• Home
  • »
  • News
  • »
  • entertainment
  • »
  • Kendasampige: ಪರಾರಿಯಾದ ಮದುವೆ ಗಂಡು! ಸುಮಿಗೆ ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್!

Kendasampige: ಪರಾರಿಯಾದ ಮದುವೆ ಗಂಡು! ಸುಮಿಗೆ ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್!

 ಸುಮಿಗೆ ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್

ಸುಮಿಗೆ ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್

ಕಷ್ಟ ಎಂದವರ ಸಹಾಯಕ್ಕೆ ನಾನು ಇರ್ತೀನಿ. ಅದನ್ನು ನಿರೂಪಿಸುವುದಕ್ಕೆ ಸುಮನಾ ಅವರಿಗೆ ತಾಳಿ ಕಟ್ತೀನಿ ಎಂದು ಹೇಳ್ತಾನೆ. ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಶಾಕ್ ಆಗ್ತಾರೆ. ಸುಮನಾಗೆ ತಾಳಿ ಕಟ್ಟಲು ತಾಳಿ ಹಿಡಿದು ನಿಂತಿದ್ದಾರೆ.

  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana) . ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು (Flower) ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮನ ಸಾವಿನ ನೋವನ್ನೇ ಸುಮಿಗೆ ಮರೆಯಲು ಆಗುತ್ತಿಲ್ಲ. ಈ ನಡುವೆ ತನ್ನ ಏರಿಯಾ ಜನರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿದೆ. ಅದಲ್ಲದೇ ವಿಜಯಮ್ಮನ ಮಗ ಕಾಳಿ ಸುಮಿ, ಕಾರ್ಪೊರೇಟರ್ ಗೆ ಸಂಬಂಧ ಇದೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದಾನೆ. ಆಕೆಯನ್ನು ಯಾರೂ ಮದುವೆ (Marriage) ಮಾಡಿಕೊಳ್ಳದಂತೆ ಮಾಡ್ತೀನಿ ಅಂತಿದ್ದ. ಅದಕ್ಕೆ ಅದಕ್ಕೆ ಕಾರ್ಪೊರೇಟರ್ ನಾನು ಮದುವೆ ಮಾಡಿಸ್ತೀನಿ ಅಂದಿದ್ರು. ಆದ್ರೆ ಗಂಡೇ ಪರಾರಿ ಆಗಿದ್ದಾನೆ. ಈಗ ತೀರ್ಥಂಕರ್ ಸುಮಿಗೆ ತಾಳಿ ಕಟ್ಟಲು ಮುಂದಾಗಿದ್ದಾರೆ.


    ಮದುವೆಗೆ ರೆಡಿಯಾಗಿ ಬಂದ ಸುಮನಾ
    ತೀರ್ಥಂಕರ್ ಮಾಡಿಸುತ್ತಿರುವ ಸಾಮೂಹಿಕ ವಿವಾಹದಲ್ಲೇ ಸುಮನಾ ಮದುವೆ ಸಹ ನಡೆಯಲಿದೆ. ಅದಕ್ಕೆ ಸುಮನಾ ಮದುವೆ ಅಲಂಕಾರ ಮಾಡಿಕೊಂಡು ಮದುವೆ ನಡೆಯೋ ಜಾಗಕ್ಕೆ ಬಂದಿದ್ದಾಳೆ. ಸುಮಿಯನ್ನು ಮದುವೆ ಅಲಂಕಾರದಲ್ಲಿ ನೋಡಿ ಮನೆಯರೆಲ್ಲಾ ಖುಷಿ ಆಗಿದ್ದಾರೆ. ಅಂತು ಆಕೆಯ ಕಷ್ಟ ಮುಗಿಯಿತು ಎಂದು ಖುಷಿಯಾಗಿದ್ದಾರೆ.


    ಮದುವೆ ಗಂಡು ಪರಾರಿ
    ಸುಮನಾ ಮದುವೆ ಆಗಬೇಕಿದ್ದ ಗಂಡು ಬಂದಿಲ್ಲ. ಪರಾರಿ ಆಗಿದ್ದಾನೆ. ಕಾಳಿ, ಮದುವೆ ಆಗೋ ಹುಡುಗನನ್ನೂ ಸಹ ತಲೆ ಕೆಡಿಸಿದ್ದಾನೆ. ಕಾರ್ಪೊರೇಟರ್ ಜೊತೆ ಸುಮಿ ಸಂಬಂಧ ಇಟ್ಟುಕೊಂಡಿದ್ದಾಳೆ. ಅದಕ್ಕೆ ನಿನಗೆ ಗಂಟು ಹಾಕ್ತಿದ್ದಾನೆ ಎಂದು ಹೇಳಿದ್ದಾನೆ. ಅದನ್ನು ಕೇಳಿದ ಗಂಡು ಪರಾರಿ ಆಗಿದ್ದಾನೆ.


    ಇದನ್ನೂ ಓದಿ: Malavika Avinash: ರಾಜ್‍ಕುಮಾರ್ ಹೇಳಿದ್ದು ಕೇಳಿದ್ವಿ, ಮಾಳವಿಕಾ ಅವಿನಾಶ್ ಬಾಯಲ್ಲಿ ನೀವೂ ಈ ಡೈಲಾಗ್ ಕೇಳಲೇಬೇಕು


    ಮದುವೆ ಜಾಗಕ್ಕೆ ಬಂದ ಕಾಳಿ
    ಕಾಳಿ ಮತ್ತೆ ಸಾಮೂಹಿಕ ವಿವಾಹ ನಡೆಯುವ ಜಾಗಕ್ಕೆ ಬಂದಿದ್ದಾನೆ. ನೆರೆದಿರುವ ಜನರ ಮುಂದೆ ಕಾಳಿ ಮತ್ತೆ ಕಾರ್ಪೊರೇಟರ್ ತೀರ್ಥಂಕರ್ ಮತ್ತು ಸುಮನಾ ಮಧ್ಯೆ ಸಂಬಂಧ ಕಲ್ಪಿಸುತ್ತಿದ್ದಾನೆ. ನಮ್ಮ ಏರಿಯಾ ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಅವಳನ್ನು ಬೇರೆಯವರಿಗೆ ಆಕೆಯನ್ನು ಮದುವೆ ಮಾಡಿಕೊಡಲು ಮುಂದಾಗಿದ್ದಾನೆ. ಆದ್ರೆ ಈಗ ಆ ಹುಡುಗ ಪರಾರಿ ಆಗಿದ್ದಾನೆ. ಈಗ ಸುಮನಾ ಬದುಕಿನ ಕಥೆ ಏನು ಅಂತ ಎಲ್ಲರ ಮುಂದೆ ಪ್ರಶ್ನೆ ಮಾಡ್ತಾನೆ.


    Colors Kannada serial, Kannada serial, Kendasampige Serial, Kendasampige serial cast, Sumana Marriage today, ಕೆಂಡಸಂಪಿಗೆ ಧಾರಾವಾಹಿ, ಸುಮಿಗೆ ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕಾಳಿ


    ತಾಕತ್ತಿದ್ರೆ ನೀನೇ ಮದುವೆ ಆಗು ಎಂದು ಕಾಳಿ ಸವಾಲ್
    ಕಾರ್ಪೊರೇಟರ್ ಈ ಕೂಡಲೇ ಸುಮನಾ ಅವರಿಗೆ ಒಂದು ಒಳ್ಳೆ ಗಂಡು ನೋಡಿ ಮದುವೆ ಮಾಡಿಸುತ್ತೇನೆ ಎನ್ನುತ್ತಾನೆ. ಇದೇ ಮುಹೂರ್ತದಲ್ಲಿ ಸುಮನಾ ಅವರಿಗೆ ಮದುವೆ ಮಾಡಿಸುತ್ತೇನೆ ಎನ್ನುತ್ತಾರೆ. ಅದಕ್ಕೆ ಕಾಳಿ ಬೇರೆಯವರು ಏಕೆ? ತಾಕತ್ತಿದ್ರೆ ನೀನೇ ಸುಮನಾ ಮದುವೆ ಆಗು ಎಂದು ಸವಾಲು ಹಾಕ್ತಾನೆ.


    Colors Kannada serial, Kannada serial, Kendasampige Serial, Kendasampige serial cast, Sumana Marriage today, ಕೆಂಡಸಂಪಿಗೆ ಧಾರಾವಾಹಿ, ಸುಮಿಗೆ ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕಾರ್ಪೊರೇಟರ್ ತೀರ್ಥಂಕರ್


    ತಾಳಿ ಕಟ್ಟಲು ಮುಂದಾದ ಕಾರ್ಪೊರೇಟರ್
    ಕಾಳಿ ಹಾಕಿದ ಸವಾಲ್‍ಗೆ ಕಾರ್ಪೊರೇಟರ್ ತೀರ್ಥಂಕರ್, ಕಷ್ಟ ಎಂದವರ ಸಹಾಯಕ್ಕೆ ನಾನು ಇರ್ತೀನಿ. ಅದನ್ನು ನಿರೂಪಿಸುವುದಕ್ಕೆ ಸುಮನಾ ಅವರಿಗೆ ತಾಳಿ ಕಟ್ತೀನಿ ಎಂದು ಹೇಳ್ತಾನೆ. ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಶಾಕ್ ಆಗ್ತಾರೆ. ಸುಮನಾಗೆ ತಾಳಿ ಕಟ್ಟಲು ತಾಳಿ ಹಿಡಿದು ನಿಂತಿದ್ದಾರೆ.


    ಇದನ್ನೂ ಓದಿ: Paaru 1000 Episode: ಪಾರುಗೆ 1000 ಸಂಚಿಕೆಗಳ ಸಂಭ್ರಮ, ಧಾರಾವಾಹಿ ತಂಡ ಖುಷ್


    ಹಾಗಾದ್ರೆ ಸುಮಿಗೆ ಕಾರ್ಪೊರೇಟರ್ ತಾಳಿ ಕಟ್ತಾರಾ? ಅದಕ್ಕೆ ತೀರ್ಥಂಕರ್ ಮನೆಯವರು ಒಪ್ತಾರಾ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: