊಡುತ್ತಿದ್ದಾನೆ. ಅಪ್ಪನಿಗಾಗಿ ತನ್ನ ಜೀವನದ ಬಗ್ಗೆಯೇ ಸುಮಿ ಯೋಚನೆ ಮಾಡಿರಲಿಲ್ಲ. ಈಗ ನೋಡಿದ್ರೆ ಸಂಕಷ್ಟ ಎದುರಾಗಿದೆ.

    ಇದನ್ನೂ ಓದಿ: Ramachari: ಅಮ್ಮ-ಮಗಳ ಅನ್ಯಾಯದ ಆಟಕ್ಕೆ ಬ್ರೇಕ್ ಹಾಕಲು ರಾಮಾಚಾರಿ ಪ್ಲ್ಯಾನ್, ಡ್ರಗ್ಸ್ ಸುಳಿಯಿಂದ ಆಚೆ ಬರ್ತಾನಾ?

    ಅವರ ಸಾಲವನ್ನು ತೀರಿಸಿ, ವಿಜಯ ಮಗನ ಕಾಟ ತಪ್ಪಿಸಿಕೊಳ್ತಾಳಾ? ಇಲ್ಲ, ಅವನನ್ನೇ ಮದುವೆ ಆಗಿ ಜೀವನ ಪೂರ್ತಿ ಕಷ್ಟ ಎದುರಿಸುತ್ತಾಳೋ ನೋಡಬೇಕು. ಎಲ್ಲವನ್ನೂ ನೋಡಲು ಕೆಂಡ ಸಂಪಿಗೆ ಧಾರಾವಾಹಿ ನೋಡಬೇಕು.
    Published by:Savitha Savitha
    First published: