• Home
  • »
  • News
  • »
  • entertainment
  • »
  • Kannadathi: ಯಶಸ್ವಿ ಆಯ್ತಾ ವರು ಪ್ಲ್ಯಾನ್ ; ಡಿವೋರ್ಸ್​​ ಪೇಪರ್​ಗೆ ಹರ್ಷ-ಭುವಿ ಸಹಿ?

Kannadathi: ಯಶಸ್ವಿ ಆಯ್ತಾ ವರು ಪ್ಲ್ಯಾನ್ ; ಡಿವೋರ್ಸ್​​ ಪೇಪರ್​ಗೆ ಹರ್ಷ-ಭುವಿ ಸಹಿ?

ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿದ ಹರ್ಷ-ಭುವಿ?

ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿದ ಹರ್ಷ-ಭುವಿ?

ಗೊತ್ತಿಲ್ಲದೇ ಹರ್ಷ-ಭುವಿ ಡಿವೋರ್ಸ್ ಪೇಪರ್ ಗೆ  ಸೈನ್ ಮಾಡಿದ್ದಾರೆ. ಹಾಗಾದ್ರೆ ಪ್ರೀತಿಸಿ ಮದುವೆ ಆದ ಜೋಡಿ ದೂರ ಆಗುತ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. ತನ್ನ ಆತ್ಮೀಯ ಸ್ನೇಹಿತೆ ಭುವಿಗೆ ಮೋಸ ಮಾಡಿದ್ದಾಳೆ. ವರೂಧಿನಿ ಪ್ಲ್ಯಾನ್ ಸಕ್ಸ್ ಆಗಿದೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ವರೂಧಿನಿ ಹರ್ಷ-ಭುವಿಗೆ ಡಿವೋರ್ಸ್ (Divorce) ಕೊಡಸಲು ಪ್ಲ್ಯಾನ್ (Plan) ಮಾಡಿದ್ದಾಳೆ. ಅವಳು ಅಂದುಕೊಂಡಂತೆ ಎಲ್ಲಾ ನಡೆಯುತ್ತಿದೆ.


    ಭುವಿ-ಹರ್ಷನಿಗೆ ಡಿವೋರ್ಸ್ ಕೊಡಿಸಲು ಪ್ಲ್ಯಾನ್


    ಕೆಲವು ದಿನ ವರೂಧಿನಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಅವರು ಟ್ರಿಪ್ ಹೋದ ಕಾರಣ ಧಾರಾವಾಹಿಯಿಂದ ದೂರ ಇದ್ರಂತೆ. ಧಾರಾವಾಹಿಗೆ ವರು ವಾಪಸ್ ಆಗುತ್ತಿದ್ದಂತೆ ತನ್ನ ಬುದ್ಧಿ ತೋರಿಸಿದ್ದಾಳೆ. ಭುವಿ-ಹರ್ಷ ಮದುವೆ ರಿಜಿಸ್ಟ್ರೇಶನ್ ನೆಪದಲ್ಲಿ, ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾಳೆ. ಹೀರೋ ಜೊತೆ ನಾನು ಇರಬೇಕು. ನನ್ನ ಬೆಸ್ಟ್ ಫ್ರೆಂಡ್ ಅಲ್ಲ ಎಂದು ಹೇಳಿಕೊಳ್ತಿದ್ದಾಳೆ.


    ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್


    ಹರ್ಷ-ಭುವಿ ಮದುವೆ ರಿಜಿಸ್ಟ್ರೇಶನ್ ಜೊತೆ ಇಬ್ಬರುದ್ದು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಸಹ ನಡೆದಿದೆ. ಅದನ್ನೂ ವರೂಧಿನಿಯೇ ಪ್ಲ್ಯಾನ್ ಮಾಡಿದ್ದಾಳೆ. ಹರ್ಷ-ಭುವಿ ಖುಷಿ ಖುಷಿಯಿಂದ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇಬ್ಬರನ್ನು ನೋಡಿ ಅಮ್ಮಮ್ಮ ಸಹ ಖುಷಿಯಾಗಿದ್ದಾಳೆ.


    ಇದನ್ನೂ ಓದಿ: Amulya Deepavali: ಅವಳಿ ಮಕ್ಕಳ ಜೊತೆ ಅಮೂಲ್ಯಗೆ ದೀಪಾವಳಿ ಸಂಭ್ರಮ; ಫೋಟೋಗಳಲ್ಲಿ ನೋಡಿ 


    ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿದ ಹರ್ಷ-ಭುವಿ?


    ವರೂಧಿನಿಯೇ ಮುಂದೆ ನಿಂತು ಇವರು ಮದುವೆ ಪ್ಲ್ಯಾನ್ ಎಲ್ಲಾ ಮಾಡಿದ್ಲು. ಮದುವೆ ಮಾಡಿಸಿದ್ಲು. ಅದಕ್ಕೆ ಅವರ ಮದುವೆ ರಿಜಿಸ್ಟ್ರೇಶನ್ ಜವಾಬ್ದಾರಿಯೂ ವರು ಮೇಲೆ ಇದೆ. ಇದನ್ನೇ ಬಳಸಿಕೊಂಡು ಇಬ್ಬರ ಕೈನಲ್ಲಿ ಡಿವೋರ್ಸ್ ಪೇಪರ್ ಗೆ ಸೈನ್ ಮಾಡಿಸಿಕೊಂಡಿದ್ದಾಳೆ. ಹರ್ಷ-ಭುವಿ ಗೊತ್ತಿಲ್ಲದೇ ಆ ಪೇಪರ್ ಗಳಿಗೆ ಸಹಿ ಮಾಡಿದ್ದಾರೆ.


    colors Kannada serial, kannada serial, kannadathi serial, kannadathi serial today episode, harsh and bhuvi divorce plan, ಕನ್ನಡತಿ ಧಾರಾವಾಹಿ, ಗೊತ್ತಿಲ್ಲದೇ ಡಿವೋರ್ಸ್ ಪೇಪರ್ ಗೆ ಸಹಿ ಹಾಕ್ತಾರಾ ಹರ್ಷ-ಭುವಿ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭುವಿ


    ಸಹಿ ಮಾಡಿ ದೂರ ಆಗುತ್ತಾ ಹವಿ ಜೋಡಿ?


    ಗೊತ್ತಿಲ್ಲದೇ ಹರ್ಷ-ಭುವಿ ಡಿವೋರ್ಸ್ ಪೇಪರ್ ಗೆ  ಸೈನ್ ಮಾಡಿದ್ದಾರೆ. ಹಾಗಾದ್ರೆ ಪ್ರೀತಿಸಿ ಮದುವೆ ಆದ ಜೋಡಿ ದೂರ ಆಗುತ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. ತನ್ನ ಆತ್ಮೀಯ ಸ್ನೇಹಿತೆ ಭುವಿಗೆ ಮೋಸ ಮಾಡಿದ್ದಾಳೆ. ವರೂಧಿನಿ ಪ್ಲ್ಯಾನ್ ಸಕ್ಸ್ ಆಗಿದೆ.


    ಇದನ್ನೂ ಓದಿ: Kannadathi: ಪ್ರೀ ವೆಡ್ಡಿಂಗ್ ಅಲ್ಲ, ಹರ್ಷ-ಭುವಿಯದ್ದು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್!


    ಹರ್ಷ ಬೇಕೇ ಬೇಕಂತೆ ವರುಗೆ!


    ಧಾರಾವಾಹಿ ಶುರುವಾದಗಿನಿಂದಲೂ ಹರ್ಷನನ್ನು ಕಂಡ್ರೆ ವರುಗೆ ತುಂಬಾ ಇಷ್ಟ. ಹುಚ್ಚಿ ತರ ಅವನ್ನು ಪ್ರೀತಿ ಮಾಡ್ತಾ ಇರ್ತಾಳೆ. ನನ್ನ ಹೀರೋ ಎಂದುಕೊಂಡು ಓಡಾಡುತ್ತಿರುತ್ತಾಳೆ. ಆದ್ರೆ ಹರ್ಷ ಭುವಿಯನ್ನು ಪ್ರೀತಿಸಿ ಮದುವೆ ಆಗ್ತಾನೆ. ಅದಕ್ಕೆ ವರು ಇಬ್ಬರಿಗೂ ಡಿವೋರ್ಸ್ ಕೊಡಿಸುತ್ತಿದ್ದಾಳೆ.


    colors Kannada serial, kannada serial, kannadathi serial, kannadathi serial today episode, harsh and bhuvi divorce plan, ಕನ್ನಡತಿ ಧಾರಾವಾಹಿ, ಗೊತ್ತಿಲ್ಲದೇ ಡಿವೋರ್ಸ್ ಪೇಪರ್ ಗೆ ಸಹಿ ಹಾಕ್ತಾರಾ ಹರ್ಷ-ಭುವಿ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವರು


    ಹರ್ಷ-ಭುವಿ ದೂರ ಆಗ್ತಾರಾ? ಇಬ್ಬರ ಬಳಿ ಸಹಿ ಮಾಡಿಸಿಕೊಂಡ ತಕ್ಷಣ ಅವರ ಸಂಬಂಧ ದೂರ ಆಗುತ್ತಾ? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: