Doresani Serial: ವಿರೋಧಿಗಳ ಕುತಂತ್ರದಿಂದ ಮತ್ತೆ ಬೇರೆಯಾಗುತ್ತಾರಾ ಆನಂದ್-ದೀಪಿಕಾ? ಇದೇನಿದು ಬಿಗ್ ಟ್ವಿಸ್ಟ್?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ದೊರೆಸಾನಿ ಕೂಡ ಒಂದು. ನಟಿ ರೂಪಿಕಾ ಅವರು ಈ ಧಾರಾವಾಹಿಯಲ್ಲಿ ದೀಪಿಕಾ ಎನ್ನುವ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ.

ಆನಂದ್ ಮತ್ತು‌ ದೀಪಿಕಾ

ಆನಂದ್ ಮತ್ತು‌ ದೀಪಿಕಾ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ದೊರೆಸಾನಿ (Doresani) ಕೂಡ ಒಂದು. ನಟಿ ರೂಪಿಕಾ (Roopika) ಅವರು ಈ ಧಾರಾವಾಹಿಯಲ್ಲಿ ದೀಪಿಕಾ (Deepika) ಎನ್ನುವ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಸಂಬಂಧಗಳ ಮೌಲ್ಯಕ್ಕೆ ಬೆಲೆ ಕೊಡುವ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಗೌರವ ಮತ್ತು ಪ್ರಾಮುಖ್ಯತೆ ಇದೆ.ನಾಯಕ ವಿಶ್ವನಾಥನ್ ಆನಂದ್ (Vishwananathan Anand) ಮತ್ತು ದೀಪಿಕಾ ನಡುವಿನ ನಿಷ್ಕಲ್ಮಶ ಸ್ನೇಹ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ತಾನು ಪ್ರೀತಿಸುತ್ತಿದ್ದ ದೀಪಿಕಾಳನ್ನು ಇದೀಗ ಆನಂದ್ ತನ್ನ ಗೆಳೆಯನಿಗೆ ಮದುವೆ ಮಾಡಿಸಿ ಕೊಡಲು ತಯಾರಾಗಿದ್ದಾನೆ.

    ಸಂಶಯದ ಗೂಡಿನಲ್ಲಿ ಬಂಧಿಯಾದ ಚಿನ್ಮಯ್?

    ಪ್ರಾಣ ಸ್ನೇಹಿತ ಚಿನ್ಮಯಿಯನ್ನು ತನ್ನ ಗೆಳತಿ ದೀಪಿಕಾಳಿಗೆ ಮದುವೆ ಮಾಡಿಕೊಡುವ ವಿಚಾರವಾಗಿ ಈಗಾಗಲೇ ಆನಂದ್ ಪುರುಷೋತ್ತಮ್ ಅವರಲ್ಲಿ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ ಈ ಬಗ್ಗೆ ಎರಡು ಮನೆಯವರು ಒಪ್ಪಿಗೆ ಸೂಚಿಸಿ ನಿಶ್ಚಿತಾರ್ಥದ ಸಮಯ ಕೂಡ ಹತ್ತಿರ ಬಂದಿದೆ.ಮಾಡರ್ನ್ ಲೈಫ್ ಬಗ್ಗೆ ಅಷ್ಟಾಗಿ ಅರಿವಿಲ್ಲದ ದೀಪಿಕಾಳಿಗೆ ಚಿನ್ಮಯ್ ಜೊತೆ ಹೊಂದಿಕೊಳ್ಳಲು ಕಷ್ಟವಾದರೂ ಮನೆಯವರ ಸಂತೋಷಕ್ಕಾಗಿ ಮತ್ತು ಆನಂದ್ ಆಯ್ಕೆ ಮಾಡಿರುವ ಹುಡುಗ ಎಂದು ದೀಪಿಕಾ ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದಾಳೆ.

    ಕಳೆದ ಸಂಚಿಕೆಯಲ್ಲಿ ಚಿನ್ಮಯ್ ದೀಪಿಕಾಳನ್ನು ಪಾರ್ಟಿಯೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ತನ್ನಲ್ಲದ ಪ್ರಪಂಚದಲ್ಲಿ ದೀಪಿಕಾಳಿಗೆ ಇರಲು ಬಹಳ ಮುಜುಗರ ಕೂಡ ಆಗಿತ್ತು. ಅಷ್ಟೇ ಅಲ್ಲದೆ ಚಿನ್ಮಯ್ ಗೆಳೆಯರು ದೀಪಿಕಾಳನ್ನು ಬಹಳ ಎನ್ನುವಷ್ಟು ತಮಾಷೆ ಕೂಡ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅಂತಹ ಪಾರ್ಟಿಗೆ ಹೋಗಿದ್ದ ದೀಪಿಕಾಳಿಗೆ ಅಲ್ಲಿ ಒಂದು ಕ್ಷಣ ಕೂಡ ಸಂತೋಷದಿಂದ ಇರಲು ಸಾಧ್ಯವಾಗಲಿಲ್ಲಾ.ಇದರ ಜೊತೆಗೆ ವೈನ್ ಕುಡಿಯುವಂತೆ ದೀಪಿಕಾಳನ್ನು ಚಿನ್ಮಯ್ ಗೆಳೆಯರು ಕೇಳಿಕೊಂಡಿದ್ದಾರೆ.
    ಪಾರ್ಟಿ ಮ್ಯಾನರ್ಸ್ ಗಾಗಿ ಅದನ್ನು ಸ್ವೀಕರಿಸಬೇಕಿತ್ತು ಎಂದು ಚಿನ್ಮಯ್ ಹೇಳಿದ ಮಾತು ದೀಪಿಕಾಳನ್ನು ಇನ್ನಷ್ಟು ಮುಜುಗರಕ್ಕೀಡು ಮಾಡಿತ್ತು. ಇದೇ ಸಂದರ್ಭದಲ್ಲಿ ಆನಂದ್ ಈ‌ ಪಾರ್ಟಿ ಗೆ ಬಂದು ಒಂಟಿಯಾಗಿದ್ದ ದೀಪಿಕಾಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾನೆ. ಆದರೇ ಇದನ್ನೇ ಚಿನ್ಮಯ್ ತಪ್ಪಾಗಿ ತಿಳಿದು ಆನಂದ್ ಮತ್ತು ದೀಪಿಕಾಳ ನಡುವೆ ಏನೋ ನಡೆಯುತ್ತಿದೆ ಎನ್ನುವಂತೆ ಮಾತನಾಡಿದ್ದಾನೆ.

    ಇದನ್ನೂ ಓದಿ: Ranjani Raghavan : ಪುಣೆ ಶನಿವಾರ್ ವಾಡದಲ್ಲಿ ರಂಜನಿ ರಾಘವನ್ ಜಾಲಿ ಮೂಡ್!

    ಡೀಪಿ ವಿಚಾರವಾಗಿ ಚಿಂತಿತನಾದ ಆನಂದ್

    ದೀಪಿಕಾಳ ಪರಿಚಯವಾಗುವ ಮುನ್ನ ಆನಂದ್ ಪ್ರೀತಿಸುತ್ತಿದ್ದ ಹುಡುಗಿ ಡೀಪಿಯನ್ನು ಮತ್ತೆ ಆನಂದ್ ಗೆ ಸಿಗುವಂತೆ ಮಾಡಿದ್ದಾಳೆ ದೀಪಿಕಾ.ಆದರೆ ಡೀಪಿಯ ಸ್ವಭಾವ ಮತ್ತು ಆನಂದ್ ಸ್ವಭಾವ ಒಂದಕ್ಕೊಂದು ಹೊಂದಿಕೆ ಆಗುತ್ತಿಲ್ಲಾ. ಅಷ್ಟೇ ಅಲ್ಲಾ ಚಿಕ್ಕ ಹುಡುಗಿ ಅಂತೆ ಡೀಪಿ ಆಫೀಸ್ ಗೆ ಬಂದು ಆನಂದ್ ಅನ್ನು ಕರೆದುಕೊಂಡು ಹೋಗುತ್ತಿದ್ದಾಳೆ.ಅಷ್ಟೇ ಅಲ್ಲದೆ ಆನಂದ್ ಮತ್ತು‌ ದೀಪಿಕಾಳ ಸ್ನೇಹದ ಮೇಲೂ ಡೀಪಿ ಸಂಶಯ ಪಡುತ್ತಿದ್ದಾಳೆ. ಇದೇ ವಿಚಾರವಾಗಿ ಸುಖಾ ಸುಮ್ಮನೆ ಆನಂದ್ ಜೊತೆ ಜಗಳವಾಡುತ್ತಿದ್ದಾಳೆ ಡೀಪಿ.

    ಇದನ್ನೂ ಓದಿ: Jothe Jotheyali Serial: ಅಪಾಯದಿಂದ ಅನು‌ ಸಿರಿಮನೆಗೆ ಅರಿಶಿನ ದಾರದ ರಕ್ಷಣೆ? ಇದೇನಿದು ಬಿಗ್ ಟ್ವಿಸ್ಟ್

    ಮತ್ತೆ ಆಫೀಸ್ ಗೆ ವಕ್ಕರಿಸಿಕೊಂಡ ಗಿರಿಧರ್

    ಈಗಾಗಲೇ ಹಲವಾರು ಬಾರಿ ಪುರುಷೋತ್ತಮ್ ಲೈಫ್ ಅನ್ನು ಸಂಕಷ್ಟಕ್ಕೆ ತಂದು ಇಟ್ಟ ಗಿರಿಧರ್ ಇದೀಗ ಮತ್ತೆ ಒಳ್ಳೆವನಂತೆ ನಟಿಸಿ ಆಫೀಸ್ ಸೇರಿದ್ದಾನೆ. ಅಷ್ಟೇ ಅಲ್ಲದೆ ಪುರುಷೋತ್ತಮ್ ಮುಖಾಂತರವೇ ಆನಂದ್ ಅನ್ನು ಮನವೊಲಿಸಿಕೊಂಡಿದ್ದಾನೆ ಗಿರಿಧರ್.ಇದೀಗ ಮತ್ತೆ‌ ಪುರುಷೋತ್ತಮ್ ವಿರುದ್ಧ‌ ಸಂಚು ಮಾಡುತ್ತಿರುವ ಗಿರಿಧರ್ ಆನಂದ್ ಪ್ರೇಯಸಿ ಡೀಪಿ ಬಳಿ ಇಲ್ಲ ಸಲ್ಲದ ವಿಚಾರವನ್ನು ತುಂಬಿಸುತ್ತಿದ್ದಾನೆ‌. ಆನಂದ್ ಮತ್ತು ದೀಪಿಕಾ ಮಧ್ಯೆ ನಡೆದ ವಿಚಾರಗಳನ್ನು ಡೀಪಿಗೆ ಉಪಾಯದಲ್ಲಿ ತಿಳಿಸುತ್ತಿದ್ದಾನೆ ಗಿರಿಧರ್. ಆನಂದ್ ಮತ್ತು ದೀಪಿಕಾ ಮತ್ತೆ ಒಂದಾಗುತ್ತಾರಾ ಎಂಬುದರ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ. ಮುಂದಿನ ಸಂಚಿಕೆಗಳಲ್ಲಿ ಏನೆಲ್ಲಾ ತಿರುವುಗಳು ಎದುರಾಗಲಿವೆ ಎನ್ನುವುದನ್ನು ಕಾದುನೋಡಬೇಕಿದೆ.
    Published by:Swathi Nayak
    First published: