Kannadathi Serial: ವಿಘ್ನಗಳೆಲ್ಲಾ ಕಳೆದು ಸುಸೂತ್ರವಾಗಿ ನಡೆಯಿತು ಹರ್ಷ-ಭುವಿಯ ಕನ್ನಡದ ಮದುವೆ

ಹರ್ಷ ಭುವನೇಶ್ವರಿಯ ಮದುವೆ ಸಂಚಿಕೆಯನ್ನು ಕಳೆದ ಕೆಲವು ದಿನಗಳಿಂದ ಚೆನ್ನಾಗಿ ಮೂಡಿಬರುತ್ತಿದೆ. ಕನ್ನಡದ ಮದುವೆಯು ವಿಭಿನ್ನ ರೀತಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಯುತ್ತಿರುವುದು ಇನ್ನು ವಿಶೇಷ.

ಹರ್ಷ-ಭುವನೇಶ್ವರಿ

ಹರ್ಷ-ಭುವನೇಶ್ವರಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ ಕನ್ನಡತಿ (Kannadathi). ಹರ್ಷ ಭುವನೇಶ್ವರಿಯ (Bhuvaneshwari) ಮದುವೆ ಸಂಚಿಕೆಯನ್ನು ಕಳೆದ ಕೆಲವು ದಿನಗಳಿಂದ ಚೆನ್ನಾಗಿ ಮೂಡಿಬರುತ್ತಿದೆ. ಕನ್ನಡದ ಮದುವೆಯು ವಿಭಿನ್ನ ರೀತಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಯುತ್ತಿರುವುದು ಇನ್ನು ವಿಶೇಷ. ಇದೀಗ ಭುವನೇಶ್ವರಿ ಮತ್ತು ಹರ್ಷನ (Harsha) ಮದುವೆಯು ಆಸ್ಪತ್ರೆಯಲ್ಲಿ ನಡೆದಿದೆ. ಸೈಕೋ ವರುದಿನಿಯ (Varudhini) ಪ್ಲಾನ್ ಯಾವುದು ವರ್ಕೌಟ್ ಆದಂತೆ ಕಾಣಿಸುತ್ತಿಲ್ಲ. ಸಪ್ತಪದಿ ವೆಡ್ಡಿಂಗ್ ಪ್ಲಾನ್ ಅಡಿಯಲ್ಲಿ ಮದುವೆಯು ನಡೆಯುತ್ತಿದೆ. ಮದುವೆಯ ಶುರುವಾದ ಬಳಿಕವಂತೂ ವರೂಧಿನಿ ಹಲವಾರು ಬಾರಿ ನನ್ನ ಹೀರೋನನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

    ಆಸ್ಪತ್ರೆಯಲ್ಲೇ ಹರ್ಷ- ಭುವಿ ಮದುವೆ

    ವರೂಧಿನಿ ಹುಚ್ಚಾಟಕ್ಕೆ ಹರ್ಷ- ಭುವಿ ಮದುವೆ ಬಲಿಯಾಗುತ್ತಾ? ಅಮ್ಮಮ್ಮನ ಆರೋಗ್ಯ ಸ್ಥಿತಿ ಕಂಡು ವರೂಧಿನಿ ಹರ್ಷನನ್ನು ಮರೆತು ಮಾತುಕೊಟ್ಟಂತೆ ಹರ್ಷ ಮತ್ತು ಭುವನೇಶ್ವರಿಯ ಮದುವೆಯನ್ನು ಸುಸೂತ್ರವಾಗಿ ನಡೆಸಿಕೊಡುತ್ತಾಳಾ ವರೂಧಿನಿ? ಅದೇ ಮುಹೂರ್ತದಲ್ಲಿ ಆಸ್ಪತ್ರೆಯಲ್ಲೇ ಹರ್ಷ- ಭುವಿ ಮದುವೆಯಾಗುತ್ತಾ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಬಹಳ ಗೊಂದಲವಿತ್ತು ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದೆ.

    ಇದನ್ನೂ ಓದಿ: Actress Rajini: ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಅಮೃತವರ್ಷಿಣಿ ರಜನಿ, ಅಳುಮುಂಜಿ ಪಾತ್ರ ಸಾಕಾಯ್ತು ಎಂದಿದ್ದೇಕೆ ನಟಿ?

    ತಲೆಕೆಳಗಾದ ಸಾನಿಯ ಪ್ಲಾನ್

    ಹರ್ಷ ಭುವನೇಶ್ವರಿಯ ಮದುವೆಯನ್ನು ನಿಲ್ಲಿಸಲು ಆರಂಭದಿಂದಲೂ ಕುತಂತ್ರಿ ಸಾನಿಯಾ ಬಹಳ ಮಾಡುತ್ತಿದ್ದಳು. ಆದರೆ ಸಾನಿಯಾಳ ಯಾವುದೇ ಕುತಂತ್ರವೂ ಇಲ್ಲಿ ಫಲಿಸಲಿಲ್ಲ. ಭುವನೇಶ್ವರಿಯನ್ನು ಕೊಲ್ಲಲು ಸುಪಾರಿ ಕಿಲ್ಲರ್ಸ್ ಗಳಿಗೂ ದುಡ್ಡು ನೀಡಿದ್ದಳು ಸಾನಿಯಾ. ಆದರೆ ಸಾನಿಯಾಳ ಎಲ್ಲಾ ಪ್ಲಾನ್ ಗಳು ತಲೆಕೆಳಗಾಗಿದೆ. ಮುಂದೆ ಸಾನಿಯಾಳ ಪರಿಸ್ಥಿತಿ ಆ ಮನೆಯಲ್ಲಿ ಹೇಗಿರಬಹುದು ಎನ್ನುವುದನ್ನು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಮುಂದೆ ಸಾನಿಯಾಳ ಜೊತೆ ಸೈಕೊ ವರೂಧಿನಿ ಸೇರಿಕೊಂಡು ಹರ್ಷ ಹಾಗೂ ಭುವನೇಶ್ವರಿಯನ್ನು ಸಂತೋಷದಿಂದ ಸಂಸಾರ ನಡೆಸಲು ಬಿಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

    ಏರು-ಪೇರು ಆಗುತ್ತಿರುವ ಅಮ್ಮಮ್ಮನ ಆರೋಗ್ಯ ಸ್ಥಿತಿ

    ಕಳೆದ ಕೆಲವು ಸಂಚಿಕೆಗಳಿಂದ ಅಮ್ಮಮ್ಮನ ಆರೋಗ್ಯದಲ್ಲಿ ತೀರಾ ವ್ಯತ್ಯಾಸ ಕಂಡು ಬರುತ್ತಿದ್ದು ಮನೆಯ ಹಿರಿಯ ಸೊಸೆ ಡಾ. ತಾಪ್ಸಿ ಹಾಗೂ ಹಿರಿಯಮಗ ದೇವ್ ಅಮ್ಮಮ್ಮನನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ತನ್ನ ಮಗ ಮತ್ತು ತಾನೇ ಆರಿಸಿದ ಮನೆ  ಸೊಸೆಯ ಭುವನೇಶ್ವರಿಯ ಮದುವೆಯನ್ನು ಕಣ್ತುಂಬ ನೋಡುತ್ತೇನೆ ಎನ್ನುವ ಭರವಸೆಯಲ್ಲಿರುವ ಅಮ್ಮಮ್ಮ ಮದುವೆಯನ್ನು ಕಣ್ತುಂಬಿಕೊಳ್ಳಲು ಈಗ ಸಾಧ್ಯವಾಗಿದೆ. ಈ ಹಿಂದೆ ಹಲವು ಬಾರಿ ಅಮ್ಮಮ್ಮನ ಆರೋಗ್ಯದಲ್ಲಿ ಏರಿಇಳಿತಗಳು ಕಂಡುಬರುತ್ತಿತ್ತು. ಆದರೆ ಹರ್ಷನ ಮದುವೆ ಚೆನ್ನಾಗಿ ನಡೆಯಬೇಕು ಎಂದು ಮತ್ತು ಮುದ್ದಿನ ಮಗನ ಮದುವೆಯನ್ನು ಕಣ್ತುಂಬ ನೋಡ ಬೇಕka ಎಂದು ಅಮ್ಮಮ್ಮ ಪೈನ್ ಕಿಲ್ಲರ್ ಮಾತ್ರೆಗಳನ್ನು ಸೇವಿಸಿ ತಾತ್ಕಾಲಿಕವಾಗಿ ಆ ನೋವಿನಿಂದ ಹೊರಬರುತ್ತಿದ್ದರು.

    ಧಾರಾವಾಹಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಂತ್ರ ಹೇಳಿ ಕನ್ನಡದ ಮದುವೆಯನ್ನು ಅತ್ಯದ್ಭುತವಾಗಿ ಚಿತ್ರೀಕರಿಸಿ ಯಶಸ್ವಿಯಾಗಿದೆ ಈ ತಂಡ. ರಾಮಾಚಾರಿ ಧಾರಾವಾಹಿಯ ನಾಯಕ ರಾಮಾಚಾರಿ ಮೂಹೂರ್ತಕ್ಕೆ ಸರಿಯಾಗಿ ತಾಳಿ ಕಟ್ಟಿಸುವ ಒಳ್ಳೆಯ ರೀತಿಯಲ್ಲಿ ಆಸ್ಪತ್ರೆಯಲ್ಲಿ ಕಟ್ಟಿಸುವ ವ್ಯವಸ್ಥೆಯನ್ನು ಯಾರಿಗೂ ತೊಂದರೆಯಾಗದಂತೆ ನಡೆಸಿಕೊಟ್ಟಿದ್ದಾರೆ.

    ಇದನ್ನೂ ಓದಿ: Jothe Jotheyali Serial: ಜೊತೆ ಜೊತೆಯಲಿ ಸೀರಿಯಲ್​ಗೆ 30 ಮಿಲಿಯನ್ ವೀಕ್ಷಕರು! ವಿಶೇಷ ಏನು ಗೊತ್ತಾ?

    ವಿಲ್ ವಿಚಾರ ತಿಳಿದುಕೊಂಡರೆ ಅದನ್ನು ಭುವಿ ಹೇಗೆ ಸ್ವೀಕರಿಸುತ್ತಾಳೆ?

    ಇನ್ನು ವಿಲ್ ವಿಚಾರ ಮನೆಯಲ್ಲಿ ಎಲ್ಲರಿಗೂ ತಿಳಿದರೆ ಭುವನೇಶ್ವರಿಯು ಆ ಮನೆಯಲ್ಲಿ ತನ್ನ ಬಾಳು ಹೇಗೆ ನಡೆಸುತ್ತಾರೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. ಸ್ವಾಭಿಮಾನಿ ಭುವಿ ವಿಲ್ ವಿಚಾರವನ್ನು ತಿಳಿದುಕೊಂಡರೆ ಅದನ್ನು ಹೇಗೆ ಸ್ವೀಕರಿಸುತ್ತಾಳೆ ಎನ್ನುವ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಕಾದುನೋಡಬೇಕಿದೆ. ಅಷ್ಟೇ ಅಲ್ಲದೆ ಅಮ್ಮಮ್ಮನ ಆರೋಗ್ಯ ಸ್ಥಿತಿ ಕೂಡ ಹದಗೆಡುತ್ತಿತ್ತು ಮುಂದಿನ ಸಂಚಿಕೆಗಳಲ್ಲಿ ಪ್ರತಿದಿನ ಹೊಸ ತಿರುವುಗಳು ಬರುವುದಂತೂ ಸುಳ್ಳಲ್ಲ.
    Published by:Swathi Nayak
    First published: