Kannadathi Serial: ಸೈಕೋ ವರೂಧಿನಿಯ ಮುಂದಿನ ನಡೆ ಏನು? ಮುಂದೆ ಇದೆಯಾ ಬಿಗ್ ಟ್ವಿಸ್ಟ್

ಕನ್ನಡದ ಮದುವೆ ಎಂಬ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡತಿ ತಂಡವು ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯವನ್ನು ಮಾಡಿದೆ.

ವರೂಧಿನಿ

ವರೂಧಿನಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿ ಪ್ರಸಾರ ಕೂತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಕೂಡ ಒಂದು. ಭುವನೇಶ್ವರಿ (Bhuvaneshwari)  ಮತ್ತು ಹರ್ಷಕುಮಾರ್ (Harsha Kumar) ನಡುವಿನ ಕ್ಯೂಟ್ ಲವ್ ಸ್ಟೋರಿ (Love Story) ವೀಕ್ಷಕರಿಗೆ ಅಚ್ಚುಮೆಚ್ಚು. ಇದೀಗ ಭುವನೇಶ್ವರಿ ಮತ್ತು ಹರ್ಷ ಮದುವೆ ಸಂಚಿಕೆಗಳನ್ನು ಬಹಳ ಚೆನ್ನಾಗಿ ಮೂಡಿ ಬಂದಿದೆ. ಕನ್ನಡದ ಮದುವೆ ಎಂಬ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡತಿ ತಂಡವು ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯವನ್ನು ಮಾಡಿದೆ. ಕನ್ನಡದ ಮದುವೆಯಾದ ಹರ್ಷಕುಮಾರ್ ಮತ್ತು ಭುವನೇಶ್ವರಿ ಶಾಸ್ತ್ರೋಕ್ತವಾಗಿ ಎಲ್ಲಾ ಕಾರ್ಯಗಳನ್ನು ನಡೆಸಿ ಪ್ರೇಕ್ಷಕರಿಗೆ ತಿಳಿಸುವಲ್ಲಿ ಕೂಡ ಯಶಸ್ವಿಯಾಗಿದೆ.

    ಹರ್ಷನ ಮನೆಗೆ ಜೂನಿಯರ್ ಅಮ್ಮಮ್ಮನ ಎಂಟ್ರಿ

    ಅಮ್ಮಮ್ಮ ಆರಿಸಿದ ಹುಡುಗಿಯನ್ನು ಇಷ್ಟಪಟ್ಟಹರ್ಷ ಈ ಮದುವೆಯನ್ನು ಆಗಿದ್ದಾನೆ. ಈಗಾಗಲೇ ಹರ್ಷ ಭೂವಿ ಒಬ್ಬರನ್ನೊಬ್ಬರು ಬಹಳ ಇಷ್ಟಪಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹರ್ಷನ ಬಾಳಲ್ಲಿ ಅಮ್ಮಮ್ಮನ ಕರ್ತವ್ಯವನ್ನು ನಿಭಾಯಿಸುವಲ್ಲಿ ಭುವನೇಶ್ವರಿಯು ಯಶಸ್ವಿಯಾಗುತ್ತಾಳೆ ಎನ್ನುವ ನಂಬಿಕೆ ರತ್ನಮಾಲ ಅವರಿಗೆ ಇದೆ.

    ಮದುವೆಯೆಂಬ ಬಂಧನದಲ್ಲಿ ಆಸಕ್ತಿಯೇ ತೋರಿಸಿ ಹರ್ಷ ಆರಂಭದಲ್ಲಿ ಅಮ್ಮಮ್ಮನ ಒತ್ತಾಯಕ್ಕೆ ಮದುವೆಯಾಗಲು ಒಪ್ಪಿಕೊಂಡಿದ್ದರು ಕ್ರಮೇಣ ಹರ್ಷ ಮತ್ತು ಭುವನೇಶ್ವರಿ ನಡುವೆ ಪ್ರೀತಿ ಹುಟ್ಟಿತ್ತು. ಅಷ್ಟೇ ಅಲ್ಲದೆ ಹರ್ಷನ ಈ ಆಯ್ಕೆಯನ್ನು ಅಮ್ಮಮ್ಮ ಕೂಡ ಮೆಚ್ಚಿದ್ದರು. ಇದೀಗ ಅಮ್ಮಮ್ಮನ ಆರೋಗ್ಯದ ತೀರಾ ಹದಗೆಡುತ್ತಿದೆ. ಅಷ್ಟೇ ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಅಮ್ಮಮ್ಮ ಹೊರದೇಶಕ್ಕೆ ಕೂಡ ಹೋಗಿದ್ದಾರೆ.

    ಭುವಿಗೆ ಅಮ್ಮಮ್ಮನ  ಕರೆ

    ಹೊರದೇಶದಲ್ಲಿ ಇದ್ದುಕೊಂಡು ತನ್ನ ಕರ್ತವ್ಯವನ್ನು ನಿಭಾಯಿಸುವ ಬಗ್ಗೆ ಅಮ್ಮಮ್ಮ ಎಂದೂ ಮರೆತಿಲ್ಲ. ಅಷ್ಟೇ ಅಲ್ಲದೆ ಭುವನೇಶ್ವರಿಯ ಬಳಿ ಫೋನ್ ಮುಖಾಂತರ ತನ್ನ ಕರ್ತವ್ಯಗಳ ಬಗ್ಗೆ ಹೇಳಿದ್ದಾರೆ ಕೂಡ.

    ಅದೇ ರೀತಿ ಮನೆಮಂದಿ ಎಲ್ಲರೂ ಭುವನೇಶ್ವರಿಯನ್ನು ಜೂನಿಯರ್ ಅಮ್ಮಮ್ಮ ಎಂದು ಕರೆಯಲು ಕೂಡ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಹರ್ಷ ಕೂಡ ತನ್ನ ತಾಯಿಯನ್ನು ಭುವನೇಶ್ವರಿಯಲ್ಲಿ ಕಾಣುತ್ತಿದ್ದಾನೆ.

    ಅಮ್ಮಮ್ಮನ ಮುಂದಿನ ನಡೆ ಏನು ಬಗ್ಗೆ ಮನೆಯಲ್ಲಿ ಯಾರಿಗೂ‌ ಗೊತ್ತಿಲ್ಲ. ಮಾಲಾ ಇನ್ಸ್ಟಿಟ್ಯೂಷನ್ ಮತ್ತು ರತ್ನಮಾಲಾ ಅವರ ಸಂಪೂರ್ಣ ಆಸ್ತಿ ಬಗ್ಗೆ ವಿಪರೀತ ಆಸೆ ಇಟ್ಟುಕೊಂಡಿರುವ ಸಾನಿಯಾ ಅಮ್ಮಮ್ಮನ ಮುಂದಿನ ನಡೆಯ ಬಗ್ಗೆ ಅತಿಯಾಗಿ ಯೋಚಿಸುತ್ತಿದ್ದಾಳೆ.

    ಇದನ್ನೂ ಓದಿ: Nannarasi Radhe Serial: ಅಶ್ವಿನಿಯ ನಿಜರೂಪ ಬಯಲು ಮಾಡಿಬಿಟ್ಲಾ ಲಾವಣ್ಯ? ಮುಂದಿದೆ ಬಿಗ್ ಟ್ವಿಸ್ಟ್

    ಮರಳಿ ಧಾರಾವಾಹಿಗೆ ಬರುತ್ತಾರಾ ಅಮ್ಮಮ್ಮ ?

    ಈಗಾಗಲೇ ಅಮ್ಮಮ್ಮ ತನ್ನ ಕರ್ತವ್ಯವನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸಿ ಹರ್ಷ ಮತ್ತು ಭುವನೇಶ್ವರಿಯ ಮದುವೆಯನ್ನು ನಡೆಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ತನ್ನ ಆರೋಗ್ಯವು ಎಷ್ಟು ಹದಗೆಟ್ಟಿದ್ದರೂ ಹರ್ಷನ ಮದುವೆ ಕಣ್ತುಂಬ ನೋಡಿ ಹೋಗಬೇಕು ಎನ್ನುವ ಉದ್ದೇಶದಿಂದ ತಾಪ್ಸಿ ಮತ್ತು ದೇವ್ ಸಹಾಯದಿಂದ ಪೇನ್ ಕಿಲ್ಲರ್ ಇಂಜೆಕ್ಷನ್ ಅನ್ನು ಕೂಡ ತೆಗೆದುಕೊಳ್ಳುತ್ತಿದ್ದರು.

    ಇದೀಗ ಅಮ್ಮಮ್ಮ ಹೆಚ್ಚಿನ ಚಿಕಿತ್ಸೆಗಾಗಿ ಹೊರದೇಶಕ್ಕೆ ಹೋಗಿದ್ದಾರೆ. ಮುಂದೆ ಅವರು ಮರಳಿ ಬರುತ್ತಾರೆ ಇಲ್ಲವೇ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.

    ಇದನ್ನೂ ಓದಿ: Gattimela Serial: ಅಪಾಯದಲ್ಲಿದ್ದ ಅದಿತಿಯನ್ನು ಪಾರು ಮಾಡಿದ ಆದ್ಯ? ಮುಂದಿದೆ ಬಿಗ್ ಟ್ವಿಸ್ಟ್

    ವರೂಧಿನಿಯ ಮುಂದಿನ ನಡೆ ಏನು ?

    ತನ್ನ ಹೀರೋನನ್ನು ಪಡೆದುಕೊಳ್ಳಲು ಆಗಲಿಲ್ಲ ಎನ್ನುವ ದ್ವೇಷದಿಂದ ಇದೀಗ ವರೂಧಿನಿ ಭುವನೇಶ್ವರಿಯನ್ನು ದ್ವೇಷಿಸಲು ಆರಂಭಿಸಿದ್ದಾಳೆ. ಅಷ್ಟೇ ಅಲ್ಲದೆ ಮದುವೆಯ ದಿನ ತನ್ನ ಜೀವವನ್ನು ಕಳೆದುಕೊಳ್ಳುವ ನಾಟಕವಾಡಿ ಹರ್ಷ ಮತ್ತು ಭುವನೇಶ್ವರಿಯ ಮದುವೆಯನ್ನು ಆಸ್ಪತ್ರೆಯಲ್ಲಿ ನಡೆಸುವಂತೆ ಮಾಡಿದ್ದಳು ವರೂಧಿನಿ.

    ಇದೀಗ ವರೂಧಿನಿಯ ಮುಂದಿನ ನಡೆ ಏನು ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ. ಅಷ್ಟೇ ಅಲ್ಲದೆ ಸೈಕೋ ವರೂಧಿನಿ ರತ್ನಮಾಲಾ ಅವರ ಪಿಎ ಕೂಡ ಹೌದು. ರತ್ನಮಾಲಾ ಅವರು ಹೇಳಿದಂತೆ ಈಗ ವರೂಧಿನಿ ಹರ್ಷನ ಮನೆಗೆ ಬಂದಿದ್ದಾಳೆ.
    ಮುಂದೆ ಆಕೆ ಹೀರೋನನ್ನು ಪಡೆದೇ ಪಡೆಯುತ್ತೇನೆ ಎನ್ನುವ ದೃಢ ವಿಶ್ವಾಸದಲ್ಲಿ ಇದ್ದಾಳೆ.

    ನನ್ನ ಹೀರೋನನ್ನು ಪಡೆಯಬೇಕಾದರೆ ಎಂತಹ ನೀಚ ಕೆಲಸಕ್ಕಾದರೂ ಇಳಿಯುತ್ತಾಳೆ ವರೂಧಿನಿ. ಮುಂದೆ ಹರ್ಷ ಮತ್ತು ಭುವನೇಶ್ವರಿಯ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತಾಳಾ ಎನ್ನುವ ಬಗ್ಗೆ ಕಾದುನೋಡಬೇಕಿದೆ.
    Published by:Swathi Nayak
    First published: