Doresani: ದೀಪಿಕಾ ಆನಂದ್ ಮದುವೆ ಸುಸೂತ್ರವಾಗಿ ನಡೆಯುತ್ತಾ? ಏನಿದು ದೊರೆಸಾನಿ ಧಾರಾವಾಹಿಯಲ್ಲಿ ಟ್ವಿಸ್ಟ್

ದೀಪಿಕಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಆನಂದ್ ಅದಕ್ಕೂ ಒಂದು ಉಪಾಯವನ್ನು ಹುಡುಕಿ ಆಕೆಯನ್ನೇ ಮದುವೆಯಾಗಲು ಹೊರಟಿದ್ದಾನೆ.

ದೊರೆಸಾನಿ ಸೀರಿಯಲ್

ದೊರೆಸಾನಿ ಸೀರಿಯಲ್

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ದೊರೆಸಾನಿ (Doresani) ಕೂಡ ಒಂದು. ಹೌದು ನಟಿ ರೂಪಿಕಾ (Roopika) ನಟನೆಯ ಧಾರಾವಾಹಿ ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ತಂದೆ ಮಗಳ ಬಾಂಧವ್ಯವನ್ನು ಇಲ್ಲಿ ಬಹಳ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ನಾಯಕ ನಟಿ ದೀಪಿಕಾ (Deepika) ತನ್ನ ತಂದೆಗೆ ಕೊಟ್ಟ ಮಾತಿಗೊಸ್ಕರ ಆನಂದ್ (Anand) ಮೇಲೆ ಪ್ರೀತಿ ಇದ್ದರೂ ಅದನ್ನು ತೋರಿಸಿಕೊಳ್ಳದೆ ತಂದೆ ತೋರಿಸಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಹೇಳಿರುತ್ತಾಳೆ. ದೀಪಿಕಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಆನಂದ್ ಅದಕ್ಕೂ ಒಂದು ಉಪಾಯವನ್ನು ಹುಡುಕಿ ಆಕೆಯನ್ನೇ ಮದುವೆಯಾಗಲು ಹೊರಟಿದ್ದಾನೆ.

    ವರ್ಕೌಟ್ ಆಗ್ತಾ ಇದ್ಯಾ ಸಿಂಚನ ಮತ್ತು ಸತ್ಯವತಿ ಪ್ಲಾನ್

    ತನ್ನ ಮಗ ನನ್ನಿಂದ ದೂರವಾಗಲು ಪುರುಷೋತ್ತಮ್ ಮತ್ತು ಅವನ ಮನೆಯವರು ಕಾರಣ ಎಂದು ಬಲವಾಗಿ ನಂಬಿರುವ ಸತ್ಯವತಿಗೆ ಪುರುಷೋತ್ತಮ್ ಮನೆಯವರ ಏಳಿಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆನಂದ್ ಬಡವ ಎಂದು ಅಂದುಕೊಂಡ ಸತ್ಯವತಿಗೆ ಆನಂದ್ ಶ್ರೀಮಂತಿಕೆ ಬಗ್ಗೆ ತಿಳಿದಿದೆ. ಆರಂಭದಲ್ಲಿ ಆನಂದ್ ಮತ್ತು ದೀಪಿಕಾಳನ್ನು ಒಂದು ಮಾಡಲು ಪ್ರಯತ್ನಪಟ್ಟ ಸತ್ಯವತಿ ಈಗ ಅವರಿಬ್ಬರನ್ನು ಬೇರೆ ಮಾಡಲು ಶತಪ್ರಯತ್ನ ಮಾಡುತ್ತಿದ್ದಾಳೆ. ದೀಪಿಕಾ ಮತ್ತು ಪುರುಷೋತ್ತಮ್ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಹೇಳಿ ಈ ಮದುವೆ ಆಗದಂತೆ ತಡೆಯಲು ಪ್ರಯತ್ನ ಮಾಡುತ್ತಿದ್ದಾಳೆ.

    ದೀಪಿಕಾಳ ಮನಸ್ಸು ಕೆಡಿಸುವ ಕೆಲಸ ಮಾಡುತ್ತಿದ್ದಾಳೆ ಸಿಂಚನಾ

    ಅತ್ತ ಸಿಂಚನಾ ಇಲ್ಲಸಲ್ಲದ ವಿಚಾರಗಳನ್ನು ದೀಪಿಕಾಳ ತಲೆಯಲ್ಲಿ ತುಂಬಿಸುವ ಕೆಲಸ ಮಾಡುತ್ತಿದ್ದಾಳೆ. ಮಗಳ ಸಂತೋಷಕ್ಕಾಗಿ ತನ್ನಲ್ಲಿರುವ ನೋವುಗಳನ್ನೆಲ್ಲ ಬಚ್ಚಿಟ್ಟು ಈ ಮದುವೆಯನ್ನು ಮಾಡಿಸುತ್ತಿದ್ದಾರೆ. ಆಫೀಸ್ ನಲ್ಲಿ ಅಷ್ಟೆಲ್ಲಾ ಅವಮಾನವಾಗಿದ್ದರು ಕೇವಲ ಮಗಳು ಇಷ್ಟಪಟ್ಟ ವ್ಯಕ್ತಿಯ ಜೊತೆಗೆ ಮದುವೆಯಾಗಲಿ ಎಂದು ಪುರುಷೋತ್ತಮ್ ಈ ಮದುವೆಗೆ ಒಪ್ಪಿದ್ದಾರೆ ಎಂದು ಸಿಂಚನಾ ದೀಪಿಕಾಳ ತಲೆಯಲ್ಲಿ ತುಂಬಿಸಿ ಬಿಟ್ಟಿದ್ದಾಳೆ.

    ಹೇಳಿ ಕೇಳಿ, ಪುರುಷೋತ್ತಮ್ ಅವರ ಗೂಬೆ ಬಾಸ್ ವಿಶ್ವನಾಥನ್ ಆನಂದ್. ಆಫೀಸ್‌ನಲ್ಲಿ ನಡೆದ ಘಟನೆಗಳಿಗೆ ಕ್ಷಮೆ ಕೇಳಿದ ವಿಶ್ವನಾಥನ್ ಆನಂದ್‌ ಅವರನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಪುರುಷೋತ್ತಮ್ ಒಪ್ಪಿಕೊಂಡಿದ್ದರು.

    ಇದನ್ನೂ ಓದಿ: Raja Rani 2: ಶೀಘ್ರದಲ್ಲಿ 'ರಾಜಾ-ರಾಣಿ' ಸೀಸನ್ 2 - ಯಾವಾಗ? ಯಾವ್ ಟೈಮ್​​? ಇಲ್ಲಿದೆ ಫುಲ್ ಡೀಟೇಲ್ಸ್

    ಊರಿನವರ ಮಾತು  ಕೇಳಿ ಪುರುಷೋತ್ತಮ್ ಗೆ  ಹೃದಯಾಘಾತ!

    ದೀಪಿಕಾಳ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹಾಕುತ್ತಿದ್ದಾರೆ ಸತ್ಯವತಿ ಮತ್ತು ಮಗಳು ಸಿಂಚನಾ. ಪುರುಷೋತ್ತಮ್ ಗೆ ಮಗಳು ದೀಪಿಕಾಳ ಮೇಲೆ ಬಹಳ ನಂಬಿಕೆ ಇದೆ. ಆಕೆ ಎಂದಿಗೂ ತಂದೆಯ ಮಾತನ್ನು ಮೀರುವುದಿಲ್ಲ ಎಂಬ ವಿಶ್ವಾಸ ಬಲವಾಗಿದೆ ಪುರುಷೋತ್ತಮ್ ಗೆ. ಆದರೆ ಸತ್ಯವತಿ ಮಾಡಿದ ಪ್ಲಾನ್ ಗಳಿಂದ ಎಲ್ಲವೂ ಉಲ್ಟಾ ಹೊಡೆಯುವ ಸಾಧ್ಯತೆ ಇದೆ.

    ದೀಪಿಕಾ ಮತ್ತು ಆನಂದ್ ಮೊದಲೇ ಸ್ನೇಹಿತರು ಅವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿದ್ದು, ಆನಂದ್ ದೀಪಿಕಾಳನ್ನು ಮದುವೆಯಾಗುವ ಉದ್ದೇಶದಿಂದಲೇ ಇಷ್ಟೆಲ್ಲಾ ಮಾಡಿದ್ದಾನೆ ಎಂದು ಅಪವಾದ ಹಾಕುತ್ತಿದ್ದಾರೆ ಸುತ್ತಮುತ್ತಲಿನ ಮನೆಯವರು. ಇದನ್ನು ಪುರುಷೋತ್ತಮ ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಮಗಳ ಬಗ್ಗೆ ಕೇಳಬಾರದ ಮಾತುಗಳನ್ನೆಲ್ಲ ಕೇಳಿ ಪುರುಷೋತ್ತಮ್ ಹೃದಯಾಘಾತವಾಗಿದೆ.

    ಆನಂದ್ ಮತ್ತು ದೀಪಿಕಾ ಈಗಾಗಲೇ ಮದುವೆಯಾಗಿದ್ದಾರೆ. ಎನ್ನುವ ಅಪವಾದ ಕೇಳಿ ತಂದೆ ಪುರುಷೋತ್ತಮ್ ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಗಳನ್ನು ಮುಂದಿಟ್ಟುಕೊಂಡು ಕಚೇರಿಯಲ್ಲಿ ಅಧಿಕಾರವನ್ನು ಪಡೆಯುತ್ತಿದ್ದಾನೆ ಪುರುಷೋತ್ತಮ್ ಎಂದು ಮೇಲೂ ಅಪವಾದ ಮಾಡುತ್ತಿದ್ದಾರೆ ಊರಿನವರು.

    ಇದನ್ನೂ ಓದಿ: Jothe Jotheyali: ಅಧರ್ಮದ ವಿರುದ್ಧ ಹೋರಾಡಲು ಜೊತೆಯಾದ ಅನು-ಮೀರಾ! ಇನ್ನೇನು ಕಾದಿದೆ ಆರ್ಯವರ್ಧನ್‌ಗೆ?

    ದೀಪಿಕಾ ಆನಂದ್ ಮದುವೆ ನಡೆಯುತ್ತಾ?

    ಇಷ್ಟೆಲ್ಲಾ ಘಟನೆ ನಡೆದ ಮೇಲೆ ದೀಪಿಕಾ ಮತ್ತು ಆನಂದ್ ಮದುವೆ ನಡೆಯುತ್ತಾ ಎಂಬುದೇ ಪ್ರೇಕ್ಷಕರಲ್ಲಿ ಕಾಡುವ ಪ್ರಶ್ನೆಯಾಗಿದೆ. ಅನಂದ್ ಸತ್ಯವತಿಯ ಕಾಣೆಯಾದ ಮಗನಾಗಿದ್ದರೆ ಮುಂದೆ ಅವರಿಬ್ಬರ ನಡುವಿನ ಸಂಬಂಧ ಹೇಗೆ ಮುಂದುವರೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.
    Published by:Swathi Nayak
    First published: