Ginirama Serial: ಶಿವರಾಮನ ಬಾಳಲ್ಲಿ ಮತ್ತೆ ಎಂಟ್ರಿ ಕೊಡುತ್ತಾಳಾ ಹಳೆ ಪ್ರೇಯಸಿ ನೇಹಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಭಿಮಾನಿಗಳ ನೆಚ್ಚಿನ ಧಾರಾವಾಹಿಗಳಲ್ಲಿ 'ಗಿಣಿರಾಮ' ಕೂಡ ಒಂದು. ಉತ್ತರ ಕರ್ನಾಟಕದ ಭಾಷೆ ಸೊಬಗನ್ನು ಧಾರಾವಾಹಿಯಲ್ಲಿ ಬಹಳ ಚೆನ್ನಾಗಿ ತೋರಿಸುತ್ತಿದ್ದಾರೆ. ಇದೀಗ ನಾಯಕ ಶಿಮರಾಮನ ಬಾಳಲ್ಲಿ ಹಳೆ ಗೆಳತಿಯ ಎಂಟ್ರಿಯಾಗಿದೆ!
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಭಿಮಾನಿಗಳ ನೆಚ್ಚಿನ ಧಾರಾವಾಹಿಗಳಲ್ಲಿ ಗಿಣಿರಾಮ (Ginirama) ಕೂಡ ಒಂದು. ಉತ್ತರ ಕರ್ನಾಟಕದ ಭಾಷೆ ಸೊಬಗನ್ನು ಧಾರಾವಾಹಿಯಲ್ಲಿ ಬಹಳ ಚೆನ್ನಾಗಿ ತೋರಿಸುತ್ತಿದ್ದಾರೆ. ಮಹತಿ ಹಾಗೂ ಶಿವರಾಮ್ ಜೋಡಿಯಂತು ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಧಾರಾವಾಹಿಯಲ್ಲಿ ಹೊಸದೊಂದು ಟ್ವಿಸ್ಟ್ ಬಂದು ಮುಂದೇನಾಗುತ್ತದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಕಾಡುತ್ತಿದೆ. ಮಹತಿ (Mahathi) ಹಾಗೂ ಶಿವರಾಮ್ (Shivarama) ಪರಸ್ಪರ ಪ್ರೀತಿ ಹೇಳಿಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ಇದೀಗ ಶಿವರಾಮನ ಹಳೆಯ ಪ್ರೇಯಸಿ ನೇಹಾಳ (Neha) ಎಂಟ್ರಿ ಆಗಿದೆ.
ಪರಸ್ಪರ ಇಷ್ಟ ಇಲ್ಲದೆ ಮದುವೆಯಾದ ಶಿವರಾಂ ಮತ್ತು ಮಹತಿ ಜೋಡಿಯು ಇತ್ತೀಚಿನ ಕೆಲವು ಸಂಚಿಕೆಗಳಲ್ಲಿ ಬಹಳ ಅನ್ಯೋನ್ಯತೆಯಿಂದ ಇದ್ದರು. ಕಳೆದ ಕೆಲ ಸಂಚಿಕೆಗಳ ಹಿಂದೆ ಶಿವರಾಮ್ ತನ್ನ ಪ್ರೀತಿಯನ್ನು ಮಹತಿ ಬಳಿ ಹೇಳಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಮಹತಿಯ ಮಾಜಿ ಪ್ರಿಯಕರ ಗೌರವ್ ನ ಎಂಟ್ರಿಯು ಬಹಳ ವಿಚಿತ್ರವಾಗಿ ಆಗಿ ಬಿಡುತ್ತದೆ. ಈ ಮಧ್ಯೆ ಅವನು ದುಡ್ಡಿನ ಆಸೆಗೋಸ್ಕರ ಮಹತಿಯನ್ನು ಇಷ್ಟಪಡುವಂತೆ ನಾಟಕ ಮಾಡಿದ ವಿಚಾರ ಎಲ್ಲರಿಗೂ ತಿಳಿದ ಮೇಲೆ ಮತ್ತೆ ಮಹತಿ ಹಾಗೂ ಶಿವರಾಮನ ಕ್ಯೂಟ್ ಲವ್ ಸ್ಟೋರಿ ಪ್ರೇಕ್ಷಕರಿಗೆ ಇನ್ನು ಇಷ್ಟವಾಗತೊಡಗಿತ್ತು.
ಮಹತಿ ಹಾಗೂ ಶಿವರಾಮ ಸುತ್ತಾಡಲು ಹೊರಟಾಗ ಅಲ್ಲಿ ಶಿವರಾಮ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನೇಹಾಳನ್ನು ಮತ್ತೆ ನೋಡುತ್ತಾನೆ. ಅಕಸ್ಮಾತಾಗಿ ಮಹತಿ ಶಿವರಾಮನ ಎದುರು ಕಾಣಿಸಿಕೊಂಡ ನೇಹಾ ಇದೀಗ ಶಿವರಾಮನನ್ನು ಯಾರು ಎಂದು ತಿಳಿದಿಲ್ಲ ಎಂದು ಹೇಳಿ ಬಿಡುತ್ತಾಳೆ. ಶಿವರಾಮ ಎಷ್ಟೇ ಪ್ರಯತ್ನಪಟ್ಟರೂ ನೇಹಾ ತನಗೆ ಈತನ ಪರಿಚಯವೇ ಇಲ್ಲ ಎಂದು ಶಿವರಾಮನನ್ನು ಪೋಲೀಸ್ಗೆ ಹಿಡಿದುಕೊಡಲು ಕೂಡ ಹೋಗುತ್ತಾಳೆ.
ಶಿವರಾಮನ ಮೇಲೆ ಎಷ್ಟೇ ಪ್ರೀತಿ ಇದ್ದರೂ ಇದೀಗ ಮಹತಿ ಆತನ ಸಂತೋಷಕ್ಕೋಸ್ಕರ ನೇಹಾಳ ಬಗ್ಗೆ ತಿಳಿದುಕೊಳ್ಳಲು ಶಿವರ ಮನೆಗೆ ಸಹಾಯ ಮಾಡುತ್ತಿದ್ದಾಳೆ. ಇದೀಗ ಧಾರಾವಾಹಿಯಲ್ಲಿ ನೇಹಾ ಮತ್ತು ಶಿವರಾಮನ ಲವ್ ಸ್ಟೋರಿ ಬಗ್ಗೆ ತೋರಿಸುತ್ತಾ ಇದ್ದಾರೆ. ಕಾಲೇಜು ದಿನಗಳಲ್ಲಿ ನೇಹಾಳನ್ನು ಶಿವರಾಮ್ ಯಾವ ರೀತಿ ಕಾಲೆಳೆಯುತ್ತಿದ್ದ ಎನ್ನುವ ಬಗ್ಗೆ ಎಲ್ಲಾ ತೋರಿಸುತ್ತಿದ್ದಾರೆ. ಪೋಲಿಗಳಂತೆ ಕಾಲೇಜ್ ಸುತ್ತಾಡಿಕೊಂಡು ಹೆಣ್ಣುಮಕ್ಕಳ ಕಾಲು ಎಳೆಯುತ್ತಿದ್ದ ಶಿವರಾಮ ನ ಇನ್ನೊಂದು ಮುಖ ನೋಡಲು ಖುಷಿಯಾಗುತ್ತಿದೆ.
ನೇಹಾ ಅಣ್ಣನ ಜೀವನದಲ್ಲಿ ಮತ್ತೆ ಬಂದಿದ್ದಕ್ಕೆ ಶಾಕ್ ಆದ ಸೀಮಾ
ತನ್ನ ಅಣ್ಣನ ಹಳೆ ಲೈಫ್ ಹಿಸ್ಟರಿ ಬಗ್ಗೆ ತಿಳಿದಿರುವ ಸೀಮಾಳಿಗೆ ಈಗ ಮತ್ತೆ ನೇಹಾ ಅಣ್ಣನ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಎಂದು ಶಾಕ್ ಆಗಿದೆ. ಮತ್ತೆ ಅಣ್ಣನ ಲೈಫ್ ಎಲ್ಲಿ ಲಯ ತಪ್ಪುತ್ತದೆಯೋ ಎನ್ನುವ ಭಯ ಸೀಮಾಳಿಗೆ ಕಾಡುತ್ತಿದೆ.
ಕಾಲೇಜು ದಿನಗಳಲ್ಲಿ ನೇಹಾಳನ್ನು ಶಿವರಾಮ್ ಯಾವ ರೀತಿ ಕಾಲೆಳೆಯುತ್ತಿದ್ದ ಎನ್ನುವ ಬಗ್ಗೆ ಎಲ್ಲಾ ತೋರಿಸುತ್ತಿದ್ದಾರೆ. ಪೋಲಿಗಳಂತೆ ಕಾಲೇಜ್ ಸುತ್ತಾಡಿಕೊಂಡು ಹೆಣ್ಣುಮಕ್ಕಳ ಕಾಲು ಎಳೆಯುತ್ತಿದ್ದ ಶಿವರಾಮ ನ ಇನ್ನೊಂದು ಮುಖ ನೋಡಲು ಖುಷಿಯಾಗುತ್ತಿದೆ. ನೇಹಾ ಅಣ್ಣನ ಜೀವನದಲ್ಲಿ ಮತ್ತೆ ಬಂದಿದ್ದಕ್ಕೆ ಶಾಕ್ ಆದ ಸೀಮಾ ತನ್ನ ಅಣ್ಣನ ಹಳೆ ಲೈಫ್ ಹಿಸ್ಟರಿ ಬಗ್ಗೆ ತಿಳಿದಿರುವ ಸೀಮಾಳಿಗೆ ಈಗ ಮತ್ತೆ ನೇಹಾ ಅಣ್ಣನ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಎಂದು ಶಾಕ್ ಆಗಿದೆ. ಮತ್ತೆ ಅಣ್ಣನ ಲೈಫ್ ಎಲ್ಲಿ ಲಯ ತಪ್ಪುತ್ತದೆಯೋ ಎನ್ನುವ ಭಯ ಸೀಮಾಳಿಗೆ ಕಾಡುತ್ತಿದೆ. ಮುಂದಿನ ಸಂಚಿಕೆಯಲ್ಲಿ ಈ ಕುತೂಹಲಕ್ಕೆ ತೆರೆ ಬೀಳುತ್ತಾ ಎನ್ನುವುದನ್ನು ನೋಡಬೇಕಿದೆ. ಶಿವರಾಮ ಮತ್ತು ಮಹತಿ ಪ್ರೀತಿಯಿಂದ ಸಹಬಾಳ್ವೆ ನಡೆಸುತ್ತಾರಾ?
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ