ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಕೂಡ ಒಂದು. ಇದೀಗ ಭುವನೇಶ್ವರಿ (Bhuvaneshwari) ಮತ್ತು ಹರ್ಷಕುಮಾರ್ (Harsha Kumar) ಮದುವೆಯ ಸಂಚಿಕೆಗಳು ಬಹಳ ಚೆನ್ನಾಗಿ ಮೂಡಿ ಬಂದಿದ್ದು. ಮುಂದೇನಾಗುತ್ತದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗತೊಡಗಿದೆ. ರತ್ನಮಾಲ (Ratnamala) ಅವರ ಸೊಸೆಯಾಗಿ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕಾ ತನ್ನ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಇದರ ಜೊತೆಗೆ ಮನೆಯ ಸೊಸೆಯಾಗಿ ಹರ್ಷನ ಹೆಂಡತಿಯಾಗಿ ಭುವನೇಶ್ವರಿ ಬಹಳ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ಸಂತಸ ತಂದಿದೆ.
ಆಫೀಸ್ ನಲ್ಲಿ ಭುವಿಗೆ ಗ್ರಾಂಡ್ ಎಂಟ್ರಿ
ಈ ಹಿಂದೆ ಮಾಲಾ ಇನಸ್ಟಿಟ್ಯೂಟ್ ನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭುವಿ ಇದೀಗ ರತ್ನಮಾಲಾ ಅವರ ಸೊಸೆಯಾಗಿ ಆಫೀಸ್ ಗೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದಾಳೆ. ಪತಿ ಹರ್ಷನ ಜೊತೆ ಆಫೀಸ್ ಗೆ ಹೋಗಿರುವ ಭುವಿಗೆ ಅಲ್ಲಿ ಮುಜುಗರವಾಗುವ ಸನ್ನಿವೇಶ ಎದುರಾಗಿದೆ. ಅದ್ಧೂರಿಯಾಗಿ ಹೂವಿನ ಹಾರ ಹಾಕಿ ಭುವಿಯನ್ನು ಆಫೀಸ್ ಸಹೋದ್ಯೋಗಿಗಳು ಬರ ಮಾಡಿಕೊಂಡಿದ್ದಾರೆ.
ಕುತಂತ್ರಿ ಸಾನಿಯಾ ಭುವನೇಶ್ವರಿಯನ್ನು ಉದ್ದೇಶ ಪೂರ್ವಕವಾಗಿ ಮುಜುಗರಕ್ಕೀಡು ಮಾಡಬೇಕು ಎಂದು ಈ ರೀತಿ ಮಾಡಿದ್ದಾಳೆ ಎಂದು ಹರ್ಷನಿಗೆ ತಿಳಿದಿದೆ ಆದರೂ ಮುಂದೆ ಹರ್ಷ ಮತ್ತು ಭುವಿ ನಡುವೆ ಇದೆ ವಿಚಾರವಾಗಿ ಭಿನ್ನಾಭಿಪ್ರಾಯಗಳು ಬಂದರೂ ಬರಬಹುದು ಎಂದು ಪ್ರೇಕ್ಷಕರಿಗೆ ಅನಿಸತೊಡಗಿದೆ.
ಇದನ್ನೂ ಓದಿ: Gattimela serial: ಧ್ರುವ-ಅದಿತಿ ಲವ್ ಸ್ಟೋರಿಗೆ ವೇದಾಂತ್ ಸಹಾಯ ದೊರಕುತ್ತಾ? ಮುಂದಿದೆ ಬಿಗ್ ಟ್ವಿಸ್ಟ್
ಹರ್ಷ- ಭುವಿ ನಡುವೆ ಭಿನ್ನಾಭಿಪ್ರಾಯ ತಂದಿಡಲು ಪ್ರಯತ್ನಿಸಿತ್ತಿದ್ದಾಳೆ ಸಾನಿಯಾ
ಈಗಾಗಲೇ ಅಮ್ಮಮ್ಮ ಸಂಪೂರ್ಣ ಆಸ್ತಿಗೆ ತಾನೊಬ್ಬನೆ ವಾರಸುದಾರ ಎಂದು ಅಂದುಕೊಂಡಿರುವ ಹರ್ಷನಿಗೆ ಆಫೀಸ್ ನಲ್ಲಿ ತನ್ನ ಸಾಮ್ರಾಜ್ಯಕ್ಕೆ ತಾನೇ ಒಡಯನಾಗಿರಬೇಕು ಎನ್ನುವ ಅಹಂ ಇದೆ. ಇಈ ಬಗ್ಗೆ ತಿಳಿದುಕೊಂಡಿರುವ ಸಾನಿಯಾ ಇದೇ ವಿಚಾರವಾಗಿ ಹರ್ಷ ಮತ್ತು ಭುವಿ ನಡುವೆ ಭಿನ್ನಾಭಿಪ್ರಾಯ ತಂದಿಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಪ್ರೇಕ್ಷಕರಿಗೆ ಭಾಸವಾಗುತ್ತಿದೆ. ಅಮ್ಮಮ್ಮನ ಮುಂದಿನ ನಡೆ ಏನು ಬಗ್ಗೆ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಮಾಲಾ ಇನ್ಸ್ಟಿಟ್ಯೂಷನ್ ಮತ್ತು ರತ್ನಮಾಲಾ ಅವರ ಸಂಪೂರ್ಣ ಆಸ್ತಿ ಬಗ್ಗೆ ವಿಪರೀತ ಆಸೆ ಇಟ್ಟುಕೊಂಡಿರುವ ಸಾನಿಯಾ ಅಮ್ಮಮ್ಮನ ಮುಂದಿನ ನಡೆಯ ಬಗ್ಗೆ ಅತಿಯಾಗಿ ಯೋಚಿಸುತ್ತಿದ್ದಾಳೆ.
ಇದೀಗ ಅಮ್ಮಮ್ಮನ ಆರೋಗ್ಯದ ತೀರಾ ಹದಗೆಡುತ್ತಿದೆ. ಅಷ್ಟೇ ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಅಮ್ಮಮ್ಮ ಹೊರದೇಶಕ್ಕೆ ಕೂಡ ಹೋಗಿದ್ದಾರೆ. ಹೊರದೇಶದಲ್ಲಿ ಇದ್ದುಕೊಂಡು ತನ್ನ ಕರ್ತವ್ಯವನ್ನು ನಿಭಾಯಿಸುವ ಬಗ್ಗೆ ಅಮ್ಮಮ್ಮ ಎಂದೂ ಮರೆತಿಲ್ಲ. ಅಷ್ಟೇ ಅಲ್ಲದೆ ಭುವನೇಶ್ವರಿಯ ಬಳಿ ಫೋನ್ ಮುಖಾಂತರ ತನ್ನ ಕರ್ತವ್ಯಗಳ ಬಗ್ಗೆ ಹೇಳಿದ್ದಾರೆ ಕೂಡ. ಅದೇ ರೀತಿ ಮನೆಮಂದಿ ಎಲ್ಲರೂ ಭುವನೇಶ್ವರಿಯನ್ನು ಜೂನಿಯರ್ ಅಮ್ಮಮ್ಮ ಎಂದು ಕರೆಯಲು ಕೂಡ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಹರ್ಷ ಕೂಡ ತನ್ನ ತಾಯಿಯನ್ನು ಭುವನೇಶ್ವರಿಯಲ್ಲಿ ಕಾಣುತ್ತಿದ್ದಾನೆ.
ಇದನ್ನೂ ಓದಿ: Kannadathi Bhuvi: ಸಕ್ಸಸ್ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ
ವಿಲ್ ವಿಚಾರವನ್ನು ಅಮ್ಮಮ್ಮ ಯಾವಾಗ ಭೂವಿಗೆ ಹೇಳುತ್ತಾರೆ
ಮುಂದೆ ಆಫೀಸ್ ವಿಚಾರವಾಗಿ ಹರ್ಷ ಮತ್ತು ಭುವನೇಶ್ವರಿ ನಡುವೆ ಭಿನ್ನಾಭಿಪ್ರಾಯಗಳು ಎದುರಾಗಬಹುದು ಎನ್ನುವ ಯೋಚನೆ ಪ್ರೇಕ್ಷಕರಲ್ಲೂ ಇದೆ. ಅಷ್ಟೇ ಅಲ್ಲದೆ ಅಮ್ಮಮ್ಮ ತನ್ನ ಎಲ್ಲಾ ಆಸ್ತಿಯನ್ನು ಈಗಾಗಲೇ ವಿಲ್ ಮುಖಾಂತರ ಭುವನೇಶ್ವರಿಯ ಹೆಸರಿಗೆ ಬರೆಸಿದ್ದಾರೆ. ಹಾಗೆ ಈ ಬಗ್ಗೆ ಸ್ವತಃ ಭುವನೇಶ್ವರಿಯು ತಿಳಿದಿಲ್ಲ. ಸ್ವಾಭಿಮಾನದಿಂದ ಬದುಕುತ್ತಿರುವ ಭೂವಿ ಇದನ್ನು ಸ್ವೀಕರಿಸುತ್ತಾಳೆ ಸ್ವೀಕರಿಸಿದರೆ ಮುಂದೆ ಹರ್ಷ ಮತ್ತು ಭುವಿ ನಡುವೆ ಇದೇ ವಿಚಾರಕ್ಕೆ ಮನಸ್ತಾಪ ಎದುರಾಗಬಹುದು. ವಿಲ್ ವಿಚಾರವನ್ನು ಅಮ್ಮಮ್ಮ ಯಾವಾಗ ಭೂವಿಗೆ ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ಫೋನ್ ಮುಖಾಂತರ ಅಮ್ಮಮ್ಮ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಭೂವಿಗೆ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ