• Home
  • »
  • News
  • »
  • entertainment
  • »
  • Kannadathi: ಕೋಮಾಗೆ ಹೋದ ರತ್ನಮಾಲಾ! ಅಮ್ಮಮ್ಮನ ನೆನೆದು ಹರ್ಷ ಕಣ್ಣೀರು!

Kannadathi: ಕೋಮಾಗೆ ಹೋದ ರತ್ನಮಾಲಾ! ಅಮ್ಮಮ್ಮನ ನೆನೆದು ಹರ್ಷ ಕಣ್ಣೀರು!

ಕೋಮಾಗೆ ಹೋಗೇ ಬಿಟ್ಟಳು ಅಮ್ಮಮ್ಮ

ಕೋಮಾಗೆ ಹೋಗೇ ಬಿಟ್ಟಳು ಅಮ್ಮಮ್ಮ

ಅಮ್ಮಮ್ಮ ಕೋಮಾಗೆ ಹೋದ ಹಿನ್ನೆಲೆ, ಆ ವಿಷ್ಯ ಕೇಳಿ ಮನೆಯವರೆಲ್ಲಾ ಆತಂಕಕೊಂಡಿದ್ದಾರೆ. ಬೇಸರ ಮಾಡಿಕೊಂಡಿದ್ದಾರೆ. ಅಮ್ಮಮ್ಮ ಇನ್ನು ಎಚ್ಚರಗೊಳ್ಳಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್  (Fans) ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಹರ್ಷ-ಭುವಿ ಇಬ್ಬರ ಸಂತೋಷವಾಗಿರುವುದನ್ನು ನೋಡಿ ಅಮ್ಮಮ್ಮ ಕಣ್ತುಂಬಿಕೊಂಡಿದ್ದಾಳೆ. ಅಲ್ಲದೇ ತಲೆ ಸುತ್ತಿ ಬಿದ್ದು ಕೋಮಾಗೆ (Coma) ಹೋಗಿದ್ದಾಳೆ.


    ಹರ್ಷ-ಭುವಿ ಜೋಡಿ ನೋಡಿ ಖುಷಿ


    ಹರ್ಷ ಮತ್ತು ಭುವಿ ತಾನು ಅಂದುಕೊಂಡಂತೆ ಗಂಡ-ಹೆಂಡತಿ ಆಗಿ ಖುಷಿ ಖುಷಿ ಆಗಿದ್ದಾರೆ. ಅದನ್ನು ನೋಡಿ ಅಮ್ಮಮ್ಮನು ಖುಷಿ ಆಗಿದ್ದಾಳೆ. ಮಗ, ಸೊಸೆ ಚೆನ್ನಾಗಿದ್ದಾರೆ ಸಾಕು. ತನ್ನ ಸ್ಥಾನವನ್ನು ಭುವಿ ತುಂಬುತ್ತಾಳೆ ಎಂದು ಅಮ್ಮಮ್ಮನಿಗೆ ಮನವರಿಕೆ ಆಗಿದೆ. ಅದಕ್ಕೆ ಸಂತೋಷವಾಗಿದ್ದಾಳೆ.


    ಹಳೆ ನೆನಪು ನೆನೆಯುತ್ತಾ ಬಿದ್ದೇ ಬಿಟ್ಟಳು


    ಇಬ್ಬರನ್ನು ನೋಡಿ ಖುಷಿಯಾಗಿರುವ ಅಮ್ಮಮ್ಮ ಹಳೆಯದನ್ನು ನೆನಪು ಮಾಡಿಕೊಂಡಿದ್ದಾಳೆ. ಭುವಿ ಸಿಕ್ಕಿದ್ದು, ಅವಳು ನೋಡಿಕೊಂಡಿದ್ದು, ಅವಳ ಹೆಸರಿಗೆ ಆಸ್ತಿ ಬರೆದಿದ್ದು, ತನ್ನ ಸೊಸೆ ಆಗಿದ್ದು, ಎಲ್ಲವನ್ನು ನೆನಪಿಸುತ್ತಾ ತಲೆ ಸುತ್ತಿ ಕೆಳಗೆ ಬಿದ್ದಿದ್ದಾಳೆ. ಎಷ್ಟು ಎಚ್ಚರಿಸಿದ್ರೂ ಎಚ್ಚರ ಆಗ್ತಾ ಇಲ್ಲ ಅದನ್ನು ನೋಡಿ ಮನೆಯವರು ಗಾಬರಿ ಆಗಿದ್ದಾರೆ.


    ಇದನ್ನೂ ಓದಿ: Ramachari: ಚಾರು ಕಾಪಾಡಲು ಹೋದ ರಾಮಾಚಾರಿಗೆ ಅಪಾಯ, ಒಂಟಿ ಮನೆಯಲ್ಲಿ ನಾಪತ್ತೆ? 


    ಕೋಮಾಗೆ ಹೋದ ಅಮ್ಮಮ್ಮ


    ತಲೆ ಸುತ್ತಿ ಬಿದ್ದ ಅಮ್ಮಮ್ಮನನ್ನು ದೇವ್ ಚೆಕ್ ಮಾಡಿದ್ದಾನೆ. ಹರ್ಷ ಗಾಬರಿ ಆಗಿದ್ದಾನೆ. ಕಳೆದ ಬಾರಿಯ ಹಾಗೇ ಮಲಗಿಕೊಂಡಿದ್ದಾರೆ. ಲೇಟ್ ಆಗಿ ಎಚ್ಚರ ಆಗಬಹುದು ಎಂದುಕೊಂಡಿದ್ರು. ಆದ್ರೆ ರತ್ನಮಾಲಾ ಅವರು ಕೋಮಾಗೆ ಹೋಗಿದ್ದಾರೆ. ಅದನ್ನೇ ಡಾಕ್ಟರ್ ಆಗಿರುವ ದೇವ್ ಹೇಳಿದ್ದಾನೆ. ಅಮ್ಮಮ್ಮ ಕೋಮಾಗೆ ಹೋಗಿದ್ದಾರೆ ಎಂದು.


    colors kannada serial, kannada serial, kannadathi serial, kannadathi serial today episode,rathnamala in coma situation, ಕನ್ನಡತಿ ಧಾರಾವಾಹಿ, ಕೋಮಾಗೆ ಹೋಗೇ ಬಿಟ್ಟಳು ರತ್ನಮಾಲಾ, ಅಮ್ಮಮ್ಮನ ನೆನೆದು ಹರ್ಷ ಕಣ್ಣೀರು!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news,karnataka news,
    ಕೋಮಾಗೆ ಹೋದ ಅಮ್ಮಮ್ಮ


    ಅಮ್ಮನ ನೆನೆದು ಹರ್ಷ ಕಣ್ಣೀರು
    ಅಮ್ಮಮ್ಮ ಕೋಮಾಗೆ ಹೋದ ಹಿನ್ನೆಲೆ, ಆ ವಿಷ್ಯ ಕೇಳಿ ಮನೆಯವರೆಲ್ಲಾ ಆತಂಕಕೊಂಡಿದ್ದಾರೆ. ಬೇಸರ ಮಾಡಿಕೊಂಡಿದ್ದಾರೆ. ಅಮ್ಮಮ್ಮ ಇನ್ನು ಎಚ್ಚರ ಗೊಳ್ಳಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹರ್ಷ ಮತ್ತು ಭುವಿ ಅಮ್ಮಮ್ಮನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.


    ಇನ್ನೊಂದೆಡೆ ಡಿವೋರ್ಸ್ ಪೇಪರ್ ಗೆ ಹರ್ಷ-ಭುವಿ ಸಹಿ
    ವರೂಧಿನಿಯೇ ಮುಂದೆ ನಿಂತು ಹರ್ಷ-ಭುವಿ ಮದುವೆ ಪ್ಲ್ಯಾನ್ ಎಲ್ಲಾ ಮಾಡಿದ್ಲು. ಅದಕ್ಕೆ ಅವರ ಮದುವೆ ರಿಜಿಸ್ಟ್ರೇಶನ್ ಜವಾಬ್ದಾರಿಯೂ ವರು ಮೇಲೆ ಇತ್ತು ಇದನ್ನೇ ಬಳಸಿಕೊಂಡು ಇಬ್ಬರ ಕೈನಲ್ಲಿ ಡಿವೋರ್ಸ್ ಪೇಪರ್ ಗೆ ಸೈನ್ ಮಾಡಿಸಿಕೊಂಡಿದ್ದಾಳೆ. ಹರ್ಷ-ಭುವಿ ಗೊತ್ತಿಲ್ಲದೇ ಆ ಪೇಪರ್ ಗಳಿಗೆ ಸಹಿ ಮಾಡಿದ್ದಾರೆ.


    ಇದನ್ನೂ ಓದಿ: Actress Mayuri: ಬಿಗ್ ಬಾಸ್‍ನಿಂದ ಆಚೆ ಬಂದ ಮಯೂರಿ ಪರಪಂಚವೇ ನೀನು ಅಂದ್ರು!


    ಸಹಿ ಮಾಡಿ ದೂರ ಆಗುತ್ತಾ ಹವಿ ಜೋಡಿ?
    ಗೊತ್ತಿಲ್ಲದೇ ಹರ್ಷ-ಭುವಿ ಡಿವೋರ್ಸ್ ಪೇಪರ್ ಗೆ ಸೈನ್ ಮಾಡಿದ್ದಾರೆ. ಹಾಗಾದ್ರೆ ಪ್ರೀತಿಸಿ ಮದುವೆ ಆದ ಜೋಡಿ ದೂರ ಆಗುತ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. ತನ್ನ ಆತ್ಮೀಯ ಸ್ನೇಹಿತೆ ಭುವಿಗೆ ಮೋಸ ಮಾಡಿದ್ದಾಳೆ. ವರೂಧಿನಿ ಪ್ಲ್ಯಾನ್ ಸಕ್ಸ್ ಆಗಿದೆ.


    colors kannada serial, kannada serial, kannadathi serial, kannadathi serial today episode,rathnamala in coma situation, ಕನ್ನಡತಿ ಧಾರಾವಾಹಿ, ಕೋಮಾಗೆ ಹೋಗೇ ಬಿಟ್ಟಳು ರತ್ನಮಾಲಾ, ಅಮ್ಮಮ್ಮನ ನೆನೆದು ಹರ್ಷ ಕಣ್ಣೀರು!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news,karnataka news,
    ಹರ್ಷ-ಭುವಿ


    ಅಮ್ಮಮ್ಮ ಇನ್ಮುಂದೆ ಎಚ್ಚರಗೊಳ್ಳುವುದೇ ಇಲ್ವಾ? ರತ್ನಮಾಲಾ ತನ್ನ ಎಲ್ಲಾ ಜವಾಬ್ದಾರಿಯನ್ನು, ಆಸ್ತಿಯನ್ನು ಸೌಪರ್ಣಿಕಾಗೆ ಬರೆದಿರುವುದು ಗೊತ್ತಾಗುತ್ತಾ? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು