Kannadathi Serial: ಸುಸೂತ್ರವಾಗಿ ನಡೆಯುತ್ತಾ ಹರ್ಷ ಭುವಿ ಮದುವೆ? ಕನ್ನಡತಿಯಲ್ಲಿ ಬಿಗ್ ಟ್ವಿಸ್ಟ್

ಹರ್ಷ ಕುಮಾರ್ ಮತ್ತು ಭುವನೇಶ್ವರಿ ಮದುವೆಯ ತಯಾರಿ ಬಾರಿ ಜೋರಾಗಿ ನಡೆಯುತ್ತಿದೆ. ಕನ್ನಡದ ಮದುವೆಯಾಗಿ ಎಲ್ಲಾ ಶಾಸ್ತ್ರಗಳನ್ನು ವ್ಯವಸ್ಥಿತವಾಗಿ ಮಾಡಿ ಮದುವೆಯಾಗುತ್ತಿರುವ ಈ ಜೋಡಿಗೆ ಅಭಿಮಾನಿಗಳ ಬಳಗವೇ ಇದೆ.

ಕನ್ನಡತಿ

ಕನ್ನಡತಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಕೂಡ ಒಂದು. ಇದೀಗ ಕನ್ನಡತಿ ಧಾರಾವಾಹಿಯಲ್ಲಿ ಮದುವೆಯ ಸಂಚಿಕೆಗಳು ಪ್ರಸಾರಗೊಳ್ಳುತ್ತಿದೆ. ಹರ್ಷ ಕುಮಾರ್ (Harsha Kumar) ಮತ್ತು ಭುವನೇಶ್ವರಿ (Bhuvaneshwari) ಮದುವೆಯ ತಯಾರಿ ಬಾರಿ ಜೋರಾಗಿ ನಡೆಯುತ್ತಿದೆ. ಕನ್ನಡದ ಮದುವೆಯಾಗಿ ಎಲ್ಲಾ ಶಾಸ್ತ್ರಗಳನ್ನು ವ್ಯವಸ್ಥಿತವಾಗಿ ಮಾಡಿ ಮದುವೆಯಾಗುತ್ತಿರುವ ಈ ಜೋಡಿಗೆ ಅಭಿಮಾನಿಗಳ ಬಳಗವೇ ಇದೆ. ಆದರೆ ಸಂತೋಷವನ್ನು ಹಾಳು ಮಾಡಲು ಇದೀಗ ವರೂಧಿನಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಸೈಕೋ ವರೂಧಿನಿ (Varudhini) ಕುತಂತ್ರದಿಂದ ಹರ್ಷನನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿ ಕುಳಿತಿದ್ದಾಳೆ ವರೂ‌.

    ವರೂಧಿನಿಯೊಂದಿಗೆ ಸೇರಿಕೊಂಡ ಕುತಂತ್ರಿ ಸಾನಿಯ 

    ಸಪ್ತಪದಿ ವೆಡ್ಡಿಂಗ್ ಪ್ಲಾನ್ ಅಡಿಯಲ್ಲಿ ಮದುವೆಯು ನಡೆಯುತ್ತಿದೆ. ಮದುವೆಯ ಶುರುವಾದ ಶುರುವಾದ ಬಳಿಕವಂತೂ ವರೂಧಿನಿ ಹಲವಾರು ಬಾರಿ ನನ್ನ ಹೀರೋನನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ಕುತಂತ್ರಿ ಸಾನಿಯ ಕೂಡ ಈಗ ವರೂಧಿನಿಯೊಂದಿಗೆ ಸೇರಿಕೊಂಡಿದ್ದಾಳೆ. ಕಳೆದ ಸಂಚಿಕೆಯಲ್ಲಿ ಹರ್ಷನಿಗೆ ಜ್ಯೂಸ್ ನಲ್ಲಿ ಯಾವುದೋ ಮದ್ದಿನ ಪುಡಿಯನ್ನು ಕೂಡ ಹಾಕಿ ಹರ್ಷ ತನ್ನನೇ ಮದುವೆಯಾಗುವಂತೆ ಮಾಡುವ ಪ್ಲಾನ್ ಕೂಡ ಮಾಡಿದ್ದಳು ಸೈಕೋ ವರೂಧಿನಿ. ಆದರೆ ಹರ್ಷ ಅದನ್ನು ಕುಡಿಯದೆ ಅವಳ ಪ್ಲಾನ್ ಎಲ್ಲಾ ಉಲ್ಟಾ ಆಗಿ ಹೋಯಿತು. ಇದೀಗ ಮತ್ತೆ ಗೌರಿ ಪೂಜೆ ಸಮಯದಲ್ಲಿ ಭುವಿ ಹೇಗೆ ಮದುಮಗಳಂತೆ ಹೋರಟಿದ್ದಾಳೋ ಅದೇ ‌ರೀತಿ ವರೂ ಕೂಡ ಹೊರಟು ನಿಂತಿದ್ದಾಳೆ.

    ಇದನ್ನೂ ಓದಿ: Kamali Serial: ಯಶಸ್ವಿಯಾಗಿ 1100 ಸಂಚಿಕೆ ಪೂರೈಸಿದ ಕಮಲಿ ಧಾರಾವಾಹಿ! ಮುಂದಿನ ಬಿಗ್​ ಟ್ವಿಸ್ಟ್ ಏನು?

    ಹೀರೋ ಪ್ರೀತಿಗೋಸ್ಕರ ಏನು ಮಾಡಲು ಸಿದ್ಧಳಿರುವ ವರೂ

    ವರೂಧಿನಿಗೆ ಹರ್ಷನ ಮೇಲೆ ಎಲ್ಲಿಲ್ಲದ ಪ್ರೀತಿ. ನನ್ನ ಪ್ರೀತಿಗೋಸ್ಕರ ಏನು ಮಾಡಲು ಸಿದ್ಧರಿದ್ದಾಳೆ ವರೂ, ಆದರೆ ಹರ್ಷ ಎಂದಿಗೂ ವರೂ ಅನ್ನು ಪ್ರೀತಿಯ ಭಾವನೆಯಿಂದ ನೋಡಿದವನಲ್ಲ ಅದನ್ನು ಅವಳಿಗೆ ಸಾಕಷ್ಟು ಬಾರಿ ಹೇಳಿದ್ದಾನೆ ಕೂಡ. ವರೂಧಿನಿ ಇದನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹೊರ ನೋಟದಲ್ಲಿ ತನ್ನ ಬೆಸ್ಟ್ ಫ್ರೆಂಡ್ ಮದುವೆಯ ವಿಚಾರದಲ್ಲಿ ಸಂತೋಷ ಇದೆ ಎಂದು ತೋರಿಸುತ್ತಿರುವ ವರೂ ಮನಸ್ಸಿನಲ್ಲಿ ‌ಸಾಕಷ್ಟು ನೋವು ಮತ್ತೆ ಅಸಹನೆ‌ ಅಡಗಿದೆ.

    ಇದೀಗ ಮತ್ತೆ ವರೂಧಿನಿಯ ಮನಸಲ್ಲಿ ತನ್ನ ಹೀರೋನ ಜೊತೆ ಮದುವೆಯಾಗಬೇಕೆನ್ನುವ ಬಯಕೆ ಹುಟ್ಟಿದೆ. ಭೂಮಿ ಹಾಗೂ ಹರ್ಷ ಜೊತೆಯಾಗಿ ಸಮಯ ಕಳೆಯುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ವರೂಧಿನಿ.  ಕಳೆದ ಸಂಚಿಕೆಯಲ್ಲಿ ಹರ್ಷನನ್ನು ನಾನೇ ಮದುವೆಯಾಗುತ್ತೇನೆ ಎಂದು ಬಹಳ ದೃಢವಾಗಿ ಹೇಳಿದ್ದಾಳೆ ವರೂಧಿನಿ. ಈ ಹಿಂದೆ ಎಂಗೇಜ್ಮೆಂಟ್ ನಲ್ಲೂ ಭುವಿಯ ರಿಂಗ್ ತನ್ನಲ್ಲೇ ಇಟ್ಟುಕೊಂಡು ಎಂಗೇಜ್ಮೆಂಟ್ ನಿಲ್ಲಿಸಲು ಹೊರಟಿದ್ದಳು ವರೂಧಿನಿ.

    ಇದನ್ನೂ ಓದಿ: Raaji Serial: ಬಾಲ್ಯದ ಗೆಳೆಯ ಕರ್ಣನನ್ನೇ ಮದುವೆಯಾಗ್ತಾಳಾ ರಾಜೇಶ್ವರಿ? ರಾಜಿ ಧಾರವಾಹಿಯಲ್ಲಿ ಇದೇನಿದು ಬಿಗ್ ಟ್ವಿಸ್ಟ್

    ಹದಗೆಡುತ್ತಿರುವ ಅಮ್ಮಮ್ಮನ ಆರೋಗ್ಯ

    ಇತ್ತ ಮದುವೆ ಮನೆಯಲ್ಲಿ ಖುಷಿಯಾಗಿ ಓಡಾಡಿಕೊಂಡು ಇರಬೇಕಾದ ಅಮ್ಮಮ್ಮನ ಆರೋಗ್ಯ ತೀರಾ ಹದಗೆಡುತ್ತಿದೆ. ತಾಪ್ಸಿ ಮತ್ತು ದೇವು ಅಮ್ಮಮ್ಮನ ಆರೋಗ್ಯದ ಬಗ್ಗೆ ಡಾಕ್ಟರ್ ಆಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಅಮ್ಮಮ್ಮನ ಆರೋಗ್ಯದಲ್ಲಿ ಏರಿಇಳಿತಗಳು ಕಂಡುಬರುತ್ತಿತ್ತು. ಆದರೆ ಹರ್ಷನ ಮದುವೆ ಚೆನ್ನಾಗಿ ನಡೆಯಬೇಕು ಎಂದು ಮತ್ತು ಮುದ್ದಿನ ಮಗನ ಮದುವೆಯನ್ನು ಕಣ್ತುಂಬ ನೋಡ ಬೇಕು ಎಂದು ಅಮ್ಮಮ್ಮ ಪೈನ್ ಕಿಲ್ಲರ್ ಮಾತ್ರೆಗಳನ್ನು ಸೇವಿಸಿ ತಾತ್ಕಾಲಿಕವಾಗಿ ಆ ನೋವಿನಿಂದ ಹೊರಬರುತ್ತಿದ್ದರು. ಬಗ್ಗೆ ಅಮ್ಮಮ್ಮನ ಸೊಸೆ ಡಾಕ್ಟರ್ ತಾಪ್ಸಿಗೆ ಕೂಡ ವಿಚಾರವು ತಿಳಿದಿತ್ತು. ಆದರೆ ಈ ಬಾರಿ ಅಮ್ಮಮ್ಮನ ಆರೋಗ್ಯ ಸ್ಥಿತಿ ಬಗ್ಗೆ ದೇವ್ ತಾಪ್ಸಿ ಡಾಕ್ಟರ್ ಆಗಿ ಏನು ಮಾಡಲು ಸಾಧ್ಯವಾಗುತ್ತಿಲ್ಲ.
    Published by:Swathi Nayak
    First published: