• Home
 • »
 • News
 • »
 • entertainment
 • »
 • Kannadathi: ಸಾನಿಯಾ ಸೊಕ್ಕಡಗಿಸಿದ ಕನ್ನಡ ಟೀಚರ್!

Kannadathi: ಸಾನಿಯಾ ಸೊಕ್ಕಡಗಿಸಿದ ಕನ್ನಡ ಟೀಚರ್!

ಸಾನಿಯ ಸೊಕ್ಕು ಅಡಗಿಸಿದ ಕನ್ನಡ ಟೀಚರ್,

ಸಾನಿಯ ಸೊಕ್ಕು ಅಡಗಿಸಿದ ಕನ್ನಡ ಟೀಚರ್,

ಭುವಿ ಸಾನಿಯಾ ಬಳಿ ಒಂದು ಸತ್ಯವನ್ನು ಹೇಳ್ತಾಳೆ. ಅದನ್ನು ಕೇಳಿ ಸಾನಿಯಾ ಶಾಕ್ ಆಗಿದ್ದಾಳೆ. ರತ್ನಮ್ಮ ನಿಮ್ಮನ್ನು ಎಂಡಿ ಪೋಸ್ಟ್ ನಿಂದ ತೆಗೆಯಲು ನಿರ್ಧಾರ ಮಾಡಿದ್ದಾರೆ. ಆ ವಿಷ್ಯ ನನ್ನ ಬಳಿ ಹೇಳಿದ್ದಾರೆ ಎಂದು ಹೇಳ್ತಾಳೆ. ಅದನ್ನು ಕೇಳಿ ಸಾನಿಯಾ ಶಾಕ್ ಆಗಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Kannada Serial Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮನ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದು, ಮತ್ತೆ ಆಸ್ಪತ್ರೆ ಸೇರೋ ಸಾಧ್ಯತೆ ಇದೆ. ಇನ್ನು ಎಂಡಿ ಸ್ಥಾನದಿಂದ ಇಳಿಯಲು ರೆಡಿಯಾಗಿರಿ ಎಂದು ಸಾನಿಯಾಗೆ ಭುವಿ ವಾರ್ನಿಂಗ್ ಮಾಡಿದ್ದಾಳೆ.


  ಅಮ್ಮಮ್ಮ ಕಂಪನಿಯ 25ನೇ ವಾರ್ಷಿಕ ಸಭೆ
  ರತ್ನಮಾಲಾ ಒಡೆತನದ ಕಂಪನಿಯ 25ನೇ ವಾರ್ಷಿಕ ಸಭೆ ಇದೆ. ಅದನ್ನು ರತ್ನಮಾಲಾ ಅವರೇ ನೋಡಿಕೊಳ್ಳಬೇಕು. ಆದ್ರೆ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅದನ್ನು ನಿಭಾಯಿಸಲು ಆಗುತ್ತಿಲ್ಲ. ಅಮ್ಮಮ್ಮ ತನಗೆ ಆರೋಗ್ಯ ಸರಿ ಇಲ್ಲ. ಸುಸ್ತು ಆಗ್ತಾ ಇದೆ. ನನ್ನ ಕೈಯಲ್ಲಿ ಸಭೆ ಮಾಡಲು ಆಗಲ್ಲ.


  ಹಾಗಾಗಿ ಭುವಿ ನೀನೇ ಇದನ್ನು ನೋಡಿಕೋ ಎಂದು ಎಲ್ಲ ಫೈಲ್ ಗಳನ್ನು ಭುವಿ ಕೈಲಿ ಇಡುತ್ತಾರೆ. ಭುವಿ ಬೇಡ ಅಮ್ಮ ಅಂದ್ರೂ ಕೇಳಲ್ಲ. ನನ್ನ ಸ್ಥಾನದಲ್ಲಿ ನಿಂತು ಎಲ್ಲ ಜವಾಬ್ದಾರಿ ನಿರ್ವಹಿಸು. ಯಾವುದೇ ನಿರ್ಧಾರ ಇದ್ರೂ ನೀನೇ ತೆಗೆದುಕೋ ಎಂದು ದೊಡ್ಡ ಜವಾಬ್ದಾರಿ ನೀಡ್ತಾರೆ.


  ಅಮ್ಮಮ್ಮನ ಸ್ಥಾನದಲ್ಲಿದ್ದು ಭುವಿ ಸಭೆ
  ಅಮ್ಮಮ್ಮ ಅಷ್ಟು ಕೇಳಿಕೊಂಡ ಮೇಲೆ ಭುವಿ ಓಕೆ ಎಂದು ಒಪ್ಪಿ, ವಾರ್ಷಿಕ ಸಭೆಗೆ ಹಾಜರಾಗಿದ್ದಾಳೆ. ಅಲ್ಲಿದ್ದವರೆಲ್ಲಾ ಕೆಲವು ಪ್ರಶ್ನೆಗಳಿಗೆ ರತ್ನಮಾಲಾ ಮೇಡಂ ಉತ್ತರ ನೀಡಬೇಕು. ಅವರೇ ಬರಬೇಕು ಎನ್ನುತ್ತಾರೆ. ಅಲ್ಲೇ ಇದ್ದ ಸಾನಿಯಾ ಕೂಡ ಅದನ್ನೇ ಹೇಳ್ತಾಳೆ. ಆದ್ರೆ ಭುವಿ ಎಲ್ಲರ ಮನವೊಲಿಸಿ ತಾನೇ ಈ ಸಭೆ ನಡೆಸುವುದಾಗಿ ಹೇಳ್ತಾಳೆ. ಅದನ್ನು ನೋಡಿ ಅಮ್ಮಮ್ಮ ಖುಷಿ ಆಗ್ತಾರೆ.


  ಇದನ್ನೂ ಓದಿ: Lakshana: ಕಥೆಯಲ್ಲಿ ಚಂದ್ರಶೇಖರ್ ತಂಗಿಯೇ ಡೆವಿಲ್, ವಿಲನ್ ಆಗಿ ಬಂದಳು ಮಿಲ್ಲಿ ತಾಯಿ ಭಾರ್ಗವಿ! 


  ಸಾನಿಯಾ ಸೊಕ್ಕು ಅಡಗಿಸಿದ ಭುವಿ
  ಸಾನಿಯ ಸಭೆಗೆ ಯಾವುದೋ ಫೈಲ್ ತಂದಿರುತ್ತಾಳೆ. ರತ್ನಮಾಲಾ ಒಪ್ಪದ ಕಂಪನಿಗಳಿಗೆ ಡೀಲ್ ಕೊಡಿಸಿ, ಅದಕ್ಕೆ ಅಮ್ಮಮ್ಮ ಕೈಯಲ್ಲೇ ಸಹಿ ಹಾಕಿಸಿಕೊಳ್ಳೋಣ ಎಂದು ಪ್ಲ್ಯಾನ್ ಮಾಡಿದ್ಲು. ಆದ್ರೆ ಆ ಫೈಲ್ ನೋಡಿದ ಭುವಿ. ಇದು ಸಾಧ್ಯವಿಲ್ಲ. ಇದಕ್ಕೆಲ್ಲಾ ಸಹಿ ಮಾಡಲು ಆಗಲ್ಲ. ಇದಕ್ಕೆ ಕೆಲವೊಂದು ನಿಯಮಗಳಿವೆ ಎಂದು ಫೈಲ್ ಸಾನಿಯಾ ಬಳಿ ಪಡೆಯುತ್ತಾಳೆ. ಅಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತೆ.


  Colors Kannada serial, Kannada serial, Kannadathi Serial, Kannadathi serial today episode, Saniya MD position is end soon, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯ ಸೊಕ್ಕು ಅಡಗಿಸಿದ ಕನ್ನಡ ಟೀಚರ್, ಎಂಡಿ ಪಟ್ಟದಿಂದ ಇಳಿಯಲು ರೆಡಿಯಿರಿ ಎಂದು ಎಚ್ಚರಿಕೆ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಭುವಿ


  ಎಂಡಿ ಸ್ಥಾನದಿಂದ ತೆಗೆಯುತ್ತಾರೆ
  ಸಾನಿಯಾ ಅಷ್ಟೆಲ್ಲಾ ಮಾಡಿದ ಮೇಲೆ, ಭುವಿ ಸಾನಿಯಾ ಬಳಿ ಒಂದು ಸತ್ಯವನ್ನು ಹೇಳ್ತಾಳೆ. ಅದನ್ನು ಕೇಳಿ ಸಾನಿಯಾ ಶಾಕ್ ಆಗಿದ್ದಾಳೆ. ನೋಡಿ ಸಾನಿಯಾ ಅವರೇ, ನಾನು ಈ ವಿಷಯವನ್ನು ನಿಮ್ಮ ಬಳಿ ಹೇಳಬಾರದು ಎಂದುಕೊಂಡಿದ್ದೆ. ಆದ್ರೆ ನೀವು ಆಡ್ತಾ ಇರೋದನ್ನು ನೋಡಿದ್ರೆ ಹೇಳಬೇಕು ಅನ್ನಿಸುತ್ತಿದೆ. ರತ್ನಮ್ಮ ನಿಮ್ಮನ್ನು ಎಂಡಿ ಪೋಸ್ಟ್ ನಿಂದ ತೆಗೆಯಲು ನಿರ್ಧಾರ ಮಾಡಿದ್ದಾರೆ. ಆ ವಿಷ್ಯ ನನ್ನ ಬಳಿ ಹೇಳಿದ್ದಾರೆ ಎಂದು ಹೇಳ್ತಾಳೆ. ಅದನ್ನು ಕೇಳಿ ಸಾನಿಯಾ ಶಾಕ್ ಆಗಿದ್ದಾಳೆ.


  ಇದನ್ನೂ ಓದಿ: Hitler Kalyana: ಹಿಟ್ಲರ್ ಕಲ್ಯಾಣಕ್ಕೆ ಮೊದಲ ಹೆಂಡತಿಯಾಗಿ ಎಂಟ್ರಿ ಕೊಟ್ಟ ರಜಿನಿ!


  ತಲೆ ಸುತ್ತಿ ಕೆಳಗೆ ಬಿದ್ದ ಅಮ್ಮಮ್ಮ
  ರತ್ನಮಾಲಾ ಅವರಿಗೆ ಮರೆವಿ ಕಾಯಿಲೆ ಇದ್ದು ಅದು ಮೂರನೇ ಸ್ಟೇಜ್ ಗೆ ಬಂದಿದೆ. ಇಷ್ಟು ದಿವ ಅವರು ಮರೆಯುತ್ತಿದ್ದರು. ಅದರಿಂದ ಹೆಚ್ಚು ತೊಂದರೆ ಆಗುತ್ತಿರಲಿಲ್ಲ. ಈಗ ಅವರ ದೇಹದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಡಾಕ್ಟರ್ ಹೇಳಿದ್ದಾರೆ. ಇನ್ನು ಹರ್ಷ ಬಳಿ ಮಾತನಾಡುತ್ತಿರುವಾಗ ರತ್ನಮಾಲಾ ಕೆಳಗೆ ಬಿದ್ದು ಹೋಗ್ತಾರೆ. ಅದನ್ನು ಕಂಡ ಹರ್ಷ ಆತಂಕಗೊಂಡಿದ್ದಾನೆ.


  Colors Kannada serial, Kannada serial, Kannadathi Serial, Kannadathi serial today episode, Saniya MD position is end soon, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯ ಸೊಕ್ಕು ಅಡಗಿಸಿದ ಕನ್ನಡ ಟೀಚರ್, ಎಂಡಿ ಪಟ್ಟದಿಂದ ಇಳಿಯಲು ರೆಡಿಯಿರಿ ಎಂದು ಎಚ್ಚರಿಕೆ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಅಮ್ಮಮ್ಮ-ಹರ್ಷ


  ಸೊಕ್ಕಿನಿಂದ ಮೆರೆಯುತ್ತಿದ್ದ ಸಾನಿಯಾ ಎಂಡಿ ಪಟ್ಟದಿಂದ ಕೆಳಗೆ ಇಳಿಯುವ ಸಮಯ ಬಂದಿದೆ. ಸಾನಿಯಾ ಇನ್ನೇನು ಪ್ಲ್ಯಾನ್ ಮಾಡ್ತಾಳೋ ಗೊತ್ತಿಲ್ಲ. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

  Published by:Savitha Savitha
  First published: