Kannadathi Serial: ಹೀರೋನನ್ನು ಮದುವೆಯಾಗಲು ಹೊಸ ಪ್ಲಾನ್ ಮಾಡಿದ ವರೂಧಿನಿ! ವರ್ಕೌಟ್ ಆಗುತ್ತಾ ಸೈಕೋ ಪ್ಲಾನ್?

ಹವಿ ಮದುವೆಯ ಸಂಚಿಕೆಗಳು ಈಗ ಪ್ರಸಾರಗೊಳ್ಳುತ್ತಿದೆ ಈ ಕನ್ನಡದ ಮದುವೆಯೂ ವಿಭಿನ್ನ ರೀತಿಯಲ್ಲಿ ನಡೆಯುತ್ತಿದ್ದು ಶಾಸ್ತ್ರೋಕ್ತವಾಗಿ ನಡೆಸುತ್ತಾ ಬಂದಿರುವುದು ವಿಶೇಷವಾಗಿ ಜನಪ್ರಿಯಗೊಳ್ಳುತ್ತಿದೆ.

ಕನ್ನಡತಿ

ಕನ್ನಡತಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಕೂಡ ಒಂದು. ಭುವನೇಶ್ವರಿ (Bhuvaneshwari) ಮತ್ತು ಹರ್ಷಕುಮಾರ್ (Harsha Kumar) ಜೋಡಿ ನೋಡಲು ವೀಕ್ಷಕರು ಸದಾ ಕಾಯುತ್ತಿರುತ್ತಾರೆ. ಹವಿ ಮದುವೆಯ ಸಂಚಿಕೆಗಳು ಈಗ ಪ್ರಸಾರಗೊಳ್ಳುತ್ತಿದೆ ಈ ಕನ್ನಡದ ಮದುವೆಯೂ ವಿಭಿನ್ನ ರೀತಿಯಲ್ಲಿ ನಡೆಯುತ್ತಿದ್ದು ಶಾಸ್ತ್ರೋಕ್ತವಾಗಿ ನಡೆಸುತ್ತಾ ಬಂದಿರುವುದು ವಿಶೇಷವಾಗಿ ಜನಪ್ರಿಯಗೊಳ್ಳುತ್ತಿದೆ. ಆದರೆ ಈ ಹವಿ ಮದುವೆಗೆ ವಿಲನ್ ಆಗಿ ಮತ್ತೆ ಎಂಟ್ರಿಕೊಡುತ್ತಿದ್ದಾರೆ ಸೈಕೋ ವರೂಧಿನಿ (Varudhini). ಬಹಳ ಹಿಂದಿನ ಸೈಕೋ ವರೂಧಿನಿಗೆ ತನ್ನ ಹೀರೋ ಹರ್ಷನನ್ನು ಕಂಡರೆ ಏನೋ ಪ್ರೀತಿ. ಈ ಪ್ರೀತಿಯನ್ನು ಆಕೆ ಹೇಳಿಕೊಂಡಿದ್ದರು ಹರ್ಷ ಅದನ್ನು ನಯವಾಗಿ ತ್ಯಜಿಸಿದ್ದನು.

    ಹರ್ಷ ಅವಳ ಹೀರೋ. ಅವನನ್ನು ಪಡೆಯೋದಕ್ಕೋಸ್ಕರ ಅವಳು ಏನು ಮಾಡೋದಕ್ಕೂ ರೆಡಿ ಇದ್ದಾಳೆ. ಸದ್ಯಕ್ಕೆ ತಾನು ನಡೆಸ್ತಿರೋ ವೆಡ್ಡಿಂಗ್ ಪ್ಲಾನರ್ ಕಂಪನಿ 'ಸಪ್ತಪದಿ' ಮೂಲಕವೇ ಈ ಮದುವೆ ಮುರಿದುಬೀಳಿಸೋ ಪ್ಲಾನ್ ಮಾಡ್ತಿದ್ದಾಳೆ.

    ಇದನ್ನೂ ಓದಿ: Deepa Sannidhi Birthday: ಪರಮಾತ್ಮನ ಬೆಡಗಿಗೆ 32ರ ಹರೆಯ, ಕಮ್​ಬ್ಯಾಕ್​ಗೆ ರೆಡಿ ಆಗ್ತಿದ್ದಾರಾ ದೀಪಾ ಸನ್ನಿಧಿ?

    ಹೀರೋನ ಹೇಗಾದರೂ ಪಡೆದುಕೊಳ್ಳಲೇಬೇಕು ಎನ್ನುವ ಹಠಕ್ಕೆ ಬಿದ್ದ ವರೂ

    ತನ್ನ ಹೀರೋನನ್ನು ಹೇಗಾದರೂ ಪಡೆದುಕೊಳ್ಳಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಳು ವರೂ. ಆದರೆ ನನ್ನ ಜೀವದ ಗೆಳತಿ ಭೂವಿ ಮತ್ತು ಹರ್ಷ ಪ್ರೀತಿಸುತ್ತಿದ್ದಾರೆ ಹಾಗೂ ಮದುವೆ ಕೂಡ ಆಗಲಿದ್ದಾರೆ ಎನ್ನುವ ವಿಚಾರ ತಿಳಿದ ಮೇಲೆ ವರೂ ಸ್ವಲ್ಪಮಟ್ಟಿಗೆ ಗುಣದಲ್ಲಿ ಬದಲಾದಂತೆ ಕಾಣಿಸುತ್ತಿತ್ತು. ಎಂಗೇಜ್ಮೆಂಟ್ ಸಮಯದಲ್ಲಿ ಭುವನೇಶ್ವರಿಯ ಉಂಗುರವನ್ನು ಕದ್ದು ಇಟ್ಟುಕೊಂಡ ವರೂ ಬಳಿಕ ಹವಿ ಜೋಡಿಗೆ ಯಾವುದೇ ರೀತಿಯ ತೊಂದರೆ ನೀಡಿರಲಿಲ್ಲ. ಅಷ್ಟೇ ಅಲ್ಲ ಕುತಂತ್ರಿ ಸಾನಿಯಾ ಭುವನೇಶ್ವರಿಯನ್ನು ಕೊಲ್ಲಲು ಸುಪಾರಿ ನೀಡಿ ಕಳಿಸಿದ್ದಾಗ, ಅವಳು ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ವರೂ ಸಾನಿಯಾಳ ಜೊತೆ ಜಗಳ ಕೂಡ ಮಾಡಿದ್ದಳು.

    ಸಾನಿಯಾಳ  ಜೊತೆ ಕೈಜೋಡಿಸಿದ ವರೂಧಿನಿ

    ಇದೀಗ ವರೂಧಿನಿ ತನ್ನ ಕಡೆಯ ರೌಡಿಗಳನ್ನು ಮದುವೆ ಮನೆಯಲ್ಲಿ ಇರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಹರ್ಷನನ್ನು ನಾನೇ ಮದುವೆಯಾಗುವುದು ಎಂದು ದೃಢವಾಗಿ ಹೇಳುತ್ತಿದ್ದಾಳೆ. ಇತ್ತ ಕುತಂತ್ರಿ ಸಾನಿಯಾ ಕೂಡಾ ಮದುವೆ ನಿಲ್ಲಿಸುವ ಪಣತೊಟ್ಟಿದ್ದಳು ಈಗ ವರೂಧಿನಿ ಕೂಡ ಸಾನಿಯಾಳ ಜೊತೆ ಕೈಜೋಡಿಸಿದ್ದಾಳೆ. ಹಳ್ಳಿಯಿಂದ ಯಾವುದೋ ಮದ್ದಿನ ಪುಡಿಯನ್ನು ತಂದು ಹರ್ಷನಿಗೆ ಕೊಡುವ ಪ್ಲಾನ್ ಮಾಡಿದ್ದಾಳೆ ವರೂಧಿನಿ. ಈ ಪುಡಿಯನ್ನು ಜ್ಯೂಸ್ ಮೂಲಕ ಹರ್ಷನಿಗೆ ಕೊಡಲು ಕೂಡ ವರೂ ಹೋಗಿದ್ದಾಳೆ. ಅದನ್ನು ಹರ್ಷ ಕುಡಿದರೆ ಮುಂದೆ ಆತ ವರೂ ಹೇಳಿದಂತೆ ಕೇಳುತ್ತಾಳೆ ಎಂದು ಕೂಡ ಸಾನಿಯ ಬಳಿ ಹಿಂದಿನ ಸಂಚಿಕೆಗಳಲ್ಲಿ ಹೇಳಿದ್ದಾಳೆ.

    ಇದನ್ನೂ ಓದಿ: Jothe Jotheyali Serial: ಶಾರದಾ ದೇವಿಯ ಮುಂದೆ ಜೇಂಡೆಯ ನಿಜಮುಖ ಬಯಲು! ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೆ ಬಿಗ್ ಟ್ವಿಸ್ಟ್

    ವರೂಧಿನಿ ನೀಡಿದ  ಜ್ಯೂಸ್ ಅನ್ನು ನಯವಾಗಿ ತ್ಯಜಿಸಿದ ಹರ್ಷ

    ಆದರೆ ವರೂಧಿನಿ ತೆಗೆದುಕೊಂಡು ಹೋದ ಜ್ಯೂಸ್ ಅನ್ನು ಹರ್ಷ ನಯವಾಗಿ ತ್ಯಜಿಸಿದ್ದಾನೆ. ಮುಂದೆ ಸಾನಿಯಾ ಹಾಗೂ ವರೂಧಿನಿ ಕುತಂತ್ರದಿಂದ ಹರ್ಷ ಅದನ್ನು ಕುಡಿಯುತ್ತಾನಾ ಎನ್ನುವುದನ್ನು ನೋಡಬೇಕಿದೆ. ಹರ್ಷ ಹಾಗೂ ಭುವನೇಶ್ವರಿ ಪರಸ್ಪರ ತುಂಬಾ ಇಷ್ಟ ಪಡುತ್ತಿದ್ದು ಅವರಿಬ್ಬರ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಮೂಡಲು ಸಾಧ್ಯವಿಲ್ಲ.

    ವರೂಧಿನಿ ಇನ್ನೇನು ಉಪಾಯ ಮಾಡಿ ಹರ್ಷನನ್ನು ಮದುವೆಯಾಗುವ ಪ್ರಯತ್ನ ಪಡುತ್ತಾಳೆ ಎನ್ನುವ ಬಗ್ಗೆ ಯಾರಿಗೂ ಅರಿವಿಲ್ಲ. ಅಷ್ಟೇ ಅಲ್ಲ ವರೂಗೆ ಈಗಲೂ ಹರ್ಷನ ಮೇಲೆ ಅದೇ ಪ್ರೀತಿ ಇದೆ ಎಂದು ಸ್ವತಃ ಭೂವಿಗೂ ತಿಳಿದಿಲ್ಲ. ಇತ್ತ ವರೂ 27 ಲಕ್ಷ ರೂಪಾಯಿಗಳನ್ನು ಭುವನೇಶ್ವರಿಯ ತಂಗಿ ಬಿಂದುಗೆ ನೀಡಿ ಭುವಿಗೆ ಕೊಡಲು ಇಂದಿನ ಸಂಚಿಕೆಯಲ್ಲಿ ಹೇಳುತ್ತಾಳೆ. ಇದರ ಹಿಂದಿನ ಉದ್ದೇಶ ಕೂಡ ತಿಳಿಯುತ್ತಿಲ್ಲ.
    Published by:Swathi Nayak
    First published: