• Home
 • »
 • News
 • »
 • entertainment
 • »
 • Kannadathi: ಸಾನಿಯಾ ದೂರು ಕೊಟ್ರೆ ಹರ್ಷ ಜೈಲು ಸೇರ್ತಾನಾ? ಏನಿದು ಬಿಗ್ ಟ್ವಿಸ್ಟ್?

Kannadathi: ಸಾನಿಯಾ ದೂರು ಕೊಟ್ರೆ ಹರ್ಷ ಜೈಲು ಸೇರ್ತಾನಾ? ಏನಿದು ಬಿಗ್ ಟ್ವಿಸ್ಟ್?

ಹರ್ಷ ಜೈಲು ಸೇರ್ತಾನಾ?

ಹರ್ಷ ಜೈಲು ಸೇರ್ತಾನಾ?

ಪೊಲೀಸ್ ನವರು ಹರ್ಷ ಬಳಿ ಬಂದು ಮಾಡನಾಡಿದ್ದಾರೆ. ಸಾನಿಯಾಗೆ ಗನ್ ಹಿಡಿದಿದ್ದು ಮರ್ಡರ್ ಅಟೆಮ್ಟ್ ಆಗುತ್ತೆ. ಸಾನಿಯಾ ದೂರು ಕೊಟ್ರೆ ನೀವು ಜೈಲಿಗೆ ಹೋಗ ಬೇಕಾಗುತ್ತೆ ಎಂದು ಹೇಳ್ತಾರೆ.

 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಹರ್ಷನಿಗೆ ಸಾನಿಯಾ ಕುತಂತ್ರ ಎಲ್ಲಾ ಗೊತ್ತಾಗಿ, ಅವಳ ಬಾಯಿಂದಲೇ ಸತ್ಯ ಬಾಯ್ಬಿಡಲು ಗನ್ (Gun) ಆಕೆ ತಲೆಗೆ ಹಿಡಿದಿರುತ್ತಾನೆ. ಅದು ವಿಡಿಯೋ ಸಾಕ್ಷಿ ಇದೆ. ಈಗ ಸಾನಿಯಾ ದೂರು (Complaint) ಕೊಟ್ರೆ ಹರ್ಷ ಜೈಲು ಸೇರ್ತಾನೆ.


  ಸಾನಿಯಾಳ ಸತ್ಯ ಬಯಲು
  ಹರ್ಷನ ಬಳಿ ಸಾನಿಯಾ ಕಳಿಸಿದ ಹುಡುಗ ನೀಲೇಶ್, ಸಾನಿಯಾ ಬಗ್ಗೆ ಎಲ್ಲಾ ಸತ್ಯ ಹೇಳ್ತಾನೆ. ಅಲ್ಲದೇ ಭುವಿ ಮೇಡಂ, ರತ್ನಾಮಾಲಾ ಮೇಡಂ ಅವರಿಂದ ನಾನು ಬುದ್ಧಿ ಕಲಿತೆ ಎಂದು ಹೇಳ್ತಾನೆ. ಸಾನಿಯಾ ಬಗ್ಗೆ ನೀಲೇಶ್ ಹೇಳಿದ ಸತ್ಯವನ್ನೆಲ್ಲಾ ಹರ್ಷ ಕೇಳಿಸಿಕೊಂಡು ಕೋಪಗೊಂಡಿದ್ದ, ಅಲ್ಲದೇ ತುಂಬಾ ಕೋಪ ಮಾಡಿಕೊಂಡು, ಗನ್ ಹಿಡಿದು ತಂದು, ನಿನ್ನ ಸುಮ್ನೆ ಬಿಡಲ್ಲ ಎಂದು ಸಾನಿಯಾಗೆ ಹರ್ಷ ಹೇಳಿದ್ದ. ಅವಳ ತಲೆಗೆ ಗನ್ ಹಿಡಿದು ಅವಳ ಬಾಯಿಂದ ಸತ್ಯ ಬಾಯ್ಬಿಡಿಸಿದ್ದಾನೆ.


  ಸಾನಿಯಾಗೆ ಗನ್ ಹಿಡಿದ ವಿಡಿಯೋ
  ಸಾನಿಯಾಳನ್ನು ಭಯಪಡಿಸಲು ಹರ್ಷ ಗನ್ ಹಿಡಿದಿರುತ್ತಾನೆ. ಅದನ್ನು ವಿಡಿಯೋ ಮಾಡಿರುತ್ತಾನೆ. ಹರ್ಷ ಗನ್ ಹಿಡಿದ ಕಾರಣ, ಸಾನಿಯಾ ಎಲ್ಲಾ ಸತ್ಯ ಬಾಯ್ಬಿಟ್ಟಿದ್ದಾಳೆ. ಭುವಿಯನ್ನು ಕೆಲಸದಿಂದ ತೆಗಿಸಲು ಸಾನಿಯಾಳೇ ಪ್ಲ್ಯಾನ್ ಮಾಡಿದ್ದು ಎಂದು ಮನೆಯವರಿಗೆಲ್ಲಾ ಗೊತ್ತಾಗುತ್ತೆ. ಅದು ಗೊತ್ತಾಗಿ ಭುವಿ ಸಹ ತುಂಬಾ ಬೇಜಾರು ಮಾಡಿಕೊಂಡಿರುತ್ತಾಳೆ.


  ಇದನ್ನೂ ಓದಿ: Ramachari: ಮೋಸದಿಂದ ರಾಮಾಚಾರಿಯಿಂದ ಪರ್ಫಾರ್ಮೆನ್ಸ್ ಸರ್ಟಿಫಿಕೇಟ್ ಪಡೆದೇ ಬಿಟ್ಟಳು ಚಾರು! 


  ಹರ್ಷನ ಬಳಿ ಮಾತನಾಡಿದ ಪೊಲೀಸ್
  ಪೊಲೀಸ್ ನವರು ಹರ್ಷ ಬಳಿ ಬಂದು ಮಾಡನಾಡಿದ್ದಾರೆ. ಸಾನಿಯಾಗೆ ಗನ್ ಹಿಡಿದಿದ್ದು ಮರ್ಡರ್ ಅಟೆಮ್ಟ್ ಆಗುತ್ತೆ. ಸಾನಿಯಾ ದೂರು ಕೊಟ್ರೆ ನೀವು ಜೈಲಿಗೆ ಹೋಗ ಬೇಕಾಗುತ್ತೆ ಎಂದು ಹೇಳ್ತಾರೆ. ಅದನ್ನು ಕೇಳಿಸಿಕೊಂಡ ಹರ್ಷ ಏನೂ ಮಾತನಾಡದೇ ಸುಮ್ಮನಿದ್ದಾರೆ. ಆದ್ರೆ ಹರ್ಷ ಮತ್ತು ಪೊಲೀಸ್ ಮಾತನಾಡುವುದನ್ನು ಸಾನಿಯಾ ಕೇಳಿಸಿಕೊಂಡಿದ್ದಾಳೆ.


  Colors Kannada serial Kannadathi serial watch today episode Hero Harsh in trouble Saniya plan to complaint
  ಭುವಿ


  ಜೈಲು ಸೇರ್ತಾನಾ ಹರ್ಷ?
  ಹರ್ಷ ಮತ್ತು ಪೊಲೀಸ್ ಮಾತನಾಡುವುದನ್ನು ಸಾನಿಯಾ ಕೇಳಿಸಿಕೊಂಡಿದ್ದಾಳೆ. ಈಗ ಮತ್ತೆ ಸಾನಿಯಾ ಹರ್ಷನನ್ನು ಜೈಲಿಗೆ ಹಾಕಿಸೋ ಪ್ಲ್ಯಾನ್ ಏನಾದ್ರೂ ಮಾಡ್ತಾಳಾ? ಪೊಲೀಸರಿಗೆ ಹರ್ಷನ ವಿರುದ್ಧ ದೂರು ನೀಡ್ತಾಳಾ? ಹರ್ಷನ ವಿರುದ್ಧ ಮೊದಲೇ ಕತ್ತಿ ಮಸೆಯುತ್ತಿರುವ ಸಾನಿಯಾಗೆ ಒಳ್ಳೆ ಚಾನ್ಸ್ ಸಿಕ್ಕಿದೆ. ಏನ್ ಮಾಡ್ತಾಳೋ ನೋಡಬೇಕು.


  Colors Kannada serial Kannadathi serial watch today episode Hero Harsh in trouble Saniya plan to complaint
  ಸಾನಿಯಾ


  ಹರ್ಷನಿಗೆ ಇಲ್ಲ ಚಿಂತೆ!
  ಹರ್ಷನಿಗೆ ಪೊಲೀಸರು ಎಚ್ಚರಿಕೆ ಕೊಟ್ರೂ ಯಾವುದೇ ಚಿಂತೆ ಇಲ್ಲ. ಹರ್ಷ ಧೈರ್ಯವಾಗಿ ಇದ್ದಾನೆ. ಅಂದ್ರೆ ಸಾನಿಯಾ ದೂರು ನೀಡಲ್ಲ ಎಂಬ ಕೆಟ್ಟು ಧೈರ್ಯವಾ ಏನೂ ಗೊತ್ತಿಲ್ಲ. ಒಟ್ನಲ್ಲಿ ಪೊಲೀಸರು ಹೇಳಿದ್ರು ಹರ್ಷ ನಗ್ತಾ ಇದ್ದಾನೆ.


  ಇದನ್ನೂ ಓದಿ: BBK Season 09: ಬಿಗ್ ಬಾಸ್ ಗೋಲ್ಡ್ ಮೈನ್ ನಲ್ಲಿ ಚಿನ್ನ ತೆಗೆಯುವವನೇ ಕ್ಯಾಪ್ಟನ್! ಇದ್ರರಲ್ಲೂ ಸಂಬರ್ಗಿ ಕಿತಾಪತಿ


  ಹರ್ಷನ ವಿರುದ್ಧ ಸಾನಿಯಾ ದೂರು ನೀಡ್ತಾಳ? ಹರ್ಷ ಜೈಲು ಸೇರ್ತಾನಾ? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.

  Published by:Savitha Savitha
  First published: