Kannadathi Serial: ಕನ್ನಡತಿಯಲ್ಲಿ ಕೊನೆಯಾಗುತ್ತಾ ಅಮ್ಮಮ್ಮನ ಪಾತ್ರ? ವಾಹಿನಿಯವರಲ್ಲಿ ಅಭಿಮಾನಿಗಳ ಕೋರಿಕೆ ಏನು?

ಭುವನೇಶ್ವರಿ ಹಾಗೂ ಹರ್ಷಕುಮಾರ್ ಕನ್ನಡದ ಮದುವೆಯಾಗಿ ಮತ್ತೆ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಹರ್ಷನ ಮನೆಯ ಸೊಸೆಯಾಗಿ ಭುವನೇಶ್ವರಿ ತನ್ನ ಕರ್ತವ್ಯವನ್ನು ಎಷ್ಟು ಗಂಭೀರವಾಗಿ ನಿಭಾಯಿಸುತ್ತಾಳೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ.

ಕನ್ನಡತಿ

ಕನ್ನಡತಿ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಕೂಡ ಒಂದು. ಭುವನೇಶ್ವರಿ (Bhuvaneshwari) ಮತ್ತು ಹರ್ಷಕುಮಾರ್ (Harsha Kumar) ನಡುವಿನ ಅರ್ಥಗರ್ಭಿತ ಸಂಭಾಷಣೆಯನ್ನು ಕೇಳಲು ಪ್ರೇಕ್ಷಕರು ಸದಾ ಕಾಯುತ್ತಿರುತ್ತಾರೆ.ಇದೀಗ ಭುವನೇಶ್ವರಿ ಹಾಗೂ ಹರ್ಷಕುಮಾರ್ ಕನ್ನಡದ ಮದುವೆಯಾಗಿ ಮತ್ತೆ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಹರ್ಷನ ಮನೆಯ ಸೊಸೆಯಾಗಿ ಭುವನೇಶ್ವರಿ ತನ್ನ ಕರ್ತವ್ಯವನ್ನು ಎಷ್ಟು ಗಂಭೀರವಾಗಿ ನಿಭಾಯಿಸುತ್ತಾಳೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. ಸಂತೋಷದ ನಡುವೆ ಇದೀಗ ಕನ್ನಡತಿ ಪ್ರೇಕ್ಷಕರಿಗೆ ಅಮ್ಮಮ್ಮನ (Ammamma) ಆರೋಗ್ಯದ ಬಗ್ಗೆ ಕೂಡ ಚಿಂತೆ ಎದುರಾಗಿದೆ.

    ಹದಗೆಡುತ್ತಿರುವ ಅಮ್ಮಮ್ಮನ ಆರೋಗ್ಯ

    ಹರ್ಷ ಮತ್ತು ಭುವನೇಶ್ವರಿ ನ ಮದುವೆಯನ್ನು ಕಣ್ತುಂಬ ನೋಡಿ ಆಸ್ಪತ್ರೆಗೆ ಹೋಗುತ್ತೇನೆ ಎಂದು ಅಮ್ಮಮ್ಮ ಈಗಾಗಲೇ ತಾಪ್ಸಿ ಮತ್ತು ದೇವ್ ಬಳಿ ಹೇಳಿಕೊಂಡಿದ್ದಾರೆ. ಆದರೆ ಮದುವೆ ಎಲ್ಲಾ ಕಾರ್ಯಗಳನ್ನು ನಡುವೆ ಸಂಭ್ರಮದಲ್ಲಿ ಅಮ್ಮಮ್ಮನ ದುಃಖ ಮತ್ತು ಅವರು ಪಡುತ್ತಿದ್ದ ಸಂಕಟ ನೋಡುವಾಗ ದುಃಖ ಉಮ್ಮಳಿಸಿ ಬರುತ್ತಿದ್ದಂತು ಸುಳ್ಳಲ್ಲ. ಮದುವೆಯ ಮಂಟಪದ ವೇದಿಕೆಯಿಂದ ಇಳಿದು ಭಾರವಾದ ಮನಸ್ಸಿನಿಂದ ಆಸ್ಪತ್ರೆ ಕಡೆಗೆ ಅಮ್ಮಮ್ಮ ಹೆಜ್ಜೆಯಿಟ್ಟಿದ್ದಾರೆ ಇದನ್ನು ಕಂಡ ಪ್ರೇಕ್ಷಕರಿಗೆ ಅವರ ಪಾತ್ರ ಇಲ್ಲಿ ಕೊನೆಯಾಗುತ್ತದೆ ಎನ್ನುವ ಸಂದೇಹ ಕೂಡ ಎದುರಾಗಿದೆ.

    ಇದನ್ನೂ ಓದಿ: Gouthami Jadav: ನಯನತಾರಾ ಮದುವೆ ಲುಕ್​ ರೀ ಕ್ರಿಯೇಟ್ ಮಾಡಿದ ಗೌತಮಿ ಜಾದವ್, ಹೇಗಿದೆ ನೀವೂ ನೋಡಿ

    ನೆಚ್ಚಿನ ಅಮ್ಮಮ್ಮನ ಪಾತ್ರ ಕೊನೆಯಾಗುತ್ತಾ?

    ಅಷ್ಟೇ ಅಲ್ಲದೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಚಿತ್ಕಲಾ ಬಿರಾದರ್ ಅವರು ಮದುವೆ ಸಂಭ್ರಮದ ಬಳಿಕ ಅಳುತ್ತಿದ್ದಂತಹ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ಅಮ್ಮಮ್ಮನ ಪಾತ್ರ ಕೊನೆಯಾಗುತ್ತದೆ ಎನ್ನುವ ಬಗ್ಗೆ ಇನ್ನಷ್ಟು ಸಂಶಯವನ್ನು ಹೆಚ್ಚಿಸಿದೆ. ಆದರೆ ವಾಹಿನಿಯವರ ಆಗಲಿ ಕನ್ನಡತಿ ತಂಡದವರಾಗಲಿ ಈ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

    ಅಮ್ಮಮ್ಮನ ಪಾತ್ರವನ್ನು ಕೊನೆಗೊಳಿಸಬೇಡಿ ಎಂದು ಅಭಿಮಾನಿಗಳ ಕೋರಿಕೆ

    ಅಮ್ಮಮ್ಮನ ಪಾತ್ರ ನಿರ್ವಹಿಸುತ್ತಿರುವ ಚಿತ್ಕಲಾ ಬಿರಾದರ್ ಅವರು ಈಗ ಹೊರದೇಶದಲ್ಲಿ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಮುಂದೆ ಅವರ ಪಾತ್ರ ಧಾರಾವಾಹಿಯಲ್ಲಿ ಇರುತ್ತದೆ ಎನ್ನುವ ಬಗ್ಗೆ ಅವರು ತಾಯ್ನಾಡಿಗೆ ಮರಳಿದ ಬಳಿಕ ತಿಳಿಯಬಹುದು. ಈಗಾಗಲೇ ಪ್ರೇಕ್ಷಕರು ಕಮೆಂಟ್ ಸೆಕ್ಷನ್ ನಲ್ಲಿ ಪೂರ್ತಿ ಅಮ್ಮಮ್ಮನ ಪಾತ್ರವನ್ನು ಕೊನೆಗೊಳಿಸಬೇಡಿ ಎಂದು ವಾಹಿನಿಯವರಲ್ಲಿ ಮತ್ತು ತಂಡದವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

     ಅಮ್ಮಮ್ಮನ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ ಚಿತ್ಕಲಾ ಬಿರಾದರ್ 

    ಚಿತ್ಕಲಾ ಬಿರಾದರ್ ಅವರು ಅಮ್ಮಮ್ಮನ ಪಾತ್ರವನ್ನು ಪರಕಾಯ ಪ್ರವೇಶ ಮಾಡಿ ಬಹಳ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಒಬ್ಬಳು ತಾಯಿ ತನ್ನ ಮಗನ ಭವಿಷ್ಯ ನಾನಿಲ್ಲದಿದ್ದರೂ ಒಳ್ಳೆಯದರಲ್ಲಿ ನಡೆಯಬೇಕು ಎನ್ನುವ ಉದ್ದೇಶದಿಂದ ಯಾವೆಲ್ಲ ಕಷ್ಟಗಳನ್ನು ಅನುಭವಿಸುತ್ತಾಳೆ ಎನ್ನುವ ಬಗ್ಗೆ ಅಮ್ಮಮ್ಮನ ಪಾತ್ರವು ತಿಳಿಸಿಕೊಟ್ಟಿದೆ. ಅಷ್ಟೇ ಅಲ್ಲದೆ ಒಂದು ಹೆಣ್ಣು ಒಂದು ದೊಡ್ಡ ಕಂಪೆನಿಯನ್ನು ಹೇಗೆ ಕಟ್ಟಿ ಉಳಿಸಿ ಬೆಳೆಸುತ್ತಾಳೆ ಎಂಬ ವಿಚಾರವನ್ನು ಕನ್ನಡತಿ ತಂಡವು ಬಹಳ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ.

    ಇದನ್ನೂ ಓದಿ: Hitler Kalyana Serial: ಅಜ್ಜಿಯ ಉಪಾಯದಿಂದ ಪ್ರೀತಿಯಲ್ಲಿ ಬಿದ್ರಾ ಲೀಲಾ ಮತ್ತು ಎಜೆ!

    ಗಂಭೀರ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬಂದ  ಚಿತ್ಕಲಾ ಬಿರಾದರ್

    ಒಂದು ಹೆಣ್ಣು ಮನೆಯ ಯಜಮಾನಿಯಾಗಿ ಒಳ್ಳೆಯ ತಾಯಿಯಾಗಿ ಮಾಲಾ ಇನ್ಸ್ಟಿಟ್ಯೂಷನ್ ಮತ್ತು ಮಾಲಾ ಕೆಫೆಯನ್ನು ಎಷ್ಟು ಎತ್ತರಕ್ಕೆ ಬೆಳೆಸಬಹುದು ಎನ್ನುವುದಕ್ಕೆ ಅಮ್ಮಮ್ಮನ ಪಾತ್ರ ಉದಾಹರಣೆಯಾಗಿದೆ. ಈ ಗಂಭೀರ ಪಾತ್ರವನ್ನು ಚಿತ್ಕಲಾ ಬಿರಾದರ್ ಅವರು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.
    Published by:Swathi Nayak
    First published: