Kannadathi Serial: ಹರ್ಷ-ಭುವಿ ಕನ್ನಡದ ಮದುವೆಯಾಗುತ್ತಿದ್ದಾರಂತೆ? ಏನಪ್ಪಾ ಇದರ ವಿಶೇಷತೆ?

ರತ್ಮಮಾಲಾ ಅವರ ಇಚ್ಛೆಯಂತೆ ಸಿಗಂದೂರು ಚೌಡೇಶ್ವರಿಯ ದರ್ಶನವಾಗಿದೆ. ಕೆಲವೇ ದಿನಗಳಲ್ಲಿ ಹರ್ಷ ಭುವಿ ಮದುವೆ ನೆರವೇರಲಿದೆ.ಕೊನೆಗೂ ಕನ್ನಡತಿಯಲ್ಲಿ ಕನ್ನಡದ ಮದುವೆ ನಡೆಯುತ್ತದೆ ಎನ್ನುವ ಸುಳಿ ವಷ್ಟೇ ದೊರಕುತ್ತಿದೆ.

ಹರ್ಷ-ಭುವಿ

ಹರ್ಷ-ಭುವಿ

  • Share this:
    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಕನ್ನಡತಿ' (Kannadathi) ಧಾರಾವಾಹಿಯಲ್ಲಿ ವೀಕ್ಷಕರು ಹರ್ಷ (Harsha), ಭುವಿ (Bhuvi) ಮದುವೆಗಾಗಿ ಎದುರು ನೋಡುತ್ತಿದ್ದಾರೆ, ಇವರಿಬ್ಬರು ಪರಸ್ಪರ ಪ್ರೀತಿ ಹೇಳಿಕೊಂಡು, ನಿಶ್ಚಿತಾರ್ಥದ ಜೊತೆಗೆ ಪ್ರಿ ವೆಡ್ಡಿಂಗ್ ಫೋಟೋಶೂಟ್ (Photoshoot) ಕೂಡ ಮಾಡಿಸಿಕೊಂಡಿರೋದು ಅಭಿಮಾನಿಗಳಿಗಂತೂ ಸಖತ್ ಖುಷಿ ನೀಡಿದೆ.  ಇದೀಗ ರೋಚಕ ಘಟ್ಟದತ್ತ ಸಾಗುತ್ತಿದೆ. ಹರ್ಷ ಮತ್ತು ಭುವನೇಶ್ವರಿ (ಸೌಪರ್ಣಿಕಾ) ಮದುವೆ ನಿಗದಿ ಆಗಿದೆ. ಮದುವೆಯ ಆಮಂತ್ರಣ ಪತ್ರಿಕೆಯ ಪೂಜೆ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ನೆರವೇರಿದೆ. ರತ್ಮಮಾಲಾ (Rathnamala) ಅವರ ಇಚ್ಛೆಯಂತೆ ಸಿಗಂದೂರು ಚೌಡೇಶ್ವರಿಯ ದರ್ಶನವಾಗಿದೆ. ಕೆಲವೇ ದಿನಗಳಲ್ಲಿ ಹರ್ಷ - ಭುವಿ ಮದುವೆ ನೆರವೇರಲಿದೆ.

    ಮೊದಲ ಪತ್ರಿಕೆಯನ್ನು ವರೂಧಿನಿಗೆ ನೀಡಬೇಕು ಎಂದು ಭುವಿ ಆಸೆ ಪಟ್ಟಿದ್ದಾಳೆ. ಹೀಗಿರುವಾಗ ಸರಿ ಹವಿ ( ಹರ್ಷ, ಭುವಿ) ಮದುವೆ ಎಲ್ಲಿ ನಡೆಯಲಿದೆ? ಯಾವ ಥೀಮ್‌ನಲ್ಲಿ ಹರ್ಷ, ಭುವಿ ಮದುವೆ ಆಗಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಿಗೆ ಕಾಡುತ್ತಿದೆ.

    ಹರ್ಷ ಮದುವೆಯ ಕಾಂಟ್ರ್ಯಾಕ್ಟ್‌ನ್ನು ವರೂಧಿನಿಗೆ ಒಪ್ಪಿಸಿದ್ದಾನೆ. ಆದರೆ ಯಾವ ರೀತಿಯಲ್ಲಿ ಮದುವೆಯಾಗಬೇಕು ಎಂಬುದನ್ನು ಈಗ ವರೂಧಿನಿಗೆ ಭುವಿ ಹೇಳಬೇಕಿದೆ.

    ಪಕ್ಕಾ ಹಳ್ಳಿಯ ಶೈಲಿಯಂತೆ ನಿಶ್ಚಿತಾರ್ಥ

    'ಕನ್ನಡತಿ' ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿಯ ಶೈಲಿಯಂತೆ ನಿಶ್ಚಿತಾರ್ಥ ನಡೆದಿತ್ತು, ಧಾರಾವಾಹಿಯ ಹೊಸ ವಿಡಿಯೋ ತುಣುಕೊಂದು ರಿಲೀಸ್ ಆಗಿದ್ದು, ಅದರಲ್ಲಿ ಹರ್ಷ, ಭುವಿ ಕನ್ನಡದ ಮದುವೆ ಆಗಲಿದೆ ಎಂದಿದೆ.  ಅಂತೆಯೇ ಮದುವೆ ಕೂಡ ವಿಭಿನ್ನವಾಗಿ ಕನ್ನಡದ ನೆಲದ ರೀತಿಯಲ್ಲಿ ನಡೆಯಬೇಕಲ್ಲವೇ? ಆದರೆ ಎಲ್ಲಿ ಮದುವೆಯಾಗಲಿದೆ ಎಂಬ ಗುಟ್ಟನ್ನು 'ಕನ್ನಡತಿ' ತಂಡ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

    ಇದನ್ನೂ ಓದಿ: Manasa Manohar: ಎಂಬಿಎ ಮಾಡಿ ನಟನಾ ಕ್ಷೇತ್ರಕ್ಕೆ ಬಂದ ಮೀರಾ - ಮಾನಸ ಮನೋಹರ ಲೈಫ್​ ಸ್ಟೋರಿ

    ಕನ್ನಡದ ಮದುವೆ ಆಗಲಿರುವ ಹರ್ಷ, ಭುವಿ

    ಯಾವ ರೀತಿ ಮದುವೆ ಆಗಲಿದೆ ಎಂಬ ಕುತೂಹಲಕ್ಕೆ ಈಗ ಸಣ್ಣ ಬ್ರೇಕ್ ಬಿದ್ದಿದೆ. ಕುವೆಂಪು ಅವರ ಮಂತ್ರ ಮಾಂಗಲ್ಯದ ರೀತಿ ಮದುವೆ ಆದರೂ ಭುವಿಗೆ ಓಕೆ, ಆದರೆ ಹರ್ಷನ ಮನಸ್ಸಿಗೂ ಇಷ್ಟವಾಗುವಂತೆ ಭುವಿ ಮದುವೆ ಆಗಲು ಬಯಸುತ್ತಿದ್ದಾಳೆ ಕನ್ನಡದ ಮದುವೆ ಆಗಲಿದೆ ಎಂಬುದಷ್ಟೇ ಗೊತ್ತಾಗಿದೆ.

    ರೋಸ್ ವೆಡ್ಡಿಂಗ್ ರಾಯಲ್ ವೆಡ್ಡಿಂಗ್ ಶೈಲಿಯ ಮದುವೆಗೂ ನಮಗೂ ಸಂಬಂಧನೇ ಇಲ್ಲ ಎನ್ನುವ ಭಾವನೆ ಬರುತ್ತಿದೆ. ಈ ರೀತಿಯ ಮದುವೆಗಳಲ್ಲಿ ನಾವು ಯಾರು ಯಾರದೋ ಪಾತ್ರಧಾರಿಗಳಾಗಿ ನಟಿಸುವಂತೆ ಭಾಸವಾಗುತ್ತದೆ. ಬದಲಾಗಿ ಕನ್ನಡದ ಮದುವೆ ಮಾಡಿದರೆ ಅದು ನಮ್ಮ ಮನದಲ್ಲಿ ಕೊನೆತನಕ ಅಚ್ಚರಿಯಾಗಿ ಉಳಿಯುತ್ತದೆ ಎಂದು ಕನ್ನಡ ಟೀಚರ್ ಭುವನೇಶ್ವರಿ ಹೇಳುತ್ತಾರೆ.

    ತನ್ನ ಪ್ರೇಯಸಿ ಹೇಳುವ ಪ್ರತಿ ಮಾತೂ ಹರ್ಷನಿಗೆ‌ ಅಚ್ಚುಮೆಚ್ಚು ಆದ್ದರಿಂದ ಹರ್ಷ ಕೂಡ ಕನ್ನಡದ ಮದುವೆ ಆಗುವ ಬಗ್ಗೆ ವರೂಧಿನಿ ಬಳಿ ತಮ್ಮ ಆಲೋಚನೆಗಳನ್ನು ‌ಹಂಚಿಕೊಳ್ಳುತ್ತಾನೆ.

    ಇದನ್ನೂ ಓದಿ: Paaru Serial: ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಅರಸನಕೋಟೆ ಒಡತಿಯಾಗುತ್ತಾಳಾ ಪಾರು? ಮುಂದೇನಿದೆ ಟ್ವಿಸ್ಟ್​?

    ರಾಯಲ್ ಮದುವೆಗೆ ಇಲ್ಲಿ ನಡೆಯಲ್ಲ ಎಂಬುದು ಪ್ರೇಕ್ಷಕರಿಗೆ ಮನದಟ್ಟಾಗಿದೆ

    ಮಾಡರ್ನ್ ಹುಡುಗಿ ವರೂಧಿನಿಗೆ ಕನ್ನಡದ ಮದುವೆ ಬಗ್ಗೆ ಯಾವುದೇ ಐಡಿಯಾ ಇಲ್ಲಾ. ನಮ್ಮ ಮದುಮಗ ಹರ್ಷ ಈ ಬಗ್ಗೆ ವರೂಧಿನಿ ಬಳಿ ಹೇಳುವ ಮಾತು ಇನ್ನೂ ಚೆನ್ನಾಗಿದೆ, ನ್ನಡದಲ್ಲಿ ಮದುವೆ ಆಗೋದು ಅಂದ್ರೆ ನಮ್ಮ ಭಾಷೆಯಲ್ಲಿ ನಮಗೆ ಅರ್ಥವಾಗುವ ರೀತಿ ಮಂತ್ರ ಹೇಳುವುದು, ಶಾಸ್ತ್ರ ಮಾಡುವುದು. ನಮಗೆ ನಾವು ಏನು ಮಾಡುತ್ತಿದ್ದೀವಿ ಅಂತ ಅರ್ಥ ಆದರೆ ಅದನ್ನು ಮನಸ್ಸಿಟ್ಟು ಮಾಡುತ್ತೀವಿ, ಮದುವೆ ಆಗಿ 50 ವರ್ಷ ಆದಮೇಲೆ ಅದು ನೆನಪಿರಬೇಕು.

    ಮೊನ್ನೆ ನಮ್ಮ ನಿಶ್ಚಿತಾರ್ಥದಲ್ಲಿ ಅಮ್ಮಮ್ಮನ ಮದುವೆಗೆ ಯಾರು ಬಂದಿದ್ರು, ಅವರಿಗೆ ಎಷ್ಟು ವಯಸ್ಸು ಆಗಿತ್ತು? ಯಾರು ಯಾರು ಸ್ಟೀಲ್ ಪಾತ್ರೆ ಕೊಟ್ಟರು ಅಂತ ಅವರು ಹೇಳ್ತಿದ್ರು, ಅದೆಲ್ಲ ಅವರಿಗೆ ನೆನಪಿದೆ. ಕೊನೆಗೂ ಕನ್ನಡತಿಯಲ್ಲಿ ಕನ್ನಡದ ಮದುವೆ ನಡೆಯುತ್ತದೆ ಎನ್ನುವ ಸುಳಿ ವಷ್ಟೇ ದೊರಕುತ್ತಿದೆ. ಇತರ ದಾರವಾಹಿಗಳಲ್ಲಿರುವಂತೆ ರಾಯಲ್ ಮದುವೆಗೆ ಇಲ್ಲಿ ನಡೆಯಲ್ಲ ಎಂಬುದು ಪ್ರೇಕ್ಷಕರಿಗೆ ಮನದಟ್ಟಾಗಿದೆ.
    Published by:Swathi Nayak
    First published: