Kannadathi Serial: ಧೂಮಪಾನ ನಿಷೇಧ ಜಟಾಪಟಿಯಲ್ಲಿ ಗೆಲುವು ಯಾರಿಗೆ? ಮುಂದಿದೆ ಬಿಗ್ ಟ್ವಿಸ್ಟ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಕನ್ನಡ ಭಾಷೆಗೆ ವಿಶೇಷ ಗೌರವವನ್ನು ನೀಡುತ್ತಿರುವ ಧಾರಾವಾಹಿಯು ಸಂಸ್ಕೃತಿ ಆಚಾರ ವಿಚಾರಗಳಿಗೆ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ.

ಸಾನಿಯಾ-ಭುವಿ

ಸಾನಿಯಾ-ಭುವಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಕೂಡ ಒಂದು. ಕನ್ನಡ ಭಾಷೆಗೆ ವಿಶೇಷ ಗೌರವವನ್ನು ನೀಡುತ್ತಿರುವ ಧಾರಾವಾಹಿಯು ಸಂಸ್ಕೃತಿ ಆಚಾರ ವಿಚಾರಗಳಿಗೆ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಇದೀಗ ಹರ್ಷಕುಮಾರ್ (Harsha Kumar) ಮತ್ತು ಭುವನೇಶ್ವರಿಯ (Bhuvaneshwari) ಮದುವೆಯ ಸಂಚಿಕೆಗಳ ಬಳಿಕ ಧಾರಾವಾಹಿಯು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಮಧ್ಯಮ ಕುಟುಂಬ ಶ್ರೀಮಂತ ಮನೆಯ ಸೊಸೆಯಾಗಿ ಭುವನೇಶ್ವರಿ ತನ್ನ ಕರ್ತವ್ಯವನ್ನು ನಿಭಾಯಿಸುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ. ಪ್ರತಿಯೊಂದು ಸಂಚಿಕೆಯಲ್ಲೂ ಹೊಸ ಹೊಸ ತಿರುವುಗಳ ಮೂಲಕ ಈ ಧಾರಾವಾಹಿಯೂ ಪ್ರೇಕ್ಷಕರನ್ನು ಮನರಂಜಿಸುತ್ತಿದೆ.

    ಧೂಮಪಾನ ನಿಷೇಧ ವಿಚಾರದಲ್ಲಿ ಗೆಲುವು ಯಾರಿಗೆ?

    ಈಗಾಗಲೇ ಹಲವಾರು ಬಾರಿ ಭುವನೇಶ್ವರಿ ಮತ್ತು ಸಾನಿಯಾ ನಡುವೆ ಭಿನ್ನಾಭಿಪ್ರಾಯಗಳು ಮೂಡಿಬಂದಿದೆ. ಅಷ್ಟೇ ಅಲ್ಲದೆ ಸಾನಿಯಾ ತನ್ನ ಅಧಿಕಾರದ ಅಹಂನಿಂದ ಭುವನೇಶ್ವರಿಯನ್ನು ಪದೇ ಪದೇ ಎಲ್ಲಾ ವಿಚಾರಗಳಲ್ಲೂ ನೋಯಿಸುತ್ತಾ ಬಂದಿದ್ದಾಳೆ. ಅಧಿಕಾರ ದುರುಪಯೋಗ ಮಾಡಿಕೊಂಡು ತನ್ನ ಸ್ವಂತ ನಿಲುವನ್ನು ಮಾಲಾ ಇನ್ಸ್ಟಿಟ್ಯೂಷನ್ ಮೇಲೆ ಹಾಕಲು ಪ್ರಯತ್ನ ಪಡುತ್ತಿದ್ದಾಳೆ.

    ಇತ್ತೀಚೆಗಷ್ಟೇ ಮದುವೆಯಾಗಿ ಮತ್ತೆ ಉಪನ್ಯಾಸ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಭುವನೇಶ್ವರಿ ಮತ್ತು ಸಾನಿಯಾಳ ಮಧ್ಯೆ ಕಾಲೇಜ್ ವಿಚಾರವಾಗಿ ಆಗಾಗ ಭಿನ್ನಾಭಿಪ್ರಾಯಗಳು ಎದುರಾಗುತ್ತಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ತರಗತಿಯೊಳಗೆ ಒಬ್ಬ ವಿದ್ಯಾರ್ಥಿ ಸಿಗರೇಟ್ ಸೇದುವುದನ್ನು ಕಂಡ ಭುವನೇಶ್ವರಿ ಕೋಪಗೊಂಡಿದ್ದಾರೆ.

    ಅಷ್ಟೇ ಅಲ್ಲದೆ ಮುಂದೆ ಕಾಲೇಜಿನಲ್ಲಿ ಧೂಮಪಾನ ಮತ್ತು ಮದ್ಯಪಾನ ಸಂಪೂರ್ಣವಾಗಿ ನಿಷೇಧವಾಗಬೇಕು ಎನ್ನುವ ವಿಚಾರವನ್ನು ಕಡ್ಡಾಯ ಮಾಡಬೇಕು ಎಂದು ಪ್ರಾಂಶುಪಾಲರಲ್ಲಿ ವಿನಂತಿಸಿಕೊಂಡಿದ್ದಾಳೆ .ಆದರೆ ಈ ಕಟ್ಟುಪಾಡು ಕಾಲೇಜು ವಿದ್ಯಾರ್ಥಿಗಳಿಗೆ ಮಾಡಬಾರದು ಎಂದು ಭುವಿಗೆ ಸವಾಲಾಗಿ ನಿಂತಿದ್ದಾಳೆ.

    ಇದನ್ನೂ ಓದಿ: Paaru Serial: ರಾಣಾ ಬಲೆಯಿಂದ ಪಾರ್ವತಿಯನ್ನು ರಕ್ಷಿಸುತ್ತಾನಾ ಆದಿ? ಮುಂದೆ ಇದೆಯಾ ಬಿಗ್ ಟ್ವಿಸ್ಟ್

    ಇದೇ ವಿಚಾರವಾಗಿ ಇದೀಗ ಭುವಿ ಮತ್ತು ಸಾನಿಯಾಳ ಮತ್ತೆ ಮಾತು ಕೂಡ ಆಗಿದೆ. ಅಷ್ಟೇ ಅಲ್ಲದೆ ಸಾನಿಯಾ ತನ್ನ ಅಧಿಕಾರದಿಂದ ಭುವಿಯನ್ನು ವಿಪರೀತವಾಗಿ ಪ್ರಶ್ನಿಸಿದ್ದಾಳೆ. ಎಲ್ಲಾ ವಿಚಾರಗಳಲ್ಲೂ ಮೌನವಾಗಿ ಸಹಿಸಿಕೊಂಡು ಹೋಗುತ್ತಿದ್ದ ಭುವಿ ಇದೇ ಮೊದಲ ಬಾರಿಗೆ ಸಾನಿಯಳಿಗೆ ತನ್ನ ದಿಟ್ಟ ನಿಲುವನ್ನು ಹೇಳಿದ್ದಾಳೆ. ಧೂಮಪಾನ ನಿಷೇಧ ವಿಚಾರದಲ್ಲಿ ಗೆಲುವು ಯಾರಿಗೆ ದೊರಕುತ್ತದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಅಡಗಿದೆ.

    ಇನ್ನು ವಿಲ್ ವಿಚಾರ ಮನೆಯಲ್ಲಿ ಎಲ್ಲರಿಗೂ ತಿಳಿದರೆ ಭುವನೇಶ್ವರಿಯು ಆ ಮನೆಯಲ್ಲಿ ತನ್ನ ಬಾಳು ಹೇಗೆ ನಡೆಸುತ್ತಾರೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. ಸ್ವಾಭಿಮಾನಿ ಭುವಿ ವಿಲ್ ವಿಚಾರವನ್ನು ತಿಳಿದುಕೊಂಡರೆ ಅದನ್ನು ಹೇಗೆ ಸ್ವೀಕರಿಸುತ್ತಾಳೆ ಎನ್ನುವ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಕಾದುನೋಡಬೇಕಿದೆ. ಅಷ್ಟೇ ಅಲ್ಲದೆ ಅಮ್ಮಮ್ಮನ ಆರೋಗ್ಯ ಸ್ಥಿತಿ ಕೂಡ ಹದಗೆಡುತ್ತಿತ್ತು ಮುಂದಿನ ಸಂಚಿಕೆಗಳಲ್ಲಿ ಪ್ರತಿದಿನ ಹೊಸ ತಿರುವುಗಳು ಬರುವುದಂತೂ ಸುಳ್ಳಲ್ಲ.

    ಇದನ್ನೂ ಓದಿ: Mouna Guddemane: ರಾಮಾಚಾರಿಯ ಚಾರು ಡಾಕ್ಟರ್​ ಆಗ್ಬೇಕಿತ್ತಂತೆ, ನಟಿ ಮೌನ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

    ಹರ್ಷ- ಭುವಿ ನಡುವೆ ಭಿನ್ನಾಭಿಪ್ರಾಯ ತಂದಿಡಲು ಪ್ರಯತ್ನಿಸುತ್ತಿದ್ದಾಳೆ ಸಾನಿಯಾ

    ಹರ್ಷ- ಭುವಿ ನಡುವೆ ಭಿನ್ನಾಭಿಪ್ರಾಯ ತಂದಿಡಲು ಪ್ರಯತ್ನಿಸಿತ್ತಿದ್ದಾಳೆ ಸಾನಿಯಾ
    ಈಗಾಗಲೇ ಅಮ್ಮಮ್ಮ ಸಂಪೂರ್ಣ ಆಸ್ತಿಗೆ ತಾನೊಬ್ಬನೆ ವಾರಸುದಾರ ಎಂದು ಅಂದುಕೊಂಡಿರುವ ಹರ್ಷನಿಗೆ ಆಫೀಸ್ ನಲ್ಲಿ ತನ್ನ ಸಾಮ್ರಾಜ್ಯಕ್ಕೆ ತಾನೇ ಒಡಯನಾಗಿರಬೇಕು ಎನ್ನುವ ಅಹಂ ಇದೆ.

    ಈ ಬಗ್ಗೆ ತಿಳಿದುಕೊಂಡಿರುವ ಸಾನಿಯಾ ಇದೇ ವಿಚಾರವಾಗಿ ಹರ್ಷ ಮತ್ತು ಭುವಿ ನಡುವೆ ಭಿನ್ನಾಭಿಪ್ರಾಯ ತಂದಿಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಪ್ರೇಕ್ಷಕರಿಗೆ ಭಾಸವಾಗುತ್ತಿದೆ. ಜೂನಿಯರ್ ಅಮ್ಮಮ್ಮ ಅಲಿಯಾಸ್ ಭುವನೇಶ್ವರಿ ರತ್ನಮಾಲ ಅವರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಹೇಗೆ ಮುಂದುವರಿಸುತ್ತಾರೆ ಎನ್ನುವ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ.
    Published by:Swathi Nayak
    First published: