Doresani Serial: ವರ್ಕೌಟ್ ಆಗ್ತಿಲ್ಲ ಮದುವೆ ನಿಲ್ಲಿಸೋ ಸತ್ಯವತಿ ಪ್ಲಾನ್! ಸಿಂಚನಾ‌ ಪ್ಲಾನ್ ಠುಸ್ ಪಟಾಕಿ

ವಿಶ್ವನಾಥನ್ ಆನಂದ್ ಅವರೇ ಬಾಸ್ ಅಂತ ಗೊತ್ತಾಗಿದ್ದು, ಆಫೀಸ್‌ಗೆ ಜಗಳ ಆಡಲು ಹೋದ್ಮೇಲೆ ಅಂತ ಪುರುಷೋತ್ತಮ್ ಮುಂದೆ ದೀಪಿಕಾ ಒಪ್ಪಿಕೊಳ್ಳುತ್ತಾಳೆ. 

ದೊರೆಸಾನಿ ಸೀರಿಯಲ್

ದೊರೆಸಾನಿ ಸೀರಿಯಲ್

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ದೊರೆಸಾನಿ’ (Doresani) ಕೂಡ ಒಂದು. ವೇಗವಾಗಿ ಸಾಗುತ್ತಿರುವ ‘ದೊರೆಸಾನಿ’ ಸೀರಿಯಲ್‌ನಲ್ಲಿ ಇದೀಗ ದೊಡ್ಡ ತಿರುವು ಸಿಕ್ಕಿದೆ. ಸಿಂಚನ ಹಾಗೂ ಸತ್ಯವತಿ ಮಾಡಿದ ಯಾವುದೇ ಪ್ಲಾನ್ ವರ್ಕ್ ಔಟ್ ಆಗದೆ ತಂದೆ ಮಗಳ ಸಂಬಂಧ ಮತ್ತಷ್ಟು ಬಿಗಿಯಾಗಿದೆ. ಮುಂಚಿನಿಂದಲೇ ವಿಶ್ವನಾಥನ್ ಆನಂದ್ (Vishwanathan Anand) ಪರಿಚಯ ಇರುವುದಾಗಿ ದೀಪಿಕಾ (Deepika) ಒಪ್ಪಿಕೊಳ್ಳುತ್ತಾಳೆ. ವಿಶ್ವನಾಥನ್ ಅನಂದ್‌ ತನಗೆ ಪ್ರಪೋಸ್ ಮಾಡಿದ್ದು ನಿಜ. ಆದರೆ, ಅದಕ್ಕೆ ತಾನು ಒಪ್ಪಿಕೊಳ್ಳಲಿಲ್ಲ. ವಿಶ್ವನಾಥನ್ ಆನಂದ್ ಅವರೇ ಬಾಸ್ ಅಂತ ಗೊತ್ತಾಗಿದ್ದು, ಆಫೀಸ್‌ಗೆ ಜಗಳ ಆಡಲು ಹೋದ್ಮೇಲೆ ಅಂತ ಪುರುಷೋತ್ತಮ್ ಮುಂದೆ ದೀಪಿಕಾ ಒಪ್ಪಿಕೊಳ್ಳುತ್ತಾಳೆ. 

    ವರ್ಕೌಟ್ ಆಗಲಿಲ್ಲ ಸಿಂಚನ ಹಾಗೂ ಸತ್ಯವತಿ ಗಾಸಿಪ್..!

    ಸತ್ಯವತಿ ಮತ್ತು ಮಗಳು ಸಿಂಚನಾ ಪಣ ತೊಟ್ಟಿದ್ದಾರೆ. ಹೀಗಾಗಿ, ದೀಪಿಕಾ ಹಾಗೂ ವಿಶ್ವನಾಥನ್ ಆನಂದ್ ಬಗ್ಗೆ ಇಲ್ಲದ ಗಾಸಿಪ್ ಹುಟ್ಟಿಸಿ ಪುರುಷೋತ್ತಮ್ ತಲೆಗೆ ಹುಳ ಬಿಡುತ್ತಾರೆ. ಮಗಳು ಮೋಸ ಮಾಡಿಬಿಟ್ಟಳು ಅಂತ ಪುರುಷೋತ್ತಮ್ ಬೇಸರ ಪಟ್ಟುಕೊಂಡಿದ್ದರು. ‘’ದೀಪಿಕಾ ಮತ್ತು ಆನಂದ್ ಮುಂಚಿನಿಂದಲೂ ಲವ್ ಮಾಡುತ್ತಿದ್ದರು, ಮದುವೆಯೂ ಆಗಿದ್ದರು. ಲವ್ ಮ್ಯಾರೇಜ್‌ ಅನ್ನು ಇದೀಗ ಅರೇಂಜ್ಡ್ ಮ್ಯಾರೇಜ್ ಆಗಿ ಬಿಂಬಿಸುತ್ತಿದ್ದಾರೆ’’ ಎಂದು ಅವರಿಬ್ಬರ ಬಳಿ ಸತ್ಯವತಿ ಹೇಳಿದ್ದರು. ಇದು ಪುರುಷೋತ್ತಮ್ ಹಡಗಲಿ ಅವರ ಕಿವಿಗೂ ಬಿದ್ದಿತ್ತು. ಕಂಡವರ ಮಾತು ಕೇಳಿ ಮಗಳ ಮೇಲೆ ಪುರುಷೋತ್ತಮ್ ಹಡಗಲಿ ಅನುಮಾನ ಪಟ್ಟರು. ಮಗಳ ಮಾತನ್ನು ಕೇಳಿದ ಪುರುಷೋತ್ತಮ್ ಹಡಗಲಿ  ಕಣ್ಣೀರಿಟ್ಟು ಅನವಶ್ಯಕವಾಗಿ ಮಗಳ ಮೇಲೆ ಅನುಮಾನ ಪಟ್ಟಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ.

    ಇದನ್ನೂ ಓದಿ: Lakshana Serial: ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದ ಲಕ್ಷಣ ಧಾರಾವಾಹಿ

    ಸತ್ಯ ಹೇಳಿ‌ ಮನಸ್ಸು ಹಗುರ ಮಾಡಿಕೊಂಡ ದೀಪಿಕಾ

    ತಂದೆಗೆ ಅವಮಾನ ಆಗುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ಲವ್ ಮ್ಯಾರೇಜ್ ಆಗುವುದಿಲ್ಲ ಎಂದು ಅಪ್ಪ ಪುರುಷೋತ್ತಮ್‌ಗೆ ದೀಪಿಕಾ ಮಾತು ಕೊಟ್ಟಿರುತ್ತಾಳೆ. ಆದರೆ, ಅತ್ತ ದೀಪಿಕಾಳನ್ನ ವಿಶ್ವನಾಥನ್ ಆನಂದ್ ಪ್ರೀತಿಸುತ್ತಿರುತ್ತಾನೆ. ದೀಪಿಕಾಗೆ ಪ್ರಪೋಸ್ ಕೂಡ ಮಾಡುತ್ತಾನೆ. ಆದರೆ, ತಂದೆಗೆ ಕೊಟ್ಟಿರುವ ಭಾಷೆಯ ಕಾರಣದಿಂದ ವಿಶ್ವನಾಥನ್ ಆನಂದ್ ಪ್ರೀತಿಯನ್ನ ದೀಪಿಕಾ ಒಪ್ಪಿಕೊಳ್ಳುವುದಿಲ್ಲ. ಬಳಿಕ ಪರಿಸ್ಥಿತಿಯ ಕೈಗೊಂಬೆಯಾದ ದೀಪಿಕಾ ತಾನು ವಿಶ್ವನಾಥನ್‌ ಆನಂದ್‌ನ ಪ್ರೀತಿಸುತ್ತಿರುವುದಾಗಿ ಹೇಳುತ್ತಾಳೆ. ನಂತರ ದೀಪಿಕಾಳ ತಂದೆಯನ್ನ ಒಪ್ಪಿಸಿಯೇ ಮದುವೆಯಾಗಬೇಕೆಂದುಕೊಂಡ ವಿಶ್ವನಾಥನ್ ಆನಂದ್, ಮದುವೆಯ ಬ್ರೋಕರ್ ಕಡೆಯಿಂದ ಪುರುಷೋತ್ತಮ್ ಮನೆಗೆ ಬರುತ್ತಾನೆ.

    ಮದುವೆಗೆ ಪುರುಷೋತ್ತಮ್ ಹಡಗಲಿ ಗ್ರೀನ್ ಸಿಗ್ನಲ್

    ಇದು ಲವ್ ಮ್ಯಾರೇಜ್ ಅಂತ ಅನುಮಾನ ಇದ್ದರೆ ಈ ಮದುವೆಯೇ ಬೇಡ ಅಂತ ದೀಪಿಕಾ ಕಡ್ಡಿತುಂಡು ಮಾಡಿದ ಹಾಗೆ ಹೇಳಿದ್ದಳು. ಆದರೆ, ವಿಶ್ವನಾಥನ್ ಆನಂದ್ ಮೇಲೂ ಪುರುಷೋತ್ತಮ್ ಮತ್ತು ಸೌದಾಮಿನಿಗೆ ಒಳ್ಳೆಯ ಅಭಿಪ್ರಾಯ ಇದೆ. ಹೀಗಾಗಿ, ವಿಶ್ವನಾಥನ್ ಆನಂದ್‌ ಹಾಗೂ ದೀಪಿಕಾ ಮದುವೆಗೆ ಪುರುಷೋತ್ತಮ್ ಹಡಗಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲಿಗೆ, ಸತ್ಯವತಿ ಮತ್ತು ಸಿಂಚನಾ ಮಾಡಿದ್ದ ಪ್ಲಾನ್ ಎಲ್ಲವೂ ಠುಸ್ ಆಗಿದೆ.

    ಇದನ್ನೂ ಓದಿ: New Serial: ಸಿರಿ ಕನ್ನಡ ವಾಹಿನಿಯಲ್ಲಿ 3 ಹೊಸ ಸೀರಿಯಲ್​ - ಮೇ 23ರಿಂದ ನಾನ್​ಸ್ಟಾಪ್​ ಮನರಂಜನೆ

    ಕಳೆದು ಹೋಗಿರುವ ಮಗನನ್ನು ಸತ್ಯವತಿ ಹುಡುಕುತ್ತಿದ್ದಾರೆ

    ಅತ್ತ ಕಳೆದು ಹೋಗಿರುವ ಮಗನನ್ನು ಸತ್ಯವತಿ ಹುಡುಕುತ್ತಿದ್ದಾರೆ. ಇತ್ತ ಅಮ್ಮನನ್ನ ವಿಶ್ವನಾಥನ್ ಆನಂದ್ ಹುಡುಕುತ್ತಿದ್ದಾರೆ. ಹಾಗಾದ್ರೆ, ಸತ್ಯವತಿಯ ಪುತ್ರ ಆನಂದ್‌ ಅವರೇನಾ..? ಒಂದ್ವೇಳೆ, ವಿಶ್ವನಾಥನ್ ಆನಂದ್‌, ಸತ್ಯವತಿಯ ಪುತ್ರ ಆಗಿದ್ದರೆ.. ಆನಂದ್ - ದೀಪಿಕಾ ಮದುವೆ ನಡೆಯಲು ಸತ್ಯವತಿ ಬಿಡ್ತಾರಾ..?

    ಅಂದ್ಹಾಗೆ, ‘ದೊರೆಸಾನಿ’ ಧಾರಾವಾಹಿಯಲ್ಲಿ ವಿಶ್ವನಾಥನ್ ಆನಂದ್ ಆಗಿ ಪೃಥ್ವಿರಾಜ್, ದೀಪಿಕಾ ಆಗಿ ರೂಪಿಕಾ, ಪುರುಷೋತ್ತಮ್ ಆಗಿ ಜೈದೇವ್ ಮೋಹನ್, ಸತ್ಯವತಿ ಆಗಿ ಭವಾನಿ ಪ್ರಕಾಶ್ ಅಭಿನಯಿಸುತ್ತಿದ್ದಾರೆ.
    Published by:Swathi Nayak
    First published: