Kannadathi: ಹರ್ಷ-ಭುವಿ ವೆಡ್ಡಿಂಗ್ ಕಾಂಟ್ರ್ಯಾಕ್ಟ್ ವರೂಧಿನಿ ಕೈಯಲ್ಲಿ! ತನ್ನ ಹೀರೋ ಮದುವೆ ತಾನೇ ಮಾಡ್ತಾಳಾ ವರೂ?

ಹರ್ಷ ಮತ್ತು ಭುವನೇಶ್ವರಿ (ಸೌಪರ್ಣಿಕಾ) ಮದುವೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಹರ್ಷ - ಭುವಿ ಮದುವೆಯ ತಯಾರಿ ಆರಂಭವಾಗಿದೆ

ಹರ್ಷ-ಭುವಿ

ಹರ್ಷ-ಭುವಿ

  • Share this:
    'ಕನ್ನಡತಿ' (Kannadathi) ಧಾರಾವಾಹಿಯಲ್ಲಿ ವೀಕ್ಷಕರು ಹರ್ಷ, ಭುವಿ ಮದುವೆಗಾಗಿ ಎದುರು ನೋಡುತ್ತಿದ್ದಾರೆ, ಇವರಿಬ್ಬರು ಪರಸ್ಪರ ಪ್ರೀತಿ ಹೇಳಿಕೊಂಡು, ನಿಶ್ಚಿತಾರ್ಥದ ಜೊತೆಗೆ ಪ್ರಿ ವೆಡ್ಡಿಂಗ್ ಫೋಟೋಶೂಟ್ (Photoshoot) ಕೂಡ ಮಾಡಿಸಿಕೊಂಡಿರೋದು ಅಭಿಮಾನಿಗಳಿಗಂತೂ ಸಖತ್ ಖುಷಿ ನೀಡಿದೆ. ಭುವಿ, ಹರ್ಷನ ಜೋಡಿಯನ್ನು ಈ ರೀತಿ ಕೂಡ ನೋಡಬಹುದಲ್ವಾ ಎಂದು ಅವರು ಸರ್ಪ್ರೈಸ್ (Surprise) ಆಗಿದ್ದಾರೆ. . ಇಷ್ಟು ದಿನ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಹರ್ಷ ಮತ್ತು ಭುವನೇಶ್ವರಿ (ಸೌಪರ್ಣಿಕಾ) ಮದುವೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಹರ್ಷ - ಭುವಿ ಮದುವೆಯ ತಯಾರಿ ಆರಂಭವಾಗಿದೆ. ಹೀಗಿರುವಾಗಲೇ, ‘ವೆಡ್ಡಿಂಗ್ ಪ್ಲಾನರ್’ (Wedding Planner) ವರೂಧಿನಿಗೆ ಹರ್ಷ ಕುಮಾರ್ ಮೂರು ಕಂಡೀಷನ್ ಹಾಕಿದ್ದಾರೆ.

    ವಿಲ್ ವಿಚಾರ ತಿಳಿಸದ ರತ್ನಮಾಲಾ

    ವಿಲ್ ವಿಚಾರವನ್ನು ತಾವು ನಂಬಿರುವ ಸಿಗಂದೂರು ಚೌಡೇಶ್ವರಿ ಮಡಿಲಿಗೆ ರತ್ಮಮಾಲಾ ಹಾಕಿದ್ದಾರೆ. ದೇವರ ಮೇಲೆ ಭಾರ ಬಿಟ್ಟಿರುವ ರತ್ನಮಾಲಾ, ಮಗ ಮತ್ತು ಭಾವಿ ಸೊಸೆಯಿಂದ ಭಾಷೆ ತೆಗೆದುಕೊಂಡಿದ್ದಾರೆ. ಆಸ್ತಿಗಾಗಿ ಸಾನಿಯಾ ಮತ್ತು ಸುದರ್ಶನ್ ಹಿಂದೆ ಬಿದ್ದಿರುವ ಕಾರಣ, ತಮ್ಮ ಇಡೀ ಆಸ್ತಿಯನ್ನ ರತ್ಮಮಾಲಾ ಭುವನೇಶ್ವರಿ (ಸೌಪರ್ಣಿಕಾ) ಹೆಸರಿಗೆ ಬರೆದಿದ್ದಾರೆ. ಇದೀಗ ಸೌಪರ್ಣಿಕಾ (ಭುವನೇಶ್ವರಿ) ಮತ್ತು ಹರ್ಷನ ಮದುವೆ ನಿಗದಿ ಆಗಿದೆ. ವಿಲ್ ಬರೆದಿರುವ ಬಗ್ಗೆ ಹರ್ಷನಿಗಾಗಲಿ, ಭುವಿಗಾಗಲಿ ಅಮ್ಮಮ್ಮ ಇನ್ನೂ ತಿಳಿಸಿಲ್ಲ.

    ‘’ನಿನಗೆ ಅಂತ ಬಂದಿರುವುದನ್ನ ಬಿಟ್ಟುಕೊಡಬಾರದು’’ ಅಂತ ಭುವನೇಶ್ವರಿ ಬಳಿ ಹಾಗೂ ‘’ಭವಿಷ್ಯದಲ್ಲಿ ಭುವಿಯನ್ನ ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಒಂಟಿ ಮಾಡಬಾರದು’’ ಅಂತ ಹರ್ಷನ ಬಳಿ ರತ್ನಮಾಲಾ ಮಾತು ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: Abhinav Vishwanathan: ಎಂಜಿನಿಯರ್​ ನಟನಾದ ಇಂಟರೆಸ್ಟಿಂಗ್ ಕಥೆ - ಇಂಚರಾಳ ಅಗಸ್ತ್ಯನ ರಿಯಲ್​ ಸ್ಟೋರಿ ಇದು

    ವರೂಧಿನಿಗೆ ವೆಡ್ಡಿಂಗ್ ಕಾಂಟ್ರ್ಯಾಕ್ ನೀಡಲು ಹರ್ಷನ ಒಪ್ಪಿಗೆ

    ವರೂಧಿನಿಗೆ ವೆಡ್ಡಿಂಗ್ ಕಾಂಟ್ರ್ಯಾಕ್ ನೀಡಲು ಹರ್ಷ ಒಪ್ಪಿಗೆ ನೀಡಿದ್ದಾರೆ. ಹೇಳಿ ಕೇಳಿ ಹರ್ಷನ ಲವ್ವರ್ ವರೂಧಿನಿ. ಹೀಗಾಗಿ, ತಮ್ಮ ಮದುವೆಯ ಜವಾಬ್ದಾರಿಯನ್ನ ವರೂಧಿನಿಗೆ ನೀಡಲು ಹರ್ಷನಿಗೆ ಮನಸ್ಸಿಲ್ಲ. ಆದರೆ, ಭುವಿ ಕೇಳಿಕೊಂಡಿರುವುದರಿಂದ ತಮ್ಮ ಮದುವೆಗೆ ಯಾವುದೇ ಕಂಟಕ ಎದುರಾಗಬಾರದು ಎಂದು ಮುಂಜಾಗ್ರತೆ ವಹಿಸಿದ ಹರ್ಷ, ವರೂಧಿನಿಯೊಂದಿಗೆ ಅಗ್ರೀಮೆಂಟ್ ಮಾಡಿಕೊಂಡು ಮೂರು ಷರತ್ತು ವಿಧಿಸಿದ್ದಾರೆ. ಮುಹೂರ್ತದ ಪ್ರಕಾರ ಮದುವೆ ನಡೆಯಬೇಕು, ಮುಹೂರ್ತ ಯಾವುದೇ ಕಾರಣಕ್ಕೂ ಮಿಸ್ ಆಗಬಾರದು, ಈ ಎರಡೂ ಕಂಡೀಷನ್‌ ಮೀರೋ ಹಾಗಿಲ್ಲ ಎಂಬ ಮೂರು ಕಂಡೀಷನ್‌ಅನ್ನು ವರೂಧಿನಿಗೆ ಹರ್ಷ ಹಾಕಿದ್ದಾರೆ. ಅದಕ್ಕೆ ಒಲ್ಲದ ಮನಸ್ಸಿನಿಂದ ವರೂಧಿನಿ ಸಹಿ ಹಾಕಿದ್ದಾರೆ.

    ಇದನ್ನೂ ಓದಿ: Lakshana Serial: ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದ ಲಕ್ಷಣ ಧಾರಾವಾಹಿ

    ಹರ್ಷ - ಭುವಿ ಮದುವೆ ನಿಲ್ಲಿಸಲು ಸಾನಿಯಾ ಸಂಚು

    ಕುತಂತ್ರಿ ಸಾನಿಯಾ ಈ ಮದುವೆ ತಡೆಯಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಲೇ ಇದ್ದಾಳೆ. ಸಮಯ ಸಿಕ್ಕಾಗಲೆಲ್ಲ ವರೂಧಿನಿ ಬ್ರೇನ್ ವಾಶ್ ಮಾಡುವ ಇವಳು ಮುಂದೆ ಏನೇನು ಮಾಡುತ್ತಾಳೋ ಏನೋ! 'ಸೈಕೋ' ವರೂಧಿನಿಗೆ ಒಮ್ಮೆ ತನ್ನ ಪ್ರಾಣ ಸ್ನೇಹಿತೆ ಭುವಿ ಚಿಂತೆಯಾದರೆ, ಇನ್ನೊಮ್ಮೆ ತನ್ನ ಹೀರೋ ಹರ್ಷ ನೆನಪಾಗುತ್ತಾನೆ. ಹರ್ಷನ ವ್ಯಾಮೋಹಕ್ಕೆ ಬಿದ್ದು ಮುಂದೆ ವರು ಏನೂ ಬೇಕಾದರೂ ಮಾಡಿಯಾಳು, ಅದನ್ನು ಅಲ್ಲಗಳೆಯುವಂತಿಲ್ಲ. ಸಾನಿಯಾ ಹೇಗಾದರೂ ಮಾಡಿ ಹರ್ಷ - ಭುವಿ ಮದುವೆ ನಿಲ್ಲಿಸಬೇಕು  ಮಾಡುತ್ತಲೇ  ಸಂಚು ಇದ್ದಾಳೆ. ಇದಕ್ಕೆ ವರೂಧಿನಿಯನ್ನೇ ದಾಳವನ್ನಾಗಿ ಸಾನಿಯಾ ಉಪಯೋಗಿಸುತ್ತಿದ್ದಾಳೆ. ಈಗ ವರೂಧಿನಿಗೆ ಹರ್ಷ ಮತ್ತು ಭುವಿ ಮದುವೆ ನೆರವೇರಿಸುವ ಕಾಂಟ್ರ್ಯಾಕ್ಟ್ ಬೇರೆ ಸಿಕ್ಕಿದೆ. ಹೀಗಾಗಿ, ವರೂಧಿನಿ ಮೂಲಕವೇ ಹರ್ಷ - ಭುವಿ ಮದುವೆಗೆ ಸಾನಿಯಾ ಅಡ್ಡಗಾಲು ಹಾಕುತ್ತಾಳಾ..?

    ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಆಗಿ ಕಿರಣ್ ರಾಜ್, ಭುವಿ (ಸೌಪರ್ಣಿಕಾ) ಆಗಿ ರಂಜನಿ ರಾಘವನ್, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ, ವರೂಧಿನಿ ಆಗಿ ಸಾರಾ ಅಣ್ಣಯ್ಯ, ಸಾನಿಯಾ ಆಗಿ ಆರೋಹಿ ನೈನಾ ಅಭಿನಯಿಸುತ್ತಿದ್ದಾರೆ.
    Published by:Swathi Nayak
    First published: