ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ (Kannadathi Serial) ಜನಮೆಚ್ಚಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ನಾನಾ ಕಾರಣಗಳಿಂದ ಈ ಧಾರವಾಹಿ (Serial) ಜನ ಮೆಚ್ಚುಗೆ ಗಳಿಸಿದೆ. ‘ಕನ್ನಡತಿ’ ಧಾರಾವಾಹಿ ಇದೀಗ ರೋಚಕ ಘಟ್ಟದತ್ತ ಸಾಗುತ್ತಿದೆ. ಹರ್ಷ ಮತ್ತು ಭುವನೇಶ್ವರಿ (ಸೌಪರ್ಣಿಕಾ) ಮದುವೆ ನಿಗದಿ ಆಗಿದೆ. ಮದುವೆಯ ಆಮಂತ್ರಣ (Invitation) ಪತ್ರಿಕೆಯ ಪೂಜೆ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ನೆರವೇರಿದೆ. ಹರ್ಷ- ಭುವನೇಶ್ವರಿ ಮದುವೆಗೆ ಸಿಗಂದೂರು ಚೌಡೇಶ್ವರಿ ತಾಯಿಯ ಆಶೀರ್ವಾದ ಸಿಕ್ಕಿದೆ. ಇದೀಗ ವೀಕ್ಷಕರು ಹರ್ಷ ಮತ್ತು ಭುವಿ ಮದುವೆಗಾಗಿ ಎದುರು ನೋಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.
ವಿಲ್ ವಿಚಾರ ತಿಳಿಸದ ರತ್ನಮಾಲಾ
ವಿಲ್ ವಿಚಾರ ಅಮ್ಮಮ್ಮ ರತ್ನಮಾಲಾ ತಲೆಯಲ್ಲಿ ಕೊರೆಯುತ್ತಿದೆ. ವಿಲ್ ಬಗ್ಗೆ ಮಗ ಮತ್ತು ಭಾವಿ ಸೊಸೆಗೆ ಹೇಳಲು ಆಗದೆ ರತ್ನಮಾಲಾ ಒದ್ದಾಡುತ್ತಿದ್ದಾರೆ. ಆಸ್ತಿಗಾಗಿ ಸಾನಿಯಾ ಮತ್ತು ಸುದರ್ಶನ್ ಹಿಂದೆ ಬಿದ್ದಿರುವ ಕಾರಣ, ತಮ್ಮ ಇಡೀ ಆಸ್ತಿಯನ್ನ ರತ್ಮಮಾಲಾ ಭುವನೇಶ್ವರಿ (ಸೌಪರ್ಣಿಕಾ) ಹೆಸರಿಗೆ ಬರೆದಿದ್ದಾರೆ. ವಿಲ್ ಬರೆದಿರುವ ಬಗ್ಗೆ ಹರ್ಷನಿಗಾಗಲಿ, ಭುವಿಗಾಗಲಿ ಅಮ್ಮಮ್ಮ ಇನ್ನೂ ತಿಳಿಸಿಲ್ಲ. ವಿಲ್ ವಿಚಾರವನ್ನು ತಾವು ನಂಬಿರುವ ಸಿಗಂದೂರು ಚೌಡೇಶ್ವರಿ ಮಡಿಲಿಗೆ ರತ್ಮಮಾಲಾ ಹಾಕಿದ್ದಾರೆ. ದೇವರ ಮೇಲೆ ಭಾರ ಬಿಟ್ಟಿರುವ ರತ್ನಮಾಲಾ, ಮಗ ಮತ್ತು ಭಾವಿ ಸೊಸೆಯಿಂದ ಭಾಷೆ ತೆಗೆದುಕೊಂಡಿದ್ದಾರೆ.
‘’ನಿನಗೆ ಅಂತ ಬಂದಿರುವುದನ್ನ ಬಿಟ್ಟುಕೊಡಬಾರದು’’ ಅಂತ ಭುವನೇಶ್ವರಿ ಬಳಿ ಹಾಗೂ ‘’ಭವಿಷ್ಯದಲ್ಲಿ ಭುವಿಯನ್ನ ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಒಂಟಿ ಮಾಡಬಾರದು’’ ಅಂತ ಹರ್ಷನ ಬಳಿ ರತ್ನಮಾಲಾ ಮಾತು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Kannadathi Serial: ಕೊನೆಗೂ ಭುವಿಗೆ ಮುತ್ತು ನೀಡಿದ ಹರ್ಷ, ಮದುವೆ ನಿಲ್ಲಿಸಲು ವರೂಧಿನಿ ಪ್ರಯತ್ನ!
ಇದು ರತ್ಮಮಾಲಾ ಪಾತ್ರ ಎಂಡ್ ಆಗುವ ಮುನ್ಸೂಚನೆಯೇ?
ಕೊನೆಯ ದಿನಗಳನ್ನು ರತ್ನಮಾಲಾ ಎಣಿಸುತ್ತಿದ್ದಾರೆ. ಸಾಯುವ ಮುನ್ನ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಮಾಡಬೇಕು ಮತ್ತು ಮಗನ ಮದುವೆ ಮಾಡಬೇಕು ಅನ್ನೋದು ರತ್ನಮಾಲಾ ಅವರ ಆಸೆ. ರತ್ನಮಾಲಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಆಗಾಗ ತೀವ್ರ ಹೊಟ್ಟೆ ನೋವು ಕಾಡುತ್ತಿದೆ.
ರತ್ಮಮಾಲಾ ಅವರ ಇಚ್ಛೆಯಂತೆ ಸಿಗಂದೂರು ಚೌಡೇಶ್ವರಿಯ ದರ್ಶನವಾಗಿದೆ. ಕೆಲವೇ ದಿನಗಳಲ್ಲಿ ಹರ್ಷ - ಭುವಿ ಮದುವೆ ನೆರವೇರಲಿದೆ. ಹರ್ಷ - ಭುವಿ ಮದುವೆಯ ಬಳಿಕ ರತ್ನಮಾಲಾ ಪಾತ್ರ ಕೊನೆಗೊಳ್ಳುತ್ತದೆಯೇ..? ಮಗ ಮತ್ತು ಭಾವಿ ಸೊಸೆಯಿಂದ ರತ್ನಮಾಲಾ ಭಾಷೆ ತೆಗೆದುಕೊಂಡಿರುವುದನ್ನು ನೋಡಿದರೆ, ಸದ್ಯದಲ್ಲೇ ರತ್ನಮಾಲಾ ಅವರ ಪಾತ್ರ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಹರ್ಷ, ಭುವಿ ಮದುವೆ ವಿಷಯ ಅರಗಿಸಿಕೊಳ್ಳದ ವರೂಧಿನಿ
ಹರ್ಷ, ಭುವಿ ಮದುವೆಯಾಗುತ್ತಾರೆ ಎಂಬುದನ್ನೂ ಈ ಕ್ಷಣಕ್ಕೂ ವರುಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಜೋಡಿ ಒಟ್ಟಿಗೆ ನಗುನಗುತ್ತ ಇದ್ದರೆ ವರು ಸಹಿಸಿಕೊಳ್ಳಲ್ಲ. ಕುತಂತ್ರಿ ಸಾನಿಯಾ ಈ ಮದುವೆ ತಡೆಯಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಲೇ ಇದ್ದಾಳೆ. ಸಮಯ ಸಿಕ್ಕಾಗಲೆಲ್ಲ ವರೂಧಿನಿ ಬ್ರೇನ್ ವಾಶ್ ಮಾಡುವ ಇವಳು ಮುಂದೆ ಏನೇನು ಮಾಡುತ್ತಾಳೋ ಏನೋ! 'ಸೈಕೋ' ವರೂಧಿನಿಗೆ ಒಮ್ಮೆ ತನ್ನ ಪ್ರಾಣ ಸ್ನೇಹಿತೆ ಭುವಿ ಚಿಂತೆಯಾದರೆ, ಇನ್ನೊಮ್ಮೆ ತನ್ನ ಹೀರೋ ಹರ್ಷ ನೆನಪಾಗುತ್ತಾನೆ. ಹರ್ಷನ ವ್ಯಾಮೋಹಕ್ಕೆ ಬಿದ್ದು ಮುಂದೆ ವರು ಏನೂ ಬೇಕಾದರೂ ಮಾಡಿಯಾಳು, ಅದನ್ನು ಅಲ್ಲಗಳೆಯುವಂತಿಲ್ಲ.
ಇದನ್ನೂ ಓದಿ: Lakshana: ಎರಡನೇ ಮದುವೆ ಸಾಧ್ಯವೇ ಇಲ್ಲ ಎಂದ ಭೂಪತಿ; ನಾಗವಲ್ಲಿ ಅವತಾರ ತಾಳಿದ್ದಾಳೆ ಶ್ವೇತಾ..!
ವಿಘ್ನವಿಲ್ಲದೆ ನಡೆಯುತ್ತಾ ಹರ್ಷ-ಭುವಿ ಮದುವೆ?
ಹರ್ಷ - ಭುವಿ ಮದುವೆಗೆ ಅತ್ತ ಸಾನಿಯಾ, ಇತ್ತ ವರೂಧಿನಿ, ಮಧ್ಯ ಸುದರ್ಶನ್ ಒಂದಲ್ಲಾ ಒಂದು ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಿರುವಾಗ, ಹರ್ಷ ಮತ್ತು ಭುವಿ ಮದುವೆ ಯಾವುದೇ ವಿಘ್ನವಿಲ್ಲದೆ ನಡೆಯುತ್ತಾ? ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ