ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಾದ ಕನ್ನಡತಿಯಲ್ಲಿ (Kanndathi) ಇದೀಗ ಮದುವೆಯ ಸಂಭ್ರಮ. ಹರ್ಷ (Harsha) ಹಾಗೂ ಭುವನೇಶ್ವರಿಯ (Bhuvaneshwari) ಕನ್ನಡದ ಮದುವೆಯನ್ನು ನೋಡಲು ಪ್ರೇಕ್ಷಕರೆಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಈ ಧಾರವಾಹಿಯಲ್ಲಿ ಪ್ರತಿದಿನ ಹೊಸ ಹೊಸ ತಿರುವುಗಳು ಬಂದು ಭುವನೇಶ್ವರಿ ಹಾಗೂ ಹರ್ಷಕುಮಾರ್ ಮದುವೆ ಸುಸೂತ್ರವಾಗಿಯೇ ನಡೆಯುತ್ತಾ ಎಂಬುದರ ಬಗ್ಗೆ ಪ್ರೇಕ್ಷಕರಲ್ಲಿ ಸಂಶಯ ಮೂಡಿದೆ. ಸೈಕೋ ವರುದಿನಿ (Varudhin) ತನ್ನ ಹೀರೋ ಹರ್ಷನನ್ನು ಮದುವೆಯಾಗಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಭುವನೇಶ್ವರಿ ಎಷ್ಟೇ ಪ್ರಯತ್ನಪಟ್ಟರೂ ವರುದಿನಿ ವಾಸ್ತವವನ್ನು ಅರ್ಥೈಸಿಕೊಳ್ಳಲು ತಯಾರಿಲ್ಲ.
ತೀರಾ ಹದಗೆಡುತ್ತಿರುವ ಅಮ್ಮಮ್ಮನ ಆರೋಗ್ಯ
ಇತ್ತ ಅಮ್ಮಮ್ಮನ ಆರೋಗ್ಯ ತೀರಾ ಹದಗೆಡುತ್ತಿದೆ. ತನ್ನ ಮಗ ಮತ್ತು ತಾನೇ ಆರಿಸಿದ ಭುವನೇಶ್ವರಿ ಕಣ್ತುಂಬ ಕಳೆದುಕೊಳ್ಳುತ್ತೇನೆ ಎನ್ನುವ ಭರವಸೆಯಲ್ಲಿರುವ ಅಮ್ಮಮ್ಮನ ಆರೋಗ್ಯದ ಬಗ್ಗೆ ಪ್ರೇಕ್ಷಕರಲ್ಲಿ ಚಿಂತೆ ಅಡಗಿದೆ. ಸೊಸೆಯಾಗಿ ತಾಪ್ಸಿ ತನ್ನ ಕರ್ತವ್ಯವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಿದ್ದಾಳೆ.
ಮನೆಯ ಹಿರಿಯ ಸೊಸೆ ತಾಪ್ಸಿ ವೃತ್ತಿಯಲ್ಲಿ ವೈದ್ಯೆ ಹಾಗೂ ಅವಳ ಪತಿ ದೇವ ಕೂಡ ವೈದ್ಯ ಇದೀಗ ಅವರಿಬ್ಬರು ಅಮ್ಮಮ್ಮನ ಕಾಳಜಿಯನ್ನು ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ವೈದ್ಯೆಯಾಗಿ ತಾಪ್ಸಿ ತನ್ನ ಕರ್ತವ್ಯವನ್ನು ಉತ್ತಮ ಪ್ರೀತಿಯಲ್ಲಿ ನಿಭಾಯಿಸುತ್ತಿರುವುದು ಪ್ರೇಕ್ಷಕರು ಹೆಮ್ಮೆಯಿಂದ ನೋಡುತ್ತಿದ್ದಾರೆ.
ಇದನ್ನೂ ಓದಿ: Actress Ashvini: ಸೂಪರ್ ಫೋಟೋಶೂಟ್ನಲ್ಲಿ ಮಿಂಚಿದ ಮುದ್ದುಲಕ್ಷ್ಮಿ ಅಶ್ವಿನಿ, ನಟಿಯ ಲುಕ್ ನೋಡಿ ಫ್ಯಾನ್ಸ್ ಫಿದಾ
ಹೀರೋ ಗಾಗಿ ಜೀವ ಕಳೆದುಕೊಳ್ಳಲು ತಯಾರಿರುವ ವರೂ
ಭುವನೇಶ್ವರಿಯ ಬಳಿ ಹೀರೋನನ್ನು ತನಗೆ ಬಿಟ್ಟು ಕೊಡು ಎಂದು ಅವಳ ಬೆಸ್ಟ್ ಫ್ರೆಂಡ್ ಸೈಕೋ ವರುಧಿನಿ ಕೇಳಿಕೊಂಡಿದ್ದಾಳೆ. ಭೂವಿ ಎಷ್ಟೇ ಪ್ರಯತ್ನಪಟ್ಟರೂ ವಾಸ್ತವವನ್ನು ಅರ್ಥೈಸಿಕೊಳ್ಳಲು ವರೂ ತಯಾರಿಲ್ಲ.
ಹರ್ಷನನ್ನು ಮದುವೆಯಾಗುವ ಪ್ರಯತ್ನ ಪಡುತ್ತಾಳೆ ಎನ್ನುವ ಬಗ್ಗೆ ಯಾರಿಗೂ ಅರಿವಿಲ್ಲ. ಅಷ್ಟೇ ಅಲ್ಲ ವರೂಗೆ ಈಗಲೂ ಹರ್ಷನ ಮೇಲೆ ಅದೇ ಪ್ರೀತಿ ಇದೆ ಎಂದು ಸ್ವತಃ ಭೂವಿಗೂ ತಿಳಿದಿಲ್ಲ.
ಹರ್ಷ ಅವಳ ಹೀರೋ. ಅವನನ್ನು ಪಡೆಯೋದಕ್ಕೋಸ್ಕರ ಅವಳು ಏನು ಮಾಡೋದಕ್ಕೂ ರೆಡಿ ಇದ್ದಾಳೆ. ಸದ್ಯಕ್ಕೆ ತಾನು ನಡೆಸ್ತಿರೋ ವೆಡ್ಡಿಂಗ್ ಪ್ಲಾನರ್ ಕಂಪನಿ 'ಸಪ್ತಪದಿ' ಮೂಲಕವೇ ಈ ಮದುವೆ ಮುರಿದುಬೀಳಿಸೋ ಪ್ಲಾನ್ ಮಾಡ್ತಿದ್ದಾಳೆ.
ವರ್ಕೌಟ್ ಆಗುತ್ತಾ ಸೈಕೋ ವರೂ ಪ್ಲಾನ್?
ಭುವನೇಶ್ವರಿ ಮತ್ತು ಹರ್ಷಕುಮಾರ್ ಮದುವೆ ನಡೆಯಬಾರದು ಎಂದು ಆತ್ಮಹತ್ಯೆಗೆ ಪ್ರಯತ್ನ ಕೂಡ ಪಟ್ಟಿದ್ದಾಳೆ ವರುದಿನಿ. ಇದೀಗ ವರೂ ಕೈಗೆ ಚೂರಿಯಿಂದ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾಳೆ. ಅಷ್ಟೇ ಅಲ್ಲಾ ಹಸೆಮಣೆ ಏರಬೇಕಿದ್ದಾ ಭುವಿ ಕೂಡ ವರೂ ಜೊತೆಗೆ ಆಸ್ಪತ್ರೆಗೆ ಹೋಗಿದ್ದಾಳೆ. ಹಸೆ ಮನೆಯಲ್ಲಿ ಕುಳಿತಿದ್ದ ಹರ್ಷ ಕೂಡ ಇದೀಗ ಅಮ್ಮನ ಜೊತೆ ಆಸ್ಪತ್ರೆಯ ಕಡೆಗೆ ಹೋಗಿದ್ದಾನೆ.
ಇದನ್ನೂ ಓದಿ: Reality Show: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಅಪ್ಪಾಜಿಯನ್ನು ನೆನೆದು ಭಾವುಕರಾದ ಶಿವಣ್ಣ
ಸಾನಿಯಾಳ ಜೊತೆ ಕೈಜೋಡಿಸಿದ ಸಾನಿಯಾ
ಇದೀಗ ವರೂಧಿನಿ ತನ್ನ ಕಡೆಯ ರೌಡಿಗಳನ್ನು ಮದುವೆ ಮನೆಯಲ್ಲಿ ಇರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಹರ್ಷನನ್ನು ನಾನೇ ಮದುವೆಯಾಗುವುದು ಎಂದು ದೃಢವಾಗಿ ಹೇಳುತ್ತಿದ್ದಾಳೆ. ಇತ್ತ ಕುತಂತ್ರಿ ಸಾನಿಯಾ ಕೂಡಾ ಮದುವೆ ನಿಲ್ಲಿಸುವ ಪಣತೊಟ್ಟಿದ್ದಳು. ಈಗ ವರೂಧಿನಿ ಕೂಡ ಸಾನಿಯಾಳ ಜೊತೆ ಕೈಜೋಡಿಸಿದ್ದಾಳೆ.
ವರೂಧಿನಿ ಹುಚ್ಚಾಟಕ್ಕೆ ಹರ್ಷ- ಭುವಿ ಮದುವೆ ಬಲಿಯಾಗುತ್ತಾ? ಅಮ್ಮಮ್ಮನ ಆರೋಗ್ಯ ಸ್ಥಿತಿ ಕಂಡು ವರೂಧಿನಿ ಹರ್ಷನನ್ನು ಮರೆತು ಮಾತುಕೊಟ್ಟಂತೆ ಹರ್ಷ ಮತ್ತು ಭುವನೇಶ್ವರಿಯ ಮದುವೆಯನ್ನು ಸುಸೂತ್ರವಾಗಿ ನಡೆಸಿಕೊಡುತ್ತಾಳಾ ವರೂಧಿನಿ? ಅದೇ ಮುಹೂರ್ತದಲ್ಲಿ ಆಸ್ಪತ್ರೆಯಲ್ಲೇ ಹರ್ಷ- ಭುವಿ ಮದುವೆಯಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ