• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮ ಕೊಟ್ಟ ಸುಳಿವಿಗೆ ಸಾನಿಯಾ, ಹರ್ಷ ಶಾಕ್, ಇತ್ತ ರತ್ನಮ್ಮನ ಕಿವಿಗೆ ಬಿತ್ತು ಸತ್ಯ; ಮಾಲಾ ಕೆಫೆ ಒಡತಿಯ ಕಣ್ಣೀರು!

Kannadathi: ಅಮ್ಮಮ್ಮ ಕೊಟ್ಟ ಸುಳಿವಿಗೆ ಸಾನಿಯಾ, ಹರ್ಷ ಶಾಕ್, ಇತ್ತ ರತ್ನಮ್ಮನ ಕಿವಿಗೆ ಬಿತ್ತು ಸತ್ಯ; ಮಾಲಾ ಕೆಫೆ ಒಡತಿಯ ಕಣ್ಣೀರು!

ಅಮ್ಮಮ್ಮ

ಅಮ್ಮಮ್ಮ

ರತ್ನಮಾಲಾ ಅವರ ಕಾಯಿಲೆ ಮೂರನೇ ಸ್ಟೇಜ್ ಗೆ ಬಂದಿದೆ. ಇಷ್ಟು ದಿವ ಅವರು ಮರೆಯುತ್ತಿದ್ದರು. ಅದರಿಂದ ಹೆಚ್ಚು ತೊಂದರೆ ಆಗುತ್ತಿರಲಿಲ್ಲ. ಈಗ ಅವರ ದೇಹದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಡಾಕ್ಟರ್ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮನ ಆರೋಗ್ಯ (Health) ಪರಿಸ್ಥಿತಿ ಹದಗೆಡುತ್ತಿದ್ದು, ದೇವ್ ಮನೆಗೆ ಡಾಕ್ಟರ್ ರನ್ನು ಕರೆಸಿದ್ದಾನೆ. ಡಾಕ್ಟರ್ ಇದು ರತ್ನಮಾಲಾ ಅವರ 3ನೇ ಸ್ಟೇಜ್ (3rd Stage) ಎಂದಿದ್ದಾರೆ.


    ಪದೇ ಪದೇ ಮರೆಯುತ್ತಿರುವ ಅಮ್ಮಮ್ಮ
    ಅಮ್ಮಮ್ಮ ದಿನದಲ್ಲಿ ಸ್ಪಲ್ಪ ಹೊತ್ತು ಆರೋಗ್ಯವಾಗಿದ್ರೆ, ಇನ್ನೂ ಸ್ವಲ್ಪ ಎಲ್ಲವನ್ನೂ ಮರೆತು ಮಂಕಾಗಿ ಕೂರುತ್ತಾರೆ. ರತ್ನಮಾಲಾ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಅದರ ಜೊತೆ ಈಗ ಮರೆವಿನ ಕಾಯಿಲೆ ಶುರುವಾಗಿದೆ. ಒಬ್ಬಳೇ ಎಲ್ಲೆಲ್ಲೋ ಹೋಗುತ್ತಾಳೆ. ವಾಪಸ್ ಮನೆಗೆ ಬರಲು ಆಗದೇ ಕಂಗಾಲಾಗಿ ಹೋಗುತ್ತಾಳೆ. ಮತ್ತೆ ನೆನಪು ಬಂದಾಗ ಮನೆಗೆ ಬರುತ್ತಾಳೆ. ಈ ರೀತಿ ಹೀಗಾಗಲೇ ಹಲವು ಬಾರಿ ಆಗಿದೆ.


    ಹರ್ಷ-ಭುವಿಗೆ ಹೆಚ್ಚಾದ ಆತಂಕ
    ಅಮ್ಮಮ್ಮನ ಮರೆವಿನ ಕಾಯಿಲೆಯನ್ನು ಹರ್ಷ ಮತ್ತು ಭುವಿ ಕಣ್ಣಾರೆ ನೋಡಿದ್ದಾರೆ. ತಮ್ಮ ಅಮ್ಮನಿಗೆ ಈ ರೀತಿ ಆಗಿ ಹೋಯ್ತು ಎಂದು ಚಿಂತೆಯಲ್ಲಿದ್ದಾರೆ. ಅದಕ್ಕೆ ಅಣ್ಣ ದೇವ್ ಬಳಿ ಹರ್ಷ ಸಲಹೆ ಕೇಳಿದ್ದಾನೆ. ಅದಕ್ಕೆ ದೇವ್ ಮನೆಗೆ ವಿದೇಶದಿಂದ ಡಾಕ್ಟರ್ ರನ್ನು ಕರೆಸಿದ್ದಾರೆ. ಡಾಕ್ಟರ್ ಅಮ್ಮಮ್ಮನನ್ನು ಪರೀಕ್ಷೆ ನಡೆಸಿದ್ದಾರೆ.


    ಇದನ್ನೂ ಓದಿ: Puttakkana Makkalu: ಅಯ್ಯೋ, ಇವಳು ಅವಳೇನಾ? ನಮ್ಮ ಪುಟ್ಟಕ್ಕನ ಮಗಳು ಸ್ನೇಹ! ಅಯ್ಯೋ, ಹಂಗ್ ನೋಡ್ಬೇಡಿ ಕಣ್ರಪ್ಪಾ


    ಅಮ್ಮಮ್ಮನಿಗೆ 3ನೇ ಸ್ಟೇಜ್
    ವಿದೇಶದಿಂದ ಬಂದು ರತ್ನಮಾಲಾ ಅವರನ್ನು ಪರೀಕ್ಷೆ ಮಾಡಿರುವ ಡಾಕ್ಟರ್ ಆತಂಕಕಾರಿ ಸುದ್ದಿಯೊಂದನ್ನು ಹೇಳಿದ್ದಾರೆ. ರತ್ನಮಾಲಾ ಅವರ ಕಾಯಿಲೆ ಮೂರನೇ ಸ್ಟೇಜ್ ಗೆ ಬಂದಿದೆ. ಇಷ್ಟು ದಿವ ಅವರು ಮರೆಯುತ್ತಿದ್ದರು. ಅದರಿಂದ ಹೆಚ್ಚು ತೊಂದರೆ ಆಗುತ್ತಿರಲಿಲ್ಲ. ಈಗ ಅವರ ದೇಹದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಡಾಕ್ಟರ್ ಹೇಳಿದ್ದಾರೆ. ಇದನ್ನು ಕೇಳಿ ಹರ್ಷ, ಭುವಿ, ದೇವ್ ಶಾಕ್ ಆಗಿ ಹೋಗಿದ್ದಾರೆ.


    Colors Kannada serial, Kannada serial, Kannadathi Serial, Kannadathi serial today episode, Company MD post to Bhuvi, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಯ್ತಾ?, ಕಂಪನಿ ಜವಾಬ್ದಾರಿ ಭುವಿಗೆ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಹರ್ಷ


    ಡಾಕ್ಟರ್ ಹೇಳುವುದನ್ನು ಕೇಳಿಸಿಕೊಂಡ ಅಮ್ಮಮ್ಮ
    ಡಾಕ್ಟರ್ ಅಮ್ಮಮ್ಮನ ಕಾಯಿಲೆ ಬಗ್ಗೆ ಹರ್ಷ, ಭುವಿ, ದೇವ್ ಬಳಿ ಮಾತ್ರ ಹೇಳುತ್ತಿದ್ದರು. ಆಗ ಅಲ್ಲೇ ಇದ್ದ ರತ್ನಮಾಲಾ ಕಿವಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ತಿಳಿದಿದೆ. ಇಷ್ಟು ದಿನ ಏನೋ ನನ್ನಿಂದ ತಪ್ಪಾಗುತ್ತಿದೆ ಎಂದು ರತ್ನಾಮಾಲಾ ಅಂದುಕೊಳ್ಳುತ್ತಿದ್ರು. ಈಗ ಅದೇನು ಅಂತ ಗೊತ್ತಾಗಿದೆ. ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಗಿದೆ.


    ಇದನ್ನೂ ಓದಿ: Amulya Gowda: ಬಿಗ್ ಬಾಸ್ ಸೀಸನ್ 09 ರಲ್ಲಿ ಅಮೂಲ್ಯ ಗೌಡ ಮಿಂಚಿಂಗೋ ಮಿಂಚಿಂಗ್, ವಾವ್ ಎಂದ ಅಭಿಮಾನಿಗಳು


    ಭುವಿಗೆ ಕಂಪನಿ ಜವಾಬ್ದಾರಿ
    ರತ್ನಮಾಲಾ ಅವರನ್ನು ಇಂಟರ್ ವ್ಯೂವ್ ಮಾಡಲು ಬಂದಿರುತ್ತಾರೆ. ಆಗ ರತ್ನಮಾಲಾ ಅವರು ತಮ್ಮ ಕಂಪನಿ ಜವಾಬ್ದಾರಿಯೆಲ್ಲಾ ಭುವಿ ನೋಡಿಕೊಳ್ತಾಳೆ. ಅದರ ಬಗ್ಗೆ ಏನೇ ಪ್ರಶ್ನೆ ಇದ್ರು ಭುವಿಯನ್ನೇ ಕೇಳಿಕೊಳ್ಳಿ ಎನ್ನುತ್ತಾಳೆ. ಹಾಗಾದ್ರೆ ಮುಂದಿನ ವಾರಸ್ದಾರಳು ಭುವಿಯೇ ಎಂದು ಸುಳಿವು ನೀಡಿದ್ರಾ ಅಮ್ಮಮ್ಮ ಎನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.


    Colors Kannada serial, Kannada serial, Kannadathi Serial, Kannadathi serial today episode, Company MD post to Bhuvi, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಯ್ತಾ?, ಕಂಪನಿ ಜವಾಬ್ದಾರಿ ಭುವಿಗೆ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭುವಿ


    ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದ್ದು, ಮುಂದೆನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: