ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರಸಾನಿ (Doresani) ಧಾರಾವಾಹಿಯೂ ದಿನಕ್ಕೊಂದು ತಿರುವುಗಳನ್ನು ಪಡೆದು ಹೊಸ ರೂಪವನ್ನು ತಾಳುತ್ತಿದೆ. ಇದೀಗ ದೊರೆಸಾನಿ ಧಾರಾವಾಹಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಸಿಂಚನ (Sinchana) ಹಾಗೂ ಸತ್ಯವತಿ (Sathyavathi) ಮಾಡಿದ ಯಾವುದೇ ಪ್ಲಾನ್ ವರ್ಕ್ ಔಟ್ ಆಗದೆ ತಂದೆ ಮಗಳ ಸಂಬಂಧ ಮತ್ತಷ್ಟು ಬಿಗಿಯಾಗಿದೆ. ಇನ್ನೇನು ಮದುವೆ ಕಾರ್ಯ ಮತ್ತೆ ಮುಂದುವರಿಯ ಸೂಚನೆಯೂ ದೊರಕುತ್ತಿದೆ. ಹೇಗಾದರೂ ಮಾಡಿ ದೀಪಿಕಾ (Deepika) ಮದುವೆ ನಿಲ್ಲಿಸಬೇಕು ಅಂತ ಸತ್ಯವತಿ ಮತ್ತು ಮಗಳು ಸಿಂಚನಾ ಪಣ ತೊಟ್ಟಿದ್ದಾರೆ. ಹೀಗಿರುವಾಗಲೇ ತಂದೆಯ ಬಳಿ ನಡೆದೆಲ್ಲ ವಿಚಾರಗಳನ್ನು ಹೇಳಿ ಮನಸ್ಸಿನ ಭಾರವನ್ನು ಕಳೆದುಕೊಂಡಿದ್ದಾಳೆ.
ಬ್ರೋಕರ್ ಕಡೆಯಿಂದ ಪುರುಷೋತ್ತಮ್ ಮನೆಗೆ ಬರುತ್ತಾನೆ ವಿಶ್ವನಾಥನ್ ಆನಂದ್
ದೀಪಿಕಾಳ ತಂದೆಯನ್ನ ಒಪ್ಪಿಸಿಯೇ ಮದುವೆಯಾಗಬೇಕೆಂದುಕೊಂಡ ವಿಶ್ವನಾಥನ್ ಆನಂದ್, ಮದುವೆಯ ಬ್ರೋಕರ್ ಕಡೆಯಿಂದ ಪುರುಷೋತ್ತಮ್ ಮನೆಗೆ ಬರುತ್ತಾನೆ. ತಂದೆಗೆ ಅವಮಾನ ಆಗುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ಲವ್ ಮ್ಯಾರೇಜ್ ಆಗುವುದಿಲ್ಲ ಎಂದು ಅಪ್ಪ ಪುರುಷೋತ್ತಮ್ಗೆ ದೀಪಿಕಾ ಮಾತು ಕೊಟ್ಟಿರುತ್ತಾಳೆ. ಆದರೆ, ಅತ್ತ ದೀಪಿಕಾಳನ್ನ ವಿಶ್ವನಾಥನ್ ಆನಂದ್ ಪ್ರೀತಿಸುತ್ತಿರುತ್ತಾನೆ. ದೀಪಿಕಾಗೆ ಪ್ರಪೋಸ್ ಕೂಡ ಮಾಡುತ್ತಾನೆ. ಆದರೆ, ತಂದೆಗೆ ಕೊಟ್ಟಿರುವ ಭಾಷೆಯ ಕಾರಣದಿಂದ ವಿಶ್ವನಾಥನ್ ಆನಂದ್ ಪ್ರೀತಿಯನ್ನ ದೀಪಿಕಾ ಒಪ್ಪಿಕೊಳ್ಳುವುದಿಲ್ಲ. ಬಳಿಕ ಪರಿಸ್ಥಿತಿಯ ಕೈಗೊಂಬೆಯಾದ ದೀಪಿಕಾ ತಾನು ವಿಶ್ವನಾಥನ್ ಆನಂದ್ನ ಪ್ರೀತಿಸುತ್ತಿರುವುದಾಗಿ ಹೇಳುತ್ತಾಳೆ.
ಇದನ್ನೂ ಓದಿ: Kannadathi: ಹರ್ಷ-ಭುವಿ ವೆಡ್ಡಿಂಗ್ ಕಾಂಟ್ರ್ಯಾಕ್ಟ್ ವರೂಧಿನಿ ಕೈಯಲ್ಲಿ! ತನ್ನ ಹೀರೋ ಮದುವೆ ತಾನೇ ಮಾಡ್ತಾಳಾ ವರೂ?
ಮದುವೆ ನಿಲ್ಲಿಸಬೇಕು ಎಂದು ಪಣ ತೊಟ್ಟ ಸತ್ಯವತಿ ಮತ್ತು ಮಗಳು ಸಿಂಚನಾ
ಹೇಗಾದರೂ ಮಾಡಿ ದೀಪಿಕಾ ಮದುವೆ ನಿಲ್ಲಿಸಬೇಕು ಎಂದು ಸತ್ಯವತಿ ಮತ್ತು ಮಗಳು ಸಿಂಚನಾ ಪಣ ತೊಟ್ಟಿದ್ದಾರೆ. ಹೀಗಾಗಿ, ದೀಪಿಕಾ ಹಾಗೂ ವಿಶ್ವನಾಥನ್ ಆನಂದ್ ಬಗ್ಗೆ ಇಲ್ಲದ ಗಾಸಿಪ್ ಹುಟ್ಟಿಸಿ ಪುರುಷೋತ್ತಮ್ ತಲೆಗೆ ಹುಳ ಬಿಡುತ್ತಾರೆ. ಪುರುಷೋತ್ತಮ್ ಮತ್ತು ಕುಟುಂಬದ ಮೇಲೆ ಸತ್ಯವತಿಗೆ ದ್ವೇಷ ಇದೆ. ತಮ್ಮ ಸಿಟ್ಟು ತೀರಿಸಿಕೊಳ್ಳುವ ಸಲುವಾಗಿ ದೀಪಿಕಾ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಾಳೆ ಅಂತ ಪದೇ ಪದೇ ಸತ್ಯವತಿ ಹೇಳಿದ್ದಾರೆ. ದೀಪಿಕಾ ಮತ್ತು ಆನಂದ್ ಲವ್ ಮಾಡುತ್ತಿರುವ ವಿಷಯ ಕೂಡ ಸತ್ಯವತಿಗೆ ಗೊತ್ತಿದೆ.
ಇದನ್ನೂ ಓದಿ: Priyanka Upendra: ಕಿರುತೆರೆಗೆ ಬಂದ ಉಪ್ಪಿಯ 'ಅರ್ಧಾಂಗಿ'! 'ಸುವರ್ಣ' ಅವಕಾಶದ ಬಗ್ಗೆ ಪ್ರಿಯಾಂಕಾ ಹೇಳಿದ್ದೇನು?
ತಂದೆಗೆ ಸತ್ಯ ಹೇಳಲು ದೀಪಿಕಾ ಮುಂದಾಗುತ್ತಾಳೆ?
ತಂದೆಗೆ ಅವಮಾನ ಆಗುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ಲವ್ ಮ್ಯಾರೇಜ್ ಆಗುವುದಿಲ್ಲ ಎಂದು ಅಪ್ಪ ಪುರುಷೋತ್ತಮ್ಗೆ ದೀಪಿಕಾ ಮಾತು ಕೊಟ್ಟಿರುತ್ತಾಳೆ.
ಮಗಳು ಮೋಸ ಮಾಡಿಬಿಟ್ಟಳು ಅಂತ ಪುರುಷೋತ್ತಮ್ ಬೇಸರ ಪಟ್ಟುಕೊಳ್ಳುತ್ತಾರೆ. ಹೀಗಿರುವಾಗಲೇ, ತಂದೆಗೆ ಸತ್ಯ ಹೇಳಲು ದೀಪಿಕಾ ಮುಂದಾಗುತ್ತಾಳೆ. ಮುಂಚಿನಿಂದಲೇ ವಿಶ್ವನಾಥನ್ ಆನಂದ್ ಪರಿಚಯ ಇರುವುದಾಗಿ ದೀಪಿಕಾ ಒಪ್ಪಿಕೊಳ್ಳುತ್ತಾಳೆ. ವಿಶ್ವನಾಥನ್ ಅನಂದ್ ತನಗೆ ಪ್ರಪೋಸ್ ಮಾಡಿದ್ದು ನಿಜ. ಆದರೆ, ಅದಕ್ಕೆ ತಾನು ಒಪ್ಪಿಕೊಳ್ಳಲಿಲ್ಲ. ವಿಶ್ವನಾಥನ್ ಆನಂದ್ ಅವರೇ ಬಾಸ್ ಅಂತ ಗೊತ್ತಾಗಿದ್ದು, ಆಫೀಸ್ಗೆ ಜಗಳ ಆಡಲು ಹೋದ್ಮೇಲೆ ಅಂತ ಪುರುಷೋತ್ತಮ್ ಮುಂದೆ ದೀಪಿಕಾ ಒಪ್ಪಿಕೊಳ್ಳುತ್ತಾಳೆ.
ತಾನು ಆನಂದ್ನ ಪ್ರೀತಿಸಿಲ್ಲ. ಇದು ಪ್ರೇಮ ವಿವಾಹ ಅಲ್ಲ. ಅನುಮಾನ ಇದ್ದರೆ ಈ ಮದುವೆಯೇ ಬೇಡ ಅಂತ ದೀಪಿಕಾ ಕಡ್ಡಿತುಂಡು ಮಾಡಿದ ಹಾಗೆ ಹೇಳುತ್ತಾಳೆ. ಇದನ್ನೆಲ್ಲಾ ಕೇಳಿದ ಪುರುಷೋತ್ತಮ್ ಸಿಟ್ಟು ಕರಗುತ್ತದೆ. ಮಗಳ ಒಳ್ಳೆಯತನಕ್ಕೆ ಭೇಷ್ ಎನ್ನುತ್ತಾರೆ.
‘ದೊರೆಸಾನಿ’ ಧಾರಾವಾಹಿಯಲ್ಲಿ ದೀಪಿಕಾ ಆಗಿ ರೂಪಿಕಾ, ವಿಶ್ವನಾಥನ್ ಆನಂದ್ ಆಗಿ ಪೃಥ್ವಿರಾಜ್, ಪುರುಷೋತ್ತಮ್ ಆಗಿ ಜೈದೇವ್ ಮೋಹನ್, ಸತ್ಯವತಿ ಆಗಿ ಭವಾನಿ ಪ್ರಕಾಶ್ ಅಭಿನಯಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ