Kannadathi Serial: ಕನ್ನಡತಿ ಧಾರಾವಾಹಿಯಲ್ಲಿ ಮತ್ತೆ ಬಿಗ್ ಟ್ವಿಸ್ಟ್! ಹೀರೋನ ಮದುವೆ ಆಗೇ ಆಗ್ತೀನಿ ಅಂದ ವರೂಧಿನಿ

ವರೂಧಿನಿ, ಸಾನಿಯ ಹರ್ಷನ ಚಿಕ್ಕಪ್ಪ ಇವರ ಕುಂತಂತ್ರದ ಮಧ್ಯೆ ‌ಮದುವೆಗೆ‌ ಹೇಗೆ ನಡೆಯುತ್ತದೆ ಎನ್ನುವ ಕಾತರತೆ ಕೂಡ ಪ್ರೇಕ್ಷಕರಲ್ಲಿದೆ‌. ಹರ್ಷ ಮತ್ತು ಭುವಿ ಮದುವೆ ಯಾವುದೇ ವಿಘ್ನವಿಲ್ಲದೆ ನಡೆಯುತ್ತಾ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.

ಕನ್ನಡತಿ ಸೀರಿಯಲ್

ಕನ್ನಡತಿ ಸೀರಿಯಲ್

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಜನ ಮೆಚ್ಚಿದ ಧಾರಾವಾಹಿಯಾಗಿ ಮೂಡಿ ಬರುತ್ತಿದೆ ಕನ್ನಡತಿ (Kannadathi) ಧಾರಾವಾಹಿ. ತನ್ನ ವಿಭಿನ್ನ ಕಥೆಯಿಂದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹರ್ಷ (Harsha) ಭೂವಿ ಮದುವೆಯ ಸಂಚಿಕೆಗಳನ್ನು ಕಣ್ತುಂಬ ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು. ಈಗಾಗಲೇ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ (Photo Shoot) ಮಾಡಿ ಪ್ರೇಕ್ಷಕರ ಮನಗೆದ್ದ ಹರ್ವಿ ಜೋಡಿಯು ಮತ್ತೆ ಇನ್ನು ಯಾವ ಸ್ಟೈಲ್ ನಲ್ಲಿ ಮದುವೆಯಾಗುತ್ತಾರೆ ಎನ್ನುವುದನ್ನು ನೋಡಲು ಕಾಯುತ್ತಿದ್ದಾರೆ. ವರೂಧಿನಿ, ಸಾನಿಯ (Saniya) ಹರ್ಷನ ಚಿಕ್ಕಪ್ಪ ಇವರ ಕುಂತಂತ್ರದ ಮಧ್ಯೆ ‌ಮದುವೆಗೆ‌ ಹೇಗೆ ನಡೆಯುತ್ತದೆ ಎನ್ನುವ ಕಾತರತೆ ಕೂಡ ಪ್ರೇಕ್ಷಕರಲ್ಲಿದೆ‌.

    ಉಪಾಯದಿಂದ ಹೀರೋನ ಮದುವೆಯಾಗುವ ಯೋಚನೆ ಮಾಡಿದ್ದಾಳಾ ವರು?

    ವರೂಧಿನಿಗೆ ಹರ್ಷನ ಮೇಲೆ ಎಲ್ಲಿಲ್ಲದ ಪ್ರೀತಿ. ನನ್ನ ಪ್ರೀತಿಗೋಸ್ಕರ ಏನು ಮಾಡಲು ಸಿದ್ಧರಿದ್ದಾಳೆ ವರೂ, ಆದರೆ ಹರ್ಷ ಎಂದಿಗೂ ಮರು ಅನ್ನು ಪ್ರೀತಿಯ ಭಾವನೆಯಿಂದ ನೋಡಿದವನಲ್ಲ ಅದನ್ನು ಅವಳಿಗೆ ಸಾಕಷ್ಟು ಬಾರಿ ಹೇಳಿದ್ದಾನೆ ಕೂಡ. ವರೂಧಿನಿ ಇದನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹೊರ ನೋಟದಲ್ಲಿ ತನ್ನ ಬೆಸ್ಟ್ ಫ್ರೆಂಡ್ ಮದುವೆಯ ವಿಚಾರದಲ್ಲಿ ಸಂತೋಷ ಇದೆ ಎಂದು ತೋರಿಸುತ್ತಿರುವ ವರೂನ ಮನಸ್ಸಿನಲ್ಲಿ ‌ಸಾಕಷ್ಟು ನೋವು ಮತ್ತೆ ಅಸಹನೆ‌ ಅಡಗಿದೆ.

    ಹೇಳಿ ಕೇಳಿ ಹರ್ಷನ ಲವ್ವರ್ ವರೂಧಿನಿ. ಹೀಗಾಗಿ, ತಮ್ಮ ಮದುವೆಯ ಜವಾಬ್ದಾರಿಯನ್ನ ವರೂಧಿನಿಗೆ ನೀಡಲು ಹರ್ಷನಿಗೆ ಮನಸ್ಸಿರಲ್ಲಿಲ್ಲಾ. ಆದರೆ, ಭುವಿ ಕೇಳಿಕೊಂಡಿರುವುದರಿಂದ ವರೂಧಿನಿಗೆ ವೆಡ್ಡಿಂಗ್ ಕಾಂಟ್ರ್ಯಾಕ್ ನೀಡಲು ಹರ್ಷ ಒಪ್ಪಿಗೆ ನೀಡಿದ್ದಾರೆ. ಇದೀಗ ಮತ್ತೆ ವರೂಧಿನಿಯ ಮನಸಲ್ಲಿ ತನ್ನ ಹೀರೋನ ಜೊತೆ ಮದುವೆಯಾಗಬೇಕೆನ್ನುವ ಬಯಕೆ ಹುಟ್ಟಿದೆ.

    ಇದನ್ನೂ ಓದಿ: Actress Samikshaa: ಸುಬ್ಬಲಕ್ಮಿ ಸಂಸಾರದ ಶನಾಯ ರಿಯಲ್ ಲೈಫ್​ನಲ್ಲಿ ತುಂಬಾ ಪಾಪ ಅಂತೆ, ಹೌದಾ ಅಂತೀರಾ! ಈ ಸ್ಟೋರಿ ಓದಿ

    ವಧುವನ್ನು ಬದಲಾಯಿಸುವ ಪ್ಲಾನ್ ಮಾಡಿದ್ದಾಳ ವರೂಧಿನಿ

    ಭುವಿ ಹಾಗೂ ಹರ್ಷ ಜೊತೆಯಾಗಿ ಸಮಯ ಕಳೆಯುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ವರೂಧಿನಿ. ಸುಚಿ ಮತ್ತು ಬಿಂದು ವಿಡಿಯೋ ಕಾಲ್ ನಲ್ಲಿ ಹರ್ಷ ಮತ್ತು ಭೂವಿಯನ್ನು ತೋರಿಸಿದಾಗ ಕರೆಯನು ಅರ್ಧದಲ್ಲೇ ಕಟ್ ಮಾಡಿ ತನ್ನ ಅಸಮಾಧಾನವನ್ನು ಹೊರಹಾಕಿದ್ದಳು ವರೂ.

    ಮತ್ತೇನಾದರೂ ತಂತ್ರ ಮಾಡಿ ಮದುವೆ ದಿನ ವಧುವನ್ನು ಬದಲಾಯಿಸುವ ಪ್ಲಾನ್ ಮಾಡಿದ್ದಾಳ ವರೂಧಿನಿ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಅತಿಯಾಗಿ ಕಾಡುತ್ತಿದೆ. ಮದುವೆ ವಿಚಾರದಲ್ಲೇನೋ ಆಕೆಗೆ ಆಸಕ್ತಿ ಇರುವಂತೆ ತೋರಿದರೂ ಮುಂದೆ ಏನಾದರೂ ತೊಂದರೆ ಮಾಡಬಹುದು ಎನ್ನುವ ಸಂಶಯ ಕೂಡ ಇದೆ.

    ಇದನ್ನೂ ಓದಿ: Gattimela: ಅಕ್ಕನ ಒಳಿತಿಗಾಗಿ ಮಂಡಿ ಸೇವೆ ಮಾಡಿದ ಅಮೂಲ್ಯ! ಇನ್ನಾದರೂ ತಂಗಿಯ ಮೇಲೆ ಪ್ರೀತಿ ಹುಟ್ಟ ಬಹುದೇ ಆರತಿಗೆ

    ವರೂಧಿನಿ ಪ್ಲ್ಯಾನ್ ಬಗ್ಗೆ ವೀಕ್ಷಕರ ಕುತೂಹಲ

    ಕಳೆದ ಸಂಚಿಕೆಯಲ್ಲಿ ಹರ್ಷನನ್ನು ನಾನೇ ಮದುವೆಯಾಗುತ್ತೇನೆ ಎಂದು ಬಹಳ ದೃಢವಾಗಿ ಹೇಳಿದ್ದಾಳೆ ವರೂಧಿನಿ. ಈ ಹಿಂದೆ ಎಂಗೇಜ್ಮೆಂಟ್ ನಲ್ಲೂ ಭುವಿಯ ರಿಂಗ್ ತನ್ನಲ್ಲೇ ಇಟ್ಟುಕೊಂಡು ಎಂಗೇಜ್ಮೆಂಟ್ ನಿಲ್ಲಿಸಲು ಹೊರಟಿದ್ದಳು ವರೂಧಿನಿ. ಇದೀಗ ಮತ್ತೆ ಅಂತಹದ್ದೇ ಏನಾದರೂ ತಂತ್ರದಿಂದ ಹರ್ಷನ ಮದುವೆ ಆಗಬೇಕೆನ್ನುವ ಪಣ ತೊಟ್ಟಂತೆ ಕಾಣಿಸುತ್ತಿದೆ.

    ಕುತಂತ್ರಿ ಸಾನಿಯಾ ಈ ಮದುವೆ ತಡೆಯಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಲೇ ಇದ್ದಾಳೆ. ಸಮಯ ಸಿಕ್ಕಾಗಲೆಲ್ಲ ವರೂಧಿನಿ ಬ್ರೇನ್ ವಾಶ್ ಮಾಡುವ ಇವಳು ಮುಂದೆ ಏನೇನು ಮಾಡುತ್ತಾಳೋ ಏನೋ! ವರೂಧಿನಿಗೆ ಒಮ್ಮೆ ತನ್ನ ಪ್ರಾಣ ಸ್ನೇಹಿತೆ ಭುವಿ ಚಿಂತೆಯಾದರೆ, ಇನ್ನೊಮ್ಮೆ ತನ್ನ ಹೀರೋ ಹರ್ಷ ನೆನಪಾಗುತ್ತಾನೆ.

    ಹರ್ಷ - ಭುವಿ ಮದುವೆಗೆ ಅತ್ತ ಸಾನಿಯಾ, ಇತ್ತ ವರೂಧಿನಿ, ಮಧ್ಯ ಸುದರ್ಶನ್ ಒಂದಲ್ಲಾ ಒಂದು ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಿರುವಾಗ, ಹರ್ಷ ಮತ್ತು ಭುವಿ ಮದುವೆ ಯಾವುದೇ ವಿಘ್ನವಿಲ್ಲದೆ ನಡೆಯುತ್ತಾ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.
    Published by:Swathi Nayak
    First published: