• Home
 • »
 • News
 • »
 • entertainment
 • »
 • Kannadathi: ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ? ಹಬ್ಬದ ದಿನ ಅಮ್ಮಮ್ಮನ ಮನೆಯಲ್ಲಿ ರಕ್ತದ ಕಲೆ!

Kannadathi: ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ? ಹಬ್ಬದ ದಿನ ಅಮ್ಮಮ್ಮನ ಮನೆಯಲ್ಲಿ ರಕ್ತದ ಕಲೆ!

ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ?

ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ?

ನಿನ್ನ ಸುಮ್ನೆ ಬಿಡಲ್ಲ ಎಂದು ಸಾನಿಯಾಗೆ  ಹರ್ಷ ಹೇಳ್ತಾ ಇದ್ದಾನೆ. ಅಲ್ಲದೇ ಶೂಟ್ ಮಾಡುವ ಶಬ್ಧ ಕೇಳಿದೆ ಯಾರಿಗೆ ಶೂಟ್ ಮಾಡಿದ್ದಾನೆ ಎಂದು ಗೊತ್ತಿಲ್ಲ. ಹರ್ಷ ಸಾನಿಯಾಗೆ ಶೂಟ್ ಮಾಡಿ ಬಿಟ್ಟನಾ ಅನ್ನೋ ಅನುಮಾನಗಳು ಶುರುವಾಗಿವೆ.

 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಮನೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಆದ್ರೆ ಹರ್ಷ ಗನ್ (Gun) ಹಿಡಿದು ಬಂದಿದ್ದಾನೆ. ಸಾನಿಯಾಳನ್ನು ಶೂಟ್  ಮಾಡ್ತಾನೆ ಅನ್ನಿಸುತ್ತೆ. ಮನೆಯವರೆಲ್ಲಾ ಗಾಬರಿಯಾಗಿದ್ದಾರೆ.


  ಸಾನಿಯಾಳ ಸತ್ಯ ಬಯಲು
  ಹರ್ಷನ ಬಳಿ ಸಾನಿಯಾ ಕಳಿಸಿದ ಹುಡುಗ ನೀಲೇಶ್ ಬರುತ್ತಾನೆ. ಕೈಯಲ್ಲಿ ಗನ್, ಕತ್ತಿ ಹಿಡಿದಿರುತ್ತಾನೆ. ಅದನ್ನು ನೋಡಿದ ಹರ್ಷ ಕೋಪಗೊಂಡು ಅವನಿಗೆ ಹೊಡೆಯುತ್ತಾನೆ. ಆಗ ನೀಲೇಶ್ ಸರ್ ನಾನು ಏನೂ ಮಾಡಲು ಬಂದಿಲ್ಲ. ಇದನ್ನೆಲ್ಲಾ ಕಳಿಸಿದ್ದು ಸಾನಿಯಾ ಅವರು ಎನ್ನುತ್ತಾನೆ. ಈ ಗನ್ ಸಹ ಕೊಟ್ಟಿದ್ದು ಅವರೇ. ನಾನು ಅವರ ಬಗ್ಗೆ ಎಲ್ಲಾ ಸತ್ಯ ಹೇಳ್ತಿನಿ ಅಂತ. ಸಾನಿಯಾ ಬಗ್ಗೆ  ಸತ್ಯ ಹೇಳ್ತಾನೆ. ಅಲ್ಲದೇ ಭುವಿ ಮೇಡಂ, ರತ್ನಾಮಾಲಾ ಮೇಡಂ ಅವರಿಂದ ನಾನು ಬುದ್ಧಿ ಕಲಿತೆ ಎಂದು ಹೇಳ್ತಾನೆ.


  ಸಿಟ್ಟಿನಲ್ಲಿ ಮನೆಗೆ ಬಂದಿರು ಹರ್ಷ
  ಮನೆಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಎಲ್ಲರೂ ಖುಷಿಯಿಂದ ಇದ್ದಾರೆ. ಸಾನಿಯಾ ಸಹ ಪೂಜೆ ಮಾಡೋ ನಾಟಕ ಆಡ್ತಾ ಇದ್ದಾಳೆ. ಸಂತೋಷವಾಗಿದ್ದ ಮನೆಗೆ ಹರ್ಷ ಕೋಪ ಮಾಡಿಕೊಂಡು ಬಂದಿದ್ದಾನೆ. ಸಾನಿಯಾ ಆರತಿ ಕೊಡಲು ಹೋದ್ರೆ , ತಟ್ಟೆಯಲ್ಲಿದ್ದ ಕುಂಕುಮವನ್ನು ಚೆಲ್ಲಿದ್ದಾನೆ.


  ಇದನ್ನೂ ಓದಿ: Anubandha: ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ ಸೇರಿ 3 ಸಾವಿರಕ್ಕೂ ಹೆಚ್ಚು ಎಪಿಸೋಡ್, ಅನುಬಂಧದಲ್ಲಿ ಆನಂದಭಾಷ್ಪ


  ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ?
  ಸಾನಿಯಾ ಬಗ್ಗೆ ನೀಲೇಶ್ ಹೇಳಿದ ಸತ್ಯವನ್ನೆಲ್ಲಾ ಹರ್ಷ ಕೇಳಿಸಿಕೊಂಡು ಬಂದಿದ್ದಾನೆ. ಅಲ್ಲದೇ ತುಂಬಾ ಕೋಪ ಮಾಡಿಕೊಂಡಿದ್ದಾನೆ. ಅಲ್ಲದೇ ಗನ್ ಬೇರೆ ತಂದಿದ್ದಾನೆ. ಇನ್ನು ನಿನ್ನ ಸುಮ್ನೆ ಬಿಡಲ್ಲ ಎಂದು ಸಾನಿಯಾಗೆ  ಹರ್ಷ ಹೇಳ್ತಾ ಇದ್ದಾನೆ. ಅಲ್ಲದೇ ಶೂಟ್ ಮಾಡುವ ಶಬ್ಧ ಕೇಳಿದೆ ಯಾರಿಗೆ ಶೂಟ್ ಮಾಡಿದ್ದಾನೆ ಎಂದು ಗೊತ್ತಿಲ್ಲ. ಹರ್ಷ ಸಾನಿಯಾಗೆ ಶೂಟ್ ಮಾಡಿ ಬಿಟ್ಟನಾ ಅನ್ನೋ ಅನುಮಾನಗಳು ಶುರುವಾಗಿವೆ.
  Colors Kannada serial, Kannada serial, Kannadathi Serial, Kannadathi serial today episode, Harsha know about plan of Saniya, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಸಾನಿಯಾ-ಹರ್ಷ


  ಶೂಟ್ ಶಬ್ಧ ಕೇಳಿ ಮನೆಯವರೆಲ್ಲಾ ಗಾಬರಿ
  ಹಬ್ಬದ ಖುಷಿಯಲ್ಲಿದ್ದವರಿಗೆ ಹರ್ಷನ ವರ್ತನೆ ಗಾಬರಿ ಮೂಡಿಸಿದೆ. ಏನು ಇವನು ಈ ರೀತಿ ಆಡ್ತಾ ಇದ್ದಾನೆ ಎಂದು ಮೊದಲೇ ಗಾಬರಿ ಗೊಂಡಿದ್ದರು. ಈಗ ಹರ್ಷ ಶೂಟ್ ಮಾಡಿದ ಗನ್ ನಿಂದ ಶಬ್ಧ ಬಂದಿದ್ದು. ಮನೆಯವರೆಲ್ಲಾ ಭಯಗೊಂಡಿದ್ದಾರೆ. ಹರ್ಷ ಶೂಟ್ ಮಾಡಿಯೇ ಬಿಟ್ನಾ ಎಂದು ಕಂಗಾಲಾಗಿದ್ದಾರೆ.


  Colors Kannada serial, Kannada serial, Kannadathi Serial, Kannadathi serial today episode, Harsha know about plan of Saniya, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಭುವಿ


  ಇದನ್ನೂ ಓದಿ: 


  ಹರ್ಷ ಸಾನಿಯಾಗೆ ಶೂಟ್ ಮಾಡಿದ್ನಾ? ಅಥವಾ ಸುಮ್ನೆ ಭಯ ಪಡಿಸಿದ್ನಾ? ಮನೆಯವರ ಭಯ ನಿಜವಾಗುತ್ತಾ? ಕೋಪದ ಕೈಗೆ ತನ್ನ ಬುದ್ಧಿಯನ್ನು ಕೊಟ್ನಾ ಹೀರೋ? ಸಾನಿಯಾಗೆ ತಕ್ಕ ಶಿಕ್ಷೆ ಆಯ್ತಾ? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯನ್ನು ನೋಡಬೇಕು.

  Published by:Savitha Savitha
  First published: